ಈ ಚಿತ್ರದಲ್ಲಿ ವಾರ್ ಇದೆ. ಟೈಟಲ್ ಅಲ್ಲಿ ಹೇಳಿದಂತೆ ಪ್ರೀತಿನೂ ಇದೆ. ಹಾಗಾಗಿಯೇ ಚಿತ್ರಕ್ಕೆ ಲವ್ ಆ್ಯಂಡ್ ವಾರ್ ಅಂತ ಶೀರ್ಷಿಕೆ ಇದೆ. ಸಂಜಯ್ ಲೀಲಾ ಬನ್ಸಾಲಿ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ.
ಚಿತ್ರದ ಎರಡು ಪೋಸ್ಟರ್ ರಿಲೀಸ್
(ಚಿತ್ರ ಕೃಪೆ: ರಣಬೀರ್ ಕಪೂರ್ ಇನ್ಸ್ಟಾಗ್ರಾಮ್)
ಲವ್ ಆ್ಯಂಡ್ ವಾರ್ ಚಿತ್ರದ ಪ್ರಮುಖ ಭಾಗದ ಶೂಟಿಂಗ್ ಪೂರ್ಣ ಆಗಿದೆ. ಚಿತ್ರೀಕರಣದ ನಂತರದ ಕೆಲಸವು ಭರದಿಂದಲೆ ಸಾಗಿದೆ. ಹಾಗೆ ಈ ಚಿತ್ರದಲ್ಲಿ ಯುದ್ಧದವೂ ಇದೆ.
ಲವ್ ಆ್ಯಂಡ್ ವಾರ್ ಚಿತ್ರ ಮುಂದಿನ ವರ್ಷ ತೆರೆ ಕಾಣುತ್ತಿದೆ. ಈ ಚಿತ್ರ ಜನವರಿ-21,2027 ರಂದು ರಿಲೀಸ್ ಆಗುತ್ತಿದೆ. ಈ ವಿಷಯ ಅಧಿಕೃತವಾಗಿಯೇ ಹೊರ ಬಂದಿದೆ.
ರಣಬೀರ್ ಕಪೂರ್ ಇರೋ ಪೋಸ್ಟರ್ ಕೆಳಗೆ ಈ ರಿಲೀಸ್ ಡೇಟ್ ಇದೆ. ಇನ್ನು ಈಗ ಬಿಟ್ಟಿರೋ ಪೋಸ್ಟರ್ ಅಲ್ಲಿ ರಣಬೀರ್ ಲುಕ್ ಸಖತ್ ಆಗಿದೆ.
ಚಿತ್ರ ಮುಂದಿನ ವರ್ಷ ರಿಲೀಸ್
(ಚಿತ್ರ ಕೃಪೆ: ರಣಬೀರ್ ಕಪೂರ್ ಇನ್ಸ್ಟಾಗ್ರಾಮ್)
ಲವ್ ಆ್ಯಂಡ್ ವಾರ್ ಚಿತ್ರದ ರಣಬೀರ್ ಲುಕ್ ಸಖತ್ ಆಗಿದೆ. ಆ ದಿನಗಳ ಸ್ಟೈಲಿಶ್ ವ್ಯಕ್ತಿ ಅನಿಸುತ್ತಾರೆ. ನೀಲಿ ಬಣ್ಣದ ವಿಂಟೇಜ್ ಕಾರ್ ಚಲಾಯಿಸುತ್ತಿದ್ದಾರೆ.
ಮುಖದಲ್ಲಿ ಯಾವುದೇ ಬದಲಾವಣೆ ಇಲ್ಲ. ಆತಂಕವೂ ಇಲ್ಲ. ಧರಿಸಿದ ಬಿಳಿ ಬಣ್ಣದ ಟೀ ಶರ್ಟ್ ಕೂಡ ಗಲೀಜ್ ಆಗಿಲ್ಲ. ಆದರೆ, ಎಡಗೈ ಮೇಲೆ ರಕ್ತ ಇದೆ.
ರಣಬೀರ್ ಕಪೂರ್ ಪಾತ್ರದ ಎರಡು ಪೋಸ್ಟರ್ ಹೊರ ಬಂದಿವೆ. ಎರಡರಲ್ಲೂ ಒಂದೇ ಲುಕ್ ಇದೆ. ಆದರೆ, ಕಾರ್ ಅಲ್ಲಿರೋ ಪೋಸ್ಗಳು ಬೇರೆ ಬೇರೆ ಇವೆ.
ಈ ಪೋಸ್ಟರ್ಗಳನ್ನ ಸ್ವತಃ ರಣಬೀರ್ ಕಪೂರ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಮೂಲಕ ಲವ್ ಆ್ಯಂಡ್ ವಾರ್ ಚಿತ್ರದಲ್ಲಿ ತಮ್ಮ ಪಾತ್ರ ಹೇಗೆ ಇರುತ್ತದೆ ಅಂತಲೂ ತಿಳಿಸಿದ್ದಾರೆ ಅಂತ ಹೇಳಬಹುದು.













