Major League Cricket: 13 ಸಿಕ್ಸರ್, 11 ಬೌಂಡರಿ, 68 ಎಸೆತಗಳಲ್ಲಿ 155 ರನ್! ಐಪಿಎಲ್​​​ನಲ್ಲಿ ಬೆಂಚ್ ಕಾದಿದ್ದ ಆಟಗಾರನಿಂದ ವಿಧ್ವಂಸಕ ಶತಕ | ಕ್ರೀಡಾ ಸುದ್ದಿ | ACTPnews

ಮಿಚೆಲ್ ಓವನ್


Last Updated:

ಮಿಚೆಲ್ ಓವನ್ ಅವರ ಅದ್ಭುತ ಶತಕದಿಂದಾಗಿ, ವಾಷಿಂಗ್ಟನ್ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳ ಕಳೆದುಕೊಂಡು 245 ರನ್‌ಗಳ ಬೃಹತ್ ಮೊತ್ತವನ್ನು ಗಳಿಸಿತು.

ಮಿಚೆಲ್ ಓವನ್
ಮಿಚೆಲ್ ಓವನ್

ಆಸ್ಟ್ರೇಲಿಯಾದ (Australia) ಆಲ್‌ರೌಂಡರ್ ಮಿಚೆಲ್ ಓವನ್ (Mitchell Owen) ತಮ್ಮ ವಿಧ್ವಂಸಕ ಬ್ಯಾಟಿಂಗ್​ನಿಂದ ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ (Major League Cricket) ಸಂಚಲನ ಸೃಷ್ಟಿಸಿದ್ದಾರೆ. ವಾಷಿಂಗ್ಟನ್ ಫ್ರೀಡಂ (Washington Freedom) ಪರ ಆಡುವ ಓವನ್, ಟೂರ್ನಮೆಂಟ್‌ನ ಐದನೇ ಪಂದ್ಯದಲ್ಲಿ ಎಂಐ ನ್ಯೂಯಾರ್ಕ್ (MI Newyork) ವಿರುದ್ಧ ಸ್ಫೋಟಕ ಬ್ಯಾಟಿಂಗ್​ ಮಾಡಿದ್ದು, 155 ರನ್ ಬಾರಿಸಿದ್ದಾರೆ. 68 ಎಸೆತಗಳನ್ನು ಎದುರಿಸಿದ ಓವನ್​, 13 ಸಿಕ್ಸರ್‌ ಮತ್ತು 11 ಬೌಂಡರಿಗಳನ್ನು ಬಾರಿಸಿದ್ದಾರೆ. ಇದು MLC ಇತಿಹಾಸದಲ್ಲಿ ಬ್ಯಾಟ್ಸ್‌ಮನ್ ಗಳಿಸಿದ ಅತ್ಯಧಿಕ ಸ್ಕೋರ್ ಆಗಿದೆ.

ಭಾನುವಾರ (ಜೂನ್ 21) ಡಲ್ಲಾಸ್‌ನ ಗ್ರ್ಯಾಂಡ್ ಪ್ರೈರಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮಿಚೆಲ್ ಓವನ್ ಆರಂಭದಿಂದಲೇ ಎಂಐ ನ್ಯೂಯಾರ್ಕ್ ಬೌಲರ್‌ಗಳ ಚೆಂಡಾಡಲು ಶುರು ಮಾಡಿದರು. ಮಿಚೆಲ್ ಓವನ್ ಅವರ ಅದ್ಭುತ ಶತಕದಿಂದಾಗಿ, ವಾಷಿಂಗ್ಟನ್ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳ ಕಳೆದುಕೊಂಡು 245 ರನ್‌ಗಳ ಬೃಹತ್ ಮೊತ್ತವನ್ನು ಗಳಿಸಿತು.

ಕ್ರಿಸ್​ ಗೇಲ್​ ರೆಕಾರ್ಡ್​ ಜಸ್ಟ್​ ಮಿಸ್​!  

ಮಿಚೆಲ್ ಓವನ್ ಔಟಾದಾಗ, ಇನ್ನಿಂಗ್ಸ್‌ನಲ್ಲಿ ಇನ್ನೂ 19 ಎಸೆತಗಳು ಬಾಕಿ ಉಳಿದಿದ್ದವು. 17ನೇ ಓವರ್‌ನಲ್ಲಿ, ಕಾರ್ಬಿನ್ ಬಾಷ್​ಗೆ ಓವನ್ ವಿಕೆಟ್​ ಒಪ್ಪಿಸಿ ಹೊಸ ದಾಖಲೆ ಬರೆಯುವ ಅವಕಾಶವನ್ನು ಮಿಸ್​ ಮಾಡಿಕೊಂಡರು. ಟಿ20 ಕ್ರಿಕೆಟ್​ನ ದಂತಕಥೆ ಕ್ರಿಸ್​ ಗೇಲ್​ ಟಿ20 ಕ್ರಿಕೆಟ್‌ನಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್ ದಾಖಲೆಯನ್ನು ಹೊಂದಿದ್ದಾರೆ. 2013 ರ ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಆಡುವಾಗ ಪುಣೆ ವಾರಿಯರ್ಸ್ ಇಂಡಿಯಾ (ಪಿಡಬ್ಲ್ಯೂಐ) ವಿರುದ್ಧ ಕ್ರಿಸ್​ ಗೇಲ್​ ಅಜೇಯ 175 ರನ್ ಬಾರಿಸಿದ್ದರು. ಇದು ಟಿ20 ಕ್ರಿಕೆಟ್‌ನಲ್ಲಿ ಅತ್ಯಧಿಕ ವೈಯಕ್ತಿಕ ರನ್​ ಆಗಿದೆ.

ಇನ್ನು, ಈ ಇನ್ನಿಂಗ್ಸ್ ಮಿಚೆಲ್ ಓವನ್ ಅವರಿಗೆ ವಿಶೇಷವಾಗಿತ್ತು, ಏಕೆಂದರೆ ಕಳೆದ 16 ತಿಂಗಳಲ್ಲಿ ಬಳಿಕ  ಮೊದಲ ಶತಕ ಸಿಡಿಸಿದ್ದಾರೆ. ಈ ವರ್ಷದ ಬಿಗ್ ಬ್ಯಾಷ್ ಲೀಗ್ (ಬಿಬಿಎಲ್) ಋತುವಿನ ಕಳಪೆ ಫಾರ್ಮ್​ನಿಂದಾಗಿ ಅವರನ್ನು ಆಸ್ಟ್ರೇಲಿಯಾದ ಟಿ20 ವಿಶ್ವಕಪ್ ತಂಡದಿಂದ ಹೊರಗಿಡಲಾಗಿತ್ತು. ಇದೀಗ ಶತಕ ಬಾರಿಸುವ ಮೂಲಕ ಆಯ್ಕೆದಾರರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಇನ್ನಿಂಗ್ಸ್‌ನೊಂದಿಗೆ, ಮಿಚೆಲ್​ ಓವನ್ ಟಿ20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಸ್ಕೋರ್ ಗಳಿಸಿದ ಆಸ್ಟ್ರೇಲಿಯಾದ ಬ್ಯಾಟ್ಸ್​​​ಮನ್​ಗಳ ಪಟ್ಟಿಯಲ್ಲಿ ಆರನ್ ಫಿಂಚ್ ನಂತರ ಎರಡನೇ ಸ್ಥಾನವನ್ನು ತಲುಪಿದ್ದಾರೆ. ಮಿಚೆಲ್ ಓವನ್ ಅವರ ಅಬ್ಬರದ ಶತಕದ ನೆರವಿನಿಂದ ವಾಷಿಂಗ್ಟನ್ ಫ್ರೀಡಂ 5 ವಿಕೆಟ್‌ಗೆ 245 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ, MI ನ್ಯೂಯಾರ್ಕ್ 6 ವಿಕೆಟ್‌ಗೆ 215 ರನ್ ಗಳಿಸಿ 30 ರನ್‌ಗಳಿಂದ ಸೋಲು ಅನುಭವಿಸಿದೆ.

ಚರಿತ್ರೆ ಸೃಷ್ಟಿಸಿದ ಪೊಲಾರ್ಡ್​!

ಇನ್ನು, ಇದೇ ಪಂದ್ಯದಲ್ಲಿ ಎಂಐ ನ್ಯೂಯಾರ್ಕ್ ಪರ ಕೀರನ್​ ಪೊಲಾರ್ಡ್ 56 ಎಸೆತಗಳಲ್ಲಿ ಅಜೇಯ 100 ರನ್ ಗಳಿಸಿದರು. 246ರ ಬೃಹತ್ ಗುರಿಯನ್ನು ಬೆನ್ನಟ್ಟುವಾಗ ಪೊಲಾರ್ಡ್ ಅಜೇಯ 100 ರನ್ ಗಳಿಸಿದರು. ಈ ಇನ್ನಿಂಗ್ಸ್ ಟಿ20 ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆಯನ್ನು ನಿರ್ಮಿಸಲು ನೆರವಾಯಿತು. ಕೀರನ್ ಪೊಲಾರ್ಡ್ ಅವರ ಅಜೇಯ ಶತಕವು ಅವರನ್ನು ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನನ್ನಾಗಿ ಮಾಡಿದೆ. ಪೊಲಾರ್ಡ್ ತಮ್ಮ ದೇಶದ ಕ್ರಿಸ್ ಗೇಲ್ ಅವರ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. ಗೇಲ್ ಟಿ20 ಪಂದ್ಯಗಳಲ್ಲಿ 14,562 ರನ್ ಗಳಿಸಿದ್ದರು. ಇದೀಗ ಕೀರನ್ ಪೊಲಾರ್ಡ್ ಈಗ 14,582 ರನ್ ಗಳಿಸಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed