Last Updated:
ಟಾಕ್ಸಿಕ್ ಚಿತ್ರದ ಮನಮೋಹಕ ಹಾಡು ರಿಲೀಸ್ ಆಗಿದೆ. ಇದರಲ್ಲೂ ಪ್ರೀತಿ ಮತ್ತು ಪ್ರೇಮ ಧಗ ಧಗ ಎನ್ನುತ್ತಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಹೀಗೆ ಐದು ಭಾಷೆಯಲ್ಲಿಯೇ ಇದು ರಿಲೀಸ್ ಆಗಿದೆ. ಈ ಹಾಡಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಟಾಕ್ಸಿಕ್ಸ್ ಚಿತ್ರದ (Toxic Movi) ಮನಮೋಹಕ ಹಾಡು (Manamohaka Song) ರಿಲೀಸ್ ಆಗಿದೆ. ಇದರಲ್ಲಿ ತಾರಾ ಸುತಾರಿಯಾ (Tara Sutaria) ಹಾಗೂ ಯಶ್ (Yash) ಮೋಡಿ ಇದೆ. ಇಲ್ಲೂ ಪ್ರೀತಿ ಮತ್ತು ಪ್ರೇಮ ಧಗ ಧಗ ಎನ್ನುತ್ತಿದೆ. ಕನ್ನಡ, ತೆಲಗು, ತಮಿಳು, ಹಿಂದಿ ಹೀಗೆ ಐದು ಭಾಷೆಯಲ್ಲಿಯೇ ಈ ಗೀತೆ ಬರ್ತಿದೆ. ಇದನ್ನ ಯಾರು ಹಾಡಿದ್ದಾರೆ. ಕನ್ನಡದಲ್ಲಿ ಯಾರು ಬರೆದಿದ್ದಾರೆ. ಈ ಗೀತೆಯಲ್ಲಿ ಇನ್ನು ಏನೆಲ್ಲ ಇದೆ ಅನ್ನೋದು ಇಲ್ಲಿದೆ ಓದಿ.
ಮನಮೋಹಕ…
ಸಿದ್ದಾರ್ಥ್ ಬಸ್ರೂರು ಹಾಡಿರೋ ಈ ಹಾಡಿನಲ್ಲಿ ಪವರ್ ಇದೆ. ಪ್ರಮೋದ್ ಮರವಂತೆ ಸಾಹಿತ್ಯ ಇಲ್ಲಿ ಮೋಹಕವಾದ ಭಾವನೆಗಳನ್ನ ಕಟ್ಟಿಕೊಡುತ್ತದೆ.
ಈ ಹಾಡನ್ನ ತನಿಷ್ಕ್ ಬಾಗ್ಚಿ, ಫಹೀಮ್ ಅಬ್ದುಲ್ಲಾ ಮತ್ತು ಅರ್ಸಲಾನ್ ನಿಜಾಮಿ ಇಷ್ಟು ಜನ ಸೇರಿಯೇ ಈ ಒಂದು ಗೀತೆಯನ್ನ ಕಂಪೋಸ್ ಮಾಡಿದ್ದಾರೆ.
ಈ ಒಂದು ಹಾಡಿನ ಆರಂಭದಲ್ಲಿ ವೈನ್ ಹಿಡಿದು ಯಶ್ ಬರ್ತಾರೆ. ನೇರವಾಗಿಯೇ ತಾರಾ ಸುತಾರಿಯಾ ಸ್ನಾನ ಮಾಡ್ತಿರೋ ಬಾತ್ ಟಬ್‌ಗೆ ಬರ್ತಾರೆ.
ಏನೂ ಯೋಚನೆ ಮಾಡೋದೇ ಇಲ್ಲ. ವೈನ್ ಬಾಟಲ್ ಓಪನ್ ಮಾಡ್ತಾರೆ. ಮುಂದೆ ಆಗೋದೆಲ್ಲ ರಸಗಳಿಗೇನೆ ಬಿಡಿ. ಆದರೆ, ಇಲ್ಲಿ ಮೋಹಕತೆ ಇದ್ದರೂ ಪ್ರೀತಿಯ ಸೆಳತ ಕಾಣಿಸುತ್ತದೆ. ನಾಯಕನ ಕಣ್ಣಲ್ಲಿ ಹಸಿವಿದೆ. ಆದರೆ, ತಾರಾ ಸುತಾರಿಯಾ ಕಣ್ಣುಗಳು ಪ್ರೀತಿಯನ್ನ ನಿರೀಕ್ಷೆ ಮಾಡುತ್ತವೆ ಅನಿಸುತ್ತದೆ.
ಯಶ್ ಸೂಪರ್ ಲುಕ್
ಈ ಹಾಡಿನಲ್ಲಿ ನಿಧಾನವಾಗಿಯೇ ಪ್ರೀತಿಯ ಕತೆಯನ್ನ ಹೇಳಲಾಗಿದೆ. ಆದರೆ, ಇದೇ ಹಾಡಿನ ಕೊನೆಯಲ್ಲಿ ನಟಿ ನಯನತಾರಾ ಬರ್ತಾರೆ.
ಈ ಹಾಡಿನಲ್ಲಿ ಯಶ್ ಸಖತ್ ಆಗಿಯೇ ಕಾಣಿಸುತ್ತಿದ್ದಾರೆ. ಧರಿಸಿರೋ ಕಾಸ್ಟೂಮ್ ಕೂಡ ಇಂಟ್ರಸ್ಟಿಂಗ್ ಆಗಿಯೇ ಇವೆ. ಅದಕ್ಕೂ ಹೆಚ್ಚಾಗಿ ಯಶ್ ಇಲ್ಲಿ ಸುಂದರವಾಗಿಯೇ ಕಾಣಿಸುತ್ತಾರೆ. ಗೀತು ಮೋಹನ್ ದಾಸ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಚಿತ್ರದಲ್ಲಿ ನಟಿಮಣಿಯರ ದೊಡ್ಡ ದಂಡೇ ಇದೆ ಅಂತಲೂ ಹೇಳಬಹುದು.
Bangalore [Bangalore],Bangalore,Karnataka
Jul 21, 2026 12:12 PM IST














