Lagaan Movie: ಲಗಾನ್ ಸಿನಿಮಾಕ್ಕೆ 25 ವರ್ಷ ಕಂಪ್ಲೀಟ್! ಐತಿಹಾಸಿಕ ಸಿನಿಮಾದ ಇಂಟ್ರೆಸ್ಟಿಂಗ್ ವಿಚಾರ ಇಲ್ಲಿದೆ | | ACTPnews

Aamir Khan Ashutosh Gowariker Lagaan Movie Complete 25 Years


ಕಾಲ್ ಮಾಡಿ ಹೇಳೋದು ಏನು ಗೊತ್ತಾ

ನಾನು ಒಂದು ಕತೆ ಮಾಡಿದ್ದೇನೆ. ಅದನ್ನ ನಿನಗೆ ಹೇಳ್ಬೇಕು. ಫುಲ್ ಸ್ಕ್ರಿಪ್ಟ್ ರೆಡಿ ಇದೆ. ಇದನ್ನ ನಿನಗೆ ಹೇಳ್ತೇಕು ಅಂತಲೇ ಹೇಳ್ತಾರೆ. ಆಗ ಆಮಿರ್ ಖಾನ್‌ ಅವರಗೆ ಡೌಟ್ ಬರುತ್ತದೆ.

ಆಮೀರ್ ಖಾನ್ ಹೇಳೋದೇನು

(ಚಿತ್ರ ಕೃಪೆ: ಸ್ಪಾಟಿಫೈ ಇಂಡಿಯಾ ವಿಡಿಯೋ)

ಆ ಕ್ರಿಕೆಟ್ ಕತೇನಾ ಅಂತಲೇ ಕೇಳ್ತಾರೆ. ಆಗ ಅಶುತೋಷ್ ಏನು ಹೇಳೋದಿಲ್ಲ. ಕತೆ ಹೇಳೋಕೆ ಬರ್ತೀದ್ದೀನಿ ಅಂತ ಮನೆಗೆ ಹೋಗ್ತಾರೆ. ಆಗ ಅಸಲಿ ವಿಷಯವನ್ನ ಅಶುತೋಷ್ ಹೇಳ್ತಾರೆ.

3 ತಿಂಗಳು ಇದರ ಮೇಲೆ ಕೆಲಸ ಮಾಡಿದಿಯಾ

ಆಮೀರ್ ಖಾನ್ ಈ ಒಂದು ಪ್ರಶ್ನೆ ಕೇಳುತ್ತಾರೆ. ಮೂರು ತಿಂಗಳು ಈ ಒಂದು ಐಡಿಯಾ ಮೇಲೆ ಕೆಲಸ ಮಾಡಿದಿಯಾ? ಅಂತಲೆ ಕೇಳ್ತಾರೆ. ಕೊನೆಗೆ ಅಶುತೋಷ್ ಒತ್ತಾಯಕ್ಕೆ ಕತೆ ಕೇಳ್ತಾರೆ.

ಆಮೀರ್ ಖಾನ್‌ ನಿಜಕ್ಕೂ ಖುಷಿ ಆಗಿ ಬಿಡ್ತಾರೆ. ಒಂದೊಂದು ಪಾತ್ರವೂ ಇಲ್ಲಿ ಇವರಿಗೆ ಥ್ರಿಲ್ಲ್ ಮೂಡಿಸುತ್ತವೆ. ಹೀಗೆ ಲಗಾನ್ ಶುರು ಆಗುತ್ತದೆ. 25 ಕೋಟಿ ಬಜೆಟ್‌ ಅಲ್ಲಿ ಈ ಚಿತ್ರ ತಯಾರಾಗುತ್ತದೆ. ಸೂಪರ್ ಡೂಪರ್ ಹಿಟ್ ಆಗುತ್ತದೆ. 65.97 ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ಕೂಡ ಮಾಡುತ್ತದೆ.
25 ವರ್ಷ ಕಂಪ್ಲಿಟ್

ಲಗಾನ್ ಬಂದು 25 ಆಗುತ್ತದೆ. ಜೂನ್-15,2001 ರಂದು ಈ ಚಿತ್ರ ರಿಲೀಸ್ ಆಗಿತ್ತು. ಈ ಲೆಕ್ಕದಂತೆ ಈ ಸಿನಿಮಾ 2026 ಜೂನ್-15 ಕ್ಕೆ 25 ವರ್ಷ ಕಂಪ್ಲೀಟ್ ಮಾಡುತ್ತದೆ.

ಹಾಗೆ ಈ ಚಿತ್ರದ ಮೇಕಿಂಗ್ ಹಿಂದೆ ಇನ್ನು ಸಾಕಷ್ಟು ಇಂಟ್ರಸ್ಟಿಂಗ್ ವಿಚಾರಗಳು ಇವೆ. ಅದರಲ್ಲಿ ಎ.ಆರ್.ರೆಹಮಾನ್ ಸಂಗೀತವೂ ಒಂದಾಗಿದೆ. ಇವರ ಸಂಗೀತದ ಮೋಡಿನೇ ಬೇರೆ ಇದೆ.

Aamir Khan Ashutosh Gowariker Lagaan Movie Complete 25 Years

25 ವರ್ಷ ಕಂಪ್ಲಿಟ್

(ಚಿತ್ರ ಕೃಪೆ: ಸ್ಪಾಟಿಫೈ ಇಂಡಿಯಾ ವಿಡಿಯೋ)

ಆಮೀರ್ ಖಾನ್ ಹೇಳೋದೇನು

ಎ.ಆರ್.ರೆಹಮಾನ್ ಸಂಗೀತದ ಬಗ್ಗೆ ಆಮೀರ್ ಖಾನ್ ಮಾತನಾಡಿದ್ದಾರೆ. ಇವರ ಮ್ಯೂಸಿಕ್ ಸಂಯೋಜನೆಯ ಸ್ಟೈಲ್ ಬೇರೆ ಇದೆ. ಅದೇನು ಅನ್ನೋದನ್ನ ಆಮೀರ್ ಖಾನ್ ಹೇಳಿಕೊಂಡಿದ್ದಾರೆ.

ಎ.ಆರ್.ರೆಹಮಾನ್ ತಮ್ಮ ಕಂಪೋಸಿಷನ್ ರೂಮ್‌ಗೆ ಹೋದ ಕೂಡಲೇ ಒಂದು ಕ್ಯಾಂಡಲ್ ಹಚ್ಚುತ್ತಾರೆ. ಆ ಮೇಲೆ ಕೀ ಬೋರ್ಡ್ ಮೇಲೆ ಕುಳಿತುಕೊಳ್ಳುತ್ತಾರೆ. ತಮ್ಮ ಮನದಲ್ಲಿ ಏನೆಲ್ಲ ಟ್ಯೂನ್ ಬರುತ್ತದೆಯೋ ಅದನ್ನೆಲ್ಲ ನುಡಿಸುತ್ತಾರೆ.

ಜಾವೇದ್ ಅಖ್ತರ್ ಏನಂತಾರೆ

ಈ ಚಿತ್ರಕ್ಕೆ ಲಿರಿಕ್ಸ್ ಬರೆದ ಜಾವೇದ್ ಅಖ್ತರ್ ಅವರು ತಮ್ಮ ವಿಶೇಷ ಅನುಭವ ಹಂಚಿಕೊಂಡಿದ್ದಾರೆ. ಎ.ಆರ್.ರೆಹಮಾನ್ ಸಂಗೀತಕ್ಕೆ ಲಿರಿಕ್ಸ್ ಬರೆಯೋದು ಅಷ್ಟು ಸುಲಭವೇನೂ ಅಲ್ಲ. ಪ್ರತಿ ಲೈನ್‌ಗೂ ಬೇರೆ ಮೀಟರ್ ಇರುತ್ತದೆ ಅಂತಲೂ ಹೇಳಿಕೊಂಡಿದ್ದಾರೆ.

ಲಗಾನ್ ಚಿತ್ರ ಬಂದು 25 ವರ್ಷ ಆಗಿದೆ. ಈ ಹಿನ್ನೆಲೆಯಲ್ಲಿ Spotify India ಸಂದರ್ಶನದಲ್ಲಿಯೇ ಜಾವೇದ್ ಅಖ್ತರ್, ಅಶುತೋಷ್ ಗೋವಾರಿಕರ್, ಆಮೀರ್ ಖಾನ್,ಎ.ಆರ್.ರೆಹಮಾನ್ ತಮ್ಮ ಈ ಲಗಾನ್ ಬಗ್ಗೆ ಸಾಕಷ್ಟು ಇಂಟ್ರಸ್ಟಿಂಗ್ ವಿಷಯ ಹಂಚಿಕೊಂಡಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports