Maha Kumbh Mela 2025: ಕುಂಭಮೇಳದಲ್ಲಿ ಸ್ಟೀವ್ ಜಾಬ್ಸ್ ಪತ್ನಿ ಭಾಗಿ! ಆಧ್ಯಾತ್ಮಿಕತೆ ಹಾದಿಯಲ್ಲಿ ಸಾಗ್ತಿದ್ದಾರಾ ಲಾರೆನ್ ಪೊವೆಲ್ ಜಾಬ್ಸ್? | Steve Jobs wife Laurene Powell attends kumbh mela: Never been to such a crowded place | ಜ್ಯೋತಿಷ್ಯ | ACTPnews

ಕುಂಭಮೇಳದಲ್ಲಿ ಲಾರೆನ್ ಪೊವೆಲ್ ಜಾಬ್ಸ್‌


Last Updated:

Maha Kumbh Mela 2025: ಆಪಲ್ ಕಂಪನಿಯ ಸಹ ಸಂಸ್ಥಾಪಕ ದಿವಂಗತ ಸ್ಟೀವ್ ಜಾಬ್ಸ್ ಅವರ ಪತ್ನಿ ಲಾರೆನ್ ಪೊವೆಲ್ ಜಾಬ್ಸ್ ಕೂಡ ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ಕಾಣಿಸಿಕೊಂಡಿದ್ದಾರೆ

ಕುಂಭಮೇಳದಲ್ಲಿ ಲಾರೆನ್ ಪೊವೆಲ್ ಜಾಬ್ಸ್‌
ಕುಂಭಮೇಳದಲ್ಲಿ ಲಾರೆನ್ ಪೊವೆಲ್ ಜಾಬ್ಸ್‌

ಕುಂಭಮೇಳ (Kumbh Mela) ಕೇವಲ ಭಾರತೀಯರಿಗೆ (Indians0 ಮಾತ್ರವಲ್ಲ, ಪ್ರಪಂಚದ ಸಾಕಷ್ಟು ಮಂದಿಗೆ ಆಧ್ಯಾತ್ಮಿಕ ಕಾರ್ಯಕ್ರಮವಾಗಿದೆ. ಹಾಗಾಗಿ ಪ್ರಪಂಚದಾದ್ಯಂತ ಕೋಟ್ಯಾಂತರ ಸಂಖ್ಯೆಯಲ್ಲಿ ಜನರು ಕುಂಭಮೇಳಕ್ಕೆ ಆಗಮಿಸುತ್ತಿದ್ದಾರೆ. ವಿಶೇಷವೆಂದರೆ ಇದರಲ್ಲಿ ಬಹುತೇಕ ಸೆಲೆಬ್ರಿಟಿಗಳು (Celebrities) ಸಹ ಇದ್ದಾರೆ. ಅದರಲ್ಲೂ ಆಪಲ್ ಕಂಪನಿಯ (Apple Company) ಸಹ ಸಂಸ್ಥಾಪಕ ದಿವಂಗತ ಸ್ಟೀವ್ ಜಾಬ್ಸ್ ಅವರ ಪತ್ನಿ ಲಾರೆನ್ ಪೊವೆಲ್ ಜಾಬ್ಸ್ (Laurene Powell Jobs) ಕೂಡ ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಚಾರವಂತೂ ಹಾಟ್​ ಟಾಪಿಕ್​ನಂತೆ ಎಲ್ಲೆಡೆ ಸಿಕ್ಕಾಪಟ್ಟೆ ಚರ್ಚೆ ಆಗಿತ್ತು. ​  

Maha Kumbh Mela begins today lakhs of devotees arrive

ಮಹಾ ಕುಂಭ ಮೇಳ 2025
ಕುಂಭಮೇಳದಲ್ಲಿ ಲಾರೆನ್ ಪೊವೆಲ್ ಜಾಬ್ಸ್‌

ಕುಂಭಮೇಳದಲ್ಲಿನ ವಾತಾವರಣಕ್ಕೆ ಲಾರೆನ್ ಪೊವೆಲ್ ಜಾಬ್ಸ್‌ ತಕ್ಷವೇ ಹೊಂದಿಕೊಳ್ಳಲು ಸಾಧ್ಯವಾಗಲಿಲ್ಲ. ಏಕೆಂದರೆ ಅಮೆರಿಕದಲ್ಲಿ ಸದಾ ಚಳಿ ಇರುತ್ತದೆ. ಆದರೆ ಭಾರತದಲ್ಲಿ ತುಂಬಾ ಬಿಸಿಯಾದ ವಾತಾವರಣ ಇರುತ್ತದೆ. ಅಲ್ಲದೇ ಕುಂಭಮೇಳದಲ್ಲಿ ಲಕ್ಷಾಂತರ ಭಕ್ತರು ಸೇರಿದ್ದರು. ಸಂಗಮ ತೀರ್ಥದಲ್ಲಿ ವಿಶೇಷ ಪೂಜೆ, ಪುನಸ್ಕಾರಗಳನ್ನು ಮಾಡುತ್ತಿದ್ದರು. ಇದನ್ನೆಲ್ಲಾ ಕಣ್ಣು ಹಾಯಿಸುತ್ತಾ ಲಾರೆನ್ ಪೊವೆಲ್ ಜಾಬ್ಸ್ ನೋಡುತ್ತಿದ್ದರು. ಇವೆಲ್ಲವೂ ನೋಡಲು ಸುಂದರವಾಗಿದೆ ಎಂದರು.

ನಂತರ ಅಲ್ಲಿಂದ ಲಾರೆನ್ ಪೊವೆಲ್ ಜಾಬ್ಸ್ ಅವರನ್ನು ನಿರಂಜನಿ ಅಖಾಡ ಮಹಾ ಮಂಡಲೇಶ್ವರ ಸ್ವಾಮಿ ಕೈಲಾಸಾನಂದ ಗಿರಿ ಮಹಾರಾಜ್ ಅವರ ಶಿಬಿರಕ್ಕೆ ಕರೆದುಕೊಂಡು ಹೋಗಲಾಯಿತು. ಈ ಹೊಸ ವಾತಾವರಣ ಕೊಂಚ ಇರಿಸು ಮುನಿಸಿನಂತೆ ಆಯಿತು. ನಂತರ ಅದರಿಂದ ಹೊರ ಬಂದ ಲಾರೆನ್ ಪೊವೆಲ್ ಜಾಬ್ಸ್​ ಅವರಿಗೆ ತ್ರಿವೇಣಿ ಸಂಗಮದಲ್ಲಿ ಶಾಹಿ ಸ್ನಾನ ಮಾಡುವ ಅವಕಾಶ ಲಭಿಸಿತು.

ಕುಂಭಮೇಳದಲ್ಲಿ ಲಾರೆನ್ ಪೊವೆಲ್ ಜಾಬ್ಸ್‌
ಆಧ್ಯಾತ್ಮಿಕ ಮಾರ್ಗ

ವಿದೇಶದಲ್ಲಿ ವಾಸ ಮಾಡುವ ಅನೇಕ ಮಂದಿ ಭಾರತೀಯ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಆಧ್ಯಾತ್ಮಿಕ ಅನುಭವವನ್ನು ಇಷ್ಟಪಡುತ್ತಾರೆ. ಭಾರತದಲ್ಲಿ ಯಾವುದೋ ಒಂದು ರೀತಿ ಮ್ಯಾಜಿಕ್ ಇದೆ ಎಂಬುವುದು ಅವರ ನಂಬಿಕೆ. ವಿದೇಶಿಯರು ಭಾರತೀಯರು ಮಾಡುವ ಯೋಗ, ಧ್ಯಾನ, ಆಧ್ಯಾತ್ಮಿಕ ಮಾರ್ಗಗಳನ್ನು ಹೆಚ್ಚಾಗಿ ಅನುಸರಿಸುತ್ತಿದ್ದಾರೆ. ಅದೇ ರೀತಿ ಲಾರೀನ್ ಪೊವೆಲ್ ಜಾಬ್ಸ್​ ಅವರು ಸಹ ಭಾರತೀಯ ಸಂಪ್ರದಾಯ ಮತ್ತು ಪದ್ಧತಿಗಳನ್ನು ಪ್ರೀತಿಸುತ್ತಾರೆ. ಸದ್ಯ 144 ವರ್ಷಗಳ ಬಳಿಕ  ಕುಂಭಮೇಳ ಜರುಗುತ್ತಿದೆ. ಭಾರತದ ಮಣ್ಣಿನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ.

ಕಮಲಾ ಎಂದು ಹೆಸರು ಬದಲಿಸಿಕೊಂಡ ಲಾರಿನ್ ಪೊವೆಲ್

ಲಾರಿನ್ ಪೊವೆಲ್ ಕಮಲಾ ಎಂದು ಹೆಸರು ಬದಲಿಸಿಕೊಂಡಿದ್ದಾರೆ ಎಂದು ಕೈಲಾಸಾನಂದ ಗಿರಿ ಮಹಾರಾಜ್ ಹೇಳಿದ್ದಾರೆ. ಈಗಾಗಲೇ ಭಾರತದ ಹಿನ್ನೆಲೆ ಹೊಂದಿರುವ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅಮೆರಿಕದಲ್ಲಿ ವಾಸವಾಗಿದ್ದಾರೆ. ಆದರೆ ಈಗ ಕಮಲಾ ಹೆಸರನ್ನೇ ಲಾರೀನ್ ಪೊವೆಲ್ ಪಡೆದುಕೊಂಡಿದ್ದಾರೆ.

ಅಲ್ಲದೇ ಲಾರೀನ್ ಪೊವೆಲ್ ಜಾಬ್ಸ್ ಅವರು ಆಶ್ರಮದಲ್ಲಿ ಧ್ಯಾನ ಕೂಡ ಮಾಡಿದರು. ಈ ಸಮಯದಲ್ಲಿ ಆಕೆಗೆ ಭಾರತೀಯ ವಿಜ್ಞಾನ, ಹಿಂದೂ ಸಂಸ್ಕೃತಿ, ಆಚಾರ ವಿಚಾರಗಳ ಪರಿಚಯವಾಯಿತು. ಉನ್ನತ ಮನಸ್ಸಿನ ಹಿಂದೂ ಧರ್ಮದಲ್ಲಿ ಆಸಕ್ತಿ ಮೂಡಿತು. ಕುಂಭಮೇಳಕ್ಕೆ ಬಂದ ಆಕೆಯಲ್ಲಿ ಮತ್ತಷ್ಟು ಹಿಂದೂ ಸಂಪ್ರದಾಯದ ಬಗ್ಗೆ ಭಕ್ತಿಯ ಭಾವ ಹೊರ ಹೊಮ್ಮಿದೆ ಎಂದರು.

ಕನ್ನಡ ಸುದ್ದಿ/ ನ್ಯೂಸ್/ಭವಿಷ್ಯ/

Maha Kumbh Mela 2025: ಕುಂಭಮೇಳದಲ್ಲಿ ಸ್ಟೀವ್ ಜಾಬ್ಸ್ ಪತ್ನಿ ಭಾಗಿ! ಆಧ್ಯಾತ್ಮಿಕತೆ ಹಾದಿಯಲ್ಲಿ ಸಾಗ್ತಿದ್ದಾರಾ ಲಾರೆನ್ ಪೊವೆಲ್ ಜಾಬ್ಸ್?



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed