Modi Birthday: ಮೋದಿ ಹುಟ್ಟುಹಬ್ಬಕ್ಕೆ ಕಾಂಗ್ರೆಸ್ ಮಾಜಿ ಸಿಎಂ ಮೊಮ್ಮಗನಿಂದ ಬ್ಯಾನರ್! ರಾಜಕೀಯದಲ್ಲಿ ಹೊಸ ಚರ್ಚೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಮೋದಿ ಬ್ಯಾನರ್ (ಚಿತ್ರ ಕೃಪೆ: Grok)


Last Updated:

Modi Birthday: ದೇಶಾದ್ಯಂತ ಬಿಜೆಪಿ ಕಾರ್ಯಕರ್ತರು, ಮೋದಿ ಅಭಿಮಾನಿಗಳು ತಮ್ಮ ಮನೆಗಳಲ್ಲಿ ದೀಪ ಬೆಳಗಿ, ನೆಚ್ಚಿನ ನಾಯಕನಿಗೆ ಶುಭ ಕೋರಿದ್ರು. ಇದರ ನಡುವೆ ಮಾಜಿ ಸಿಎಂ, ಮಾಜಿ ಕೇಂದ್ರ ಸಚಿವರೂ ಆಗಿರುವ ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರ ಮೊಮ್ಮಗ ಮೋದಿ ಪರ ಬ್ಯಾನರ್ ಹಾಕಿಸಿ, ರಾಜಕೀಯದ ಚರ್ಚೆಗೆ ಕಾರಣರಾಗಿದ್ದಾರೆ!

ಮೋದಿ ಬ್ಯಾನರ್ (ಚಿತ್ರ ಕೃಪೆ: Grok)
ಮೋದಿ ಬ್ಯಾನರ್ (ಚಿತ್ರ ಕೃಪೆ: Grok)

ಸೋಲಾಪುರ, ಮಹಾರಾಷ್ಟ್ರ: ನಿನ್ನೆ ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ತಮ್ಮ 76ನೇ ಹುಟ್ಟುಹಬ್ಬವನ್ನು (Modi Birthday) ಆಚರಿಸಿಕೊಂಡರು. ಬಿಜೆಪಿಯು (BJP) ದೇಶಾದ್ಯಂತ ಸೇವಾ ಸಂಕಲ್ಪ ಅಭಿಯಾನ ಆರಂಭಿಸಿ, ಮೋದಿ ಹುಟ್ಟುಹಬ್ಬವನ್ನು 1 ತಿಂಗಳ ಕಾಲ ಆಚರಿಸಲು ಮುಂದಾಗಿದೆ. ಇನ್ನು ದೇಶಾದ್ಯಂತ ಬಿಜೆಪಿ ಕಾರ್ಯಕರ್ತರು, ಮೋದಿ ಅಭಿಮಾನಿಗಳು (Modi Fans) ತಮ್ಮ ಮನೆಗಳಲ್ಲಿ ದೀಪ ಬೆಳಗಿ, ನೆಚ್ಚಿನ ನಾಯಕನಿಗೆ ಶುಭ ಕೋರಿದ್ರು. ಇದರ ನಡುವೆ ಮಾಜಿ ಸಿಎಂ, ಮಾಜಿ ಕೇಂದ್ರ ಸಚಿವರೂ ಆಗಿರುವ ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರ ಮೊಮ್ಮಗ ಮೋದಿ ಪರ ಬ್ಯಾನರ್ ಹಾಕಿಸಿ, ರಾಜಕೀಯದ ಚರ್ಚೆಗೆ ಕಾರಣರಾಗಿದ್ದಾರೆ!

ಮೋದಿ ಹುಟ್ಟುಹಬ್ಬಕ್ಕೆ ಕಾಂಗ್ರೆಸ್ ಯುವ ನಾಯಕನಿಂದ ಬ್ಯಾನರ್!

ನಿನ್ನೆ ಪ್ರಧಾನಿ ನರೇಂದ್ರ ಮೋದಿಯವರ 76ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಮಹಾರಾಷ್ಟ್ರದ ಸೋಲಾಪುರದಲ್ಲಿ ಹಾಕಲಾದ ಶುಭಾಶಯ ಕೋರುವ ಬ್ಯಾನರ್, ಸ್ಥಳೀಯ ರಾಜಕೀಯ ವಲಯಗಳಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ. ಹಾಲಿ ಹಿರಿಯ ಕಾಂಗ್ರೆಸ್ ನಾಯಕ, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಗೃಹಸಚಿವ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ ಶಿಖರ್ ಪಹಾರಿಯಾ ಮೋದಿ ಹುಟ್ಟುಹಬ್ಬಕ್ಕೆ ಶುಭ ಕೋರಿ, ಬ್ಯಾನರ್ ಹಾಕಿಸಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ.

ಮೋದಿ ಬ್ಯಾನರ್ ಹಾಕಿಸಿದ ಶಿಂಧೆ ಮೊಮ್ಮಗ

ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ ಶಿಖರ್ ಪಹಾರಿಯಾ ಅವರು ಸೋಲಾಪುರದ ಭಾರತೀಯ ಜನತಾ ಪಕ್ಷದ ಕಚೇರಿಯ ಹೊರಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಶುಭ ಹಾರೈಸುವ ಭವ್ಯ ಬ್ಯಾನರ್ ಅನ್ನು ಹಾಕಿದ್ದಾರೆ. ಈ ಬ್ಯಾನರ್ ಪ್ರದರ್ಶನವು ಸೋಲಾಪುರ ರಾಜಕೀಯದಲ್ಲಿ ಹೊಸ ವಾದಗಳನ್ನು ಸೃಷ್ಟಿಸುತ್ತಿದೆ.

