Modi-Trump: ಭಾರತದ ಮೇಲೆ ಯಾರಾದ್ರೂ ದಾಳಿ ಮಾಡಿದ್ರೆ, ನಾವು ಸಹಾಯಕ್ಕೆ ಬರುತ್ತೇವೆ! ಮೋದಿಗೆ ಮಾತು ಕೊಟ್ಟ ಟ್ರಂಪ್​ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

G7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್


Last Updated:

Modi-Trump: 16 ತಿಂಗಳ ನಂತರ, ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫ್ರಾನ್ಸ್‌ನ ಎವಿಯನ್‌ನಲ್ಲಿ ದ್ವಿಪಕ್ಷೀಯ ಸಭೆ ನಡೆಸಿದರು. ಈ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಟ್ರಂಪ್ ಅವರೊಂದಿಗೆ ಭಾರತೀಯರ ಸುರಕ್ಷತೆಯ ವಿಷಯವನ್ನು ಪ್ರಸ್ತಾಪಿಸಿ, “ಭಾರತೀಯ ನಾವಿಕರ ಸುರಕ್ಷತೆ ಅತ್ಯಂತ ಮಹತ್ವದ್ದಾಗಿದೆ” ಎಂದು ಖಡಕ್​ ಆಗಿ ಹೇಳಿದ್ದಾರೆ. ಆ ಕುರಿತ ವರದಿ ಇಲ್ಲಿದೆ.

G7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
G7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಏವಿಯನ್ (ಫ್ರಾನ್ಸ್): 16 ತಿಂಗಳ ನಂತರ, ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಫ್ರಾನ್ಸ್‌ನ ಎವಿಯನ್‌ನಲ್ಲಿ ದ್ವಿಪಕ್ಷೀಯ ಸಭೆ ನಡೆಸಿದರು. ಈ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಟ್ರಂಪ್ ಅವರೊಂದಿಗೆ ಭಾರತೀಯರ ಸುರಕ್ಷತೆಯ (Safety of Indians) ವಿಷಯವನ್ನು ಪ್ರಸ್ತಾಪಿಸಿ, “ಭಾರತೀಯ ನಾವಿಕರ ಸುರಕ್ಷತೆ ಅತ್ಯಂತ ಮಹತ್ವದ್ದಾಗಿದೆ” ಎಂದು ಖಡಕ್​ ಆಗಿ ಹೇಳಿದ್ದಾರೆ. ಆ ಕುರಿತ ವರದಿ ಇಲ್ಲಿದೆ.

ಭಾರತದ ಮೇಲೆ ದಾಳಿ ಮಾಡಿದರೆ, ನಾವು ಯುದ್ಧಕ್ಕೆ ಬರುತ್ತೇವೆ!

G7 ಶೃಂಗಸಭೆಯ ವೇಳೆ ನಡೆದ ಈ ಭೇಟಿಯಲ್ಲಿ, ಹಾರ್ಮುಜ್ ಜಲಸಂಧಿಯನ್ನು ಮುಚ್ಚುವುದರಿಂದ ಉಂಟಾಗಬಹುದಾದ ಸಮಸ್ಯೆಗಳ ಬಗ್ಗೆಯೂ ಟ್ರಂಪ್ ಅವರಿಗೆ ವಿವರಿಸಿದ ಪ್ರಧಾನಿ ಮೋದಿ, “ಹಾರ್ಮುಜ್ ವಿಚಾರದಲ್ಲಿ ನಮ್ಮ ಕಳವಳಗಳು ಜಗತ್ತಿನ ಕಳವಳ ಒಂದೇ ಆಗಿವೆ. ಅದರಂತೆ, ಹಾರ್ಮುಜ್ ಜಲಸಂಧಿ ಮುಕ್ತವಾಗಿರುವುದು ಜಗತ್ತಿಗೆ ಅತ್ಯಗತ್ಯ. ಅದು ತೆರೆದಿದ್ದರೆ ಇಡೀ ಜಗತ್ತಿಗೆ ನೆಮ್ಮದಿ ಸಿಗುತ್ತದೆ” ಎಂದು ತಿಳಿಸಿದ್ದಾರೆ.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಗೆ, ಭಾರತದ ಮೇಲೆ ಎಂದಾದರೂ ದಾಳಿ ನಡೆದರೆ, ಅಮೆರಿಕ ಭಾರತದೊಂದಿಗೆ ನಿಲ್ಲುತ್ತದೆ ಎಂದ ಟ್ರಂಪ್, “ನರೇಂದ್ರ ಮೋದಿ ಪ್ರಧಾನಿಯಾಗಿರುವವರೆಗೂ, ಭಾರತದ ಮೇಲೆ ಯಾರೇ ದಾಳಿ ಮಾಡಿದರೂ, ಯಾವುದೇ ಲಿಖಿತ ಒಪ್ಪಂದವಿಲ್ಲದಿದ್ದರೂ ಸಹ, ಅಮೆರಿಕ ಭಾರತದ ಪರವಾಗಿ ಯುದ್ದಕ್ಕೆ ಧುಮುಕುತ್ತದೆ” ಎಂದು ಹೇಳಿದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed