Mysuru Police: ಮಲೇಷ್ಯಾದಲ್ಲಿ ಚಿನ್ನದ ಬೇಟೆಯಾಡಿದ ಪೊಲೀಸ್ ಅಧಿಕಾರಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ ಮೈಸೂರಿನವರು! | ಮೈಸೂರು ನ್ಯೂಸ್ (Mysuru News) | ACTPnews

ಇಲ್ಲಿ


Last Updated:

ಮೈಸೂರು ಹೆಡ್ ಕಾನ್‌ಸ್ಟೇಬಲ್ ನಾಗೇಂದ್ರ ಡಿಸ್ಕಸ್, ಜಾವೆಲಿನ್, ಶಾಟ್‍ಪುಟ್ ನಲ್ಲಿ 116 ಪದಕ ಗೆದ್ದು ಮಲೇಷ್ಯಾ ಅಂತರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್ ನಲ್ಲಿ ಚಿನ್ನ, ಬೆಳ್ಳಿ, ಕಂಚು ಜಯಿಸಿದ್ದಾರೆ

+

ಇಲ್ಲಿ ವಿಡಿಯೋ ನೋಡಿ

ಮೈಸೂರು: ಸಾಮಾನ್ಯವಾಗಿ ಪೊಲೀಸ್ (Police) ಇಲಾಖೆಯ ಕೆಲಸ ಅಂದರೆ ಒತ್ತಡ ಮತ್ತು ಜವಾಬ್ದಾರಿಗಳ ಆಗರ. ಆದರೆ, ಇಂತಹ ಒತ್ತಡದ ನಡುವೆಯೂ ತಮ್ಮ ಕ್ರೀಡಾ (Sports) ಸ್ಫೂರ್ತಿಯನ್ನು ಜೀವಂತವಾಗಿಟ್ಟುಕೊಂಡು, ಇದೀಗ ವಿಶ್ವಮಟ್ಟದಲ್ಲಿ ಭಾರತೀಯ ಧ್ವಜವನ್ನು ಹಾರಿಸುತ್ತಿರುವ ವ್ಯಕ್ತಿ ಮೈಸೂರಿನ (Mysuru) ಹೆಡ್ ಕಾನ್‌ಸ್ಟೇಬಲ್ (Head Constable) ನಾಗೇಂದ್ರ. ಮುಳ್ಳೂರು ಗ್ರಾಮದ ಈ ಸರಳ ವ್ಯಕ್ತಿ ಇಂದು ಅಥ್ಲೆಟಿಕ್ಸ್ (Athletics) ಲೋಕದಲ್ಲಿ ಮಿಂಚುತ್ತಿದ್ದಾರೆ.

116 ಪದಕಗಳ ಅದ್ಭುತ ಪಯಣ

ಸರ್ಗೂರು ತಾಲೂಕಿನ ಮುಳ್ಳೂರು ಗ್ರಾಮದಿಂದ ಶುರುವಾದ ನಾಗೇಂದ್ರ ಅವರ ಡಿಸ್ಕಸ್ ಎಸೆತ, ಜಾವೆಲಿನ್ ಮತ್ತು ಶಾಟ್‍ಪುಟ್ ನಲ್ಲಿ ಎತ್ತಿದ ಕೈ. ಇವರ ಪವಣ ಇಂದು ಮಲೇಷ್ಯಾ, ನೇಪಾಳ, ಭೂತಾನ್ ಮತ್ತು ಚೀನಾದಂತಹ ದೇಶಗಳಿಗೆ ವಿಸ್ತರಿಸಿದೆ. ಇದುವರೆಗೂ 20 ರಾಜ್ಯಮಟ್ಟದ, 70 ರಾಷ್ಟ್ರೀಯ ಮಟ್ಟದ, 25 ಅಂತರಾಷ್ಟ್ರೀಯ ಮಟ್ಟದ ಹಾಗೂ ಒಂದು ಏಷ್ಯನ್ ಕ್ರೀಡಾಕೂಟದ ಪದಕ ಸೇರಿದಂತೆ ಬರೋಬ್ಬರಿ 116 ಪದಕಗಳನ್ನು ತಮ್ಮ ಮುಡಿಗೇರಿಸಿಕೊಳ್ಳುವ ಮೂಲಕ ಅವರು ಅಥ್ಲೆಟಿಕ್ಸ್ ಲೋಕದಲ್ಲಿ ದಾಖಲೆ ಬರೆದಿದ್ದಾರೆ. ಇತ್ತೀಚೆಗೆ ಮಲೇಷ್ಯಾದಲ್ಲಿ ನಡೆದ ಅಂತರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್ ನಲ್ಲಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ತಮ್ಮ ಪ್ರಾಬಲ್ಯವನ್ನು ಮಗದೊಮ್ಮೆ ಸಾಬೀತುಪಡಿಸಿದ್ದಾರೆ.
ಶಿಸ್ತು ಮತ್ತು ಪರಿಶ್ರಮವೇ ಯಶಸ್ಸಿನ ಗುಟ್ಟು

ಡಿಸ್ಕಸ್ ಎಸೆತ, ಜಾವೆಲಿನ್ ಮತ್ತು ಶಾಟ್‍ಪುಟ್ ವಿಭಾಗದಲ್ಲಿ ನಾಗೇಂದ್ರ ಅವರ ಸಾಧನೆಗೆ ಕೋಚ್ ಪ್ರಭಾಕರ್ ಅವರ ಮಾರ್ಗದರ್ಶನ ಬೆನ್ನೆಲುಬಾಗಿದೆ. ಕರ್ತವ್ಯದ ಒತ್ತಡವಿದ್ದರೂ, ನಿತ್ಯ ಅಭ್ಯಾಸವನ್ನು ಬಿಡದ ನಾಗೇಂದ್ರ ಅವರ ಬದ್ಧತೆ ಹೊಸ ತಲೆಮಾರಿನ ಯುವಕರಿಗೆ ದೊಡ್ಡ ಪಾಠ. ಕ್ರೀಡೆ ಎನ್ನುವುದು ಕೇವಲ ಆಟವಲ್ಲ, ಅದೊಂದು ಜೀವನಶೈಲಿ ಎಂದು ಅವರು ತಮ್ಮ ಬದುಕಿನ ಮೂಲಕವೇ ತೋರಿಸಿಕೊಟ್ಟಿದ್ದಾರೆ.
ಯುವ ಕ್ರೀಡಾಪಟುಗಳಿಗೆ ಸ್ಪೂರ್ತಿ

ಗ್ರಾಮೀಣ ಹಿನ್ನೆಲೆಯಿಂದ ಬಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ನಾಗೇಂದ್ರ ಅವರ ಸಾಧನೆ, ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವ ಸಾವಿರಾರು ಗ್ರಾಮೀಣ ಯುವಕರಿಗೆ ದಾರಿದೀಪವಾಗಿದೆ. ವಯಸ್ಸು ಕೇವಲ ಸಂಖ್ಯೆಯಷ್ಟೇ, ಛಲವಿದ್ದರೆ ಜಗತ್ತನ್ನೇ ಗೆಲ್ಲಬಹುದು ಎಂಬುದಕ್ಕೆ ಇವರೇ ಸಾಕ್ಷಿ. ಮುಂದಿನ ದಿನಗಳಲ್ಲಿ ಇನ್ನಷ್ಟು ಪದಕಗಳನ್ನು ಗೆದ್ದು ದೇಶದ ಗೌರವ ಹೆಚ್ಚಿಸಲಿ ಎಂದು ಕ್ರೀಡಾಪ್ರೇಮಿಗಳು ಹಾರೈಸುತ್ತಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports