Last Updated:
ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಗುಬ್ಬಿವಾಣಿ ಟ್ರಸ್ಟ್ ಆಯೋಜಿಸಿದ ಅವಳ ಹೆಜ್ಜೆ ಕಿರುಚಿತ್ರೋತ್ಸವ 2026 ಇಂದು, 10 ಮಹಿಳಾ ನಿರ್ದೇಶಕಿಯರ ಚಿತ್ರ ಪ್ರದರ್ಶನ
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ (Sandalwood) ವಿಜಯಲಕ್ಷ್ಮಿ ಸಿಂಗ್, ಸುಮನಾ ಕಿತ್ತೂರು, ರೂಪಾ ರಾವ್, ಸಿಂಧೂ ಶ್ರೀನಿವಾಸ್ ಮೂರ್ತಿ ಹಾಗೆಯೇ ಚಂಪಾ ಶೆಟ್ಟಿ ಮತ್ತು ಇನ್ನೂ ಐದು ಜನ ಅಷ್ಟೇ ಮಹಿಳಾ ನಿರ್ದೇಶಕಿಯರು ಇರೋದು ಅಂದ್ರೆ ನಂಬ್ತೀರಾ? ನಮ್ಮೆಲ್ಲಾ ಕೈ-ಕಾಲಿನ ಬೆರಳೊಡನೆ ಇವರ ಸಂಖ್ಯೆಗಿಂತ ಹೆಚ್ಚಿದೆ, ಬೆರಳೆಣಿಕೆಯಷ್ಟು ಕಮ್ಮಿ ಇರುವ ಮಹಿಳೆಯರು ಚಿತ್ರರಂಗಕ್ಕೆ ಅದ್ಭುತ ಕೊಡುಗೆಯನ್ನೇ ನೀಡಿದ್ದಾರೆ. ಹಾಗಾದರೆ ಇವರು ಯಾಕೆ ಸಿನಿರಂಗಕ್ಕೆ ಬರ್ತಿಲ್ಲ? ಅನ್ನೋ ಪ್ರಶ್ನೆಗೆ ಉತ್ತರ ಪ್ರೋತ್ಸಾಹದ (Encouragement) ಕೊರತೆ; ಆ ಬರ ನೀಗಲು ಬಂದಿದ್ದೇ ಈ ಸಮಾರಂಭ!
ಮಹಿಳೆಯರ ಧ್ವನಿಗೆ ವೇದಿಕೆ ಕಲ್ಪಿಸಲು ಗುಬ್ಬಿವಾಣಿ ಟ್ರಸ್ಟ್ ಆಯೋಜಿಸಿರುವ ಅದ್ಭುತ ಕಾರ್ಯಕ್ರಮ “ಅವಳ ಹೆಜ್ಜೆ” ಕಿರುಚಿತ್ರೋತ್ಸವ 2026 ಇಂದು ಭಾನುವಾರ ಮೇ 24 ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ (ಪಿನ್: 560018) ನಲ್ಲಿ ಬೆಳಗ್ಗೆ 9 ರಿಂದ ಸಂಜೆ 7 ರವರೆಗೆ ನಡೆಯಲಿದೆ. ವಿಜೇತ ನಿರ್ದೇಶಕಿಗೆ ₹1 ಲಕ್ಷ ನಗದು ಬಹುಮಾನ ಇಂದು ಘೋಷಣೆಯಾಗಲಿದೆ.
ಮಧ್ಯಾಹ್ನ 2 ಗಂಟೆಗೆ ಮತ್ತೆ ಚಿತ್ರ ಪ್ರದರ್ಶನ ಆರಂಭವಾಗಿ ಸುಷ್ಮಾ ಭಾರದ್ವಾಜ್ ನಿರ್ದೇಶನದ ‘ದಾರಿ’ (2025), ಸುನಯನಾ ಸುರೇಶ್ ನಿರ್ದೇಶನದ ‘ಮೌನ ರಾಗ’ (2025), ಶ್ರೇಯ ಸುನಿಲ್ ನಿರ್ದೇಶನದ ‘ಆ ಮಾಡಿ’ (2024), ಹರ್ಷಿತ ಜಿ. ಮತ್ತು ರಚನ ಸುವರ್ಣ ನಿರ್ದೇಶನದ ‘ಗೆಜ್ಜೆ’ (2026) ಹಾಗೂ ವನು ಪಾಟೀಲ್ ನಿರ್ದೇಶನದ ‘ನಿತ್ಯ’ (2026) ಪ್ರದರ್ಶನ ನಡೆಯಲಿದೆ. ಒಟ್ಟು 10 ಮಹಿಳಾ ನಿರ್ದೇಶಕಿಯರ ಕನ್ನಡ ಕಿರುಚಿತ್ರಗಳು ಇಂದು ಪ್ರದರ್ಶನ ಪಡೆಯಲಿವೆ.
ಚಿತ್ರ ಪ್ರದರ್ಶನದ ನಂತರ ಸಂವಾದ
3:15 ರಿಂದ ನಿರ್ದೇಶಕಿಯರೊಂದಿಗೆ ಪ್ರೇಕ್ಷಕರ ಪ್ರಶ್ನೋತ್ತರ ಕಾರ್ಯಕ್ರಮ, 4:45 ರಿಂದ ಸ್ಥಾಪಕ ಟ್ರಸ್ಟಿ ಮಾಲವಿಕಾ ಗುಬ್ಬಿವಾಣಿ ಅವರ ಭಾಷಣ ನಡೆಯಲಿದೆ. 5 ಗಂಟೆಗೆ “ಸಿನೆಮಾದಲ್ಲಿ ಅವಳ ಹೆಜ್ಜೆ — ‘ಅ’ ರಿಂದ ‘ಅಃ’ ವರೆಗೆ” ಎಂಬ ವಿಷಯದ ಮೇಲೆ ಚರ್ಚಾಗೋಷ್ಠಿ ನಡೆಯಲಿದ್ದು ನೀತು ಶೆಟ್ಟಿ, ಗ್ರೀಷ್ಮಾ ಶ್ರೀಧರ್, ಸಂಗೀತಾ ನಂಜುಂಡಸ್ವಾಮಿ ಮತ್ತು ಸಂಜೋತಾ ಭಂಡಾರಿ ಭಾಗವಹಿಸಲಿದ್ದಾರೆ. ಚಿತ್ರೋತ್ಸವ ನಿರ್ದೇಶಕಿ ಶಾಂತಲಾ ದಾಮ್ಲೆ ಈ ಚರ್ಚೆಯನ್ನು ನಡೆಸಿಕೊಡಲಿದ್ದಾರೆ. ಸಂಜೆ 6 ಗಂಟೆಗೆ ಗೌರವಾನ್ವಿತ ಅತಿಥಿಗಳ ಸಮ್ಮುಖದಲ್ಲಿ ₹1 ಲಕ್ಷ ನಗದು ಬಹುಮಾನ ವಿಜೇತ ಘೋಷಣೆ ಮತ್ತು ಪ್ರಶಸ್ತಿ ಪ್ರದಾನ ನಡೆಯಲಿದ್ದು ಕಾರ್ಯಕ್ರಮ ಸಂಜೆ 7 ಗಂಟೆಗೆ ಮುಕ್ತಾಯಗೊಳ್ಳಲಿದೆ.
Bangalore [Bangalore],Bangalore,Karnataka













