Last Updated:
Mid Day Meal: ಉಪ್ಪು ಅಂತ ತಿಳಿದು ಡಿಟರ್ಜೆಟ್ ಪೌಡರ್ (detergent powder) ಹಾಕಿದ್ದ ಮಧ್ಯಾಹ್ನದ ಬಿಸಿಯೂಟ (Mid-Day Meal) ಸೇವಿಸಿದ 24ಕ್ಕೂ ಹೆಚ್ಚು ಮಕ್ಕಳು (children) ಅಸ್ವಸ್ಛರಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ.
ಬಿಹಾರ: ಉಪ್ಪು ಅಂತ ತಿಳಿದು ಡಿಟರ್ಜೆಟ್ ಪೌಡರ್ (detergent powder) ಹಾಕಿದ್ದ ಮಧ್ಯಾಹ್ನದ ಬಿಸಿಯೂಟ (Mid-Day Meal) ಸೇವಿಸಿದ 24ಕ್ಕೂ ಹೆಚ್ಚು ಮಕ್ಕಳು (children) ಅಸ್ವಸ್ಛರಾಗಿದ್ದಾರೆ. ಬಿಹಾರ (Bihar) ರಾಜ್ಯದ ನಳಂದ (Nalanda) ಜಿಲ್ಲೆಯ ದೀಪ್ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪೈಂಗ್ರಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ಆಘಾತಕಾರಿ ನಿರ್ಲಕ್ಷ್ಯದ ಘಟನೆ ನಡೆದಿದೆ. ಉಪ್ಪಿನ ಬದಲು ಡಿಟರ್ಜೆಂಟ್ ಪುಡಿ ಹಾಕಿ ಬೇಯಿಸಿದ ಮಧ್ಯಾಹ್ನದ ಊಟ ಸೇವಿಸಿ 24ಕ್ಕೂ ಹೆಚ್ಚು ವಿದ್ಯಾರ್ಥಿಗಳು (Students) ತೀವ್ರ ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ.














