Last Updated:
ಕುಲ್ಲು: ನಿರ್ಮಂದ್‌ನಲ್ಲಿ ಭೂಕುಸಿತದಿಂದ 200 ಮೀಟರ್ ರಸ್ತೆ ಕಣ್ಮರೆಯಾಗಿದೆ. ಬಾಗಿಪುಲ್-ಜಾವೊನ್ ರಸ್ತೆ ಬಂದ್ ಆಗಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಸೆಪ್ಟೆಂಬರ್ 3ರವರೆಗೆ ಮಳೆ ಮುಂದುವರಿಯುವ ಸಾಧ್ಯತೆ.
ಕುಲ್ಲು(ಆ.31): ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ನಿರ್ಮಂದ್‌ನಲ್ಲಿ ಸೋಮವಾರ ಮಳೆಯಿಲ್ಲದಿದ್ದರೂ ಭಾರೀ ಭೂಕುಸಿತ ಸಂಭವಿಸಿದೆ. ಭೂಕುಸಿತದಿಂದಾಗಿ ಸುಮಾರು 200 ಮೀಟರ್ ರಸ್ತೆ ಕಣ್ಮರೆಯಾಗಿದೆ. ಸೋಮವಾರ ಬೆಳಿಗ್ಗೆ ನಿರ್ಮಂದ್ ಉಪವಿಭಾಗದ ಬಾಗಿಪುಲ್ ಬಳಿ ಭೂಕುಸಿತ ಸಂಭವಿಸಿದ್ದು, ಬಾಗಿಪುಲ್-ಜಾವೊನ್ ರಸ್ತೆಯನ್ನು ನಿರ್ಬಂಧಿಸಲಾಗಿದೆ. ಭೂಕುಸಿತದ ವಿಡಿಯೋ ಕೂಡಾ ಕಾಣಿಸಿಕೊಂಡಿದೆ.














