Namitha: ರವಿಚಂದ್ರನ್ ‘ನೀಲಕಂಠ’ ಸಿನಿಮಾದ ನಮಿತಾ ಹೇಗಾಗಿದ್ದಾರೆ ಗೊತ್ತಾ? | | ACTPnews

ಕ್ರೇಜಿ ಸ್ಟಾರ್ ರವಿಚಂದ್ರನ್ 'ನೀಲಕಂಠ' ಚಿತ್ರದ ನಮಿತಾ ಹೇಗಾಗಿದ್ದಾರೆ ಗೊತ್ತಾ?


Last Updated:

ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ‘ನೀಲಕಂಠ’ ಚಿತ್ರದ ನಾಯಕಿ ನಮಿತಾ ಸಖತ್ ಸ್ಲಿಮ್ ಆಗುತ್ತಿದ್ದಾರೆ. ಈ ನಡುವೆ ತುಂಬಾನೆ ದಪ್ಪ ಆಗಿದ್ದರು. ಆದರೆ, ಈಗ ಇವರನ್ನ ಸಡನ್ ಆಗಿ ಗುರುತು ಹಿಡಿಯೋಕೆ ಆಗೋದಿಲ್ಲ. ಆ ರೀತಿನೇ ಕಾಣಿಸುತ್ತಿದ್ದಾರೆ. ಇವರ ಈಗಿನ ಬದಲಾವಣೆಯ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.

ಕ್ರೇಜಿ ಸ್ಟಾರ್ ರವಿಚಂದ್ರನ್ 'ನೀಲಕಂಠ' ಚಿತ್ರದ ನಮಿತಾ ಹೇಗಾಗಿದ್ದಾರೆ ಗೊತ್ತಾ?
ಕ್ರೇಜಿ ಸ್ಟಾರ್ ರವಿಚಂದ್ರನ್ ‘ನೀಲಕಂಠ’ ಚಿತ್ರದ ನಮಿತಾ ಹೇಗಾಗಿದ್ದಾರೆ ಗೊತ್ತಾ?

ಕ್ರೇಜಿ ಸ್ಟಾರ್ ರವಿಚಂದ್ರನ್ (Ravichandran) ಅವರ ನೀಲಕಂಠ ಚಿತ್ರದ (Neelakanta Movie) ನಾಯಕಿ ನಮಿತಾ (Namitha) ಎಲ್ಲಿ ಹೋದ್ರು? ಕನ್ನಡದಲ್ಲಿ ಇವರು 2011 ರಲ್ಲಿ ಬಂದ ನಮಿತಾ ಐ ಲವ್ ಯು (Namitha I Love You) ಚಿತ್ರದಲ್ಲಿ ನಟಿಸಿದ್ರು. 2013 ರಲ್ಲಿ ರಿಲೀಸ್ ಆದ ಬೆಂಕಿ ಬಿರುಗಾಳಿ ಅನ್ನುವ ಸಿನಿಮಾದಲ್ಲೂ ನಟಿಸಿದ್ದರು. ಆದರೆ, ಈ ಸಿನಿಮಾಗಳು ಆದ್ಮೇಲೆ ಕನ್ನಡದಲ್ಲಿ ಇವರ ಯಾವುದೇ ಚಿತ್ರಗಳೂ ಬಂದಿಲ್ಲ. ಇದರೊಟ್ಟಿಗೆ ಇವರು ಪರ ಭಾಷೆಯ ಚಿತ್ರಗಳಲ್ಲೂ ಅಂತಹ ಏನೂ ಆ್ಯಕ್ಟೀವ್ ಇಲ್ಲ. ಆದರೆ, ಇವರು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ನೀಲಕಂಠ ಚೆಲುವೆ

ನಮಿತಾ ಸಖತ್ ಬಿಡಿ. ತಮ್ಮ ದೇಹಸಿರಿಯಿಂದಲೇ ಕಂಗೊಳಿಸಿದವರು. ತಮಿಳು ಮತ್ತು ತೆಲುಗು ಚಿತ್ರರಂಗದಲ್ಲೂ ಹವಾ ಕ್ರಿಯೇಟ್ ಮಾಡಿದವರು. ಮಲೆಯಾಳಂ ಅಲ್ಲದೆ ಕನ್ನಡದಲ್ಲೂ ಕಿಚ್ಚು ಹಚ್ಚಿದ್ದರು.
Neelakanta Namitha New Look Video Share on Social Media

ನಮಿತಾ ಸಖತ್ ಆ್ಯಕ್ಟೀವ್

(ಚಿತ್ರ ಕೃಪೆ: ನಮಿತಾ ಇನ್‌ಸ್ಟಾಗ್ರಾಮ್)

ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ನೀಲಕಂಠ ಚಿತ್ರದಲ್ಲಿ ನಮಿತಾ ಅದ್ಭುತವಾಗಿಯೇ ಕಾಣಿಸಿಕೊಂಡಿದ್ದರು. ಹಾಗಂತ ಇವರು ಕನ್ನಡದಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾ ಏನೂ ಮಾಡಿಲ್ಲ ಬಿಡಿ. ನೀಲಕಂಠ ಆದ್ಮೇಲೆ ದರ್ಶನ್ ಜೊತೆಗೆ ಇಂದ್ರ ಮಾಡಿದರು.

ಕ್ರೇಜಿ ಜೊತೆಗೆ ‘ಹೂ’ ಸಿನಿಮಾ

ನೀಲಕಂಠ ಆದ್ಮೇಲೆ ರವಿಚಂದ್ರನ್ ಜೊತೆಗೆ ಹೂ ಚಿತ್ರವನ್ನು ಮಾಡಿದರು. ಈ ಸಿನಿಮಾ ಆದ್ಮೇಲೆ ಕನ್ನಡ ಚಿತ್ರಗಳಿಂದ ಮತ್ತೆ ಗ್ಯಾಪ್ ತೆಗೆದುಕೊಂಡರು.

ನಮಿತಾ ಸಖತ್ ಆ್ಯಕ್ಟೀವ್

ನಮಿತಾ ಸಖತ್ ಆ್ಯಕ್ಟೀವ್ ಆಗಿದ್ದಾರೆ. ತಮ್ಮ ದೇಹವನ್ನ ದಂಡಿಸಿದ್ದಾರೆ. ಜಿಮ್ ಅಲ್ಲಿ ಸಿಕ್ಕಾಪಟ್ಟೆ ವರ್ಕೌಟ್ ಕೂಡ ಮಾಡಿದ್ದಾರೆ. ಆರಂಭದಲ್ಲಿ ನಮಿತಾ ಹೇಗಿದ್ದರೋ ಹಾಗೇನೆ ಈಗ ಕಾಣಿಸುತ್ತಿದ್ದಾರೆ.

ದೇಹದವನ್ನ ಮತ್ತಷ್ಟು ಟೋನ್ ಮಾಡಿಕೊಳ್ತಿದ್ದಾರೆ ಅನಿಸುತ್ತದೆ. ಆ ರೀತಿನೇ ಈಗೀನ ವಿಡಿಯೋಗಳು ನಮಿತಾ ಅವರನ್ನ ತೋರಿಸುತ್ತಿವೆ.

ನಮಿತಾ ಸಖತ್ ಸ್ಲಿಮ್

ಹೌದು, ನಮಿತಾ ಸಖತ್ ಸ್ಲಿಮ್ ಆಗಿಯೇ ಕಾಣಿಸುತ್ತಿದ್ದಾರೆ. ಜಿಮ್ ಅಲ್ಲಿ ವರ್ಕೌಟ್ ಆದ್ಮೇಲೆ ತೆಗೆದ ಒಂದು ವಿಡಿಯೋವನ್ನ ನಮಿತಾ ಇದೀಗ ಹಂಚಿಕೊಂಡಿದ್ದಾರೆ.

Neelakanta Namitha New Look Video Share on Social Media

ನೀಲಕಂಠ ಚೆಲುವೆ

namita.official ಅನ್ನುವ ಇನ್‌ಸ್ಟಾಗ್ರಾಮ್‌ನ ಅಧಿಕೃತ ಪೇಜ್ ಅಲ್ಲಿಯೇ ನಮಿತಾ ಈ ವಿಡಿಯೋ ಹಂಚಿಕೊಂಡಿದ್ದಾರೆ. ಇದಕ್ಕೆ ಚೆಂದದ ಒಂದು ಲೈನ್ ಬರೆದಿದ್ದಾರೆ. ಅದು ಹೀಗಿದೆ ಓದಿ; Your Body Follows, What your Mind Believes!

ನಮ್ಮ ದೇಹ….

ನಮ್ಮ ಮನಸ್ಸು ಏನನ್ನು ನಂಬುತ್ತದೆಯೋ ಅದನ್ನೆ ನಮ್ಮ ದೇಹವು ಅನುಸರಿಸುತ್ತದೆ. ಇದೇ ಮಾತನ್ನೆ ನಮಿತಾ ಇಂಗ್ಲಿಷ್ ಅಲ್ಲಿ ಬರೆದುಕೊಂಡಿದ್ದಾರೆ.

ಇವರ ಮಾತು ನಿಜವೇ ಬಿಡಿ. ನಮ್ಮ ಮನಸ್ಸಿನಲ್ಲಿ ನಾವು ಏನು ಅಂದುಕೊಳ್ಳುತ್ತೇವೆಯೋ ದೇಹವೂ ಅದೇ ರೀತಿ ರಿಯಾಕ್ಟ್ ಮಾಡೋಕೆ ಶುರು ಮಾಡುತ್ತದೆ. ಹಾಗೆ ನಮಿತಾ ತಮಗೆ ಅನುಭವಕ್ಕೆ ಬಂದಿರೋದನ್ನ ಅಷ್ಟೆ ನೀಟ್ ಆಗಿಯೇ ಹೇಳಿಕೊಂಡಿದ್ದಾರೆ.

ಅದು ಈಗ ಎಲ್ಲರಿಗೂ ಮೋಟಿವೇಟ್ ಆಗುವ ರೀತಿನೇ ಇದೆ. ಹಾಗೇನೆ ನಮಿತಾ ಈ ಹಿಂದೆ ತಂಬಾನೆ ದಪ್ಪ ಆಗಿದ್ದರು. ಆದರೆ, ಇದೀಗ ಅಷ್ಟೆ ಸ್ಲಿಮ್ ಆಗಿಯೇ ಕಾಣಿಸುತ್ತಿದ್ದಾರೆ ಅಂತಲೂ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed