Lucia-2 Movie: ಲೂಸಿಯಾ-2 ಚಿತ್ರದ ಬಗ್ಗೆ ಸತೀಶ್ ನೀನಾಸಂ ಹೇಳೋದೇನು? ಇಲ್ಲಿದೆ ನಟನ ಮಾತು! | | ACTPnews

ಲೂಸಿಯಾ-2 ಚಿತ್ರದ ಮ್ಯಾಟರ್; ಸತೀಶ್ ನೀನಾಸಂ ಹೇಳೋದೇನು? (ಚಿತ್ರ ಕೃಪೆ: ಸತೀಶ್- ಪವನ್ ಇನ್​ಸ್ಟಾಗ್ರಾಮ್)


Last Updated:

ಲೂಸಿಯಾ ಚಿತ್ರ ಬಂದು 13 ವರ್ಷ ಆಗಿದೆ. ಈ ಸಮಯದಲ್ಲಿ ಲೂಸಿಯಾ-2 ಚಿತ್ರ ಮಾಡಬಹುದು ಅಂತ ಡೈರೆಕ್ಟರ್‌ ಪವನ್ ಕುಮಾರ್‌ಗೆ ಅನಿಸಿದೆ. ಈ ವಿಚಾರವಾಗಿ ಕೇಳಿದ ಪ್ರಶ್ನೆಗೆ ಚಿತ್ರದ ನಾಯಕ ನಟ ಸತೀಶ್ ನೀನಾಸಂ ಉತ್ತರ ಕೊಟ್ಟಿದ್ದಾರೆ. ಈ ಸಿನಿಮಾ ಬಗ್ಗೆ ತಮಗೆ ಇರೋ ಆಸಕ್ತಿ ಕುರಿತು ಹೇಳಿಕೊಂಡಿದ್ದಾರೆ. ನ್ಯೂಸ್-18 ಕನ್ನಡ ಡಿಜಿಟಲ್‌ ಜೊತೆಗಿನ ಇವರ ಮಾತುಕತೆಯ ಇನ್ನಷ್ಟು ವಿವರ ಇಲ್ಲಿದೆ ಓದಿ.

ಲೂಸಿಯಾ-2 ಚಿತ್ರದ ಮ್ಯಾಟರ್; ಸತೀಶ್ ನೀನಾಸಂ ಹೇಳೋದೇನು? (ಚಿತ್ರ ಕೃಪೆ: ಸತೀಶ್- ಪವನ್ ಇನ್​ಸ್ಟಾಗ್ರಾಮ್)
ಲೂಸಿಯಾ-2 ಚಿತ್ರದ ಮ್ಯಾಟರ್; ಸತೀಶ್ ನೀನಾಸಂ ಹೇಳೋದೇನು? (ಚಿತ್ರ ಕೃಪೆ: ಸತೀಶ್- ಪವನ್ ಇನ್​ಸ್ಟಾಗ್ರಾಮ್)

ಲೂಸಿಯಾ ಚಿತ್ರಕ್ಕೆ (Lucia Movie) ಇತ್ತೀಚಿಗೆ 13 ವರ್ಷ ಆಗಿದೆ.  ಅನೇಕರು ಲೂಸಿಯಾ-2 ಚಿತ್ರ ಮಾಡಿ ಅಂತಲೇ ಹೇಳ್ತಾ ಇದ್ದರು. ಈ ಒಂದು ಯೋಚನೆ ಡೈರೆಕ್ಟರ್ ಪವನ್ ಕುಮಾರ್ ಅವರಿಗೆ ಬಂದಿರಲಿಲ್ಲ. ಆದರೆ, ಆ ಲೂಸಿಯಾ ಮಾತ್ರೆಗೆ ಒಂದು ಕತೆ ಕೊಡಬಹುದು ಅನಿಸಿದೆ. ಹಾಗೆ ಅನಿಸಿದ ಕೂಡಲೇ ಪವನ್ ಕುಮಾರ್ (Pawan Kumar) ವಿಡಿಯೋ ಮಾಡಿದ್ದಾರೆ. ಲೂಸಿಯಾ-2 ಚಿತ್ರ (Lucia-2 Movie) ಮಾಡ್ತಿನಿ ಅಂತ ಹೇಳಿದ್ದಾರೆ. ಚಿತ್ರದ ನಾಯಕ ನಟ ಸತೀಶ್ ನೀನಾಸಂ (Sathish Ninasam) ನ್ಯೂಸ್-18 ಕನ್ನಡ ಡಿಜಿಟಲ್‌ ಜೊತೆಗೆ ಮಾತನಾಡುವಾಗ ಲೂಸಿಯಾ -2 ಚಿತ್ರದ ಬಗ್ಗೆ ಪಾಸಿಟಿವ್ ಆಗಿಯೇ ಮಾತನಾಡಿದ್ದಾರೆ. ಈ ಚಿತ್ರದಲ್ಲಿ ನಟಿಸುವ ಆಸಕ್ತಿ ಇದೆ ಅಂತಲೂ ಹೇಳಿಕೊಂಡಿದ್ದಾರೆ. ಇವರ ಮಾತುಗಳ ಕಂಪ್ಲೀಟ್ ವಿವರ ಇಲ್ಲಿದೆ ಓದಿ.

ಲೂಸಿಯಾ 13 ವರ್ಷ ಕಂಪ್ಲೀಟ್

ಲೂಸಿಯಾ ಚಿತ್ರ ಬಂದು 13 ವರ್ಷ ಆಗಿದೆ. 2013 ಸೆಪ್ಟೆಂಬರ್-6 ರಂದು ಈ ಚಿತ್ರ ಬಂದಿತ್ತು. ಶ್ರುತಿ ಹರಿಹರನ್ ನಾಯಕಿ ಆಗಿದ್ದರು. ನೀನಾಸಂ ಸತೀಶ್ ಈ ಚಿತ್ರದ ಹೀರೋ ಆಗಿದ್ದರು. ಪೂರ್ಣಚಂದ್ರ ತೇಜಸ್ವಿ ಮ್ಯೂಸಿಕ್ ಮಾಡಿದ್ದರು.
kannada lucia 2 movie sathish ninasam reaction

ಲೂಸಿಯಾ-2 ಆಸಕ್ತಿ ಇದೆ..

(ಚಿತ್ರ ಕೃಪೆ: ಸತೀಶ್ ನೀನಾಸಂ ಇನ್​ಸ್ಟಾಗ್ರಾಮ್)

ಈ ಚಿತ್ರ ಸಹಕಾರಿ ಸಿನಿಮಾ ಆಗಿತ್ತು. ಅಂದ್ರೆ ಸಾಮಾನ್ಯ ಜನರು ಈ ಚಿತ್ರಕ್ಕೆ ದುಡ್ಡು ಹಾಕಿದ್ದರು. ನಿರ್ಮಾಪಕರೂ ಆಗಿದ್ದರು. ಡೈರೆಕ್ಟರ್ ಪವನ್ ಕುಮಾರ್ ಅವರ ಪ್ರಯತ್ನದ ಈ ಚಿತ್ರ ಹಿಟ್ ಆಯಿತು. ಆದರೆ, ಈ ಚಿತ್ರದ ಪಾರ್ಟ್-2 ಮಾಡ್ಬೇಕು ಅಂತ ಪವನ್‌ ಕುಮಾರ್ ಅವರಿಗೆ ಅನಿಸಿಯೇ ಇರಲಿಲ್ಲ ನೋಡಿ.

ಆದರೆ, ಆ ಒಂದು ದಿನ…

ಪವನ್‌ ಕುಮಾರ್ ಅವರಿಗ ಸೆಪ್ಟೆಂಬರ್-6 ರಂದು ಮೆಸೇಜಸ್ ಬರ್ತಾ ಹೋದ್ವು. ನಿಮ್ಮ ಲೂಸಿಯಾ ಚಿತ್ರ ಬಂದು 13 ವರ್ಷ ಆಯಿತು ಅಂತ ಹೇಳಿದರು. ಅದ್ಯಾರೋ ಸ್ನೇಹಿತರು ಚಿತ್ರದ ಒಂದು ಶೋ ಕೂಡ ಇಟ್ಟುಕೊಂಡಿದ್ದರು.

ಲೂಸಿಯಾ-2 ಆಸಕ್ತಿ ಇದೆ..

ಈ ಒಂದು ಮಾತನ್ನ ಲೂಸಿಯಾ ಚಿತ್ರದ ನಾಯಕ ನಟ ಸತೀಶ್ ಹೇಳಿದ್ದಾರೆ. ಅಯೋಗ್ಯ-2 ಚಿತ್ರ 50 ದಿನದತ್ತ ಯಶಸ್ವಿಯಾಗಿ ಸಾಗುತ್ತಿದೆ. ಈ ಸಮಯದಲ್ಲಿ ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೆ ಸತೀಶ್ ಮಾತನಾಡಿದ್ದಾರೆ.

kannada lucia 2 movie sathish ninasam reaction

ಆದರೆ, ಆ ಒಂದು ದಿನ…

(ಚಿತ್ರ ಕೃಪೆ: ಪವನ್ ಕುಮಾರ್ ಇನ್​ಸ್ಟಾಗ್ರಾಮ್)

ಈ ಸಮಯದಲ್ಲಿಯೇ ಲೂಸಿಯಾ-2 ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. “ಲೂಸಿಯಾ-2 ಚಿತ್ರ ಮಾಡುವ ಆಸಕ್ತಿ ನನಗೆ ಇದೆ. ಈ ಚಿತ್ರವನ್ನ ನಾನು ಮಾಡುತ್ತೇನೆ” ಅಂತಲೇ ಸತೀಶ್ ಹೇಳಿಕೊಂಡಿದ್ದಾರೆ.

ಈಗಷ್ಟೆ ಯೋಚನೆ ಬಂದಿದೆ

ಡೈರೆಕ್ಟರ್ ಪವನ್ ಕುಮಾರ್ ಅವರಿಗೆ ಈಗಷ್ಟೆ ಲೂಸಿಯಾ-2 ಮಾಡಬಹುದು ಅನಿಸಿದೆ. ಅದನ್ನ ಅವರು ಹೇಳಿಕೊಂಡಿದ್ದಾರೆ. ಇವರ ಜೊತೆಗೆ ಇನ್ನು ಯಾವುದೇ ಚರ್ಚೆಗಳು ಆಗಿಲ್ಲ.

ಆದರೆ, ಈ ಚಿತ್ರವನ್ನ ಮಾಡುವ ಆಸಕ್ತಿ ನನಗೆ ಇದೆ. ನಾನು ಈ ಸಿನಿಮಾ ಮಾಡುತ್ತೇನೆ ಅಂತ ನಟ ಸತೀಶ್ ನೀನಾಸಂ ಹೇಳಿಕೊಂಡಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed