Duniya Vijay: ‘ಸಿಟಿ ಲೈಟ್ಸ್’ ಪ್ರೀಮಿಯರ್ ಶೋ; ವಿಶೇಷ ಹೆಣ್ಣುಮಕ್ಕಳಿಗೆ ದುನಿಯಾ ವಿಜಯ್ ಕೊಟ್ಟ ಸರ್ಪ್ರೈಸ್! | | ACTPnews

ಸ್ಮಶಾನದಲ್ಲಿ ಅಘೋರಿ ಮೀಟ್ ಆದ ಸಿಟಿ ಲೈಟ್ಸ್ ಡೈರೆಕ್ಟರ್!


Last Updated:

ದುನಿಯಾ ವಿಜಯ್ ಒಂದು ವಿಶೇಷ ಕೆಲಸ ಮಾಡಿದ್ದಾರೆ. ಸಿಟಿ ಲೈಟ್ಸ್ ಚಿತ್ರದ ಪ್ರೀಮಿಯರ್ ಶೋಗೆ ಆ ವಿಶೇಷ ಮಹಿಳೆಯರಿಗೆ ಆಹ್ವಾನ ನೀಡಿದ್ದಾರೆ. ಅವರನ್ನ ಹೂವು ಸುರಿಯೋ ಮೂಲಕ ವೆಲ್‌ಕಮ್ ಮಾಡಿದ್ದಾರೆ. ಇನ್ನು ಸುಮಾರು ವಿಚಾರಗಳಿವೆ. ಅದರ ವಿವರ ಇಲ್ಲಿದೆ ಓದಿ.

ಆ ವಿಶೇಷ ಹೆಣ್ಣುಮಕ್ಕಳಿಗೆ ಹೂ ಮಳೆ ಸುರಿಸಿದ ದುನಿಯಾ ವಿಜಯ್!(ಚಿತ್ರ ಕೃಪೆ: ದುನಿಯಾ ವಿಜಯ್ ಇನ್​ಸ್ಟಾಗ್ರಾಮ್)
ಆ ವಿಶೇಷ ಹೆಣ್ಣುಮಕ್ಕಳಿಗೆ ಹೂ ಮಳೆ ಸುರಿಸಿದ ದುನಿಯಾ ವಿಜಯ್!(ಚಿತ್ರ ಕೃಪೆ: ದುನಿಯಾ ವಿಜಯ್ ಇನ್​ಸ್ಟಾಗ್ರಾಮ್)

ದುನಿಯಾ ವಿಜಯ್ (Duniya Vijay) ಕೇವಲ ಒಂದು ಸಿಟಿ ಲೈಟ್ಸ್ ಚಿತ್ರ (City Lights) ಮಾಡಿಲ್ಲ. ಇರೋ ಸತ್ಯ ಹೇಳಿದ್ದಾರೆ. ಅಲ್ಲಿಗೆ ಮುಗಿತು ಅಂತ ಕೈ ತೊಳೆದುಕೊಳ್ಳುವ ಕೆಲಸವನ್ನು ಮಾಡಿಲ್ಲ. ಸಮಾಜದಲ್ಲಿ ನಮ್ಮ ನಡುವೆ ಇರೋ ನೊಂದ ಆ ಹೆಣ್ಣುಮಕ್ಕಳಿಗೆ ಗೌರವ ಕೊಟ್ಟಿದ್ದಾರೆ. ತಮ್ಮ ಚಿತ್ರದ ಪ್ರೀಮಿಯರ್‌ ಶೋಗೆ (Premiere Show) ಅವರನ್ನ ಆಹ್ವಾನಿಸಿದ್ದಾರೆ. ಅವರಿಗೆ ಹೂವನ್ನ ಸುರಿದು ಸ್ವಾಗತಿಸಿದ್ದಾರೆ. ಸೀರೆ ಕೊಡುವ ಕೆಲಸವು ಇಲ್ಲಾಗಿದೆ. ಈ ಒಂದು ವಿಶೇಷ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ.

ಸಿಟಿ ಲೈಟ್ಸ್ ಪ್ರೀಮಿಯರ್

ಸಿಟಿ ಲೈಟ್ಸ್ ಚಿತ್ರದ ಪ್ರೀಮಿಯರ್ ಶೋ ಇದೆ. ಈ ಒಂದು ಶೋಗೆ ವಿಶೇಷ ಅತಿಥಿಗಳು ಬರ್ತಿದ್ದಾರೆ ಅಂತ ಮೊನಿಷಾ ವಿಜಯ್ ಕುಮಾರ್ ಹೇಳಿದ್ದರು. ವಿನಯ್ ರಾಜ್‌ಕುಮಾರ್ ಕೂಡ ಇದನ್ನೆ ತಿಳಿಸಿದ್ದರು.
duniya vijay city lights movie premiere show updates

ಆ ವಿಶೇಷ ಹೆಣ್ಣುಮಕ್ಕಳಿಗೆ ಹೂ ಮಳೆ ಸುರಿಸಿದ ದುನಿಯಾ ವಿಜಯ್

(ಚಿತ್ರ ಕೃಪೆ: ಸಿಟಿ ಲೈಟ್ಸ್ ಸಿನಿಮಾ ಟೀಮ್)

ಇವರ ಈ ಒಂದು ಕುತೂಹಲದ ಮಾತುಗಳಿಗೆ ದುನಿಯಾ ವಿಜಯ್ ಕೂಡ ಸಾಥ್ ಕೊಟ್ಟದ್ದರು. ಗೆಸ್ ಮಾಡಿ ಅಂತಲೂ ದುನಿಯಾ ವಿಜಯ್ ಹೇಳಿದ್ದರು.

ನೊಂದ ಮಹಿಳೆಯರು

ನೊಂದ ಮಹಿಳೆಯರೇ ಈ ಶೋಗೆ ಬಂದಿದ್ದಾರೆ. ದುನಿಯಾ ವಿಜಯ್ ಅವರ ಆಹ್ವಾನಕ್ಕೆ ಗೌರವ ಕೊಟ್ಟಿದ್ದಾರೆ. ದುನಿಯಾ ವಿಜಯ್ ಈ ಹೆಣ್ಣುಮಕ್ಕಳನ್ನ ಹೂವಿನ ಮಳೆ ಸುರಿದು ಸ್ವಾಗತಿಸಿದ್ದಾರೆ.

ಚಿತ್ರದ ನಾಯಕ ನಟ ವಿನಯ್ ರಾಜ್‌ಕುಮಾರ್ ತಾಯಿ ಮಂಗಳ ರಾಘವೇಂದ್ರ ರಾಜ್‌ಕುಮಾರ್ ಇನ್ನೂ ಒಂದು ಕೆಲಸ ಮಾಡಿದ್ದಾರೆ. ಅದೇನು ಗೊತ್ತಾ? ಹೌದು, ಈ ಹೆಣ್ಣುಮಕ್ಕಳಿಗೆ ಮಂಗಳ ರಾಘವೇಂದ್ರ ರಾಜ್‌ಕುಮಾರ್ ಅವರು ಸೀರೆಯನ್ನ ಕೊಟ್ಟು ಗೌರವಿಸಿದ್ದಾರೆ.

ಹೆಣ್ಣುಮಕ್ಕಳ ಮಾತುಗಳು

ನೊಂದ ಹೆಣ್ಣುಮಕ್ಕಳ ಜೀವನ ಹೇಗೆ ಇರುತ್ತದೆ? ಅವರ ಆರೋಗ್ಯ ಹೇಗೆ ಇರುತ್ತದೆ? ಈ ಎಲ್ಲ ಪ್ರಶ್ನೆಗಳು ಹುಟ್ಟಿಕೊಳ್ಳುತ್ತದೆ. ಈ ಪ್ರಶ್ನೆಗೆಳಿಗೆ ತಮ್ಮ ಮಾತಿನ ಮೂಲಕವೇ ಈ ಹೆಣ್ಣುಮಕ್ಕಳು ಉತ್ತರ ಕೊಡುವ ಕೆಲಸ ಮಾಡಿದ್ದಾರೆ.

duniya vijay city lights movie premiere show updates

ಸಿಟಿ ಲೈಟ್ಸ್ ಇನ್ನು ಓಡ್ತಿದೆ…

(ಚಿತ್ರ ಕೃಪೆ: ದುನಿಯಾ ವಿಜಯ್ ಇನ್​ಸ್ಟಾಗ್ರಾಮ್)

ದಾರಿ ತಪ್ಪಿದವರ ಪಾಲಿಗೆ ಗೀತಮ್ಮನೇ ತಾಯಿ ಅನ್ನೋದನ್ನು ಇಲ್ಲಿಗೆ ಬಂದ ಹೆಣ್ಣುಮಗಳು ಹೇಳಿದ್ದಾರೆ. ಗೀತಮ್ಮ ಕೂಡ ಮಾತನಾಡಿದ್ದಾರೆ. ಹೆಣ್ಣುಮಕ್ಕಳಿಗೆ ತುಂಬಾನೆ ತೊಂದರೆ ಆಗುತ್ತಿತ್ತು. ಸಿಟಿ ಲೈಟ್ಸ್ ಅಲ್ಲಿ ತೋರಿಸಿರೋದು ನಿಜವೇ. ಆ ರೀತಿನೇ ನಡೀತಾ ಇತ್ತು ಅಂತಲೂ ಹೇಳಿದ್ದಾರೆ.

ಸಿಟಿ ಲೈಟ್ಸ್ ಇನ್ನು ಓಡ್ತಿದೆ…

ಸಿಟಿ ಲೈಟ್ಸ್ ಚಿತ್ರ ಓಡ್ತಿದೆ. ಜನ ಈ ಚಿತ್ರ ಮೆಚ್ಚಿಕೊಂಡಿದ್ದಾರೆ. ಇದರಲ್ಲಿ ಇರೋ ವಿಷಯವನ್ನು ಇಷ್ಟಪಟ್ಟಿದ್ದಾರೆ. ಈ ಚಿತ್ರ ನೋಡಿದ್ಮೇಲೆ ಡೈರೆಕ್ಟರ್ ಒಳ್ಳೆ ವಿಚಾರವನ್ನೆ ಹೇಳಿದ್ದಾರೆ ಅನ್ನುವ ಅಭಿಪ್ರಾಯವನ್ನು ಜನ ವ್ಯಕ್ತಪಡಿಸುತ್ತಿದ್ದಾರೆ.

ದುನಿಯಾ ವಿಜಯ್ ಕೂಡ ಈ ಚಿತ್ರವನ್ನ ಪ್ರಮೋಟ್ ಮಾಡ್ತಾನೇ ಇದ್ದಾರೆ. ಎಲ್ಲೆಡೆ ಥಿಯೇಟರ್‌ಗೆ ಹೋಗಿ ಎಲ್ಲ ಮಹಿಳೆಯರನ್ನು ಮಾತ್ ಆಡಿಸುತ್ತಿದ್ದಾರೆ.

ತಾವು ಚಿತ್ರದಲ್ಲಿ ಹೇಳಿದ ವಿಷಯ ಹೆಣ್ಣುಮಕ್ಕಳಿಗೆ ಇಷ್ಟ ಆಗ್ತಿದಿಯಾ? ಈ ಚಿತ್ರವನ್ನ ಹೆಣ್ಣುಮಕ್ಕಳು ನೋಡಬಹುದಾ ಅಂತಲೂ ಕೇಳ್ತಾ ಇದ್ದಾರೆ. ಇದು ನಿಜಕ್ಕೂ ಎಲ್ಲರ ಗಮನ ಸೆಳೆಯುತ್ತಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed