Last Updated:
ಕಾಂತಾರದಲ್ಲಿ ರಿಷಬ್ ಬೆರ್ಮೆ ಮತ್ತು ಮಾಯ್ಕಾರ ಪಾತ್ರಗಳನ್ನು ನಿಭಾಯಿಸಿದ್ದಾರೆ. ರೋನೇಕ್ಸ್ ಕ್ಸೇವಿಯರ್ ಮೇಕಪ್ ಕಲಾವಿದ, 20ಕ್ಕೂ ಹೆಚ್ಚು VFX ತಂಡಗಳು ಚಿತ್ರಕ್ಕೆ ಕೆಲಸ ಮಾಡಿದ್ದಾರೆ.
ಬೆಂಗಳೂರು: ಕಾಂತಾರ (Kantara) ಸಾವಿರ ಕೋಟಿ ಗಳಿಸುವ ಹೊಸ್ತಿಲಲ್ಲಿ ಧಾಪುಗಾಲಿಡುತ್ತಿದೆ. ಈ ವೇಳೆಯಲ್ಲಿ ಕಾಂತಾರದ ಕಾರ್ಯಕಾರಣ ಶಕ್ತಿಯಾದ (Power) ರಿಷಬ್ ಹೊಸ ವಿಷಯವೊಂದನ್ನು ಹಂಚಿಕೊಂಡಿದ್ದಾರೆ.
ಕಾಂತಾರ ನೋಡಿದ ಎಲ್ಲರಿಗೂ ಬಹುವಾಗಿ ಕಾಡಿದ ಪಾತ್ರಗಳಲ್ಲಿ ಒಂದು ಮಾಯ್ಕಾರನ ಪಾತ್ರ. ಕೆಲವೇ ಕೆಲವು ನಿಮಿಷಗಳಷ್ಟು ಸ್ಕ್ರೀನ್ ಸ್ಪೇಸ್ ನ ಹೊರತಾಗಿಯೂ ಅದ್ಭುತ ಪ್ರಭಾವ ಸೃಷ್ಟಿಸಿದ ಈ ಪಾತ್ರ ಪೋಷಣೆ ಮಾಡಿದ್ಯಾರು? ಎಂಬ ಹುಳ ಅಕ್ಟೋಬರ್ 2 ರಿಂದ ಎಲ್ಲರೂ ತಲೆಯಲ್ಲಿ ಬಿಟ್ಟುಕೊಂಡಿದ್ದರು. ಅದಾಗ್ಯೂ ಸೋಶಿಯಲ್ ಮೀಡಿಯಾದಲ್ಲಿ ಪ್ರಭಾಕರ್ ಕುಂದರ್ ಹೆಸರೂ ಹಾಗೆಯೇ ಜೂನಿಯರ್ ಎನ್ ಟಿ ಆರ್ ಅಂತೇ ಎಂಬ ವದಂತಿ ಹಬ್ಬಿತ್ತು.
ಆದರೆ ನಿನ್ನೆ ನಮಗೆಲ್ಲಾ ಶೆಟ್ರು ಶಾಕ್ ಕೊಟ್ಟುಬಿಟ್ರು! ಅದೇನೆಂದರೆ ಅವರೇ ಬೆರ್ಮೆಯ ಪಾತ್ರದ ಜೊತೆಗೆ ಮಾಯ್ಕಾರ ಪಾತ್ರವನ್ನೂ ನಿಭಾಯಿಸಿದ್ದಾರೆ. ಈ ಮಾಯ್ಕಾರ ಯಾರು? ಎಂಬುದು ಎಲ್ಲರ ಚಿಂತೆಯಾದರೆ ಅದಕ್ಕೆ ಉತ್ತರವಾಗಿ ರಿಷಬ್ ನಿರ್ವಹಿಸಿದ ಬೆರ್ಮೆ ಪಾತ್ರದ ಮೂಲ ಪುರುಷ ಆ ಜಾಗದಲ್ಲಿ ಬದುಕಿ ಕಾಡಿನ ಸಂಘರ್ಷಗಳಲ್ಲಿ ತನ್ನ ಸಮುದಾಯಕ್ಕಾಗಿ ಹೋರಾಡಿ ಜೀವ ಕೊಟ್ಟವ ಅಥವಾ ತುಳುನಾಡಿನ ಸಂಪ್ರದಾಯದ ಪ್ರಕಾರ ಮಾಯವಾದವ! ಅದಕ್ಕೆ ಆತ ಮಾಯ್ಕಾರ ಹಾಗೆಯೇ ತುಳುನಾಡಲ್ಲಿ ಹೀಗೆ ಹೋರಾಡಿ ತೀರಿಕೊಂಡು ದೈವವಾದವರು ನಮ್ಮ ಕಣ್ಣಿಗೆ ಕಾಣೋದಿಲ್ಲ ನಾವು ಅವರ ಕಣ್ಣಿಗೆ ಕಾಣುತ್ತೇವೆ ಹಾಗೆಯೇ ಅವರು ಕಲೆ ಕಾರ್ನಿಕ ತೋರುತ್ತಿರುತ್ತಾರೆ ಎಂಬ ಮಾತಿದೆ. ಅದಕ್ಕೆ ಪರ್ಯಾಪ್ತವಾಗಿ ಮಾಯ್ಕಾರನ ಪಾತ್ರ ಹೆಣೆಯಲ್ಪಟ್ಟಿದೆ.

ಇನ್ನೂ ಈ ಪಾತ್ರಕ್ಕಾಗಿ ರಿಷಬ್ 6 ಗಂಟೆಗಳ ಕಾಲ ಮೇಕಪ್ ಮಾಡಿಕೊಳ್ಳುತ್ತಿದ್ದರು. 6 ಗಂಟೆಗಳ ಕಾಲ ಕೂತಲ್ಲೇ ಕೂತ ಹಾಗೆ ಇದ್ದು ಬೆರ್ಮೆ ಇಂದ ಮಾಯ್ಕಾರನಾಗುತ್ತಿದ್ದ ಅವರ ಶ್ರಮ ಮೆಚ್ಚಲೇಬೇಕು. ಮಾಯ್ಕಾರ ಸರಿಸುಮಾರು 60-70 ರ ಅಜ್ಜ ಆ ಪಾತ್ರವನ್ನು ನಿಭಾಯಿಸುವ ಜೊತೆ 20-30ರ ಹರೆಯದ ಬೆರ್ಮೆಯನ್ನು ಆವಾಹಿಸಿಕೊಂಡು ಶೆಟ್ರು ಗೆದ್ದಿದ್ದಾರೆ.

ಇನ್ನೂ ಈ ಕೆಲಸದಲ್ಲಿ ಪ್ರಮುಖವಾಗಿ ಪ್ರಸಾದನ ಕಲಾವಿದರಾದ ರೋನೇಕ್ಸ್ ಕ್ಸೇವಿಯರ್ ಹಾಗೆಯೇ ಆರ್ ವಿನಯ್ ಅವರ ಶ್ರಮ ಕಾಣುತ್ತದೆ. ರೋನೇಕ್ಸ್ ಕ್ಸೇವಿಯರ್ ಮಾಲಿವುಡ್ ನ ಪ್ರಖ್ಯಾತ ಮೇಕಪ್ ಕಲಾವಿದರಾಗಿದ್ದು ಲೋಕಃ, ಟೋಬಿ, ಕೆಓಕೆ, ಆರ್ಮ್, ಟ್ರ್ಯಾನ್ಸ್, ಭ್ರಮಯುಂಗ ಸೇರಿದಂತೆ ಮಲಯಾಳಂನ ಸರಿಸುಮಾರು ಈ ಜಮಾನಾದ 80% ಚಿತ್ರಗಳಲ್ಲಿ ಇವರ ಮೇಕಪ್ ಕೈ ಚಳಕವಿದೆ. ಇದಲ್ಲದೇ ರಿಷಬ್ ಅವರ ಮುಂದಿನ ಸಿನೆಮಾ ಜೈ ಹನುಮಾನ್ ಗೂ ಇವರೇ ಮೇಕಪ್ ಕಲಾವಿದರಾಗಿ ಕೆಲಸ ಮಾಡಲಿದ್ದಾರೆ.

ಬರೀ ರಿಷಬ್ ಮಾತ್ರವಲ್ಲದೇ ಮ್ಯೂಟಂಟ್ ರಾಘು ಸೇರಿದಂತೆ ಹಲವರು ತಮ್ಮನ್ನು 4 ರಿಂದ 4.5 ತಾಸು ಮೇಕಪ್ ಗೆ ಒಳಪಡಿಸಿಕೊಳ್ಳುತ್ತಿದ್ದರು ಎಂಬುದು ತಿಳಿದು ಬಂದಿದ್ದು ಇವರ ಸಂಘಟಿತ ಶ್ರಮದಿಂದಲೇ ಚಿತ್ರ ಅಮರವಾಗಿದೆ ಎನ್ನಬಹುದು.
ಸಿಜಿಐ ಕೆಲಸ ಯಾರದ್ದು?
ಇನ್ನೂ ಮಾಯ್ಕಾರ ನ ಆಕಾರಕ್ಕೆ ರಿಷಬ್ ಅವರನ್ನು ಇಳಿಸಿದ್ದು ಕೆವಿ ಸಂಜಿತ್ ಅವರ ತಂಡ. ಈ ತಂಡದ ವಿಎಫ್ ಎಕ್ಸ್ ಟೀಂ ಸೇರಿದಂತೆ Zebu FX, Astra Studios, Redchillies VFX, NYVFXWaala, FutureWorks Media, Envision VFX, MPC, PhantomFX, Identical Brains, WhiteApple, Knack Studios, Deccan Dreams, VisKefi, Little BlackStar Visual Effects, Spectre Post, Digital Turbo Media (DTM), Digibricks Entertainment, Nube Cirrus, Light N Light VFX Studios, Squad VFX, PixStone Images, Fortune FX, Hocus Pocus VFX, IVFX, Esa FX ಮತ್ತು Workflows ನಂತಹ 20 ಕ್ಕೂ ಹೆಚ್ಚು ತಂಡಗಳ ಕೆಲಸವಿದೆ! ಇವುಗಳು ಹಾಲಿವುಡ್ ಚಿತ್ರಕ್ಕೆ ಕೆಲಸ ಮಾಡುವ ತಂಡವಾಗಿವೆ!
Bangalore [Bangalore],Bangalore,Karnataka













