Namma Metro: ನಮ್ಮ ಮೆಟ್ರೋ ಹಳದಿ ಮಾರ್ಗದ ಪ್ರಯಾಣಿಕರಿಗೆ ಗುಡ್​​ನ್ಯೂಸ್! ಆಗಸ್ಟ್​ ವೇಳೆಗೆ ಸಂಪೂರ್ಣ ಕಾರ್ಯಾಚರಣೆ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಹಳದಿ ಮಾರ್ಗಕ್ಕೆ 14ನೇ ರೈಲು ಆಗಮನ


Last Updated:

ಬೆಂಗಳೂರು ಮೆಟ್ರೋಗೆ 14ನೇ ರೈಲು ಆಗಮನ. ಹೆಬ್ಬಗೋಡಿ ಡಿಪೋಗೆ ತಲುಪಿದ ರೈಲು. ಹಳದಿ ಮಾರ್ಗಕ್ಕೆ ಇನ್ನೊಂದು ರೈಲು ಬರಬೇಕಿದೆ. ಆಗಸ್ಟ್ ಅಂತ್ಯದ ವೇಳೆಗೆ ಪೂರ್ಣ ಪ್ರಮಾಣದ ರೈಲು ಸಂಚಾರ.

ಹಳದಿ ಮಾರ್ಗಕ್ಕೆ 14ನೇ ರೈಲು ಆಗಮನ
ಹಳದಿ ಮಾರ್ಗಕ್ಕೆ 14ನೇ ರೈಲು ಆಗಮನ

ಬೆಂಗಳೂರು: ಹಲವು ಬಾರಿ ವಿಳಂಬವಾಗಿದ್ದ (Bengaluru) 14ನೇ ಮೆಟ್ರೋ ರೈಲು ಕೊನೆಗೂ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಕೈಸೇರಿದೆ. ಹೆಬ್ಬಗೋಡಿ ಡಿಪೋಗೆ 14ನೇ ರೈಲು ತಲುಪಿದ್ದು (Namma Metro), ಹಳದಿ ಮಾರ್ಗದ ಸಂಪೂರ್ಣ (Yellow Line Metro) ಕಾರ್ಯಾಚರಣೆಗೆ ಇನ್ನೊಂದು ರೈಲು ಮಾತ್ರ ಬರಬೇಕಿದೆ.

ಸದ್ಯ ಸ್ವೀಕರಿಸುವ ರೈಲನ್ನು ಮೊದಲು ರಾತ್ರಿ ವೇಳೆಯಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಎಲ್ಲಾ ಪರೀಕ್ಷೆಗಳು ಮುಕ್ತಾಯವಾದ ಬಳಿಕ ರೈಲನ್ನು ಸಾರ್ವಜನಿಕರ ಸಂಚಾರಕ್ಕೆ ಅನುಮತಿ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೋಲ್ಕತ್ತಾದ ಟಿಟಾಫರ್ ರೈಲ್ ಸಿಸ್ಟಮ್ಸ್ ಲಿಮಿಟೆಡ್ (ಟಿಆರ್ಎಸ್ಎಲ್) ಮೆಟ್ರೋ ರೈಲುಗಳನ್ನು ಉತ್ಪಾದನೆ ಮಾಡುತ್ತಿದ್ದು, ಯೆಲ್ಲೋ ಲೈನ್ ಗೆ ಬರಬೇಕಿರುವ ಕೊನೆಯ ರೈಲು ಜುಲೈ ಅಂತ್ಯದ ವೇಳೆ ಬಿಎಂಆರ್​ಸಿಲ್ ಕೈ ಸೇರುವ ನಿರೀಕ್ಷೆ ಇದೆ.

19.75 ಕಿಲೋ ಮೀಟರ್ ಉದ್ದದ ಹಳದಿ ಮಾರ್ಗದಲ್ಲಿ ಈಗ 10 ರೈಲುಗಳು ಕಾರ್ಯಾಚರಣೆ ನಡೆಸುತ್ತಿದ್ದು, ಸಾಮಾನ್ಯ ಅವಧಿಯಲ್ಲಿ 10 ನಿಮಿಷಕ್ಕೆ ಒಂದು ರೈಲು ಹಾಗೂ ಜನಸಂದಣಿ ಹೆಚ್ಚಿರುವ ಅವಧಿಯಲ್ಲಿ ಏಳು ನಿಮಿಷಕ್ಕೆ ಒಂದು ರೈಲು ಪ್ರಯಾಣ ಮಾಡುತ್ತಿವೆ. ಬಿಎಂಆರ್ಸಿಎಲ್ ಆರ್ಡರ್ ನೀಡಿರುವ 15 ರೈಲುಗಳು ಆಗಮಿಸಿದ ಬಳಿಕ ಈ ಮಾರ್ಗದಲ್ಲಿ ಪ್ರತಿ ನಾಲ್ಕು ಅಥವಾ ಐದು ನಿಮಿಷಕ್ಕೆ ಒಂದು ರೈಲು ಸಂಚಾರ ಮಾಡಲಿದೆ.

ಹಳದಿ ಮಾರ್ಗದ 15 ರೈಲುಗಳಲ್ಲಿ 13 ರೈಲುಗಳು ನಿತ್ಯವೂ ಸಂಚಾರ ಮಾಡಲಿದ್ದು, ಉಳಿದ ಎರಡು ರೈಲುಗಳನ್ನ ತುರ್ತುಪರಿಸ್ಥಿತಿ, ಫ್ಲೀಟ್ ನಿರ್ವಹಣೆ ಅಥವಾ ಅನರೀಕ್ಷಿತ ತಾಂತ್ರಿಕ ಸಮಸ್ಯೆಗಳು ಎದುರಾದ ಸಂದರ್ಭದಲ್ಲಿ ಬಳಕೆ ಮಾಡಲು ಮೀಸಲು ಸ್ಟಾಕ್ ಆಗಿ ಉಳಿಸಿಕೊಳ್ಳಲಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಗಸ್ಟ್ ಅಂತ್ಯದ ವೇಳೆ ಹಳದಿ ಮಾರ್ಗದಲ್ಲಿ ಪೂರ್ಣ ಪ್ರಮಾಣದಲ್ಲಿ ರೈಲುಗಳು ಸಂಚಾರ ಮಾಡಲಿದೆ. ಉಳಿದಂತೆ ಪರ್ಪಲ್ ಹಾಗೂ ಗ್ರೀನ್ ಲೈನ್ ಗಳಿಗೆ 18 ರೈಲುಗಳನ್ನು ಹೆಚ್ಚುವರಿಯಾಗಿ ತಯಾರಿಸಲು ಟಿಆರ್ಎಸ್ಎಲ್ ಕಾರ್ಯನಿರ್ವಹಿಸುತ್ತಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed