Mann Ki Baat: ಸರ್ಜಿಕಲ್ ಸ್ಟ್ರೈಕ್ ನಿಂದ ಆಪರೇಷನ್ ಸಿಂಧೂರ್​​​​​ವರೆಗೆ, ಭಯೋತ್ಪಾದನೆ ವಿರುದ್ಧ ಭಾರತದ ಯುದ್ಧ ಸ್ಮರಿಸಿದ ಪ್ರಧಾನಿ / Mann Ki Baat: PM Modi Recalls Surgic | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಭಯೋತ್ಪಾದನೆ ವಿರುದ್ಧ ಭಾರತದ ಯುದ್ಧ ಸ್ಮರಿಸಿದ ಪ್ರಧಾನಿ


Last Updated:

‘ಮನ್ ಕಿ ಬಾತ್’ ಭಾಷಣದಲ್ಲಿ ಪ್ರಧಾನಿ ಮೋದಿ, 2016ರ ಐತಿಹಾಸಿಕ ಸರ್ಜಿಕಲ್ ಸ್ಟ್ರೈಕ್‌ಗಳನ್ನು ನೆನಪಿಸಿಕೊಂಡು ಭಯೋತ್ಪಾದನೆಯ ವಿರುದ್ಧ ಭಾರತದ ಕಠಿಣ ನಿಲುವನ್ನು ಪುನರುಚ್ಚರಿಸಿದ್ದಾರೆ. ಅಲ್ಲದೆ ನಾವು ಪಾಕಿಸ್ತಾನದ ಮನೆಗೆ ಪ್ರವೇಶಿಸುವ ಮೂಲಕ ಪ್ರತ್ಯುತ್ತರ ನೀಡಿದ್ದೇವೆ ಎಂದು ಹೇಳಿದ್ದಾರೆ.

ಭಯೋತ್ಪಾದನೆ ವಿರುದ್ಧ ಭಾರತದ ಯುದ್ಧ ಸ್ಮರಿಸಿದ ಪ್ರಧಾನಿ
ಭಯೋತ್ಪಾದನೆ ವಿರುದ್ಧ ಭಾರತದ ಯುದ್ಧ ಸ್ಮರಿಸಿದ ಪ್ರಧಾನಿ

ಪ್ರಧಾನಿ ನರೇಂದ್ರ ಮೋದಿ (PM Narendra Modi) ತಮ್ಮ ಜನಪ್ರಿಯ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ನ (Mann Ki Baat) 138ರಲ್ಲಿ ಭಾನುವಾರ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು. ಈ ಎಪಿಸೋಡ್​​ ಬಹಳ ವಿಶೇಷವಾಗಿತ್ತು. ಏಕೆಂದರೆ ಸರ್ಜಿಕಲ್ ಸ್ಟ್ರೈಕ್‌ನ (Surgical Strike) 10ನೇ ವಾರ್ಷಿಕೋತ್ಸವದ ಒಂದು ದಿನ ಮೊದಲು ಭಯೋತ್ಪಾದನೆಯ ವಿರುದ್ಧ ದೇಶದ ನಿರ್ಣಾಯಕ ನೀತಿಯ ಬಗ್ಗೆ ನರೇಂದ್ರ ಮೋದಿ ವ್ಯಾಪಕವಾಗಿ ಮಾತನಾಡಿದರು.

ಈ ‘ಮನ್ ಕಿ ಬಾತ್’ ಭಾಷಣದಲ್ಲಿ ಪ್ರಧಾನಿ ಮೋದಿ, 2016ರ ಐತಿಹಾಸಿಕ ಸರ್ಜಿಕಲ್ ಸ್ಟ್ರೈಕ್‌ಗಳನ್ನು ನೆನಪಿಸಿಕೊಂಡು ಭಯೋತ್ಪಾದನೆಯ ವಿರುದ್ಧ ಭಾರತದ ಕಠಿಣ ನಿಲುವನ್ನು ಪುನರುಚ್ಚರಿಸಿದ್ದಾರೆ. ಅಲ್ಲದೆ ನಾವು ಪಾಕಿಸ್ತಾನದ ಮನೆಗೆ ಪ್ರವೇಶಿಸುವ ಮೂಲಕ ಪ್ರತ್ಯುತ್ತರ ನೀಡಿದ್ದೇವೆ ಎಂದು ಹೇಳಿದ್ದಾರೆ.

ಸರ್ಜಿಕಲ್ ಸ್ಟ್ರೈಕ್ ಆಗಿ 10 ವರ್ಷ

ಕಾರ್ಯಕ್ರಮದ ಆರಂಭದಲ್ಲಿ ಪ್ರಧಾನಿ ಮೋದಿ, ‘ನಾನು ದೇಶದ ಎಲ್ಲಾ ಜನರನ್ನು ಸ್ವಾಗತಿಸುತ್ತೇನೆ. ‘ಮನ್ ಕಿ ಬಾತ್’ನಲ್ಲಿ ನಾವು ನಮ್ಮ ದೇಶವಾಸಿಗಳ ಸಕಾರಾತ್ಮಕ ಪ್ರಯತ್ನಗಳಿಗೆ ವೇದಿಕೆಯನ್ನು ಒದಗಿಸುತ್ತೇವೆ. ನಾವು ದೇಶದ ಸಾಧನೆಗಳ ಬಗ್ಗೆ ಮಾತನಾಡುತ್ತೇವೆ. ಭಾರತದ ಅಂತಹ ಒಂದು ಪ್ರಮುಖ ಐತಿಹಾಸಿಕ ಸಾಧನೆಯು ಒಂದು ದಿನದಲ್ಲಿ 10 ವರ್ಷಗಳು ತುಂಬುತ್ತದೆ. ಈ ಸಾಧನೆ ‘ಸರ್ಜಿಕಲ್ ಸ್ಟ್ರೈಕ್’ ಆಗಿದೆ’ ಎಂದು ಹೇಳಿದರು.

ಹತ್ತು ವರ್ಷಗಳ ಹಿಂದೆ ನಡೆದದ್ದನ್ನು ಸ್ಮರಿಸಿದ ಮೋದಿ

2016ರ ಸೆಪ್ಟೆಂಬರ್ 28-29ರ ರಾತ್ರಿಯನ್ನು ನೆನಪಿಸಿಕೊಂಡ ಪ್ರಧಾನಿ, ‘ಹತ್ತು ವರ್ಷಗಳ ಹಿಂದೆ 2016ರ ಸೆಪ್ಟೆಂಬರ್ 28-29ರಂದು ಭಾರತೀಯ ಸೇನೆಯು ಪಾಕಿಸ್ತಾನದಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿತು. ನಮ್ಮ ಧೈರ್ಯಶಾಲಿ ಸೈನಿಕರು ಎಲ್‌ಒಸಿ ದಾಟಿ ಭಯೋತ್ಪಾದನೆಯ ವಿರುದ್ಧ ಕ್ರಮ ಕೈಗೊಂಡ ರೀತಿಯನ್ನು ನೋಡಿ ಜಗತ್ತು ಆಶ್ಚರ್ಯಚಕಿತವಾಯಿತು. ಸರ್ಜಿಕಲ್ ಸ್ಟ್ರೈಕ್ ಭಾರತದ ಭಯೋತ್ಪಾದನಾ ನಿಗ್ರಹ ನೀತಿಯ ಹೊಸ ಉದಾಹರಣೆಯನ್ನು ಇಡೀ ಜಗತ್ತಿಗೆ ಧೈರ್ಯದಿಂದ ಪ್ರಸ್ತುತಪಡಿಸಿತು’ ಎಂದು ಹೇಳಿದರು.

ಭಯೋತ್ಪಾದಕ ದಾಳಿಯಿಂದ ಭಾರತ ಅನುಭವಿಸಿದ ದೀರ್ಘಕಾಲೀನ ನೋವಿಗೆ ಸರ್ಜಿಕಲ್ ಸ್ಟ್ರೈಕ್ ನಿರ್ಣಾಯಕ ಪ್ರತಿಕ್ರಿಯೆಯಾಗಿದೆ ಎಂದು ಅವರು ತಿಳಿಸಿದರು. ಕಳೆದ ದಶಕದಲ್ಲಿ ಭಾರತದ ವಿಕಸನಗೊಳ್ಳುತ್ತಿರುವ ಕಾರ್ಯತಂತ್ರವನ್ನು ಉಲ್ಲೇಖಿಸಿ, ಬಾಲಕೋಟ್ ವೈಮಾನಿಕ ದಾಳಿಯಿಂದ ಆಪರೇಷನ್ ಸಿಂಧೂರ್ ವರೆಗೆ, ಭಯೋತ್ಪಾದಕರು ಭಾರತದ ಮೇಲೆ ದಾಳಿ ಮಾಡಲು ಧೈರ್ಯ ಮಾಡಿದರೆ ಅವರಿಗೆ ಸೂಕ್ತ ಪ್ರತಿಕ್ರಿಯೆ ನೀಡಲಾಗುವುದು ಎಂಬ ಸ್ಪಷ್ಟ ಸಂದೇಶವನ್ನು ಭಾರತ ಪದೇ ಪದೇ ರವಾನಿಸಿದೆ ಎಂದು ಹೇಳಿದರು.

ಭಯೋತ್ಪಾದನೆ ವಿರುದ್ಧ ಮೋದಿ ಘರ್ಜನೆ

ದೇಶದ ಭೂತಕಾಲವನ್ನು ನೆನಪಿಸಿಕೊಂಡ ಪ್ರಧಾನಿ, ‘ಒಂದು ಕಾಲದಲ್ಲಿ ಭಾರತದಲ್ಲಿ ಸರಣಿ ಸ್ಫೋಟಗಳು ಸಾಮಾನ್ಯವಾಗಿದ್ದವು. ಈ ಸೆಪ್ಟೆಂಬರ್ ತಿಂಗಳಲ್ಲಿ, ಅಂದರೆ 2008ರ ಸೆಪ್ಟೆಂಬರ್ 13ರಂದು ದೆಹಲಿಯಲ್ಲಿ ನಡೆದ ಸರಣಿ ಸ್ಫೋಟಗಳಲ್ಲಿ ಅನೇಕ ಅಮಾಯಕರು ಸಾವನ್ನಪ್ಪಿದರು. ಕೆಲವೇ ವಾರಗಳ ನಂತರ ಮುಂಬೈನಲ್ಲಿ 26/11ರ ಬೃಹತ್ ದಾಳಿ ಸಂಭವಿಸಿತು’ ಎಂದು ಹೇಳಿದರು.

ಹಿಂದೆ ಪ್ರತಿಯೊಂದು ಭಯೋತ್ಪಾದಕ ದಾಳಿಯ ನಂತರವೂ ಪಾಕಿಸ್ತಾನದ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರೆಗಳು ಬರುತ್ತಿದ್ದವು. ಆದರೆ ಅವುಗಳನ್ನು ನಿರ್ಲಕ್ಷಿಸಿ ಸಮಯ ಕಳೆಯಲು ಬಿಡಲಾಯಿತು. ‘ಇಂದಿನ ಭಾರತ ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತಾ ನೀತಿಯನ್ನು ಅನುಸರಿಸುತ್ತಿದೆ ಮತ್ತು ಅದರ ಫಲಿತಾಂಶಗಳನ್ನು ನಾವು ನೋಡುತ್ತಿದ್ದೇವೆ’ ಎಂದು ಪ್ರಧಾನಿ ಮೋದಿ ಹೇಳಿದರು. ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಅಮೆರಿಕದಲ್ಲಿ ನಡೆದ 9/11 ಭಯೋತ್ಪಾದಕ ದಾಳಿಯ 25ನೇ ವಾರ್ಷಿಕೋತ್ಸವವನ್ನು ಪ್ರಸ್ತಾಪಿಸಿದರು. ‘ಈ ವರ್ಷ 9/11 ಭಯೋತ್ಪಾದಕ ದಾಳಿಗೆ 25 ವರ್ಷಗಳು ತುಂಬುತ್ತಿವೆ. ಅಮೆರಿಕ ನಂತರ, ವಿಶ್ವ ವ್ಯಾಪಾರ ಕೇಂದ್ರದಲ್ಲಿ ಪ್ರಾಣ ಕಳೆದುಕೊಂಡ ಎರಡನೇ ಅತಿ ಹೆಚ್ಚು ಅಮಾಯಕರ ಸಂಖ್ಯೆ ಭಾರತದ್ದಾಗಿದೆ’ ಎಂದು ಹೇಳಿದರು.

ತಮ್ಮ ಅಮೆರಿಕ ಭೇಟಿಯನ್ನು ನೆನಪಿಸಿಕೊಂಡು, ‘2014ರಲ್ಲಿ ಪ್ರಧಾನಿಯಾದ ನಂತರ ನಾನು ಅಮೆರಿಕಕ್ಕೆ ಭೇಟಿ ನೀಡಿದ್ದನ್ನು ನೆನಪಿಸಿಕೊಳ್ಳುತ್ತೇನೆ. ಈ ಮುಗ್ಧ ನಾಗರಿಕರಿಗೆ ನನ್ನ ಗೌರವ ಸಲ್ಲಿಸಲು ನಾನು ನ್ಯೂಯಾರ್ಕ್‌ಗೆ ಹೋಗಿದ್ದೆ. ಇಂದು ಮತ್ತೊಮ್ಮೆ ಲಕ್ಷಾಂತರ ಭಾರತೀಯ ನಾಗರಿಕರ ಪರವಾಗಿ, ಬಲಿಪಶುಗಳ ಕುಟುಂಬಗಳಿಗೆ ನನ್ನ ಸಂತಾಪ ಸೂಚಿಸುತ್ತೇನೆ’ ಎಂದು ಹೇಳಿದರು. ಒಟ್ಟಾರೆ ಪ್ರಧಾನಿ ಮೋದಿ ಅವರು ಸರ್ಜಿಕಲ್ ಸ್ಟ್ರೈಕ್‌ನ 10 ವರ್ಷಗಳನ್ನು ನೆನಪಿಸಿಕೊಂಡು ಭಯೋತ್ಪಾದನೆಯ ವಿರುದ್ಧ ಭಾರತದ ಬದಲಾದ ನೀತಿಯನ್ನು ವಿವರಿಸಿದರು. ಇಂದಿನ ಭಾರತ ಶೂನ್ಯ ಸಹಿಷ್ಣುತಾ ನೀತಿ ಅನುಸರಿಸುತ್ತಿದೆ ಎಂಬುದನ್ನು ಸ್ಪಷ್ಟಪಡಿಸಿದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed