Nagarjun: ಒಡಿಸ್ಸಿ ಸಿನಿಮಾ ಬಗ್ಗೆ ಮಾತನಾಡಿದ ನಾಗಾರ್ಜುನ ಹೇಳಿದ್ದೇನು? | | ACTPnews

ನಮಗೆ ಯಾಕೆ ಮಾಡೋಕೆ ಆಗೋದಿಲ್ಲ; ನಾಗಾರ್ಜುನ್ ಬೇಸರ!


Last Updated:

ನಾಗಾರ್ಜುನ್ ಬೇಸರ ವ್ಯಕ್ತಪಡಿಸಿದ್ದಾರೆ. ನಮ್ಮಲ್ಲಿ ಕೊನೆಗಳಿಗೆಯಲ್ಲಿ ಸಿನಿಮಾ ಕೆಲಸ ನಡೆಯುತ್ತವೆ. ಇದರಿಂದ ರಿಲೀಸ್ ಮುಂದಕ್ಕೆ ಹೋಗುತ್ತವೆ. ಹಾಲಿವುಡ್ ಒಡಿಸ್ಸಿ ಚಿತ್ರ ನೋಡಿ. ಒಂದು ವರ್ಷದ ಮುಂಚೇನೆ ರಿಲೀಸ್ ಅನೌನ್ಸ್ ಆಗಿತ್ತು ಅಂತ ಹೇಳಿದ್ದಾರೆ. ಇವರ ವೈರಲ್ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.

ನಮಗೆ ಯಾಕೆ ಮಾಡೋಕೆ ಆಗೋದಿಲ್ಲ; ನಾಗಾರ್ಜುನ್ ಬೇಸರ!
ನಮಗೆ ಯಾಕೆ ಮಾಡೋಕೆ ಆಗೋದಿಲ್ಲ; ನಾಗಾರ್ಜುನ್ ಬೇಸರ!

ಟಾಲಿವುಡ್ ಎವರ್ ಯಂಗ್ ಹೀರೋ ನಾಗಾರ್ಜುನ್ (Nagarjun) ಬೇಸರ ಮಾಡಿಕೊಂಡಿದ್ದಾರೆ. ಕೊನೆಗಳಿಗೆಯಲ್ಲಿ ಚಿತ್ರದ ಕೆಲಸ ಮಾಡೋದು, ಹಾಗೆ ಚಿತ್ರದ ರಿಲೀಸ್ (Movie Release) ಅನ್ನ ಮುಂದೂಡೋದು ಅದೆಷ್ಟು ಸರಿ ಅಂತಲೂ ಕೇಳಿದ್ದಾರೆ. ನನ್ನ ಸೇರಿ ಎಲ್ಲರಿಗೂ ಇದು ಅನ್ವಯಸುತ್ತದೆ. ಚಿತ್ರ ರೆಡಿ ಅದರೂ ಕೂಡ ಇನ್ನೂ ಚೆನ್ನಾಗಿ ಮಾಡ್ಬೇಕು ಅಂತ ರಿಲೀಸ್ ಡೇಟ್ ಅನ್ನ ಮುಂದಕ್ಕೆ ಹಾಕುತ್ತೇವೆ. ಲೆನಿನ್ ಚಿತ್ರ (Lenin Movie) ಕೂಡ ರಿಲೀಸ್ ಡೇಟ್ ಚೇಂಜ್ ಮಾಡಿತ್ತು. ಆದರೆ, ಒಡಿಸ್ಸಿ ಚಿತ್ರ (Odyssey Movie) ನೋಡಿ. ಹೇಳಿದ ಸಮಯಕ್ಕೆ ಬಂದಿದೆ. ಒಂದು ವರ್ಷದ ಮುಂಚೇನೆ ರಿಲೀಸ್ ಡೇಟ್ ಅನೌನ್ಸ್ ಮಾಡಿತ್ತು ಅಂತ ನಾಗಾರ್ಜುನ್ ಹೇಳಿದ್ದಾರೆ. ಇವರ ಈ ಮಾತುಗಳು ಇದೀಗ ವೈರಲ್ ಆಗಿವೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.

ನಾಗಾರ್ಜುನ್ ಬೇಸರ

ನಾಗಾರ್ಜುನ್ ಬೇಸರ ವ್ಯಕ್ತಪಡಿಸಿದ್ದಾರೆ. ನಮ್ಮಲ್ಲಿ ಒಂದು ರೂಢಿ ಇದೆ. ಕೊನೆಗಳಿಗೆಯಲ್ಲಿ ಚಿತ್ರಗಳ ಕೆಲಸ ಮಾಡೋದು, ಕೆಲಸ ಆಗದೇ ಇದ್ದರೆ ಆಯಿತು.
Tollywood Nagarjuna comments on rushing film work at final stage got viral

ನಾಗಾರ್ಜುನ್ ಬೇಸರ

(ಚಿತ್ರ ಕೃಪೆ: ನಾಗಾರ್ಜುನ್ ಅಕ್ಕಿನೇನಿ ಇನ್‌ಸ್ಟಾಗ್ರಾಮ್)

ಸಡನ್ ಆಗಿಯೇ ಚಿತ್ರದ ರಿಲೀಸ್ ಡೇಟ್ ಮುಂದಕ್ಕೆ ಹಾಕಿ ಬಿಡುತ್ತಾರೆ. ನಾನು ಇದನ್ನ ಮಾಡಿದ್ದೇನೆ. ಚಿತ್ರ ಚೆನ್ನಾಗಿ ಆಗಲಿ ಅಂತಲೇ ಕೆಲಸ ಮಾಡ್ತಾನೇ ಇರುತ್ತೇವೆ. ಆದರೆ, ಇದು ತಪ್ಪು ಅನ್ನುವ ಅರ್ಥದಲ್ಲಿಯೇ ನಾಗಾರ್ಜುನ್ ಹೇಳಿದ್ದಾರೆ.

ಒಡಿಸ್ಸಿ ನೋಡಿ

ಹಾಲಿವುಡ್‌ನ ಒಡಿಸ್ಸಿ ಸಿನಿಮಾ ನೋಡಿ. ಇದು ಒಂದು ವರ್ಷದ ಮುಂಚೇನೆ ರಿಲೀಸ್ ಡೇಟ್ ಅನೌನ್ಸ್ ಮಾಡಿತ್ತು. ಜುಲೈ-17,2026 ಇದು ರಿಲೀಸ್ ಆಗುತ್ತದೆ ಅಂತಲೂ ಹೇಳಿತ್ತು.

ಈ ಚಿತ್ರ ರಿಲೀಸ್ ಮುಂದೆ ಹೋಗಲೇ ಇಲ್ಲ. ಹೇಳಿದ ದಿನದಂದೇ ಈ ಚಿತ್ರ ರಿಲೀಸ್ ಆಗಿದೆ. ನಮ್ಮಲ್ಲಿ ಇದು ಯಾಕೆ ಆಗೋದಿಲ್ಲ. ಒಂದು ಸಿನಿಮಾಗೆ ಒಳ್ಳೆಯದಾಗಬೇಕು, ಇಂಡಸ್ಟ್ರಿ ಬೆಳೆಯಬೇಕು ಅಂದ್ರೆ ಇದನ್ನ ನಾವು ಫಾಲೋ ಮಾಡ್ಬೇಕು ಅಂತಲೇ ನಾಗಾರ್ಜುನ್ ಅಕ್ಕಿನೇನಿ ಹೇಳಿದ್ದಾರೆ.

ನಾಗಾರ್ಜನ್ ಮಾತು ವೈರಲ್

ನಾಗಾರ್ಜುನ್ ಅಕ್ಕಿನೇನಿ ಹೇಳಿರೋ ಈ ಮಾತು ವೈರಲ್ ಆಗಿದೆ. ಕಾರ್ಯಕ್ರಮ ಒಂದರಲ್ಲಿ ನಾಗಾರ್ಜುನ್ ಈ ಒಂದು ಮಾತು ಹೇಳಿದ್ದಾರೆ.

Tollywood Nagarjuna comments on rushing film work at final stage got viral

ಹಾಲಿವುಡ್ ಒಡಿಸ್ಸಿ ಸಿನಿಮಾ

ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಇಡೀ ಕಾರ್ಯಕ್ರಮದಲ್ಲಿ ನಾಗಾರ್ಜುನ್ ಸಾಕಷ್ಟು ವಿಚಾರ ಮಾತನಾಡಿದ್ದಾರೆ. ಆದರೆ, ಈ ಒಂದು ವಿಚಾರವೇ ಹೆಚ್ಚು ವೈರಲ್ ಆಗಿದೆ ನೋಡಿ.

ಪ್ರಮೋದ್ ಹೊಗಳಿದ ನಾಗಾರ್ಜುನ್

ಅಖಿಲ್ ಅಕ್ಕಿನೇನಿ ಅಭಿನಯದ ಲೆನಿನ್ ಚಿತ್ರ ಹಿಟ್ ಆಗಿದೆ. ಈ ಚಿತ್ರದಲ್ಲಿ ಕನ್ನಡದ ನಾಯಕ ನಟ ಪ್ರಮೋದ್ ಪಂಜು ಅದ್ಭುತವಾಗಿಯೇ ಅಭಿನಯಿಸಿದ್ದಾರೆ.

ವಸಂತ್ ಅನ್ನುವ ಪಾತ್ರವನ್ನೆ ಇವರು ನಿರ್ವಹಿಸಿದ್ದಾರೆ. ಲೇಡಿ ಗೆಟಪ್‌ ಧರಿಸೋ ಈ ಪಾತ್ರ ತುಂಬಾನೆ ಚೆನ್ನಾಗಿದೆ. ಅಷ್ಟೆ ವೈರಲ್ ಕೂಡ ಆಗಿದೆ. ಹಾಗೆ ಇದೇ ಲೆನಿನ್ ಸಕ್ಸಸ್ ಕಾರ್ಯಕ್ರಮದಲ್ಲಿಯೇ ನಾಗಾರ್ಜುನ್ ಹೊಗಳಿದ್ದರು.

ಪ್ರಮೋದ್ ಅದ್ಭುತವಾಗಿಯೇ ನಟಿಸಿದ್ದಾರೆ ಅಂತಲು ಕೊಂಡಾಡಿದ್ದರು. ಈ ವಿಷಯವು ಕೂಡ ಅಷ್ಟೆ ವೈರಲ್ ಆಗಿತ್ತು ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed