Shiv Sena Crisis: ಮಹಾ ರಾಜಕೀಯದಲ್ಲಿ ಮತ್ತೆ ತಲ್ಲಣ! ಸಂಸದರ ನಂತರ ಉದ್ದವ್​ಗೆ ಕೈಕೊಟ್ಟ 16 ಶಾಸಕರು? ಶೀಘ್ರವೇ ಏಕನಾಥ್ ಶಿಂಧೆ ಬಣಕ್ಕೆ ಶಿಫ್ಟ್? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಉದ್ಧವ್ ಠಾಕ್ರೆ ಬಣಕ್ಕೆ ದೊಡ್ಡ ಹೊಡೆತ, 16 ಶಾಸಕರು ಶಿಂಧೆ ಕಡೆ?


Last Updated:

Shiv Sena Crisis: ಮಹಾರಾಷ್ಟ್ರ ರಾಜಕೀಯದಲ್ಲಿ ದೊಡ್ಡ ಸಂಚಲನ. ಉದ್ಧವ್ ಠಾಕ್ರೆ ಬಣದ 6 ಸಂಸದರು ಈಗಾಗಲೇ ಶಿಂಧೆ ಕ್ಯಾಂಪ್ ಸೇರಿದ್ದು, ಇದೀಗ 20 ರಲ್ಲಿ 16 ಶಾಸಕರು ಕೂಡ ಏಕನಾಥ್ ಶಿಂಧೆ ಬಣಕ್ಕೆ ಹೋಗಲು ಸಿದ್ಧ. ಯುಬಿಟಿ ಬಲ 4 ಕ್ಕೆ ಕುಸಿತ. ಆ ಕುರಿತ ಸಂಪೂರ್ಣ ವರದಿ ಇಲ್ಲಿದೆ…

ಉದ್ಧವ್ ಠಾಕ್ರೆ ಬಣಕ್ಕೆ ದೊಡ್ಡ ಹೊಡೆತ, 16 ಶಾಸಕರು ಶಿಂಧೆ ಕಡೆ?
ಉದ್ಧವ್ ಠಾಕ್ರೆ ಬಣಕ್ಕೆ ದೊಡ್ಡ ಹೊಡೆತ, 16 ಶಾಸಕರು ಶಿಂಧೆ ಕಡೆ?

ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರ ರಾಜಕೀಯದಲ್ಲಿ (Maharashtra Politics) ಮತ್ತೊಮ್ಮೆ ಅತಿ ದೊಡ್ಡ ಆಟ ನಡೆದಿದೆ ಎನ್ನಲಾಗುತ್ತಿದೆ. ಯಾಕೆಂದರೆ, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯ (Shiv Sena (Uddhav Thackeray Fiction)) 6 ಸಂಸದರು ಏಕನಾಥ್ ಶಿಂಧೆ ಬಣಕ್ಕೆ (Eknath Shinde Faction) ಸೇರ್ಪಡೆಗೊಂಡಿದ್ದಾರೆ. ಇದರ ನಡುವೆಯೇ, ಶಿವಸೇನೆಯ (Shiv Sena) 20 ಶಾಸಕರ ಪೈಕಿ 16 ಶಾಸಕರೂ ಕೂಡ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಆ ಕುರಿತ ವರದಿ ಇಲ್ಲಿದೆ.

ನ್ಯೂಸ್ 18 ಮರಾಠಿ ವರದಿಯ ಪ್ರಕಾರ, ಪ್ರಸ್ತುತ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶಿವಸೇನೆ ಯುಬಿಟಿ 20 ಶಾಸಕರ ಬಲ ಹೊಂದಿದೆ. ಆದರೆ ಇದರಲ್ಲಿ 16 ಶಾಸಕರು ಏಕನಾಥ್ ಶಿಂಧೆ ಬಣಕ್ಕೆ ಸೇರಲು ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಈ ಬೆಳವಣಿಗೆ ನಿಜವಾದರೆ, ಉದ್ಧವ್ ಠಾಕ್ರೆ ಬಣದಲ್ಲಿ ಕೇವಲ ನಾಲ್ಕು ಶಾಸಕರು ಮಾತ್ರ ಉಳಿಯುತ್ತಾರೆ. ಇದು ಪಕ್ಷದ ಅಸ್ತಿತ್ವಕ್ಕೇ ಸವಾಲಾಗಿ ಪರಿಣಮಿಸಲಿದೆ. ಶಾಸಕರ ಈ ನಡೆ ರಾಜ್ಯ ರಾಜಕಾರಣದ ಸಮೀಕರಣವನ್ನೇ ಬದಲಿಸುವ ಸಾಧ್ಯತೆ ಇದೆ.

ಆರು ಸಂಸದರೂ ಶಿಂಧೆ ಬಣಕ್ಕೆ

ಮೂಲಗಳ ಪ್ರಕಾರ, ಉದ್ಧವ್ ಠಾಕ್ರೆ ಬಣದ ಆರು ಲೋಕಸಭಾ ಸಂಸದರು ಈಗಾಗಲೇ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ನೇತೃತ್ವದ ಶಿವಸೇನೆಗೆ ಬೆಂಬಲ ಸೂಚಿಸಿದ್ದಾರೆ. 2022 ರಲ್ಲಿ ಪಕ್ಷ ಒಡೆದ ನಂತರ ಶಿಂಧೆ ಬಣಕ್ಕೆ ಚುನಾವಣಾ ಆಯೋಗವು ಮೂಲ ಶಿವಸೇನೆ ಎಂದು ಮಾನ್ಯತೆ ನೀಡಿತ್ತು. ಅದಾದ ಬಳಿಕ ಹಂತ ಹಂತವಾಗಿ ನಾಯಕರು, ಕಾರ್ಯಕರ್ತರು ಶಿಂಧೆ ಜೊತೆ ಗುರುತಿಸಿಕೊಳ್ಳುತ್ತಿದ್ದಾರೆ. ಈಗ ಸಂಸದರೇ ಪಕ್ಷಾಂತರ ಮಾಡಿರುವುದು ಠಾಕ್ರೆ ಬಣಕ್ಕೆ ದೊಡ್ಡ ಹಿನ್ನಡೆಯಾಗಿದೆ.

ಇದನ್ನೂ ಓದಿ: Shiv Sena Crisis: ಉದ್ಧವ್ ಠಾಕ್ರೆ ಬಣದಲ್ಲಿ ಮತ್ತೆ ಅಲ್ಲೋಕಲ್ಲೋಲ! 6 ಬಂಡಾಯ ಸಂಸದರಿಂದ ಶಿಂಧೆಗೆ ಬೆಂಬಲ! ಸ್ಪೀಕರ್‌ಗೆ ಬರೆದ ಪತ್ರದಲ್ಲೇನಿದೆ?

ಏತನ್ಮಧ್ಯೆ, 2022 ರಲ್ಲಿ ಏಕನಾಥ್ ಶಿಂಧೆ ಅವರು 40 ಕ್ಕೂ ಹೆಚ್ಚು ಶಾಸಕರೊಂದಿಗೆ ಬಂಡಾಯ ಎದ್ದು ಬಿಜೆಪಿ ಬೆಂಬಲದೊಂದಿಗೆ ಮುಖ್ಯಮಂತ್ರಿಯಾದ ನಂತರ ಶಿವಸೇನೆ ಇಬ್ಭಾಗವಾಗಿತ್ತು. ಆಗಿನಿಂದಲೂ ಉದ್ಧವ್ ಠಾಕ್ರೆ ಬಣದಿಂದ ನಾಯಕರ ವಲಸೆ ನಿರಂತರವಾಗಿ ನಡೆಯುತ್ತಿದೆ. ಸ್ಥಳೀಯ ಸಂಸ್ಥೆ ಚುನಾವಣೆ, ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಪಕ್ಷವನ್ನು ಮತ್ತೆ ಸಂಘಟಿಸಲು ಠಾಕ್ರೆ ಯತ್ನಿಸುತ್ತಿದ್ದರು. ಆದರೆ ಪ್ರಮುಖ ನಾಯಕರು, ಸಂಸದರು ಮತ್ತು ಈಗ ಶಾಸಕರೇ ಕೈಕೊಡುತ್ತಿರುವುದು ಅವರಿಗೆ ದೊಡ್ಡ ತಲೆನೋವಾಗಿದೆ. ಪಕ್ಷದ ಚಿಹ್ನೆ, ಹೆಸರು ಕಳೆದುಕೊಂಡ ನಂತರ ಇದೀಗ ಶಾಸಕ ಬಲವೂ ಕುಸಿಯುತ್ತಿದೆ. ಅದರಂತೆ, ಮುಂಬರುವ ಚುನಾವಣೆಗಳ ದೃಷ್ಟಿಯಿಂದ ಇದು ಶಿಂಧೆ ಬಣದ ಬಲವನ್ನು ಹೆಚ್ಚಿಸಲಿದೆ.

ಮುಂದೇನು?

16 ಶಾಸಕರು ನಿಜವಾಗಿಯೂ ಶಿಂಧೆ ಬಣ ಸೇರಿದರೆ, ವಿಧಾನಸಭೆಯಲ್ಲಿ ಶಿಂಧೆ ನೇತೃತ್ವದ ಶಿವಸೇನೆಯ ಸಂಖ್ಯಾಬಲ 55 ಕ್ಕೂ ಹೆಚ್ಚಾಗಲಿದೆ. ಇದು ಮಹಾಯುತಿ ಸರ್ಕಾರಕ್ಕೆ ಮತ್ತಷ್ಟು ಸ್ಥಿರತೆ ತಂದುಕೊಡುತ್ತದೆ. ಜೊತೆಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ-ಶಿಂಧೆ ಬಣದ ಸೀಟು ಹಂಚಿಕೆಗೂ ಇದು ಪ್ರಭಾವ ಬೀರಲಿದೆ.

ಮತ್ತೊಂದೆಡೆ, ಉದ್ಧವ್ ಠಾಕ್ರೆ ಅವರು ಮಹಾ ವಿಕಾಸ್ ಅಘಾಡಿ ಮೈತ್ರಿಯಲ್ಲಿ ತಮ್ಮ ಪಟ್ಟನ್ನು ಉಳಿಸಿಕೊಳ್ಳಲು ಹೊಸ ತಂತ್ರ ರೂಪಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಸದ್ಯಕ್ಕೆ ಮಹಾರಾಷ್ಟ್ರ ರಾಜಕೀಯದ ಎಲ್ಲರ ಚಿತ್ತ ಈ 16 ಶಾಸಕರ ಮುಂದಿನ ನಡೆಯತ್ತ ನೆಟ್ಟಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports