KS Bharat: ಭಾರತ ತಂಡದಲ್ಲಿ ಸಿಗದ ಚಾನ್ಸ್! ಕೇವಲ 31 ವರ್ಷಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ನಿವೃತ್ತಿ ಘೋಷಿಸಿದ ಮಾಜಿ ಆರ್​​ಸಿಬಿ ಪ್ಲೇಯರ್ | ಕ್ರೀಡಾ ಸುದ್ದಿ | ACTPnews

ಕೆಎಸ್​​ ಭರತ್


Last Updated:

ಟೀಂ ಇಂಡಿಯಾ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಶ್ರೀಕರ್ ಭರತ್ ತಮ್ಮ 32ನೇ ವಯಸ್ಸಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಜೂನ್ 4ರಂದು ಸಾಮಾಜಿಕ ಜಾಲತಾಣದಲ್ಲಿ ಈ ವಿಷಯ ಬಹಿರಂಗಪಡಿಸಿದ್ದರು.

ಕೆಎಸ್​​ ಭರತ್
ಕೆಎಸ್​​ ಭರತ್

ಭಾರತ ತಂಡದ (Team India) ವಿಕೆಟ್ ಕೀಪರ್ ಮತ್ತು ಆರ್​​ಸಿಬಿ (RCB) ಮಾಜಿ ಸ್ಟಾರ್ ಕೋನಾ ಶ್ರೀಕಾರ್ ಭರತ್ (KS Bharat) ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಗುರುವಾರ ಇನ್‌ಸ್ಟಾಗ್ರಾಮ್ ಮೂಲಕ ಈ ನಿರ್ಧಾರವನ್ನು ಘೋಷಿಸಿದ್ದಾರೆ. ತಮ್ಮ ಪೋಸ್ಟ್‌ನಲ್ಲಿ, ಹೆಮ್ಮೆ ಮತ್ತು ಕೃತಜ್ಞತೆಯಿಂದ ಕ್ರೀಡೆಯಿಂದ ನಿವೃತ್ತಿ ಹೊಂದುತ್ತಿರುವುದಾಗಿ ಹೇಳಿದ್ದಾರೆ. ದೇಶಕ್ಕಾಗಿ ಆಡುವುದು ತಮ್ಮ ಜೀವನದ ಅತ್ಯಂತ ದೊಡ್ಡ ಗೌರವ ಎಂದು ಅವರು ವ್ಯಕ್ತಪಡಿಸಿದರು.

“ಅಗಾಧ ಹೆಮ್ಮೆ ಮತ್ತು ಕೃತಜ್ಞತೆಯಿಂದ, ನಾನು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುತ್ತಿದ್ದೇನೆ. ದೇಶಕ್ಕಾಗಿ ಆಡುವುದನ್ನು ನನ್ನ ಜೀವನದಲ್ಲಿ ನಾನು ಪಡೆದ ಅತ್ಯಂತ ದೊಡ್ಡ ಗೌರವವೆಂದು ನಾನು ಪರಿಗಣಿಸುತ್ತೇನೆ. ನನ್ನ ಈ ಪ್ರಯಾಣಕ್ಕೆ ಹೆಚ್ಚಿನ ದೃಢನಿಶ್ಚಯ ಮತ್ತು ಶಕ್ತಿಯ ಅಗತ್ಯವಿತ್ತು. ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶವನ್ನು ನನಗೆ ನೀಡಿದ ಅತ್ಯುನ್ನತ ಗೌರವವೆಂದು ನಾನು ಪರಿಗಣಿಸುತ್ತೇನೆ” ಎಂದು ಭರತ್ ಬರೆದುಕೊಂಡಿದ್ದಾರೆ.

ಇವರಿಗೆಲ್ಲಾ ವಿಶೇಷ ಧನ್ಯವಾದ ಅರ್ಪಿಸಿದ ಭರತ್

ನನ್ನ ವೃತ್ತಿಜೀವನದುದ್ದಕ್ಕೂ ನನ್ನೊಂದಿಗೆ ನಿಂತ ಬಿಸಿಸಿಐ, ಎಲ್ಲಾ ತರಬೇತುದಾರರು ಮತ್ತು ವ್ಯವಸ್ಥಾಪಕರಿಗೆ ನನ್ನ ಪ್ರಾಮಾಣಿಕ ಧನ್ಯವಾದ ಅರ್ಪಿಸುತ್ತೇನೆ. ಉನ್ನತ ಮಟ್ಟದಲ್ಲಿ ಆಡಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸಿದ್ದಕ್ಕಾಗಿ ಮತ್ತು ನಿರಂತರವಾಗಿ ನನ್ನನ್ನು ಬೆಂಬಲಿಸಿದ್ದಕ್ಕಾಗಿ ನಿಮ್ಮೆಲ್ಲರಿಗೂ ವಿಶೇಷ ಧನ್ಯವಾದಗಳು. ನನ್ನ ಎಲ್ಲಾ ತಂಡದ ಸದಸ್ಯರಿಗೆ ದೊಡ್ಡ ಧನ್ಯವಾದಗಳು. ನಾವು ಹಂಚಿಕೊಂಡ ಕ್ಷಣಗಳು ಮತ್ತು ನಾವು ಒಟ್ಟಿಗೆ ಸಾಧಿಸಿದ ವಿಜಯಗಳು ನನ್ನ ವೃತ್ತಿಜೀವನವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ. ನೀವೆಲ್ಲರೂ ಇಲ್ಲದಿದ್ದರೆ, ನನ್ನ ಕನಸನ್ನು ನನಸಾಗಿಸಲು ಅಥವಾ ಇಷ್ಟು ವರ್ಷಗಳ ಕಾಲ ಈ ಕ್ರೀಡೆಯನ್ನು ಆಡಲು ನನಗೆ ಸಾಧ್ಯವಾಗುತ್ತಿರಲಿಲ್ಲ ಎಂದು ಬರೆದುಕೊಂಡಿದ್ದಾರೆ.

ಕೊಹ್ಲಿ, ರೋಹಿತ್ ಮತ್ತು ದ್ರಾವಿಡ್ ಸರ್ ಅವರಿಗೆ ಧನ್ಯವಾದ

” ನನ್ನ ಪ್ರತಿಭೆಯನ್ನು ಸಾಬೀತುಪಡಿಸಲು ಮತ್ತು ಗುರುತಿಸಿಕೊಳ್ಳಲು ಅವಕಾಶವನ್ನು ಒದಗಿಸಿದ್ದಕ್ಕಾಗಿ ನನ್ನ ಐಪಿಎಲ್ ಚೊಚ್ಚಲ ನಾಯಕ ವಿರಾಟ್ ಕೊಹ್ಲಿಗೆ, ನನ್ನ ಟೆಸ್ಟ್ ನಾಯಕ ರೋಹಿತ್ ಶರ್ಮಾ ಮತ್ತು ನನ್ನ ಟೀಮ್ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಸರ್ ಅವರಿಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ. ಭಾರತ ‘ಎ’ ತಂಡದೊಂದಿಗೆ ನಾನು ಕೆಲಸ ಮಾಡಿದ ಸಮಯದಿಂದ ಟೀಮ್ ಇಂಡಿಯಾದವರೆಗೆ ಅವರು ನೀಡಿದ ಮಾರ್ಗದರ್ಶನವು ನಾನು ಎಂದಿಗೂ ಮರೆಯುವುದಿಲ್ಲ. ನಿಮ್ಮ ಬೆಂಬಲದಿಂದಲೇ ನಾನು ಭಾರತೀಯ ಟೆಸ್ಟ್ ಕ್ರಿಕೆಟಿಗನಾಗಲು ಸಾಧ್ಯವಾಯಿತು ಎಂದು ದ್ರಾವಿಡ್​​ಗೆ ವಿಶೇಷ ಧನ್ಯವಾದ ಅರ್ಪಿಸಿದ್ದಾರೆ.

ಕೋಚ್​​ ಆಗಿ ಎರಡನೇ ಇನ್ನಿಂಗ್ಸ್

ಬಿಸಿಸಿಐ ಮತ್ತು ಟೆಸ್ಟ್ ಕ್ರಿಕೆಟ್‌ನೊಂದಿಗಿನ ನನ್ನ ಪ್ರಯಾಣವು ಕೊನೆಗೊಂಡಿರಬಹುದು, ಆದರೆ ಈ ಕ್ರೀಡೆಯೊಂದಿಗೆ ನನ್ನ ಪ್ರಯಾಣವು ಮುಂದುವರಿಯುತ್ತದೆ. ಮುಂದಿನ ದಿನಗಳಲ್ಲಿ ಕ್ರಿಕೆಟ್​​​ನಲ್ಲಿ ಸಾಧನೆ ಮಾಡಬೇಕೆಂದು ಬಯಸುವ ಮುಂದಿನ ಪೀಳಿಗೆಯ ಪ್ರತಿಭೆಗಳಿಗೆ ಮಾರ್ಗದರ್ಶನ ಮತ್ತು ತರಬೇತಿಯನ್ನು ನೀಡಲು ನಾನು ಉದ್ದೇಶಿಸಿದ್ದೇನೆ ಎಂದು ಕೆ.ಎಸ್. ಭರತ್ ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಕೆಎಸ್​ ಭರತ್ ಕ್ರಿಕೆಟ್ ಅಂಕಿ ಅಂಶ

ಆಂಧ್ರಪ್ರದೇಶದ ವೈಜಾಗ್‌ನ 32 ವರ್ಷದ ಭರತ್ ತಮ್ಮ ವೃತ್ತಿಜೀವನದಲ್ಲಿ 7 ಟೆಸ್ಟ್ ಪಂದ್ಯಗಳು ಮತ್ತು 10 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. 2024ರ ಐಪಿಎಲ್ ಋತುವಿನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸದಸ್ಯರಾಗಿದ್ದರು. ರಣಜಿ ಟ್ರೋಫಿಯ ಇತಿಹಾಸದಲ್ಲಿ ವಿಕೆಟ್ ಕೀಪರ್-ಬ್ಯಾಟರ್ ಆಗಿ ಆಡುವಾಗ ತ್ರಿಶತಕ (308 ರನ್) ಗಳಿಸಿದ ಮೊದಲ ಆಟಗಾರ ಎಂಬ ದಾಖಲೆಯನ್ನು ಹೊಂದಿದ್ದಾರೆ. 2014-15 ರ ಋತುವಿನಲ್ಲಿ ಗೋವಾ ವಿರುದ್ಧ ಅವರು ಈ ದಾಖಲೆ ಬರೆದಿದ್ದರು.

2021ರ ಐಪಿಎಲ್ ಋತುವಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್‌ಸಿಬಿ ಪರ ಕೊನೆಯ ಎಸೆತದಲ್ಲಿ ಸಿಕ್ಸ್ ಬಾರಿಸುವ ಮೂಲಕ ಪಂದ್ಯವನ್ನು ಗೆದ್ದಿದ್ದು ಅವರ ವೃತ್ತಿಜೀವನದ ಪ್ರಮುಖ ಹೈಲೈಟ್ ಆಗಿದೆ. 113 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಕೆ.ಎಸ್. ಭರತ್ ಒಟ್ಟು 6,102 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ 11 ಶತಕಗಳು ಮತ್ತು 34 ಅರ್ಧಶತಕಗಳು ಸೇರಿವೆ. ವಿಕೆಟ್ ಕೀಪರ್ ಆಗಿ, ಅವರು 380 ಕ್ಯಾಚ್‌ಗಳನ್ನು ಪಡೆದಿದ್ದಾರೆ ಮತ್ತು 42 ಸ್ಟಂಪಿಂಗ್‌ಗಳನ್ನು ಮಾಡಿದ್ದಾರೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

KS Bharat: ಭಾರತ ತಂಡದಲ್ಲಿ ಸಿಗದ ಚಾನ್ಸ್! ಕೇವಲ 31 ವರ್ಷಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ನಿವೃತ್ತಿ ಘೋಷಿಸಿದ ಮಾಜಿ ಆರ್​​ಸಿಬಿ ಪ್ಲೇಯರ್



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed