Last Updated:
Renukaswamy Case: ಸುಪ್ರೀಂ ಕೋರ್ಟ್ಗೆ ಮೂರು ಅರ್ಜಿ ಸಲ್ಲಿಕೆ! ದರ್ಶನ್ ಜೊತೆ ಪತ್ನಿ ವಿಜಯಲಕ್ಷ್ಮಿಯಿಂದಲೂ ಅರ್ಜಿ!
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಫಿ ಸಾಕ್ಷಿ ಪ್ರದೋಷ್ (Approver Pradosh) ಮಾಫಿ ಸಾಕ್ಷಿ ಹೇಳಿಕೆ ದಾಖಲು ಪ್ರಕ್ರಿಯೆ ನಡೆಯುತ್ತಿದೆ. ಸುಪ್ರೀಂಕೋರ್ಟ್ಗೆ (Supreme Court) ದರ್ಶನ್ ಅವರಿಂದ 2 ಮೇಲ್ಮನವಿ ಸಲ್ಲಿಸಲಾಗಿದೆ.
ದರ್ಶನ್ ಪರವಾಗಿ ವಿಜಯಲಕ್ಷ್ಮಿ ರಿಂದಲೂ ಮೇಲ್ಮನವಿ ಸಲ್ಲಿಸಲಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಒಟ್ಟು 3 ಮೇಲ್ಮನವಿ ಸಲ್ಲಿಸಿದ ದರ್ಶನ್ ಸದ್ಯ ಅದರ ಆದೇಶಕ್ಕಾಗಿ ಕಾಯುತ್ತಿದ್ದಾರೆ.
ಇದೇ ವಾರ ದರ್ಶನ್ ಅರ್ಜಿಗಳ ವಿಚಾರಣೆ ಸಾಧ್ಯತೆ ಇದೆ. ಮಾಫಿ ಸಾಕ್ಷಿ ಆದೇಶಕ್ಕೂ ಮುನ್ನ ಸಹ ಆರೋಪಿಯ ವಾದ ಕೇಳಬೇಕಿಲ್ಲ ಎಂದು ಹೈಕೋರ್ಟ್ ನೀಡಿರುವ ಈ ತೀರ್ಪು ಪ್ರಶ್ನಿಸಿ ದರ್ಶನ್ ಮೇಲ್ಮನವಿ ಸಲ್ಲಿಸಿದ್ದಾರೆ.
ಮಾಫಿ ಸಾಕ್ಷಿಗೆ ಮರುಪರಿಶೀಲಿಸುವಂತೆ ಹೈಕೋರ್ಟ್ ಆದೇಶಿಸಿದ್ದು, ಈ ತೀರ್ಪನ್ನೂ ಪ್ರಶ್ನಿಸಿ ದರ್ಶನ್ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಮಾಫಿ ಸಾಕ್ಷಿ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದ್ದು, ಸೆ.23 ರ ಆದೇಶ ಪ್ರಶ್ನಿಸಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಅರ್ಜಿ ಸಲ್ಲಿಸಿದ್ದಾರೆ.
ಈಗ ಮಾಫಿ ಸಾಕ್ಷಿಗೆ ಸಂಬಂಧಿಸಿದಂತೆ ಒಟ್ಟು 3 ಮೇಲ್ಮನವಿ ಅರ್ಜಿ ದರ್ಶನ್ ಪರವಾಗಿ ಸಲ್ಲಿಸಲಾಗಿದೆ.
ಈ ಕೇಸ್ನಲ್ಲಿ ಆರೋಪಿಯಾಗಿದ್ದ ಪ್ರದೋಷ್ ಈಗ ಆರೋಪಿ ಅಲ್ಲ. ಸದ್ಯ ಚಾರ್ಜ್ಶೀಟ್ ಲಿಸ್ಟ್ನಿಂದ ಪ್ರದೋಷ್ ಹೆಸರು ಡಿಲೀಟ್ ಮಾಡಲು ಕೋರ್ಟ್ ಸೂಚಿಸಿದೆ. ಅಷ್ಟೇ ಅಲ್ಲದೆ ಈಗಾಗಲೇ ನಿಗದಿಯಾಗಿದ್ದಂತೆ ಸೆ. 28 ಹಾಗೂ 29ರಂದು ಅಂದರೆ ನಿನ್ನೆ ಹಾಗೂ ಇಂದು ಮಾಫಿ ಸಾಕ್ಷಿ ಹೇಳಿಕೆ ದಾಖಲು ಪ್ರಕ್ರಿಯೆ ನಡೆಯುತ್ತಿದೆ.
ಆದರೆ ಈ ನಡುವೆ ದರ್ಶನ್ ಲಾಯರ್ ಪ್ರದೋಷ್ ವಿರುದ್ಧ ಗರಂ ಆಗಿದ್ದು ಆ ಒಂದು ನಡೆಯನ್ನು ವಿರೋಧಿಸಿದ್ದಾರೆ. ಮಾಫಿ ಸಾಕ್ಷಿ ಹೇಳಿಕೆ ದಾಖಲಿಸಿ 15 ನಿಮಿಷ ಲಾಯರ್ ಜೊತೆ ಪ್ರದೋಷ್ ಮಾತನಾಡಿದ್ದು, ಇದಕ್ಕೆ ಪೊಲೀಸರು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ದರ್ಶನ್ ಲಾಯರ್ ಆರೋಪಿಸಿದ್ದಾರೆ.
ಈ ರೀತಿಯಾಗಿ ಪ್ರದೋಷ್ಗೆ ಅವಕಾಶ ನೀಡಬರಾರದಾಗಿತ್ತು ಎಂದು ದರ್ಶನ್ ಲಾಯರ್ ಹೇಳಿದ್ದಾರೆ. ಸದ್ಯ ಈಗ 2ನೇ ದಿನದ ಮಾಫಿ ಸಾಕ್ಷಿ ಹೇಳಿಕೆ ಪ್ರಕ್ರಿಯೆ ನಡೆಯುತ್ತಿದೆ.
ವಿಚಾರಣೆಗೂ ಮುನ್ನ ಕೆಲ ಹೊತ್ತು ವಕೀಲರ ಜೊತೆ ಮಾತಾಡಿದ್ದ ಪ್ರದೂಷ್ ನಡೆಯನ್ನು ದರ್ಶನ್ ಲಾಯರ್ ಪ್ರಶ್ನಿಸಿದ್ದಾರೆ.
ವರದಿ: ಮಾದೇಶ್ ಸಿ.ಎನ್ ನ್ಯೂಸ್18 ಕನ್ನಡ ಪ್ರತಿನಿಧಿ, ಬೆಂಗಳೂರು












