Most Runs: ಮಿಥಾಲಿ ಹಿಂದಿಕ್ಕಿದ ಸ್ಮೃತಿ! ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಅತಿ ಹೆಚ್ಚು ರನ್ ಸಿಡಿಸಿ ವಿಶ್ವದಾಖಲೆ ಬರೆದ ಮಂಧಾನ | ಕ್ರೀಡಾ ಸುದ್ದಿ | ACTPnews

ಸ್ಮೃತಿ ಮಂಧಾನ-ಮಿಥಾಲಿ ರಾಜ್


Last Updated:


ದುಬೈನಲ್ಲಿ ನಡೆದ ಈ ಐತಿಹಾಸಿಕ ಪಂದ್ಯದಲ್ಲಿ ಮಂಧಾನ ಭಾರತದ ಮಾಜಿ ನಾಯಕಿ ಮಿಥಾಲಿ ರಾಜ್ ಅವರ 10,868 ರನ್‌ಗಳ ಸಾರ್ವಕಾಲಿಕ ದಾಖಲೆಯನ್ನು ಮುರಿದರು. ಈ ಪಂದ್ಯಕ್ಕೂ ಮುನ್ನ ಸ್ಮೃತಿ ಮಂಧಾನಗೆ ಈ ದಾಖಲೆ ಮುರಿಯಲು 113 ರನ್‌ಗಳ ಅಗತ್ಯವಿತ್ತು. ಬೃಹತ್ ಶತಕ ಸಿಡಿಸಿ ವಿಶ್ವದಾಖಲೆ ತಮ್ಮದಾಗಿಸಿಕೊಂಡರು.

ಸ್ಮೃತಿ ಮಂಧಾನ-ಮಿಥಾಲಿ ರಾಜ್
ಸ್ಮೃತಿ ಮಂಧಾನ-ಮಿಥಾಲಿ ರಾಜ್

ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಸ್ಮೃತಿ ಮಂಧಾನ (Smriti Mandhana) ತಮ್ಮ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಬರೆದಿದ್ದಾರೆ. ಹಾಂಗ್ ಕಾಂಗ್ ವಿರುದ್ಧದ ಮಹಿಳಾ ಏಷ್ಯಾ ಕಪ್ (Women Asia Cup) ಪಂದ್ಯದಲ್ಲಿ ಶತಕ ಸಿಡಿಸಯವ ಮೂಲಕ ಮಂಧಾನ ಇಡೀ ಕ್ರಿಕೆಟ್ ಜಗತ್ತನ್ನೇ ಬೆರಗುಗೊಳಿಸುವ ದಾಖಲೆಯನ್ನು ಸ್ಥಾಪಿಸಿದ್ದಾರೆ. ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ, ಎಡಗೈ ಬ್ಯಾಟ್ಸ್‌ಮನ್ ಅಂತರರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಈ ಪಂದ್ಯದಲ್ಲಿ ಮಂಧಾನ 64 ಎಸೆತಗಳಲ್ಲಿ 14 ಬೌಂಡರಿ, 7 ಸಿಕ್ಸರ್​ಗಳ ಸಹಿತ 124 ರನ್​ಗಳಿಸುವ ಮೂಲಕ ಈ ದಾಖಲೆ ಬರೆದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed