Last Updated:
ದರ್ಶನ್ ಅಭಿನಯದ ಚಕ್ರವರ್ತಿ ಆದ್ಮೇಲೆ ಕುಮಾರ್ ಬಂಗಾರ ಬಣ್ಣ ಹಚ್ಚಿದ್ದಾರೆ. ಸರ್ಕಾರಿ ನ್ಯಾಯ ಬೆಲೆ ಅಂಗಡಿ ಚಿತ್ರದಲ್ಲಿ ಇವರೇ ನಾಯಕರೂ ಆಗಿದ್ದಾರೆ. ಈ ಚಿತ್ರದ ಪ್ರಚಾರವು ಶುರು ಆಗಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಸರ್ಕಾರಿ ನ್ಯಾಯ ಬೆಲೆ ಅಂಗಡಿ (Sarkaari Nyayabele Angadi Movie) ಅನ್ನುವ ಚಿತ್ರ ಬರ್ತಿದೆ. ಈ ವಿಷಯದ ಮೇಲೆ ಬರ್ತಿರೋ ಮೊದಲ ಚಿತ್ರ ಇದಾಗಿದೆ. ಕುಮಾರ್ ಬಂಗಾರಪ್ಪ (Kumar Bangarappa) ಈ ಚಿತ್ರದ ಮೂಲಕ ಮತ್ತೆ ಬಣ್ಣ ಹಚ್ಚಿದ್ದಾರೆ. ಈ ತಿಂಗಳ ಕೊನೆಯಲ್ಲಿ ಈ ಸಿನಿಮಾ ಬರ್ತಿದೆ. ಇದರ ಪ್ರಚಾರಕ್ಕೆ ಕುಮಾರ್ ಬಂಗಾರಪ್ಪ (Kumar Bangarappa) ಸಾಥ್ ಕೊಟ್ಟಿದ್ದಾರೆ. ಸರ್ಕಾರಿ ನ್ಯಾಯ ಬೆಲೆ ಅಂಗಡಿ (Sarkaari Nyayabele Angadi) ಮುಂದೆ ಡ್ಯಾನ್ಸ್ ಕೂಡ ಮಾಡಿದ್ದಾರೆ. ಪ್ರಚಾರದ ಈ ವಿಡಿಯೋ ವೈರಲ್ ಕೂಡ ಆಗಿದೆ. ಈ ಚಿತ್ರದ ಇನ್ನಷ್ಟು ವಿವರ ಇಲ್ಲಿದೆ ಓದಿ.
ಚಿತ್ರ ಯಾವಾಗ ರಿಲೀಸ್ (ಚಿತ್ರ ಕೃಪೆ: ಫಸ್ಟ್ ಡೇ ಫ್ಟ್ ಶೋ ಇನ್ಸ್ಟಾಗ್ರಾಮ್)
ಆದರೆ, ಸರ್ಕಾರಿ ನ್ಯಾಯ ಬೆಲೆ ಅಂಗಡಿ ಚಿತ್ರದಲ್ಲಿ ಇವರು ನಾಯಕರಾಗಿದ್ದಾರೆ. ತುಂಬಾ ವರ್ಷಗಳ ಬಳಿಕ ಹೀರೋ ಆಗಿದ್ದಾರೆ. ಈ ಚಿತ್ರದ ಪ್ರಚಾರ ಶುರು ಆಗಿದೆ.
ಸರ್ಕಾರಿ ನ್ಯಾಯ ಬೆಲೆ ಅಂಗಡಿ ಮುಂದೆ ಡ್ಯಾನ್ಸ್ ಮಾಡಿದ್ದಾರೆ. ಚಿತ್ರ ತಂಡದ ಇತರ ಸದಸ್ಯರು ಹಾಗೂ ಡ್ಯಾನ್ಸರ್ಸ್ ಇವರಿಗೆ ಸಾಥ್ ಕೊಟ್ಟಿದ್ದಾರೆ.
ಈ ಡ್ಯಾನ್ ಸುಮ್ನೆ ಏನೂ ಅಲ್ಲ. ಸಿನಿಮಾದ ಪ್ರಚಾರಕ್ಕಾಗಿಯೇ ಈ ಕೆಲಸ ಮಾಡಿದ್ದಾರೆ. ಈ ಸಿನಿಮಾದಲ್ಲಿ ಒಳ್ಳೆ ವಿಷಯವೇ ಇದೆ. ಈ ವಿಷಯದ ಮೇಲೆ ಬರ್ತಿರೋ ಮೊದಲ ಕನ್ನಡ ಸಿನಿಮಾ ಇದಾಗಿದೆ ಅನ್ನುವ ಮಾಹಿತಿ ಸಿಗುತ್ತದೆ.
ಸರ್ಕಾರಿ ನ್ಯಾಯ ಬೆಲೆ ಅಂಗಡಿ ಚಿತ್ರದಲ್ಲಿ ಒಂದು ಟೈಟಲ್ ಟ್ರ್ಯಾಕ್ ಇದೆ. ಇದನ್ನ ಗಾಯಕ ನವೀನ್ ಸಜ್ಜು ಹಾಡಿದ್ದಾರೆ. ವಿಶೇಷವೆಂದ್ರೆ ಈ ಹಾಡಿನಲ್ಲಿ ಇವರೂ ಕಾಣಿಸಿಕೊಂಡಿದ್ದಾರೆ. ವಿ.ಮನೋಹರ್ ಇದನ್ನ ಬರೆದಿದ್ದಾರೆ. ಅನಂತ್ ಆರ್ಯನ್ ಮ್ಯೂಸಿಕ್ ಮಾಡಿದ್ದಾರೆ.
ಸರ್ಕಾರಿ ನ್ಯಾಯ ಬೆಲೆ ಅಂಗಡಿ ಪ್ರಚಾರ (ಚಿತ್ರ ಕೃಪೆ: ಫಸ್ಟ್ ಡೇ ಫ್ಟ್ ಶೋ ಇನ್ಸ್ಟಾಗ್ರಾಮ್)
ಹಾಗೆ ಚಿತ್ರದ ಪ್ರಚಾರಕ್ಕೆ ಈ ಹಾಡನ್ನೆ ಚಿತ್ರ ಆಯ್ಕೆ ಮಾಡಿಕೊಂಡಿದೆ. ಈ ಹಾಡಿಗೇನೆ ಸರ್ಕಾರಿ ನ್ಯಾಯ ಬೆಲೆ ಅಂಗಡಿ ಮುಂದೆ ಡ್ಯಾನ್ಸ್ ಕೂಡ ಮಾಡಿದ್ದಾರೆ. ಕುಮಾರ್ ಬಂಗಾರಪ್ಪ ಕೂಡ ಅಂಗಡಿ ಮುಂದೆ ಡ್ಯಾನ್ಸ್ ಮಾಡಿದ್ದಾರೆ ನೋಡಿ.
ಸರ್ಕಾರಿ ನ್ಯಾಯ ಬೆಲೆ ಅಂಗಡಿ ರಿಲೀಸ್ ಆಗುತ್ತಿದೆ. ಇದೇ ಜುಲೈ-31ರಂದು ಈ ಚಿತ್ರ ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಸಿನಿಮಾದ ಪ್ರಚಾರ ಶುರು ಆಗಿದೆ.
ಈ ಚಿತ್ರವನ್ನ ಸಾತ್ವಿಕ್ ಪವನ್ ಕುಮಾರ್ ಡೈರೆಕ್ಷನ್ ಮಾಡಿದ್ದಾರೆ. ವಿಶೇಷವೆಂದ್ರೆ ಇವರು ಈ ಚಿತ್ರದ ಕ್ಯಾಮರಾಮನ್ ಕೂಡ ಆಗಿದ್ದಾರೆ. ಇವರು ಈ ಹಿಂದೆ ತಾಯವ್ವ ಚಿತ್ರಕ್ಕೂ ಕೆಲಸ ಮಾಡಿದ್ದಾರೆ.
ಈ ಚಿತ್ರಕ್ಕೆ ಹಿರಿಯ ನಿರ್ದೇಶಕ ಬಿ. ರಾಮಮೂರ್ತಿ ಕತೆ ಬರೆದಿದ್ದಾರೆ. ಚಿತ್ರಕತೆಯನ್ನು ಕೂಡ ಇವರೇ ಮಾಡಿದ್ದಾರೆ. ಡೈಲಾಗ್ ಕೂಡ ಇವರೆ ಕೊಟ್ಟಿದ್ದಾರೆ. ಈ ಚಿತ್ರವನ್ನ ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲಿಯೇ ಸಂಪೂರ್ಣವಾಗಿಯೇ ಚಿತ್ರೀಕರಣ ಮಾಡಲಾಗಿದೆ ಅಂತಲೂ ಹೇಳಬಹುದು.
Bangalore [Bangalore],Bangalore,Karnataka














