Last Updated:
ಶುಕ್ರವಾರ ನಡೆದ ಪಂದ್ಯದಲ್ಲಿ, ಆರ್‌ಸಿಬಿ ನೆಟ್ ರನ್ ರೇಟ್‌ನಲ್ಲಿ ಮೇಲುಗೈ ಸಾಧಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿತು. ಆದರೆ ಸನ್‌ರೈಸರ್ಸ್ ಹೈದರಾಬಾದ್ ತಂಡ 18 ಅಂಕಗಳಿಸಿದರೂ ಮೂರನೇ ಸ್ಥಾನಕ್ಕೆ ಸೀಮಿತವಾಯಿತು. ಈಗ, ಉಳಿದಿರುವ ಏಕೈಕ ನಾಲ್ಕನೇ ಸ್ಥಾನಕ್ಕಾಗಿ ರಾಜಸ್ಥಾನ್ ರಾಯಲ್ಸ್, ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ತ್ರಿಕೋನ ಹೋರಾಟ ನಡೆಯುತ್ತಿದೆ.
2026ರ ಐಪಿಎಲ್ ಸೀಸನ್‌ನ ಲೀಗ್ ಹಂತವು ಮುಕ್ತಾಯಗೊಳ್ಳುತ್ತಿದ್ದಂತೆ, ಪ್ಲೇಆಫ್ ಸ್ಪರ್ಧೆಯು ತೀವ್ರವಾಗುತ್ತಿದೆ. ಈ ಋತುವಿನ ಮೊದಲ ಮೂರು ಸ್ಥಾನಗಳು ಈಗಾಗಲೇ ದೃಢಪಟ್ಟಿವೆ. ಆರ್‌ಸಿಬಿ, ಗುಜರಾತ್ ಟೈಟನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಅಧಿಕೃತವಾಗಿ ಪ್ಲೇಆಫ್‌ಗೆ ಅರ್ಹತೆ ಪಡೆದಿವೆ. ಶುಕ್ರವಾರ ನಡೆದ ಪಂದ್ಯದಲ್ಲಿ, ಆರ್‌ಸಿಬಿ ನೆಟ್ ರನ್ ರೇಟ್‌ನಲ್ಲಿ ಮೇಲುಗೈ ಸಾಧಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿತು. ಆದರೆ ಸನ್‌ರೈಸರ್ಸ್ ಹೈದರಾಬಾದ್ ತಂಡ 18 ಅಂಕಗಳಿಸಿದರೂ ಮೂರನೇ ಸ್ಥಾನಕ್ಕೆ ಸೀಮಿತವಾಯಿತು. ಈಗ, ಉಳಿದಿರುವ ಏಕೈಕ ನಾಲ್ಕನೇ ಸ್ಥಾನಕ್ಕಾಗಿ ರಾಜಸ್ಥಾನ್ ರಾಯಲ್ಸ್, ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ತ್ರಿಕೋನ ಹೋರಾಟ ನಡೆಯುತ್ತಿದೆ. ಡೆಲ್ಲಿ ಕ್ಯಾಪಿಟಲ್ಸ್ ಈಗಾಗಲೇ ರೇಸ್‌ನಿಂದ ಬಹುತೇಕ ಹೊರಗುಳಿದಿದೆ.
ಈ ರೇಸ್‌ನಲ್ಲಿ, ರಾಜಸ್ಥಾನ್ ರಾಯಲ್ಸ್ ಹೆಚ್ಚಿನ ಅವಕಾಶ ಹೊಂದಿದೆ. ಏಕೆಂದರೆ ಉಳಿದ ತಂಡಗಳಿಗಿಂತ ಹೆಚ್ಚು ಅಂಕಗಳಿಸುವ ಅವಕಾಶ ಆ ತಂಡಕ್ಕಿದೆ. ರಾಜಸ್ಥಾನ್ ರಾಯಲ್ಸ್ ತಂಡವು ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿದರೆ ಬೇರೆ ತಂಡಗಳ ಫಲಿತಾಂಶ ಲೆಕ್ಕಿಸದೇ ಪ್ಲೇಆಫ್‌ಗೆ ನೇರವಾಗಿ ಅರ್ಹತೆ ಪಡೆಯುತ್ತದೆ. ಒಂದು ವೇಳೆ ಆ ಪಂದ್ಯದಲ್ಲಿ ರಾಯಲ್ಸ್ ಸೋಲು ಕಂಡರೂ ಮತ್ತೊಂದು ಚಾನ್ಸ್ ಇದೆ. ಅದೇನಂದರೆ ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಎರಡೂ ತಮ್ಮ ಅಂತಿಮ ಪಂದ್ಯಗಳಲ್ಲಿ ಸೋತರೆ ರಾಜಸ್ಥಾನದ ಪ್ಲೇಆಫ್ ಸ್ಥಾನವನ್ನು ಭದ್ರಪಡಿಸಿಕೊಳ್ಳಲಿದೆ.
ಮತ್ತೊಂದೆಡೆ, ಸತತ ಆರು ಸೋಲುಗಳನ್ನು ಅನುಭವಿಸಿದರೂ, ಪಂಜಾಬ್ ಕಿಂಗ್ಸ್ ಪ್ಲೇಆಫ್ ತಲುಪುವ ಭರವಸೆ ಇನ್ನೂ ಜೀವಂತವಾಗಿದೆ. ಪಂಜಾಬ್ ಮುಂದಿನ ಹಂತಕ್ಕೆ ಮುನ್ನಡೆಯಲು, ಅವರು ಮೊದಲು ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಗೆಲುವು ಸಾಧಿಸಬೇಕು. ಇದರ ಜೊತೆಗೆ ರಾಜಸ್ಥಾನ್ ರಾಯಲ್ಸ್ ತಂಡವು ಮುಂಬೈ ಇಂಡಿಯನ್ಸ್ ಕೈಯಲ್ಲಿ ಸೋಲನ್ನು ಅನುಭವಿಸಬೇಕೆಂದು ಬೇಡಿಕೊಳ್ಳಬೇಕಾಗಿದೆ. ಇದಲ್ಲದೆ ನಿರ್ಣಾಯಕವಾಗಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಬೃಹತ್ ಗೆಲುವು (ಸುಮಾರು 50 ರನ್ ಅಥವಾ ಅದಕ್ಕಿಂತ ಹೆಚ್ಚಿನ ಅಂತರದಿಂದ) ಪಡೆಯಬಾರದು. ಈ ಎಲ್ಲಾ ಷರತ್ತುಗಳನ್ನು ಪೂರೈಸಿದರೆ ಮಾತ್ರ ಪಂಜಾಬ್ ಪ್ಲೇಆಫ್ ಪ್ರವೇಶಿಸಲಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ, ವೇಳಾಪಟ್ಟಿಯ ಕೊನೆಯಲ್ಲಿ ತಮ್ಮ ಅಂತಿಮ ಲೀಗ್ ಪಂದ್ಯವನ್ನು ಆಡುವುದು ಒಂದು ವಿಶಿಷ್ಟ ಪ್ರಯೋಜನವಾಗಿದೆ. ಇದು ಇತರ ತಂಡಗಳ ಪಂದ್ಯಗಳ ಫಲಿತಾಂಶಗಳ ಆಧಾರದ ಮೇಲೆ ತಮ್ಮ ಕಾರ್ಯತಂತ್ರಗಳನ್ನು ರೂಪಿಸಲು ಅನುವು ಮಾಡಿಕೊಡುತ್ತದೆ. ಪಂಜಾಬ್ ಮತ್ತು ರಾಜಸ್ಥಾನ ಎರಡೂ ತಮ್ಮ ತಮ್ಮ ಪಂದ್ಯಗಳಲ್ಲಿ ಸೋತರೆ, ಕೆಕೆಆರ್ ತಮ್ಮ ಅಂತಿಮ ಪಂದ್ಯದಲ್ಲಿ ಸರಳ ಗೆಲುವು ಸಾಧಿಸಿದರೆ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲಿದೆ.
ಆದರೆ ಪಂಜಾಬ್ ತಮ್ಮ ಪಂದ್ಯವನ್ನು ಗೆದ್ದರೆ, ಕೆಕೆಆರ್ ತಮ್ಮ ಕೊನೆಯ ಪಂದ್ಯದಲ್ಲಿ ಬೃಹತ್ ಗೆಲುವು ದಾಖಲಿಸಬೇಕಾಗುತ್ತದೆ. ಆದರೂ, ಒಂದೇ ಒಂದು ಫಲಿತಾಂಶವು ಈ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸುತ್ತದೆ. ರಾಜಸ್ಥಾನ್ ರಾಯಲ್ಸ್ ತಮ್ಮ ಕೊನೆಯ ಪಂದ್ಯವನ್ನು ಗೆದ್ದರೆ, ಪಂಜಾಬ್ ಮತ್ತು ಕೋಲ್ಕತ್ತಾ ಎಷ್ಟೇ ರನ್ಗಳ ಅಂತರದಿಂದ ಗೆದ್ದರೂ ಪ್ಲೇಆಫ್ ಭರವಸೆಗಳು ಭಗ್ನಗೊಳ್ಳುತ್ತವೆ.













