Mysterious Temple: ಜಗತ್ತಿನ ಅತೀ ಶ್ರೀಮಂತ ದೇವರ ದೇಗುಲಕ್ಕೆ ಇಲ್ಲಿದೆ ರಹಸ್ಯ ಮಾರ್ಗ; 1200 ವರ್ಷ ಹಿಂದಿನ 64 ಮೂಲಿಕೆಗಳ ಗುಟ್ಟು! | ಜ್ಯೋತಿಷ್ಯ | ACTPnews

ಇಲ್ಲಿ


Last Updated:

ಕಾಸರಗೋಡು ಸಮೀಪದ ಅನಂತಪುರ ಶ್ರೀ ಅನಂತ ಪದ್ಮನಾಭಸ್ವಾಮಿ ಸರೋವರ ಕ್ಷೇತ್ರದ ಕೆರೆಯಲ್ಲಿ ಬಬಿಯಾ ಎಂಬ ಸಸ್ಯಾಹಾರಿ ಮೊಸಳೆ, ಗುಪ್ತ ಸುರಂಗ ತಿರುವನಂತಪುರ ಪದ್ಮನಾಭಸ್ವಾಮಿ ದೇವಾಲಯಕ್ಕೆ ಸಂಪರ್ಕವಿದೆ ಎಂಬ ನಂಬಿಕೆ

+

ಇಲ್ಲಿ ವಿಡಿಯೋ ನೋಡಿ

ಕೇರಳ: ದೇವರಿಗೂ ಮೊಸಳೆಗೂ (Crocodile) ಏನು ಸಂಬಂಧ? ಮಾಂಸವನ್ನೇ ಮುಟ್ಟದ ಆ ಸಸ್ಯಾಹಾರಿ ಮೊಸಳೆ ಇರೋದಾದ್ರೂ ಎಲ್ಲಿ? ಕೇರಳದ ತಿರುವನಂತಪುರಂ ದೇಗುಲಕ್ಕೂ (Temple) ಈ ಪುಟ್ಟ ಕೆರೆಗೂ ಇರುವ ಆ ನಿಗೂಢ ರಹಸ್ಯವೇನು?

ಪದ್ಮನಾಭ ಸ್ವಾಮಿಯ ಮೂಲ ತಾಣ

ಹೌದು, ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪವಿರುವ ಅನಂತಪುರ ಶ್ರೀ ಅನಂತ ಪದ್ಮನಾಭಸ್ವಾಮಿ ಕ್ಷೇತ್ರ ಅಕ್ಷರಶಃ ವಿಸ್ಮಯಗಳ ಗೂಡು! ಈ ದೇವಸ್ಥಾನವನ್ನು ಇಡೀ ಜಗತ್ತು ‘ಸರೋವರ ಕ್ಷೇತ್ರ’ ಎಂದೇ ಕರೆಯುತ್ತೆ. ಯಾಕಂದ್ರೆ, ಇದು ಸಾಕ್ಷಾತ್ ತಿರುವನಂತಪುರದ ಪದ್ಮನಾಭ ಸ್ವಾಮಿಯ ಮೂಲ ಸ್ಥಾನ!

64 ಬಗೆಯ ಸಸ್ಯ-ಪ್ರಾಣಿ ಜನ್ಯ ವಸ್ತುಗಳಿಂದ ತಯಾರಿ

ಇಲ್ಲಿನ ಗರ್ಭಗುಡಿಯಲ್ಲಿ ಐದು ಹೆಡೆಯ ಸರ್ಪದ ಮೇಲೆ ಕುಳಿತಿರುವ ಸ್ವಾಮಿಯ ವಿಗ್ರಹ ಸಾಮಾನ್ಯವಾದದ್ದಲ್ಲ. ಗರುಡ, ಹನುಮಂತ, ಭೂದೇವಿ ಸೇರಿದಂತೆ ಇಲ್ಲಿರುವ ಏಳು ವಿಗ್ರಹಗಳನ್ನು ‘ಕಡುಶರ್ಕರ ಪಾಕ’ ದಿಂದ ತಯಾರಿಸಲಾಗಿದೆ! ಬರೋಬ್ಬರಿ 64 ಬಗೆಯ ಅಪರೂಪದ ಸಸ್ಯಜನ್ಯ ವಸ್ತುಗಳಿಂದ ತಯಾರಾದ ಈ ಮೂರ್ತಿಗಳಿಗೆ ಮದ್ದಿನ ಗುಣವಿದೆ ಅಂದ್ರೆ ನೀವು ನಂಬಲೇಬೇಕು.

ಬಬಿಯಾ ಮೊಸಳೆಯ ಬಗ್ಗೆ ಗೊತ್ತಾ?

ಇದನ್ನೂ ಓದಿ: NMPT: ಮಂಗಳೂರಿಗೆ ಬಂತು ತೇಲುವ ಸ್ವರ್ಗ; 799 ಜನರನ್ನು ಹೊತ್ತಿರುವ ನೌಕೆ, ಇದು ಸಮುದ್ರದ ಮೇಲಿರುವ ಶಾಶ್ವತ ಅರಮನೆ!

ಇನ್ನು ಈ ಕ್ಷೇತ್ರದ ಅಸಲಿ ಅಚ್ಚರಿಯೇ ದೇವಸ್ಥಾನದ ಕೆರೆಯಲ್ಲಿರುವ ‘ಬಬಿಯಾ’ ಎಂಬ ಮೊಸಳೆ! ಮಾಂಸಾಹಾರಿ ಜೀವಿ ಮೊಸಳೆ ಇಲ್ಲಿ ಸಸ್ಯಾಹಾರಿಯಾಗಿ ಬದುಕುತ್ತೆ ಅಂದ್ರೆ ಅದು ದೈವ ಪವಾಡವೇ ಸರಿ. ಹಳೆಯ ಬಬಿಯಾ ತೀರಿಹೋದ ನಂತರವೂ ಮತ್ತೊಂದು ಮೊಸಳೆ ಇಲ್ಲಿ ಪ್ರತ್ಯಕ್ಷವಾಗಿದ್ದು, ದೇವಳದ ಪ್ರಾಂಗಣದಲ್ಲಿ ವಿಶ್ರಾಂತಿ ಪಡೆಯೋದು ಇಲ್ಲಿನ ವಿಶೇಷ. ಅಷ್ಟೇ ಅಲ್ಲ, ಈ ಕೆರೆಯಲ್ಲಿ ಒಂದು ಗುಪ್ತ ಸುರಂಗ ಮಾರ್ಗವಿದೆಯಂತೆ! ಇಲ್ಲಿಂದ ಹೋದರೆ ನೇರವಾಗಿ ತಿರುವನಂತಪುರದ ಪದ್ಮನಾಭಸ್ವಾಮಿ ದೇವಸ್ಥಾನವನ್ನೇ ತಲುಪಬಹುದು ಎಂಬುದು ಭಕ್ತರ ಗಾಢ ನಂಬಿಕೆ. ಪರಂಪರೆ ಮತ್ತು ಪವಾಡಗಳ ಈ ದಿವ್ಯ ಸನ್ನಿಧಿಯ ಬಗ್ಗೆ ನೀವೇನಂತೀರಾ?

Disclaimer

ಇಲ್ಲಿ ನೀಡಿರುವ ಎಲ್ಲಾ ಮಾಹಿತಿಯನ್ನು ಜ್ಯೋತಿಷ್ಯ ಶಾಸ್ತ್ರಜ್ಞರು ಮತ್ತು ತಜ್ಞರನ್ನು ಸಂಪರ್ಕಿಸಿ ರಾಶಿ, ಧರ್ಮ ಮತ್ತು ಶಾಸ್ತ್ರಗಳಿಗೆ ಅನುಸಾರವಾಗಿ ನೀಡಲಾಗಿದೆ. ಯಾವುದೇ ಘಟನೆ-ದುರ್ಘಟನೆ ಅಥವಾ ಲಾಭ-ನಷ್ಟಗಳು ಕೇವಲ ಕಾಕತಾಳೀಯ. ಸಾರ್ವಜನಿಕ ಹಿತದೃಷ್ಟಿಯಿಂದ ಜ್ಯೋತಿಷಿಗಳ ಮಾಹಿತಿ ನೀಡಲಾಗಿದೆ. ಇಲ್ಲಿ ತಿಳಿಸಿರುವ ಯಾವುದೇ ಮಾಹಿತಿಯನ್ನು ಲೋಕಲ್ 18 ವ್ಯಕ್ತಿಗತವಾಗಿ ಸಮರ್ಥಿಸಿಕೊಳ್ಳುವುದಿಲ್ಲ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed