Metro Jobs: ನಮ್ಮ ಮೆಟ್ರೋದಲ್ಲಿ ಉದ್ಯೋಗಾವಕಾಶ, ಲಕ್ಷಾಂತರ ರೂಪಾಯಿ ಸಂಬಳದ ಈ ಹುದ್ದೆಗಳಿಗೆ ಇಂದೇ ಅಪ್ಲೈ ಮಾಡಿ! | ಉದ್ಯೋಗ ಸುದ್ದಿ | ACTPnews

ಮೆಟ್ರೋ ಉದ್ಯೋಗ


Last Updated:

ನಮ್ಮ ಮೆಟ್ರೋದಲ್ಲಿ ವಿವಿಧ ಹುದ್ದೆಗಳಿಗೆ BMRCL ಅರ್ಜಿ ಆಹ್ವಾನಿಸಿದೆ. ಉಪ ಪ್ರಧಾನ ವ್ಯವಸ್ಥಾಪಕ, ಸೂಪರ್‌ವೈಸರ್ ಹುದ್ದೆಗಳಿಗೆ ಪದವಿ/ಇಂಜಿನಿಯರಿಂಗ್, ಅನುಭವ ಕಡ್ಡಾಯ. ಕೊನೆಯ ದಿನಾಂಕ ಜುಲೈ 31, ಆಗಸ್ಟ್ 10.

 ಮೆಟ್ರೋ ಉದ್ಯೋಗ
ಮೆಟ್ರೋ ಉದ್ಯೋಗ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ (Namma Metro) ಕೆಲಸ (Job) ಮಾಡಬೇಕು ಎಂದು ಕನಸು ಕಾಣುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಬಂಪರ್ ಆಫರ್. ಬೆಂಗಳೂರು ಮೆಟ್ರೋ ರೈಲು ನಿಗಮವು  (BMRCL) ಖಾಲಿ ಇರುವ ವಿವಿಧ ಪ್ರಮುಖ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಅತ್ಯಕರ್ಷಕ ವೇತನ ಹಾಗೂ ಭರ್ಜರಿ ಸೌಲಭ್ಯಗಳನ್ನು ಹೊಂದಿರುವ ಈ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ (Application) ಆಹ್ವಾನಿಸಲಾಗಿದೆ.ನೀವು ಕೂಡ ಪದವಿ ಅಥವಾ ಇಂಜಿನಿಯರಿಂಗ್ ಪೂರೈಸಿದ್ದರೆ ಮತ್ತು ನಿಗದಿತ ಅನುಭವ ಹೊಂದಿದ್ದರೆ, ಈ ಸುವರ್ಣಾವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ

ಹುದ್ದೆಗಳ ವಿವರ ಹಾಗೂ ಸಂಬಳ ಎಷ್ಟು?

ಉಪ ಪ್ರಧಾನ ವ್ಯವಸ್ಥಾಪಕರು (ಕಾರ್ಯಾಚರಣೆ ಸುರಕ್ಷತೆ) – 01 ಹುದ್ದೆ: ಈ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬರೋಬ್ಬರಿ 1.64 ಲಕ್ಷ ವರೆಗೆ ಮಾಸಿಕ ವೇತನ ಸಿಗಲಿದೆ ಎಂದು ಕನ್ನಡಪ್ರಭ ವರದಿ ಮಾಡಿದೆ.

ಸೂಪರ್‍ವೈಸರ್ (ಆಪರೇಷನ್ ಸೇಫ್ಟಿ) – 02 ಹುದ್ದೆಗಳು: ಈ ಹುದ್ದೆಗಳಿಗೆ ಮಾಸಿಕ 50,000 ರಿಂದ 62,500 ವರೆಗೆ ಸಂಬಳ ನಿಗದಿಪಡಿಸಲಾಗಿದೆ.

ವಿದ್ಯಾರ್ಹತೆ ಮತ್ತು ಅನುಭವ

ಉಪ ಪ್ರಧಾನ ವ್ಯವಸ್ಥಾಪಕ ಹುದ್ದೆಗೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ಇಂಜಿನಿಯರಿಂಗ್ ಮುಗಿಸಿರಬೇಕು. ಇದರೊಂದಿಗೆ ಕನಿಷ್ಠ 14 ವರ್ಷಗಳ ವೃತ್ತಿ ಅನುಭವವಿರಬೇಕು (ಮೆಟ್ರೋ ಅಥವಾ ಭಾರತೀಯ ರೈಲ್ವೆಯಲ್ಲಿ ಕಾರ್ಯಾಚರಣೆ ಮತ್ತು ಭದ್ರತಾ ವಿಭಾಗದಲ್ಲಿ ಕನಿಷ್ಠ 8 ವರ್ಷ ಅನುಭವ ಕಡ್ಡಾಯ).

ಸೂಪರ್‍ವೈಸರ್ ಹುದ್ದೆಗೆ: ಪದವಿ ಅಥವಾ ಇಂಜಿನಿಯರಿಂಗ್ ಜತೆಗೆ, ಭಾರತೀಯ ರೈಲ್ವೆಯಲ್ಲಿ ಟ್ರಾಫಿಕ್ ಇನ್ಸ್‍ಪೆಕ್ಟರ್ ಅಥವಾ ಸ್ಟೇಷನ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದ ಮುಕ್ತ ಅನುಭವ ಹೊಂದಿರಬೇಕು.

ಪ್ರಮುಖ ದಿನಾಂಕಗಳು ಮತ್ತು ವಿಳಾಸ

ಸೂಪರ್ ವೈಸರ್ ಹುದ್ದೆಗೆ ಅರ್ಜಿ ಸಲ್ಲಿಸಲು ಕಡೇ ದಿನಾಂಕ: ಆನ್‍ಲೈನ್ ಅರ್ಜಿ ಸಲ್ಲಿಸಿ, ಪ್ರಿಂಟ್‍ಔಟ್ ಪ್ರತಿಯನ್ನು ಅಗತ್ಯ ದಾಖಲೆಗಳೊಂದಿಗೆ ಜುಲೈ 31, 2026 ರ ಸಂಜೆ 4:00 ಗಂಟೆಯೊಳಗೆ ತಲುಪಿಸಬೇಕು.

ಉಪ ಪ್ರಧಾನ ವ್ಯವಸ್ಥಾಪಕ ಹುದ್ದೆಗೆ ಕಡೇ ದಿನಾಂಕ: ಆನ್‍ಲೈನ್ ಅರ್ಜಿಗೆ ಆಗಸ್ಟ್ 10 ಕೊನೆಯ ದಿನವಾಗಿದ್ದು, ಪ್ರಿಂಟ್‍ಔಟ್ ಪ್ರತಿಯನ್ನು ಆಗಸ್ಟ್ 13, 2026 ರ ಸಂಜೆ 4:00 ಗಂಟೆಯೊಳಗೆ ಕಳುಹಿಸಬೇಕು.

https://projectrecruit.bmrc.co.in/frmApplFillTab.aspx?ND=116

ಸೂಪರ್‌ವೈಸರ್ (ಆಪರೇಷನ್ ಸೇಫ್ಟಿ)

https://projectrecruit.bmrc.co.in/frmApplFillTab.aspx?ND=115

ದಾಖಲೆಗಳನ್ನು ಕಳುಹಿಸಬೇಕಾದ ವಿಳಾಸ: ಜನರಲ್ ಮ್ಯಾನೇಜರ್ (HR), BMRCL, ಶಾಂತಿನಗರ, ಬೆಂಗಳೂರು.

ಕನ್ನಡ ಸುದ್ದಿ/ ನ್ಯೂಸ್/Jobs/

Metro Jobs: ನಮ್ಮ ಮೆಟ್ರೋದಲ್ಲಿ ಉದ್ಯೋಗಾವಕಾಶ, ಲಕ್ಷಾಂತರ ರೂಪಾಯಿ ಸಂಬಳದ ಈ ಹುದ್ದೆಗಳಿಗೆ ಇಂದೇ ಅಪ್ಲೈ ಮಾಡಿ!



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed