Last Updated:
ಗಂಡುಗಲಿ ಕುಮಾರರಾಮ ಬಂದು 20 ವರ್ಷ ಆಗಿದೆ. ಶಿವಣ್ಣನ ಈ ಚಿತ್ರದ ನಾಯಕ ನಟಿ ಲಯ ಇಷ್ಟು ವರ್ಷದ ಬಳಿಕ ಕನ್ನಡಕ್ಕೆ ಬಂದಿದ್ದಾರೆ. ಕರ್ಣಾಟಬಲಂ ಚಿತ್ರದಲ್ಲಿ ಇದೀಗ ನಟಿಸುತ್ತಿದ್ದಾರೆ. ಈ ಸಿನಿಮಾದ ಇನ್ನಷ್ಟು ವಿವರ ಇಲ್ಲಿದೆ ಓದಿ.
ಗಂಡುಗಲಿ ಕುಮಾರರಾಮ ಚಿತ್ರ (Gandugali Kumara Rama Movie) ಬಂದು 20 ವರ್ಷ ಆಗಿದೆ. ಈ ಚಿತ್ರದಲ್ಲಿ ಶಿವಣ್ಣ ಅಭಿನಯಿಸಿದ್ದರು. ಕುಮಾರರಾಮ ಪಾತ್ರವನ್ನ ಮಾಡಿದ್ದರು. ಎಚ್.ಆರ್.ಭಾರ್ಗವ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದರು. ಈ ಚಿತ್ರದಲ್ಲಿ ನಾಯಕಿಯರಾಗಿ ರಂಭಾ (Rambha) ಇದ್ದರು. ಮತ್ತೊಬ್ಬ ನಾಯಕಿ ಅಂತ ಬಂದ್ರೆ ಅದನ್ನ ತೆಲುಗು ನಟಿ ಲಯ (Laya) ಮಾಡಿದ್ದರು. ಆದರೆ, ಇಷ್ಟು ವರ್ಷ ಆದ್ಮೇಲೆ ಈ ವಿಚಾರ ಯಾಕೆ ಅನ್ನುವ ಪ್ರಶ್ನೆನೂ ಬರುತ್ತದೆ. ಅದಕ್ಕೆ ಸಿ.ಪಿ.ಯೋಗೀಶ್ವರ್ (C.P. Yogeshwar) ಅವರ ಚಿತ್ರ ಉತ್ತರ ಕೊಡುತ್ತದೆ. ಈ ಚಿತ್ರದಲ್ಲಿ ಲಯ ಕೂಡ ಅಭಿನಯಿಸಿದ್ದಾರೆ. ಈ ಸಿನಿಮಾ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.
ಲಯ ಮತ್ತೆ ಬಂದ್ರು
ಈ ಚಿತ್ರದಲ್ಲಿ ನಟಿ ರಂಭಾ ಕೂಡ ಇದ್ದರು. ಆದರೆ, ಮತ್ತೊಬ್ಬ ನಾಯಕಿ ಅಂತ ಬಂದ್ರೆ, ಲಯ ಇಲ್ಲಿ ಆ ರೋಲ್ ಮಾಡಿದ್ದರು. ಎಚ್.ಆರ್.ಭಾರ್ಗವ್ ಅವರು ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದರು.
ಗಂಡುಗಲಿ ಕುಮಾರರಾಮ ಚಿತ್ರ ಆಗಸ್ಟ್-4 2006 ರಿಲೀಸ್ ಆಗಿತ್ತು. ಈಗೀನ ಲೆಕ್ಕದಂತೆ 20 ವರ್ಷ ಆಗುತ್ತದೆ. ಈ ಇಪ್ಪತ್ತು ವರ್ಷದಲ್ಲಿ ಲಯ ಅವರನ್ನ ಕನ್ನಡಕ್ಕೆ ಕರೆತರುವ ಕೆಲಸ ಆಗಿಯೇ ಇರಲಿಲ್ಲ.
ಸೈನಿಕ- 2 ಚಿತ್ರ ಹಾಗೂ ಕರ್ಣಾಟಬಲಂ ಚಿತ್ರ ಒಟ್ಟಿಗೆ ಲಾಂಚ್ ಆಗಿವೆ. ಈ ಎರಡೂ ಚಿತ್ರದಲ್ಲಿ ಸಿ.ಪಿ.ಯೋಗೀಶ್ವರ್ ಪುತ್ರ ಧ್ಯಾನ್ ಯೋಗೀಶ್ವರ್ ನಾಯಕರಾಗಿದ್ದಾರೆ.
ಈ ಚಿತ್ರಗಳಲ್ಲಿ ಕರ್ಣಾಟಬಲಂ ಸಿನಿಮಾದಲ್ಲಿ ತೆಲಗು ನಟಿ ಲಯ ನಟಿಸಿದ್ದಾರೆ. ಚಿತ್ರದ ನಾಯಕ ನಟ ಧ್ಯಾನ್ ಯೋಗೀಶ್ವರ್ ಅವರಿಗೆ ವಿಶ್ ಕೂಡ ಮಾಡಿದ್ದಾರೆ. ಧ್ಯಾನ್ ಒಳ್ಳೆ ತಯಾರಿ ಮಾಡಿಕೊಂಡಿದ್ದಾರೆ. ಎಲ್ಲೂ ನವ ನಟ ಅನಿಸೋದೇ ಇಲ್ಲ ಅಂತಲೇ ಹೇಳಿದ್ದಾರೆ.
ಲಯ ಹೇಳಿರೋದು ಏನು
ನನ್ನ ಕೊನೆಯ ಚಿತ್ರ ಗಂಡುಗಲಿ ಕುಮಾರರಾಮನೇ ಆಗಿತ್ತು. ಅದಾದ್ಮೇಲೆ ಯಾವುದು ಕನ್ನಡ ಸಿನಿಮಾ ಮಾಡಿಯೇ ಇಲ್ಲ. ಆದರೆ, ಈಗಲೇ ಕರ್ಣಾಟಬಲಂ ಚಿತ್ರ ಮಾಡುತ್ತಿದ್ದೇನೆ ಅಂತಲೇ ಹೇಳಿದ್ದಾರೆ.
ಆದರೆ, ಈ ಚಿತ್ರದಲ್ಲಿ ಏನು ಪಾತ್ರ ಮಾಡ್ತಿದ್ದಾರೆ ಅನ್ನುವ ಕುತೂಹಲ ಹಾಗೆ ಇದೆ. ಈ ಚಿತ್ರ ಚಕ್ರವರ್ತಿ ಇಮ್ಮಡಿ ಪುಲಕೇಶಿ ಕತೇನೆ ಆಗಿದೆ. ಇದನ್ನ ನಾಗಣ್ಣ ಡೈರೆಕ್ಷನ್ ಮಾಡಿದ್ದಾರೆ.
ಸಿ.ಪಿ.ಯೋಗೀಶ್ವರ್ ಅವರು 25 ವರ್ಷದ ಬಳಿಕ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಸೈನಿಕ ಚಿತ್ರದಲ್ಲಿ ಇವರಿಗೆ ಒಳ್ಳೆ ಹೆಸರು ಬಂದಿತ್ತು. ಆದರೆ, ಇವರು ರಾಜಕೀಯಕ್ಕೆ ಎಂಟ್ರಿ ಕೊಟ್ಟರು.
ಸಿನಿಮಾರಂಗದಲ್ಲಿಯೇ ಮುಂದುವರೆಯಬೇಕು ಅಂತಲೂ ಇತ್ತು. ಆದರೆ, ಆಗಿರಲಿಲ್ಲ, ಈಗ ತಮ್ಮ ಎಲ್ಲ ಕನಸುಗಳನ್ನ ಮಗನ ಮೂಕವೇ ಈಡೇರಿಸುತ್ತಿದ್ದಾರೆ ಅಂತ ಸ್ವತಃ ಸಿ.ಪಿ.ಯೋಗೀಶ್ವರ್ ಅವರು ಚಿತ್ರದ ಮುಹೂರ್ತದ ಪ್ರೆಸ್ ಮೀಟ್ ಅಲ್ಲಿಯೇ ಹೇಳಿಕೊಂಡಿದ್ದಾರೆ.
Bangalore [Bangalore],Bangalore,Karnataka
Jul 05, 2026 10:10 PM IST













