Last Updated:
ಬಾಲಿವುಡ್ ನಟಿ (Bollywood Actress) ಮೌನಿ ರಾಯ್ (Mouni Roy) ತಮ್ಮ ಖಾಸಗಿತನಕ್ಕೆ ಧಕ್ಕೆ ಉಂಟಾಗುತ್ತಿದೆ ಎಂದು ಆರೋಪಿಸಿ ಪಾಪರಾಜಿಗಳ ವಿರುದ್ಧ ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಲಿವುಡ್ ನಟಿ (Bollywood Actress) ಮೌನಿ ರಾಯ್ (Mouni Roy) ತಮ್ಮ ಖಾಸಗಿತನಕ್ಕೆ ಧಕ್ಕೆ ಉಂಟಾಗುತ್ತಿದೆ ಎಂದು ಆರೋಪಿಸಿ ಪಾಪರಾಜಿಗಳ ವಿರುದ್ಧ ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರಿನೊಳಗಿದ್ದರೂ ನಿರಂತರವಾಗಿ ವಿಡಿಯೋ ಚಿತ್ರೀಕರಣ ನಡೆಸಿದ ಫೋಟೋಗ್ರಾಫರ್ (Photographer) ವರ್ತನೆಗೆ ಬೇಸರಗೊಂಡ ಮೌನಿ, ‘ಬಂದ್ ಕರೋ’ ಎಂದು ಗದರಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿದೆ.
ಮಂಗಳವಾರ ಸಂಜೆ ಮುಂಬೈನ ಜನಪ್ರಿಯ ರೆಸ್ಟೋರೆಂಟ್ ಒಂದರಲ್ಲಿ ನಟಿ ಮೌನಿ ರಾಯ್ ತಮ್ಮ ಆಪ್ತ ಸ್ನೇಹಿತರಾದ ಅನುಷಾ ದಾಂಡೆಕರ್ ಹಾಗೂ ಅರ್ಜುನ್ ಬಿಜ್ಲಾನಿ ಅವರೊಂದಿಗೆ ಸಮಯ ಕಳೆದಿದ್ದರು. ಡಿನ್ನರ್ ಮುಗಿದ ಬಳಿಕ ಅವರು ಕಾರಿನಲ್ಲಿ ಕುಳಿತು ಅಲ್ಲಿಂದ ತೆರಳಲು ಸಿದ್ಧರಾಗಿದ್ದರು. ಇದೇ ವೇಳೆ ಅಲ್ಲಿದ್ದ ಪಾಪರಾಜಿಗಳು ಅವರನ್ನು ಸುತ್ತುವರಿದು ನಿರಂತರವಾಗಿ ಫೋಟೋ ಹಾಗೂ ವಿಡಿಯೋ ಚಿತ್ರೀಕರಣ ಆರಂಭಿಸಿದರು.
ಮೌನಿ ರಾಯ್ ಕಾರಿನೊಳಗೆ ಕುಳಿತ ನಂತರವೂ ಚಿತ್ರೀಕರಣ ನಿಲ್ಲಲಿಲ್ಲ. ಕಾರಿನ ಬಾಗಿಲು ಮುಚ್ಚಿದ ಬಳಿಕವೂ ಕಿಟಕಿಯ ಗಾಜಿನ ಮೂಲಕ ವಿಡಿಯೋ ಚಿತ್ರೀಕರಣ ನಡೆಸುತ್ತಿದ್ದ ದೃಶ್ಯಗಳು ನಟಿಗೆ ಅಸಮಾಧಾನ ಉಂಟುಮಾಡಿದವು. ಖಾಸಗಿ ಸ್ಥಳದಲ್ಲಿದ್ದರೂ ಚಿತ್ರೀಕರಣ ಮುಂದುವರಿದ ಕಾರಣ ಅವರು ತಾಳ್ಮೆ ಕಳೆದುಕೊಂಡರು.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮೌನಿ ರಾಯ್ ಹಲವು ಬಾರಿ ಬಂದ್ ಕರೋ… ಬಂದ್ ಕರೋ ಎಂದು ಪಾಪರಾಜಿಗಳಿಗೆ ಹೇಳುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಬೆರಳು ತೋರಿಸಿ ಚಿತ್ರೀಕರಣ ನಿಲ್ಲಿಸುವಂತೆ ಸೂಚಿಸಿದರೂ ಕ್ಯಾಮೆರಾಗಳು ಮುಂದುವರಿದ ಕಾರಣ ಅವರು ಇನ್ನಷ್ಟು ಕೋಪಗೊಂಡರು. ಬಳಿಕ ಅವರ ಕಾರು ಅಲ್ಲಿಂದ ತೆರಳಿತು.
ಆ ದಿನ ಮೌನಿ ರಾಯ್ ಕಪ್ಪು ಬಣ್ಣದ ಸ್ಲೀವ್ಲೆಸ್ ಉಡುಪಿನಲ್ಲಿ ಯಾವುದೇ ಮೇಕಪ್ ಇಲ್ಲದೆ ಸರಳ ಲುಕ್ನಲ್ಲಿ ಕಾಣಿಸಿಕೊಂಡಿದ್ದರು. ಸ್ನೇಹಿತರೊಂದಿಗೆ ಖಾಸಗಿಯಾಗಿ ಸಮಯ ಕಳೆಯಲು ಬಂದಿದ್ದ ಅವರು, ಹೊರಡುವ ವೇಳೆ ಇಂತಹ ಪರಿಸ್ಥಿತಿ ಎದುರಾಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಎನ್ನಲಾಗುತ್ತಿದೆ.
ಇನ್ನೊಂದೆಡೆ, ಕೆಲವು ಮಂದಿ ಸೆಲೆಬ್ರಿಟಿಗಳು ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡಾಗ ಫೋಟೋ ಹಾಗೂ ವಿಡಿಯೋ ಸೆರೆಹಿಡಿಯುವುದು ಪಾಪರಾಜಿಗಳ ಕೆಲಸದ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Bangalore [Bangalore],Bangalore,Karnataka