ಶಿಖರ್ ಪಹರಿಯಾ ಬಿಜೆಪಿಗೆ ಬಂದರೆ ಸ್ವಾಗತ

ಏತನ್ಮಧ್ಯೆ, ಸೋಲಾಪುರದಲ್ಲಿ ಈ ಬ್ಯಾನರ್ ಕುರಿತು ಮಾತನಾಡಿದ ಸೋಲಾಪುರ ಬಿಜೆಪಿ ನಗರ ಅಧ್ಯಕ್ಷೆ ರೋಹಿಣಿ ತಡವಾಲ್ಕರ್ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಶಿಖರ್ ಪಹರಿಯಾ ಅವರು ಈ ಬ್ಯಾನರ್ ಅನ್ನು ಸ್ವಯಂಪ್ರೇರಣೆಯಿಂದ ಹಾಕಿದ್ದಾರೆ. ಬಿಜೆಪಿ ಎಲ್ಲರನ್ನೂ ಅಪ್ಪಿಕೊಳ್ಳುವ ಪಕ್ಷ, ಆದ್ದರಿಂದ ಶಿಖರ್ ಪಹರಿಯಾ ನಮ್ಮ ಪಕ್ಷಕ್ಕೆ ಬಂದರೆ, ಅವರನ್ನು ಸಂತೋಷದಿಂದ ಸ್ವಾಗತಿಸಲಾಗುತ್ತದೆ ಎಂದಿದ್ದಾರೆ.

ಕಾಂಗ್ರೆಸ್‌ ಅನ್ನು ಪ್ರಚೋದಿಸೋ ಉದ್ದೇಶವಿಲ್ಲ

ಆದಾಗ್ಯೂ, ಸುಶೀಲ್‌ಕುಮಾರ್ ಶಿಂಧೆ ಅಥವಾ ಕಾಂಗ್ರೆಸ್ ಅನ್ನು ಯಾವುದೇ ರೀತಿಯಲ್ಲಿ ಪ್ರಚೋದಿಸುವ ಉದ್ದೇಶ ನಮಗಿಲ್ಲ. ಅವರು ಈ ಬ್ಯಾನರ್ ಅನ್ನು ಸ್ವಯಂಪ್ರೇರಣೆಯಿಂದ ಹಾಕಿದ್ದಾರೆ ಮತ್ತು ಅದರ ಮೂಲಕ, ಅವರು ಶಿಂಧೆ ಸಾಹೇಬ್‌ಗೆ ವಿಭಿನ್ನ ರಾಜಕೀಯ ಸಂಕೇತವನ್ನು ನೀಡಲು ಬಯಸುತ್ತಾರೆ ಎಂದು ನಾನು ಭಾವಿಸುತ್ತೇನೆ ಅಂತ ರೋಹಿಣಿ ತಡವಾಲ್ಕರ್ ಹೇಳಿದ್ದಾರೆ.

ಬಿಜೆಪಿ ಸೇರುತ್ತಾರಾ ಶಿಖರ್ ಪಹರಿಯಾ?

ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರ ಖಾಸಾ ಮೊಮ್ಮಗ ಬಿಜೆಪಿ ಕಚೇರಿಯ ಹೊರಗೆ ಪ್ರಧಾನಿ ಮೋದಿಯವರ ಬ್ಯಾನರ್ ಹಾಕಿದ್ದು, ಇದು ಸೋಲಾಪುರ ಕಾಂಗ್ರೆಸ್ ನಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಶಿಖರ್ ಪಹರಿಯಾ ಶೀಘ್ರದಲ್ಲೇ ಬಿಜೆಪಿ ಸೇರುತ್ತಾರೆಯೇ ಎಂದು ರಾಜಕೀಯ ವಲಯದಲ್ಲಿ ಚರ್ಚೆ ಶುರುವಾಗಿದೆ.

ಯಾರು ಈ ಶಿಖರ್ ಪಹರಿಯಾ?

ಶಿಖರ್ ಪಹರಿಯಾ ಅವರು ಹಿರಿಯ ಕಾಂಗ್ರೆಸ್ ನಾಯಕ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ. ಶಿಂಧೆ ಪುತ್ರಿ ಸ್ಮೃತಿ ಪಹರಿಯಾ ಅವರ ಪುತ್ರ. ಅವರು ಪ್ರಸ್ತುತ ಮುಂಬೈನಲ್ಲಿ ತಮ್ಮ ವ್ಯವಹಾರವನ್ನು ನಡೆಸುತ್ತಿದ್ದಾರೆ. ಅವರ ಉಮೇದುವಾರಿಕೆಯ ಬಗ್ಗೆ ಸೋಲಾಪುರದಲ್ಲಿ ಚರ್ಚೆಗಳು ಆರಂಭವಾಗಿದ್ದವು. ಕಳೆದ ವರ್ಷ ಶಿಖರ್ ಪಹರಿಯಾ ಗಣೇಶೋತ್ಸವದ ಸಂದರ್ಭದಲ್ಲಿ ಸೋಲಾಪುರಕ್ಕೆ ಬಂದಿದ್ದರು ಎಂಬುದು ಗಮನಾರ್ಹ. ಅವರು ಕೆಲವು ಗಣೇಶ ಮಂಡಲಗಳಿಗೂ ಭೇಟಿ ನೀಡಿದ್ದರು ಎಂದು ನ್ಯೂಸ್ 18 ಮರಾಠಿ ವರದಿ ಮಾಡಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed