Last Updated:
ಅಜಯ್ ರಾವ್ ಹಾಗೂ ಬೃಂದಾ ಆಚಾರ್ಯ ಅಭಿನಯದ ಪಾರ್ಟ್ನರ್ ಸಿನಿಮಾ ಒಂದು ಪ್ರಶ್ನೆ ಹುಟ್ಟುಹಾಕಿದೆ. ಅಮೋರ ಅಂದರೆ ಏನು ಅನ್ನೋದೇ ಈ ಪ್ರಶ್ನೆ ಆಗಿದೆ. ಇದನ್ನ ಕುನಾಲ್ ಗಾಂಜಾವಾಲಾ ಹಾಡಿದ್ದಾರೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ಪಾಟ್ನರ್ ಚಿತ್ರದ (Partner Movie) ಮೊದಲ ಹಾಡು ರಿಲೀಸ್ ಆಗಿದೆ. ಅಮೋರ (Amora) ಅನ್ನುವ ಈ ಗೀತೆ ಜೆನ್ ಜಿ ಗಳಿಗೆ ಮಾಡಿರೋ ಗೀತೆನೇ ಆಗಿದೆ. ನಾಗಾರ್ಜುನ್ ಶರ್ಮಾ (Nagarjuna Sharma) ಬರೆದ ಈ ಹಾಡಿಗೆ ನಕುಲ್ ಅಭಯಂಕರ್ ಮ್ಯೂಸಿಕ್ ಮಾಡಿದ್ದಾರೆ. ವಿಶೇಷವೆಂದ್ರೆ ತುಂಬಾ ದಿನಗಳ ಬಳಿಕ ಬಾಲಿವುಡ್ ಗಾಯಕ ಕುನಾಲ್ ಗಾಂಜಾವಾಲ (Kunal Ganjawala) ಕನ್ನಡ ಹಾಡು ಹಾಡಿದ್ದಾರೆ. ಅದು ಈ ಅಮೋರ ಹಾಡೇ ಆಗಿದೆ. ಕೊರಿಯೋಗ್ರಾಫರ್ ಮುರಳಿ ಮಾಸ್ಟರ್ ಒಳ್ಳೆ ಸ್ಟೆಪ್ಸ್ ಕಂಪೋಸ್ ಮಾಡಿದ್ದಾರೆ. ಹಾಡು, ಡ್ಯಾನ್ಸು ಎಲ್ಲವೂ ಚೆನ್ನಾಗಿಯೇ ಇದೆ ಅಂತ ಈ ಹಾಡು ನೋಡಿದಾಗ ಅನಿಸುತ್ತದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಅಮೋರ ಅಂದ್ರೆ ಇದಕ್ಕೆ ಬೇರೆ ಬೇರೆ ಅರ್ಥ ಇದೆ. ಸ್ಪ್ಯಾನಿಷ್ ಭಾಷೆಯಲ್ಲಿ ಇದನ್ನ ಪ್ರೀತಿ ಅಂತಲೇ ಕರೆಯುತ್ತಾರೆ. ಹಾಗೆ ಪಾರ್ಟ್ನರ್ ಚಿತ್ರದಲ್ಲಿ ಇದನ್ನ ಪ್ರೀತಿ ಅಂತಲೇ ಅರ್ಥೈಸಿದ್ದಾರೆ. ಈ ಜೆನ್ ಜಿಗಳನ್ನ ಮನದಲ್ಲಿ ಇಟ್ಟುಕೊಂಡೇ ನಾಗಾರ್ಜುನ್ ಶರ್ಮಾ ಈ ಒಂದು ಹಾಡನ್ನ ಬರೆದಿದ್ದಾರೆ.
ಅಮೋರ ಅಂದ್ರೇನು
ನಕುಲ್ ಅಭಯಂಕರ್ ಇದನ್ನ ಅಷ್ಟೆ ಚೆನ್ನಾಗಿಯೇ ಕಂಪೋಸ್ ಮಾಡಿದ್ದಾರೆ. ಸೌಂಡಿಂಗ್ ಕೂಡ ಚೆನ್ನಾಗಿದೆ. ಆರಂಭದಲ್ಲಿ ಬರುವ ಟ್ಯೂನ್ ಕೂಡ ಆಕರ್ಷಕವಾಗಿದೆ. ಕೇಳಿದಾಕ್ಷಣದ ಸೆಳೆದು ಬಿಡುತ್ತದೆ.
ಬಾಲಿವುಡ್ ಗಾಯಕ ಕುನಾಲ್ ಗಾಂಜಾವಾಲಾ ಈ ಗೀತೆಯನ್ನ ಹಾಡಿದ್ದಾರೆ. ತುಂಬಾ ದಿನಗಳ ಬಳಿಕ ಈ ಒಂದು ಗೀತೆಯನ್ನ ಹಾಡಿದ್ದಾರೆ. ಕುನಾಲ್ ಧ್ವನಿಯಲ್ಲಿ ಅಮೋರ ಪದ ತುಂಬಾನೆ ಚೆನ್ನಾಗಿ ಕೇಳುತ್ತದೆ.
ಕೇಳುಗರಿಗೂ ಈ ಹಾಡು ಖುಷಿ ಕೊಡುತ್ತದೆ. ಕೋರಿಯೋಗ್ರಾಫರ್ ಮುರಳಿ ಒಳ್ಳೆ ಸ್ಟೆಪ್ಸ್‌ಗಳನ್ನೆ ಕಂಪೋಸ್ ಮಾಡಿದ್ದಾರೆ. ತುಂಬಾನೆ ಸರಳ ಅನಿಸೋ ಆಕರ್ಷಕ ಸ್ಟೆಪ್ಸ್ ಇಲ್ಲಿವೆ. ಬೃಂದಾ ಆಚಾರ್ಯ ಹಾಗೂ ಅಜಯ್ ರಾವ್ ಇದನ್ನ ತುಂಬಾನೆ ಚೆನ್ನಾಗಿ ಮಾಡಿದ್ದಾರೆ.
ನನ್ನ ಮನಸ್ಸಿಗೆ ಹತ್ತಿರ
ಈ ಚಿತ್ರದ ಕತೆ ಮತ್ತು ಇತರ ವಿಚಾರ ಅಂತ ಬಂದ್ರೆ, ಈ ಸಿನಿಮಾ ಅಜಯ್ ರಾವ್ ಅವರ ಹೃದಯಕ್ಕೆ ಹತ್ತಿರವಾಗಿದೆ. ತಮ್ಮ ಹೃದಯದ ಒಂದು ಭಾಗವನ್ನೆ ಈ ಚಿತ್ರಕ್ಕೆ ಹಾಕಿದ್ದೇನೆ ಅಂತಲೂ ಹೇಳಿಕೊಂಡಿದ್ದಾರೆ.
ಅಮೋರ ಸಾಂಗ್ ರಿಲೀಸ್ ಇವೆಂಟ್ ಅಲ್ಲಿ ಅಜಯ್ ರಾವ್ ಮತ್ತು ಬೃಂದಾ ಆಚಾರ್ಯ ಡ್ಯಾನ್ಸ್ ಮಾಡಿದ್ದಾರೆ. ಕೋರಿಯೋಗ್ರಾಫರ್ ಮುರಳಿ ಮಾಸ್ಟರ್ ಕೂಡ ಸಾಥ್ ಕೊಟ್ಟಿದ್ದಾರೆ.
ಇವರ ಈ ನೃತ್ಯ ಇಡೀ ಇವೆಂಟ್‌ಗೆ ಒಂದು ಹೊಸ ಮೆರಗು ಕೊಟ್ಟಿದೆ. ಚಿತ್ರದ ನಿರ್ದೇಶಕ ಶಿವತೇಜಸ್ ಈ ಚಿತ್ರವನ್ನ ಇಂದಿನ ಜೆನ್ ಜಿ ಗಳು ಪ್ರೀತಿ, ಮನಸ್ಥಿತಿಯನ್ನ ಇಟ್ಟುಕೊಂಡು ಮಾಡಿದ್ದಾರೆ. ಪ್ರೀತಿ ಅಂದ್ರೆ ಅದಲ್ಲ ಇದು ಅಂತ ತಿಳಿಸೋ ಕೆಲಸವನ್ನು ಮಾಡಿದ್ದಾರೆ.
ಪಾರ್ಟ್ನರ್ ಚಿತ್ರದ ಶೂಟಿಂಗ್ ಕೆಲಸ ಎಲ್ಲ ಮುಗಿದಿದೆ. ಚಿತ್ರದ ಪೋಸ್ಟ್ ಪ್ರೋಡಕ್ಷನ್ ಕೆಲಸ ಇದೀಗ ನಡೆಯುತ್ತಿದೆ. ಈ ಚಿತ್ರದ ಮೊದಲ ಹಾಡು ಈಗ ಎಲ್ಲರ ಗಮನ ಸೆಳೆಯುತ್ತಿದೆ. ಇತ್ತೀಚಿಗೆ ಬಿಟ್ಟಿದ್ದ ಫಸ್ಟ್ ಲುಕ್ ಕೂಡ ಎಲ್ಲರಿಗೂ ಇಷ್ಟ ಆಗಿತ್ತು. ಹಾಡು ಅದನ್ನ ಇನ್ನಷ್ಟು ಜಾಸ್ತಿ ಮಾಡಿದೆ ಅಂತ ಹೇಳಬಹುದು.
Bangalore [Bangalore],Bangalore,Karnataka














