Last Updated:
ಕುಟುಂಬವೊಂದು ಅಂತ್ಯಕ್ರಿಯೆ ಮಾಡಿದ್ದ ಮಗ 28 ದಿನಗಳ ನಂತರ ಸೆಂಟ್ರಲ್ ಜೈಲಿನಲ್ಲಿ ಜೀವಂತವಾಗಿ ಪತ್ತೆಯಾಗಿದ್ದಾನೆ. ಸೆಪ್ಟೆಂಬರ್ 2 ರಂದು, ಜೈಲಿನ ಉದ್ಯೋಗಿಯೊಬ್ಬರು ಕುಟುಂಬಕ್ಕೆ ಕರೆ ಮಾಡಿ ರವಿಯ ಜೈಲು ಶಿಕ್ಷೆಯ ಬಗ್ಗೆ ತಿಳಿಸಿದ್ದು, ಇಡೀ ಕುಟುಂಬ ಶಾಕ್ ಆಗಿದೆ.
ಕುಟುಂಬವೊಂದು ಅಂತ್ಯಕ್ರಿಯೆ (Funeral) ಮಾಡಿದ್ದ ಮಗ 28 ದಿನಗಳ ನಂತರ ಸೆಂಟ್ರಲ್ ಜೈಲಿನಲ್ಲಿ (Central Jail) ಪತ್ತೆಯಾಗಿದ್ದಾನೆ. ಹೌದು, ಪಂಜಾಬ್ನ (Punjab) ಕಪುರ್ತಲಾ ಜಿಲ್ಲೆಯ ಕಡುಪುರದ ಒಂದು ಕುಟುಂಬಕ್ಕೆ ಅಚ್ಚರಿಯ ಸುದ್ದಿ ಕಾದಿದೆ. ತಮ್ಮ ಮಗ ರವಿ ಕುಮಾರ್ ಸತ್ತುಹೋಗಿದ್ದಾನೆಂದು ಭಾವಿಸಿ ಅಂತ್ಯಕ್ರಿಯೆ ಮಾಡಿದ್ದ ಕುಟುಂಬಕ್ಕೆ ಸುಮಾರು 28 ದಿನಗಳ ನಂತರ ಫೋನ್ ಕರೆ ಬಂದಿತು. ಕೇಂದ್ರ ಜೈಲಿನಿಂದ ಬಂದ ಆ ಕರೆಯಿಂದ ಇಡೀ ಕುಟುಂಬ ಶಾಕ್ ಆಗಿದೆ.














