Last Updated:
KVN Production: ಟಾಕ್ಸಿಕ್, ಜನ ನಾಯಗನ್ನಂತಹ ಸಿನಿಮಾ ನಿರ್ಮಿಸಿದ ಖ್ಯಾತ ನಿರ್ಮಾಣ ಸಂಸ್ಥೆಯ ಹೆಸರಲ್ಲಿ ವಂಚನೆ ಮಾಡಿದ್ದು ಸದ್ಯ ದೂರು ದಾಖಲಾಗಿದೆ.
ಜನ ನಾಯಗನ್ (Jana Nayagan), ಟಾಕ್ಸಿಕ್ನಂತಹ ಬೃಹತ್ ಸಿನಿಮಾ ನಿರ್ಮಿಸಿರುವ ಕನ್ನಡದ ಪ್ರಸಿದ್ಧ ನಿರ್ಮಾಣ ಸಂಸ್ಥೆ ಕೆವಿಎನ್ ನಿರ್ಮಾಣ ಸಂಸ್ಥೆ (KVN Production House) ಹೆಸರಲ್ಲಿ ವಂಚನೆ ನಡೆದಿರುವ ಘಟನೆ ನಡೆದಿದೆ.
ಬಲರಾಮನ ದಿನಗಳು ನಿರ್ಮಾಪಕರಾದ ಶ್ರೇಯಸ್ ಹಾಗು ಪದ್ಮಾವತಿಯಿಂದ ನಿರ್ಮಾಪಕರ ಸಂಘಕ್ಕೆ ದೂರು ನೀಡಲಾಗಿದೆ. SSS ಕಂಪನಿ ಅಡಿಯಲ್ಲಿ ಸುಪ್ರೀತ್ ವ್ಯವಹಾರ ಮಾಡಿದ್ದು ಇಬ್ಬರಿಂದಲೂ ನಿರ್ಮಾಪಕರ ಸಂಘಕ್ಕೆ ದೂರು ನೀಡಲಾಗಿದೆ.
ಟಿವಿ ರೈಟ್ಸ್, ಡಿಜಿಟಲ್ ರೈಟ್ಸ್ ಡಿಸ್ಟ್ರಿಬ್ಯೂಷನ್ ವಿಷಯದಲ್ಲಿ ವಂಚನೆ ಆರೋಪ ಕೇಳಿ ಬಂದಿದೆ. ಥಿಯೇಟರ್ ಶೇರಿಂಗ್ ವಿಚಾರದಲ್ಲು ವಂಚನೆ ಆರೋಪ ಕೇಳಿ ಬಂದಿದೆ.
ಗೀತಾ ಹಾಸನ್, ನ್ಯೂಸ್18 ಕನ್ನಡ ಪ್ರತಿನಿಧಿ, ಬೆಂಗಳೂರು














