Mamata Banerjee: ಮಮತಾಗೆ ಮಹಾಘಾತ; ದುರ್ಗೆಯ ನಾಡಲ್ಲಿ ಹೇಳಲು ಹೆಸರಿಲ್ಲದಂತಾಗುತ್ತಾ ಟಿಎಂಸಿ ಕಥೆ? ಆಗಿದ್ದೇನು ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಸಾಂಕೇತಿಕ ಚಿತ್ರ!


Last Updated:

Mamata Banerjee: ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸಾಲು ಸಾಲು ಆಘಾತಗಳು ಎದುರಾಗುತ್ತಿವೆ. ಆ ಒಂದು ನಡೆ ದುರ್ಗೆಯ ನಾಡಲ್ಲಿ ಟಿಎಂಸಿ  ಅಸ್ತಿತ್ವವೇ ಇಲ್ಲದಂತಾಗುತ್ತಾ ಎಂಬ ಪ್ರಶ್ನೆ ಮೂಡುತ್ತಿದ್ದು, ಬಂಗಾಳ ರಾಜಕೀಯ ಕಣದಲ್ಲಿ ದಿಢೀರ್ ಆಗಿದ್ದೇನು ಗೊತ್ತಾ? ಇಲ್ಲಿದೆ ಸಂಪೂರ್ಣ ವಿವರ.

ಸಾಂಕೇತಿಕ ಚಿತ್ರ!
ಸಾಂಕೇತಿಕ ಚಿತ್ರ!

ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಪಕ್ಷಕ್ಕೆ ಸಾಲು ಸಾಲು ಆಘಾತಗಳು ಎದುರಾಗುತ್ತಿವೆ. ಆ ಒಂದು ನಡೆ ದುರ್ಗೆಯ ನಾಡಲ್ಲಿ ಟಿಎಂಸಿ  (TMC) ಅಸ್ತಿತ್ವವೇ ಇಲ್ಲದಂತಾಗುತ್ತಾ ಎಂಬ ಪ್ರಶ್ನೆ ಮೂಡುತ್ತಿದ್ದು, ಬಂಗಾಳ ರಾಜಕೀಯ  (Bengal Politics) ಕಣದಲ್ಲಿ ದಿಢೀರ್ ಆಗಿದ್ದೇನು ಗೊತ್ತಾ? ಇಲ್ಲಿದೆ ಸಂಪೂರ್ಣ ವಿವರ.

ಟಿಎಂಸಿಗೆ ಎದುರಾಯ್ತಾ ಆಘಾತ?

ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಮತ್ತೊಮ್ಮೆ ಭಾರೀ ಸಂಚಲನ ಸೃಷ್ಟಿಯಾಗಿದೆ. ತೃಣಮೂಲ ಕಾಂಗ್ರೆಸ್ (TMC) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಕರೆದ ಮಹತ್ವದ ಸಭೆಗೆ ಕೋಲ್ಕತಾ ಮಹಾನಗರ ಪಾಲಿಕೆಯ ಅನೇಕ ಪ್ರಮುಖ ಕೌನ್ಸಿಲರ್‌ಗಳು ಗೈರಾಗಿರುವುದು ಪಕ್ಷದೊಳಗಿನ ಬಿರುಕು ಮತ್ತಷ್ಟು ಆಳವಾಗಿದೆ ಎಂಬ ಚರ್ಚೆಗೆ ಕಾರಣವಾಗಿದೆ. ಈ ಬೆಳವಣಿಗೆ ಟಿಎಂಸಿಗೆ ದೊಡ್ಡ ರಾಜಕೀಯ ಆಘಾತವಾಗಿ ಪರಿಣಮಿಸಿದೆ.

ಸುಮಾರು 40 ಕೌನ್ಸಿಲರ್‌ಗಳ ಗೈರು!

ಶುಕ್ರವಾರ ಮಮತಾ ಬ್ಯಾನರ್ಜಿ ತಮ್ಮ ನಿವಾಸದಲ್ಲಿ ಕೋಲ್ಕತಾ ಮಹಾನಗರ ಪಾಲಿಕೆ (KMC) ಕೌನ್ಸಿಲರ್‌ಗಳ ತುರ್ತು ಸಭೆ ಕರೆದಿದ್ದರು. ಪಕ್ಷದೊಳಗಿನ ಅಸಮಾಧಾನ, ರಾಜೀನಾಮೆ ಊಹಾಪೋಹಗಳು ಮತ್ತು ಇತ್ತೀಚಿನ ಚುನಾವಣಾ ಹಿನ್ನಡೆಯ ಹಿನ್ನೆಲೆಯಲ್ಲಿ ಈ ಸಭೆಗೆ ಭಾರೀ ಮಹತ್ವ ನೀಡಲಾಗಿತ್ತು. ಆದರೆ ಸುಮಾರು 40ಕ್ಕೂ ಹೆಚ್ಚು ಕೌನ್ಸಿಲರ್‌ಗಳು ಸಭೆಗೆ ಗೈರಾಗಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು. ಪ್ರಮುಖ ಮುಖಂಡರಾದ ದೇವಾಶಿಸ್ ಕುಮಾರ್ ಸೇರಿದಂತೆ ಹಲವು ಹಿರಿಯರು ಕಾಣಿಸದಿರುವುದು ಮಮತಾಗೆ ನೇರ ಸಂದೇಶವೇ ಎಂಬ ಪ್ರಶ್ನೆ ಎದ್ದಿದೆ.

ಕುಸಿಯಿತಾ ಮಮತಾ ಮೇಲಿನ ವಿಶ್ವಾಸ!

ಈ ವಿಚಾರವನ್ನು ಹಿಡಿದುಕೊಂಡ ಬಿಜೆಪಿ ಶಾಸಕ ಸಾಜಲ್ ಘೋಷ್ ಟಿಎಂಸಿಯ ಒಳಕಲಹವನ್ನು ಬಯಲಿಗೆಳೆದಿದ್ದಾರೆ. “ಇದು ಕೇವಲ ಗೈರುಹಾಜರಿ ಅಲ್ಲ, ಮಮತಾ ನೇತೃತ್ವದ ಮೇಲಿನ ವಿಶ್ವಾಸ ಕುಸಿತದ ಸೂಚನೆ. ಪಕ್ಷದ ನಾಯಕತ್ವದ ಮೇಲೆ ಅಸಮಾಧಾನ ತಾರಕಕ್ಕೇರಿದೆ,” ಎಂದು ಅವರು ಆರೋಪಿಸಿದ್ದಾರೆ. ಟಿಎಂಸಿಯ ಹಲವು ನಾಯಕರು ಈಗ ಪಕ್ಷ ತೊರೆಯುವ ದಾರಿಯಲ್ಲಿ ಇದ್ದಾರೆ ಎಂಬ ಮಾತನ್ನೂ ಅವರು ಹೇಳಿದ್ದಾರೆ.

ಹೆಚ್ಚಾಯ್ತಾ ಅಸಮಾಧಾನ?

ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿಗೆ ಭಾರೀ ಹಿನ್ನಡೆಯಾದ ಬಳಿಕ ಪಕ್ಷದೊಳಗಿನ ಅಸಮಾಧಾನ ಹೆಚ್ಚಾಗಿದೆ. ಕೋಲ್ಕತಾದ ಅನೇಕ ವಾರ್ಡ್‌ಗಳಲ್ಲಿ ಪಕ್ಷದ ನೆಲೆಯೇ ಕುಸಿದಿದೆ. ಮಮತಾ ಬ್ಯಾನರ್ಜಿ ತಮ್ಮ ಕಾರ್ಯಕರ್ತರಿಗೆ “ಹೋಗಬೇಕಾದವರು ಹೋಗಲಿ, ಪಕ್ಷವನ್ನು ಪುನರ್‌ನಿರ್ಮಿಸುತ್ತೇನೆ” ಎಂದು ಹೇಳಿದ್ದರೂ, ಆಂತರಿಕ ಬಿಕ್ಕಟ್ಟು ಇನ್ನೂ ಶಮನವಾಗಿಲ್ಲ.

ಇದು ಟಿಎಂಸಿಗೆ ಆದ ದಕ್ಕೆಯೇ?

ಮತ್ತೊಂದೆಡೆ, ಮೇಯರ್ ಫಿರ್ಹಾದ್ ಹಕೀಮ್ ರಾಜೀನಾಮೆ ಕುರಿತು ಊಹಾಪೋಹಗಳು, ಅಭಿಷೇಕ್ ಬ್ಯಾನರ್ಜಿ ಸಂಬಂಧಿತ ಆಸ್ತಿ ವಿಚಾರಗಳ ತನಿಖೆ, ಮತ್ತು ಆಡಳಿತಾತ್ಮಕ ಅಸಮಾಧಾನ ಸೇರಿ ಟಿಎಂಸಿಯ ಚಿತ್ರಣಕ್ಕೆ ದೊಡ್ಡ ಧಕ್ಕೆಯಾಗಿದೆ. ಪಕ್ಷದೊಳಗಿನ ನಾಯಕರು ಪರಸ್ಪರ ದೂರವಾಗುತ್ತಿರುವುದು ಸ್ಪಷ್ಟವಾಗುತ್ತಿದೆ.

ರಾಜಕೀಯ ವಿಶ್ಲೇಷಕರು ಹೇಳಿದ್ದೇನು?

ಈ ಬೆಳವಣಿಗೆಗಳ ನಡುವೆ ಮಮತಾ ಬ್ಯಾನರ್ಜಿ ಪಕ್ಷವನ್ನು ಒಗ್ಗೂಡಿಸಲು ಹರಸಾಹಸಪಡುತ್ತಿದ್ದಾರೆ. ಆದರೆ ಸಭೆಗೆ ಹಾಜರಾಗದೇ ನಾಯಕರು ನೀಡಿದ ಮೌನ ಪ್ರತಿಭಟನೆ ಟಿಎಂಸಿಯ ಭವಿಷ್ಯದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ದುರ್ಗೆಯ ನಾಡಲ್ಲಿ ಒಮ್ಮೆ ಅಜೇಯವಾಗಿದ್ದ ಮಮತಾ ಈಗ ತಮ್ಮದೇ ಕೋಟೆಯಲ್ಲಿ ಸವಾಲು ಎದುರಿಸುತ್ತಿರುವುದು ಸ್ಪಷ್ಟ. ಇದೇ ಪರಿಸ್ಥಿತಿ ಮುಂದುವರಿದರೆ ಟಿಎಂಸಿಯ ಕೋಲ್ಕತಾ ಅಧ್ಯಾಯವೇ ಕುಸಿಯುವ ಅಪಾಯವಿದೆ. ಮಮತಾ ಮತ್ತೆ ಪಕ್ಷವನ್ನು ಕಟ್ಟಿಕೊಡಬಹುದೇ? ಅಥವಾ ಇದು ಟಿಎಂಸಿ ಪತನದ ಆರಂಭವೇ? ಎಂಬ ಪ್ರಶ್ನೆ ಇದೀಗ ಬಂಗಾಳ ರಾಜಕೀಯದ ಕೇಂದ್ರಬಿಂದುವಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed