Ramayana Movie: ರಾಮಾಯಾಣದ ‘ರಾವಣನ’ ಅದ್ಭುತ ಪೋಸ್ಟರ್ ರಿಲೀಸ್; ಯಶ್ ಬಗ್ಗೆ ನಮಿತ್ ಮಲ್ಹೋತ್ರಾ ಹೇಳಿದ್ದೇನು? | | ACTPnews

ರಾಮಾಯಾಣದ 'ರಾವಣನ' ಅದ್ಭುತ ಪೋಸ್ಟರ್ ರಿಲೀಸ್; ಯಶ್ ಬಗ್ಗೆ ನಮಿತ್ ಮಲ್ಹೋತ್ರಾ ಹೇಳಿದ್ದೇನು?(ಚಿತ್ರ ಕೃಪೆ: ನಮಿತ್ ಮಲ್ಹೋತ್ರಾ ಇನ್​ಸ್ಟಾಗ್ರಾಮ್)


Last Updated:

ರಾಮಾಯಣ ಸಿನಿಮಾ ದೊಡ್ಡಮಟ್ಟದಲ್ಲಿಯೇ ರೆಡಿ ಆಗುತ್ತಿದೆ. ಈ ರಾಮಾಯಣದ ರಾವಣನ ಪಾತ್ರಧಾರಿ ಯಶ್ ಅವರನ್ನ ನಿರ್ಮಾಪಕ ನಮಿತ್ ಮಲ್ಹೋತ್ರಾ ತುಂಬಾನೆ ಹೊಗಳಿದ್ದಾರೆ. ಏನೆಲ್ಲ ಹೇಳಿದ್ದಾರೆ ಅನ್ನೋದು ಇಲ್ಲದೆ ಓದಿ.

 ರಾಮಾಯಾಣದ 'ರಾವಣನ' ಅದ್ಭುತ ಪೋಸ್ಟರ್ ರಿಲೀಸ್; ಯಶ್ ಬಗ್ಗೆ ನಮಿತ್ ಮಲ್ಹೋತ್ರಾ ಹೇಳಿದ್ದೇನು?(ಚಿತ್ರ ಕೃಪೆ: ನಮಿತ್ ಮಲ್ಹೋತ್ರಾ ಇನ್​ಸ್ಟಾಗ್ರಾಮ್)
ರಾಮಾಯಾಣದ ‘ರಾವಣನ’ ಅದ್ಭುತ ಪೋಸ್ಟರ್ ರಿಲೀಸ್; ಯಶ್ ಬಗ್ಗೆ ನಮಿತ್ ಮಲ್ಹೋತ್ರಾ ಹೇಳಿದ್ದೇನು?(ಚಿತ್ರ ಕೃಪೆ: ನಮಿತ್ ಮಲ್ಹೋತ್ರಾ ಇನ್​ಸ್ಟಾಗ್ರಾಮ್)

ರಾಮಾಯಣ ಚಿತ್ರದ (Ramayana Movie) ರಾವಣನ ಪಾತ್ರದ (Ravana Role) ಮತ್ತೊಂದು ಅದ್ಭುತ ಪೋಸ್ಟರ್ ರಿಲೀಸ್ ಆಗಿದೆ. ಈ ಒಂದು ಚಿತ್ರದ ಈ ಪಾತ್ರವನ್ನ ಎಲ್ಲರಿಂದಲೂ ಮಾಡೋಕೆ ಸಾಧ್ಯವೇ ಇಲ್ಲ. ಕಾರಣ, ಭಾರತದಲ್ಲಿ ಈ ರಾವಣನನ್ನ ಎಲ್ಲೂ ದ್ವೇಷಿಸುತ್ತಾರೆ. ಆದರೆ, ರಾಕಿಂಗ್ ಸ್ಟಾರ್ ಯಶ್ (Yash) ಈ ಒಂದು ಪಾತ್ರವನ್ನ ಮಾಡಿದ್ದಾರೆ. ಅಷ್ಟೆ ಅಲ್ಲ, ಈ ಚಿತ್ರಕ್ಕೆ ನಿರ್ಮಾಪಕರೂ ಆಗಿದ್ದಾರೆ. ಇವರು ಇಲ್ಲದೆ ಇದ್ದರೆ ರಾಮಾಯಣ ಮಾಡೋಕೆ ಸಾಧ್ಯವೇ ಆಗ್ತಾ ಇರಲಿಲ್ಲ ಅಂತ ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ (Namit Malhotra) ಹೇಳಿಕೊಂಡಿದ್ದಾರೆ.

ರಾವಣನ ಅದ್ಭುತ ಪೋಸ್ಟರ್

ರಾಮಾಯಣ ಚಿತ್ರದಲ್ಲಿ ಯಶ್ ರಾವಣನ ಪಾತ್ರ ಮಾಡಿದ್ದಾರೆ. ಈ ಚಿತ್ರದ ಈ ಪಾತ್ರದ ಪೋಸ್ಟರ್ ರಿಲೀಸ್ ಆಗಿದೆ. ಇದರಲ್ಲಿ ಯಶ್ ಹೊಳೆಯುತ್ತಿದ್ದಾರೆ.
ramayana movie ravana poster out namit malhotra on yash

ರಾಮಾಯಾಣದ ‘ರಾವಣನ’ ಅದ್ಭುತ ಪೋಸ್ಟರ್ ರಿಲೀಸ್

(ಚಿತ್ರ ಕೃಪೆ: ಮಾನ್ಸ್‌ಟರ್ ಮೈಂಡ್ ಕ್ರಿಯೇಷನ್ಸ್ ಇನ್​ಸ್ಟಾಗ್ರಾಮ್)

ಹಾಗೆ ರಾಮಾಯಣ ಚಿತ್ರದ ವಿಶೇಷ ಇವೆಂಟ್ ಮುಂಬೈ ಅಲ್ಲಿ ನಡೆದಿದೆ. ಈ ಇವೆಂಟ್ ಅಲ್ಲಿ ಯಶ್ ಗೈರು ಹಾಜರಾಗಿದ್ದಾರೆ. ಕಾರಣ ಏನು ಅನ್ನುವುದನ್ನ ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ ಹೇಳಿದ್ದಾರೆ. ಅನಾರೋಗ್ಯದ ಕಾರಣ ಯಶ್ ಈ ಇವೆಂಟ್‌ಗೆ ಬಂದಿಲ್ಲ ಅಂತ ಹೇಳಿದ್ದಾರೆ.

ನೀವಿಲ್ಲದೆ ಜರ್ನಿ ಅಪೂರ್ಣ

ಈ ಒಂದು ಮಾತನ್ನೆ ನಮಿತ್ ಮಲ್ಹೋತ್ರಾ ಹೇಳಿದ್ದಾರೆ. ಯಶ್ ನೀವು ಬೇಗ ಗುಣಮುಖರಾಗಿ, ನೀವು ಇಲ್ಲದೆ ಈ ಒಂದು ಜರ್ನಿ ಅಪೂರ್ಣ ಅಂತಲೂ ಹೇಳಿದ್ದಾರೆ.

ಇದನ್ನೂ ಓದಿ: Kichacha Sudeep: ಕಿಚ್ಚನ ಚಪ್ಪಾಳೆ ಪಡೆದವರಿಗೆ 1 ಲಕ್ಷ ಬಹುಮಾನ!

ಸಾಮಾನ್ಯವಾಗಿ ಭಾರತದಲ್ಲಿ ರಾವಣನ ರೋಲ್ ಅನ್ನ ಎಲ್ಲರೂ ಹೇಟ್ ಮಾಡ್ತಾರೆ. ಆದರೆ, ಯಶ್ ಈ ಪಾತ್ರವನ್ನ ಮಾಡಿದ್ದಾರೆ. ಅಷ್ಟೆ ಅಲ್ಲ, ಯಶ್ ಈ ಚಿತ್ರಕ್ಕೆ ನಿರ್ಮಾಪಕರೂ ಆಗಿದ್ದಾರೆ ಅಂತಲೂ ನಮಿತ್ ಮಲ್ಹೋತ್ರಾ ಹೇಳಿಕೊಂಡಿದ್ದಾರೆ.

ಮಿಸ್ಟರ್ ಬೀಸ್ಟ್‌

ಮುಂಬೈಯಲ್ಲಿ ನಡೆದ ರಾಮಾಯಣ ಇವೆಂಟ್‌ಗೆ ಹೆಸರಾಂತ ಯುಟ್ಯೂಬರ್ ಮಿಸ್ಟರ್ ಬೀಸ್ಟ್ ಕೂಡ ಆಗಮಿಸಿದ್ದರು. ರಣಬೀರ್ ಕಪೂರ್, ನಿರ್ಮಾಪಕ ನಮೀತ್ ಮಲ್ಹೋತ್ರಾ, ನಾಯಕಿ ಸಾಯಿ ಪಲ್ಲವಿ, ಡೈರೆಕ್ಟರ್ ನಿತೇಶ್ ತಿವಾರಿ ಕೂಡ ಈ ಇವೆಂಟ್‌ಗೆ ಆಗಮಿಸಿದ್ದರು.

ramayana movie ravana poster out namit malhotra on yash

ಯಶ್ ಬಗ್ಗೆ ನಮಿತ್ ಮಲ್ಹೋತ್ರಾ ಹೇಳಿದ್ದೇನು?

(ಚಿತ್ರ ಕೃಪೆ: ನಮಿತ್ ಮಲ್ಹೋತ್ರಾ ಇನ್​ಸ್ಟಾಗ್ರಾಮ್)

ಈ ಚಿತ್ರ ದೀಪಾವಳಿ ಹಬ್ಬಕ್ಕೆ ರಿಲೀಸ್ ಆಗುತ್ತದೆ. ಎರಡು ಭಾಗದಲ್ಲಿ ಈ ರಾಮಾಯಣ ರಿಲೀಸ್ ಆಗುತ್ತದೆ. ಮೊದಲ ಭಾಗ 2026 ಈ ವರ್ಷ ರಿಲೀಸ್ ಆಗುತ್ತಿದೆ. ಎರಡನೇ ಭಾಗ ಮುಂದಿನ ವರ್ಷ 2027 ರಂದು ದೀಪಾವಳಿ ಹಬ್ಬಕ್ಕೇನೆ ಬರ್ತಿದೆ.

ಎ.ಆರ್.ರೆಹಮಾನ್ ಮ್ಯೂಸಿಕ್

ಎ.ಆರ್.ರೆಹಮಾನ್ ಈ ಚಿತ್ರಕ್ಕೆ ಮ್ಯೂಸಿಕ್ ಮಾಡಿದ್ದಾರೆ. ಇವರೊಟ್ಟಿಗೆ ಹಾಲಿವುಡ್ ಮ್ಯೂಸಿಕ್ ಡೈರೆಕ್ಟರ್ ಹಾನ್ಸ್ ಜಿಮ್ಮರ್ ಕೂಡ ಈ ಚಿತ್ರಕ್ಕೆ ಸಂಗೀತ ಮಾಡಿದ್ದಾರೆ.

ಈ ಸಿನಿಮಾದ ಟ್ರೈಲರ್ ದೆಹಲಿಯಲ್ಲಿ ರಿಲೀಸ್ ಆಗಿದೆ. ಇಡೀ ಸಿನಿಮಾ ತಂಡ ಈ ಇವೆಂಟ್ ಅಲ್ಲಿ ಭಾಗಿ ಆಗಿತ್ತು. ಸನ್ನಿ ಡಿಯೋಲ್ ಸಹ ಬಂದಿದ್ದರು. ಈ ಟ್ರೈಲರ್ ಹೊಸ ರೀತಿಯ ಅನುಭವ ಕೊಟ್ಟಿದೆ.

ಅತಿ ದೊಡ್ಡ ಗೆಲುವಿನ ಭರವಸೆ ನೀಡಿದೆ. ಈ ಚಿತ್ರದಲ್ಲಿ ರಾಮ, ರಾವಣ, ಸೀತೆಯ ಪಾತ್ರಗಳು ಅದ್ಭುತವಾಗಿ ಮೂಡಿ ಬಂದಿವೆ. ಇಡೀ ಚಿತ್ರ ಹೇಗೆ ಇರುತ್ತದೆ ಅನ್ನುವ ಕುತೂಹಲ ಕೂಡ ಹೆಚ್ಚಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed