ಕೊನೆಯ ಪಂದ್ಯದಲ್ಲಿಯೂ ಕೂಡ ಲಖನೌ ತಂಡ ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. ಮಿಚೆಲ್ ಮಾರ್ಷ್ ಬದಲಿಗೆ ಆರಂಭಿಕನಾಗಿ ಅವಕಾಶ ಪಡೆದಿದ್ದ ಅರ್ಶಿನ್ ಕುಲಕರ್ಣಿ ಗೋಲ್ಡನ್ ಡಕ್ ಆದರು. ಒಮರ್ಝೈ ಬೌಲಿಂಗ್ನಲ್ಲಿ ವಿಕೆಟ್ ಕೀಪರ್ ಪ್ರಭಸಿಮ್ರನ್ ಸಿಂಗ್ಗೆ ಕ್ಯಾಚ್ ನೀಡಿ ಔಟ್ ಆದರು. ನಂತರ ಬಂದ ನಿಕೋಲಸ್ ಪೂರನ್ 7 ಎಸೆತಗಳಲ್ಲಿ 2 ರನ್ಗಳಿಸಿ ಮಾರ್ಕೊ ಯಾನ್ಸನ್ ಬೌಲಿಂಗ್ನಲ್ಲಿ ಬೌಲ್ಡ್ ಆದರು.
ಕೇವಲ 20 ರನ್ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡಿದ್ದ ಲಖನೌ ತಂಡಕ್ಕೆ ಬದೋನಿ ಹಾಗೂ ಇಂಗ್ಲಿಸ್ 49 ರನ್ಗಳ ಜೊತೆಯಾಟ ನೀಡಿ ಚೇತರಿಕೆ ನೀಡಿದರು. ಬದೋನಿ ಒಬ್ಬರೆ ಕೇವಲ 18 ಎಸೆತಗಳಲ್ಲಿ 43 ರನ್ಗಳಿಸಿದರು. ಇವರ ಇನ್ನಿಂಗ್ಸ್ನಲ್ಲಿ 5 ಬೌಂಡರಿ, 3 ಸಿಕ್ಸರ್ಗಳಿದ್ದವು. ಬದೋನಿ ನಂತರ ಬಂದ ನಾಯಕ ರಿಷಭ್ ಪಂತ್ 4ನೇ ವಿಕೆಟ್ಗೆ ಇಂಗ್ಲಿಸ್ ಜೊತೆಗೂಡಿ 65 ರನ್ ಸೇರಿಸಿದರು. ಪಂತ್ ಇಂದೂ ಕೂಡ ನಿಧಾನಗತಿಯ ಆಟವಾಡಿದರು. 22 ಎಸೆತಗಳಲ್ಲಿ 3 ಬೌಂಡರಿಗಳ ಸಹಿತ 26 ರನ್ಗಳಿಸಿ ನಿರ್ಗಮಿಸಿದರು.
ಆರಂಭಿಕನಾಗಿ ಬಂದು 17ನೇ ಓವರ್ನಲ್ಲಿ ಔಟ್ ಆದ ಇಂಗ್ಲಿಸ್ 44 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್ಗಳ ಸಹಿತ 72 ರನ್ಗಳಿಸಿದರು. ಕೊನೆಯಲ್ಲಿ ಅಬ್ಬರಿಸಿದ ಅಬ್ದುಲ್ ಸಮದ್ 20 ಎಸೆತಗಳಲ್ಲಿ ತಲಾ 3 ಬೌಂಡರಿ, 3 ಸಿಕ್ಸರ್ಗಳ ಸಹಿತ ಅಜೇಯ 37 ರನ್ಗಳಿಸಿ ತಂಡದ ಮೊತ್ತವನ್ನ 190ರ ಗಡಿದಾಟಿಸಿದರು. ಅರ್ಜುನ್ ತೆಂಡೂಲ್ಕರ್ ಅಜೇಯ 5 ರನ್ಗಳಿಸಿದರು.
ಒಂದು ಹಂತದಲ್ಲಿ ಲಖನೌ ತಂಡ 200-210 ರನ್ಗಳಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ 18ನೇ ಓವರ್ನಲ್ಲಿ ಮಾರ್ಕೊ ಯಾನ್ಶನ್ ಕೇವಲ 4 ರನ್ ನೀಡಿದರೆ, 19ನೇ ಓವರ್ನಲ್ಲಿ ವೈಶಾಕ್ ಕೇವಲ 6 ರನ್ ನೀಡಿದರು. ಆದರೆ 20 ನೇ ಓವರ್ನಲ್ಲಿ ಅರ್ಷದೀಪ್ ಸಿಂಗ್ 17 ರನ್ ಬಿಟ್ಟುಕೊಟ್ಟರು. ಪಂಜಾಬ್ ಪರ ಯುಜ್ವೇಂದ್ರ ಚಹಲ್ 25ಕ್ಕೆ2, ಮಾರ್ಕೊ ಯಾನ್ಸನ್ 33ಕ್ಕೆ2, ಅಜ್ಮತ್ವುಲ್ಲಾ ಒಮರ್ಝೈ 29ಕ್ಕೆ1, ಶಶಾಂಕ್ ಸಿಂಗ್ 29ಕ್ಕೆ1 ವಿಕೆಟ್ ಪಡೆದರು.
ಎರಡೂ ತಂಡಗಳ ಪ್ಲೇಯಿಂಗ್ ಇಲೆವೆನ್
ಲಖನೌ ಸೂಪರ್ ಜೈಂಟ್ಸ್: ಅರ್ಷಿನ್ ಕುಲಕರ್ಣಿ, ಜೋಶ್ ಇಂಗ್ಲಿಸ್, ನಿಕೋಲಸ್ ಪೂರನ್, ರಿಷಭ್ ಪಂತ್ (ನಾಯಕ ಮತ್ತು ವಿಕೆಟ್ ಕೀಪರ್), ಅಬ್ದುಲ್ ಸಮದ್, ಆಯುಷ್ ಬದೋನಿ, ಮುಕುಲ್ ಚೌಧರಿ, ಅರ್ಜುನ್ ತೆಂಡೂಲ್ಕರ್, ಮೊಹಮ್ಮದ್ ಶಮಿ, ಪ್ರಿನ್ಸ್ ಯಾದವ್, ಮೊಹ್ಶಿನ್ ಖಾನ್
ಪಂಜಾಬ್ ಕಿಂಗ್ಸ್: ಶ್ರೇಯಸ್ ಅಯ್ಯರ್ (ನಾಯಕ), ಪ್ರಿಯಾಂಶ್ ಆರ್ಯ, ಪ್ರಭಸಿಮ್ರನ್ ಸಿಂಗ್ (ವಿಕೆಟ್ ಕೀಪರ್), ಕೂಪರ್ ಕೊನೊಲಿ, ಸೂರ್ಯಾಂಶ್ ಶೆಡ್ಗೆ, ಅಜ್ಮತ್ವುಲ್ಲಾ ಒಮರ್ಝೈ, ಶಶಾಂಕ್ ಸಿಂಗ್, ಹರ್ಪ್ರೀತ್ ಬ್ರಾರ್, ಮಾರ್ಕೊ ಯಾನ್ಸನ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಾಹಲ್, ವಿಜಯ್ ಕುಮಾರ್ ವೈಶಾಕ್












