Krishna Ajai Rao Movie: ಪಾರ್ಟ್ನರ್ ಚಿತ್ರದ ಅಮೋರಾ ಹಾಡು ರಿಲೀಸ್; ಮತ್ತೆ ಕನ್ನಡಕ್ಕೆ ಬಂದ ಕುನಾಲ್ ಗಾಂಜಾವಾಲ! | | ACTPnews

ಪಾರ್ಟ್ನರ್ ಚಿತ್ರದ ಅಮೋರಾ ಹಾಡು ರಿಲೀಸ್!


Last Updated:

ಅಜಯ್ ರಾವ್ ಹಾಗೂ ಬೃಂದಾ ಆಚಾರ್ಯ ಅಭಿನಯದ ಪಾರ್ಟ್ನರ್ ಸಿನಿಮಾ ಒಂದು ಪ್ರಶ್ನೆ ಹುಟ್ಟುಹಾಕಿದೆ. ಅಮೋರ ಅಂದರೆ ಏನು ಅನ್ನೋದೇ ಈ ಪ್ರಶ್ನೆ ಆಗಿದೆ. ಇದನ್ನ ಕುನಾಲ್ ಗಾಂಜಾವಾಲಾ ಹಾಡಿದ್ದಾರೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.

ಪಾರ್ಟ್ನರ್ ಚಿತ್ರದ ಅಮೋರಾ ಹಾಡು ರಿಲೀಸ್!
ಪಾರ್ಟ್ನರ್ ಚಿತ್ರದ ಅಮೋರಾ ಹಾಡು ರಿಲೀಸ್!

ಪಾಟ್ನರ್ ಚಿತ್ರದ (Partner Movie) ಮೊದಲ ಹಾಡು ರಿಲೀಸ್ ಆಗಿದೆ. ಅಮೋರ (Amora) ಅನ್ನುವ ಈ ಗೀತೆ ಜೆನ್ ಜಿ ಗಳಿಗೆ ಮಾಡಿರೋ ಗೀತೆನೇ ಆಗಿದೆ. ನಾಗಾರ್ಜುನ್ ಶರ್ಮಾ (Nagarjuna Sharma) ಬರೆದ ಈ ಹಾಡಿಗೆ ನಕುಲ್ ಅಭಯಂಕರ್ ಮ್ಯೂಸಿಕ್ ಮಾಡಿದ್ದಾರೆ. ವಿಶೇಷವೆಂದ್ರೆ ತುಂಬಾ ದಿನಗಳ ಬಳಿಕ ಬಾಲಿವುಡ್ ಗಾಯಕ ಕುನಾಲ್ ಗಾಂಜಾವಾಲ (Kunal Ganjawala) ಕನ್ನಡ ಹಾಡು ಹಾಡಿದ್ದಾರೆ. ಅದು ಈ ಅಮೋರ ಹಾಡೇ ಆಗಿದೆ. ಕೊರಿಯೋಗ್ರಾಫರ್ ಮುರಳಿ ಮಾಸ್ಟರ್ ಒಳ್ಳೆ ಸ್ಟೆಪ್ಸ್ ಕಂಪೋಸ್ ಮಾಡಿದ್ದಾರೆ. ಹಾಡು, ಡ್ಯಾನ್ಸು ಎಲ್ಲವೂ ಚೆನ್ನಾಗಿಯೇ ಇದೆ ಅಂತ ಈ ಹಾಡು ನೋಡಿದಾಗ ಅನಿಸುತ್ತದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ಅಮೋರ ಅಂದ್ರೇನು

ಅಮೋರ ಅಂದ್ರೆ ಇದಕ್ಕೆ ಬೇರೆ ಬೇರೆ ಅರ್ಥ ಇದೆ. ಸ್ಪ್ಯಾನಿಷ್ ಭಾಷೆಯಲ್ಲಿ ಇದನ್ನ ಪ್ರೀತಿ ಅಂತಲೇ ಕರೆಯುತ್ತಾರೆ. ಹಾಗೆ ಪಾರ್ಟ್ನರ್ ಚಿತ್ರದಲ್ಲಿ ಇದನ್ನ ಪ್ರೀತಿ ಅಂತಲೇ ಅರ್ಥೈಸಿದ್ದಾರೆ. ಈ ಜೆನ್ ಜಿಗಳನ್ನ ಮನದಲ್ಲಿ ಇಟ್ಟುಕೊಂಡೇ ನಾಗಾರ್ಜುನ್ ಶರ್ಮಾ ಈ ಒಂದು ಹಾಡನ್ನ ಬರೆದಿದ್ದಾರೆ.

Krishna Ajai Rao Brinda Acharya Partner Movie Amora Video Song Release

ಅಮೋರ ಅಂದ್ರೇನು

ನಕುಲ್ ಅಭಯಂಕರ್ ಇದನ್ನ ಅಷ್ಟೆ ಚೆನ್ನಾಗಿಯೇ ಕಂಪೋಸ್ ಮಾಡಿದ್ದಾರೆ. ಸೌಂಡಿಂಗ್ ಕೂಡ ಚೆನ್ನಾಗಿದೆ. ಆರಂಭದಲ್ಲಿ ಬರುವ ಟ್ಯೂನ್ ಕೂಡ ಆಕರ್ಷಕವಾಗಿದೆ. ಕೇಳಿದಾಕ್ಷಣದ ಸೆಳೆದು ಬಿಡುತ್ತದೆ.

ಕುನಾಲ್ ಗಾಂಜಾವಾಲ

ಬಾಲಿವುಡ್‌ ಗಾಯಕ ಕುನಾಲ್ ಗಾಂಜಾವಾಲಾ ಈ ಗೀತೆಯನ್ನ ಹಾಡಿದ್ದಾರೆ. ತುಂಬಾ ದಿನಗಳ ಬಳಿಕ ಈ ಒಂದು ಗೀತೆಯನ್ನ ಹಾಡಿದ್ದಾರೆ. ಕುನಾಲ್ ಧ್ವನಿಯಲ್ಲಿ ಅಮೋರ ಪದ ತುಂಬಾನೆ ಚೆನ್ನಾಗಿ ಕೇಳುತ್ತದೆ.

ಕೇಳುಗರಿಗೂ ಈ ಹಾಡು ಖುಷಿ ಕೊಡುತ್ತದೆ. ಕೋರಿಯೋಗ್ರಾಫರ್ ಮುರಳಿ ಒಳ್ಳೆ ಸ್ಟೆಪ್ಸ್‌ಗಳನ್ನೆ ಕಂಪೋಸ್ ಮಾಡಿದ್ದಾರೆ. ತುಂಬಾನೆ ಸರಳ ಅನಿಸೋ ಆಕರ್ಷಕ ಸ್ಟೆಪ್ಸ್ ಇಲ್ಲಿವೆ. ಬೃಂದಾ ಆಚಾರ್ಯ ಹಾಗೂ ಅಜಯ್ ರಾವ್ ಇದನ್ನ ತುಂಬಾನೆ ಚೆನ್ನಾಗಿ ಮಾಡಿದ್ದಾರೆ.

ನನ್ನ ಮನಸ್ಸಿಗೆ ಹತ್ತಿರ

ಅಜಯ್ ರಾವ್ ಮತ್ತು ಬೃಂದಾ ಆಚಾರ್ಯ ಈ ಚಿತ್ರದ ಈ ಹಾಡನ್ನ ಕೇಳಿ ಖುಷಿಪಟ್ಟಿದ್ದಾರೆ. ಅಷ್ಟೆ ಹುಮ್ಮಸ್ಸಿನಲ್ಲಿಯೇ ಈ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ.
Krishna Ajai Rao Brinda Acharya Partner Movie Amora Video Song Release

ನನ್ನ ಮನಸ್ಸಿಗೆ ಹತ್ತಿರ

ಈ ಚಿತ್ರದ ಕತೆ ಮತ್ತು ಇತರ ವಿಚಾರ ಅಂತ ಬಂದ್ರೆ, ಈ ಸಿನಿಮಾ ಅಜಯ್ ರಾವ್ ಅವರ ಹೃದಯಕ್ಕೆ ಹತ್ತಿರವಾಗಿದೆ. ತಮ್ಮ ಹೃದಯದ ಒಂದು ಭಾಗವನ್ನೆ ಈ ಚಿತ್ರಕ್ಕೆ ಹಾಕಿದ್ದೇನೆ ಅಂತಲೂ ಹೇಳಿಕೊಂಡಿದ್ದಾರೆ.

ಸಾಂಗ್ ರಿಲೀಸ್ ಇವೆಂಟ್

ಅಮೋರ ಸಾಂಗ್ ರಿಲೀಸ್ ಇವೆಂಟ್ ಅಲ್ಲಿ ಅಜಯ್ ರಾವ್ ಮತ್ತು ಬೃಂದಾ ಆಚಾರ್ಯ ಡ್ಯಾನ್ಸ್ ಮಾಡಿದ್ದಾರೆ. ಕೋರಿಯೋಗ್ರಾಫರ್ ಮುರಳಿ ಮಾಸ್ಟರ್ ಕೂಡ ಸಾಥ್ ಕೊಟ್ಟಿದ್ದಾರೆ.

ಇವರ ಈ ನೃತ್ಯ ಇಡೀ ಇವೆಂಟ್‌ಗೆ ಒಂದು ಹೊಸ ಮೆರಗು ಕೊಟ್ಟಿದೆ. ಚಿತ್ರದ ನಿರ್ದೇಶಕ ಶಿವತೇಜಸ್ ಈ ಚಿತ್ರವನ್ನ ಇಂದಿನ ಜೆನ್ ಜಿ ಗಳು ಪ್ರೀತಿ, ಮನಸ್ಥಿತಿಯನ್ನ ಇಟ್ಟುಕೊಂಡು ಮಾಡಿದ್ದಾರೆ. ಪ್ರೀತಿ ಅಂದ್ರೆ ಅದಲ್ಲ ಇದು ಅಂತ ತಿಳಿಸೋ ಕೆಲಸವನ್ನು ಮಾಡಿದ್ದಾರೆ.

ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸ

ಪಾರ್ಟ್ನರ್ ಚಿತ್ರದ ಶೂಟಿಂಗ್ ಕೆಲಸ ಎಲ್ಲ ಮುಗಿದಿದೆ. ಚಿತ್ರದ ಪೋಸ್ಟ್ ಪ್ರೋಡಕ್ಷನ್ ಕೆಲಸ ಇದೀಗ ನಡೆಯುತ್ತಿದೆ. ಈ ಚಿತ್ರದ ಮೊದಲ ಹಾಡು ಈಗ ಎಲ್ಲರ ಗಮನ ಸೆಳೆಯುತ್ತಿದೆ. ಇತ್ತೀಚಿಗೆ ಬಿಟ್ಟಿದ್ದ ಫಸ್ಟ್ ಲುಕ್ ಕೂಡ ಎಲ್ಲರಿಗೂ ಇಷ್ಟ ಆಗಿತ್ತು. ಹಾಡು ಅದನ್ನ ಇನ್ನಷ್ಟು ಜಾಸ್ತಿ ಮಾಡಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed