Last Updated:
ಕೃಷಿ ತಾಪಂಡ ಫಸ್ಟ್ ಸಿನಿಮಾ ಯಾವುದು? ಸಿನಿಮಾರಂಗಕ್ಕೆ ಕೃಷಿ ಬಂದಿರೋದು ಹೇಗೆ? ಫೇಸ್ ಬುಕ್ ಅಲ್ಲಿ ಮೆಸೇಜ್ ಹಾಕಿದ ಆ ಹೀರೋ ಯಾರು? ಇತರ ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ ಓದಿ.
ಕೃಷಿ ತಾಪಂಡ (krishi thapanda) ಫ್ಯಾಮಿಲಿಯಲ್ಲಿ ಯಾರು ಸಿನಿಮಾದಲ್ಲಿ ಇಲ್ವೇ ಇಲ್ಲ. ಆದರೆ, 2014 ರಲ್ಲಿ ಕೃಷಿ ತಾಪಂಡ ಮಿಸ್ ಕರ್ನಾಟಕ ಆದರು. ಈ ಸಮಯದಲ್ಲಿ ಕೃಷಿ ತಾಪಂಡ (Krishi Tapanda) ಕಂಪನಿಯೊಂದರಲ್ಲಿ ಕೆಲಸ ಕೂಡ ಮಾಡ್ತಾ ಇದ್ದರು. ಮಿಸ್ ಕರ್ನಾಟಕ ಸ್ಪರ್ಧೆ ಹಾಗೆ ಸುಮ್ನೆ ಟ್ರೈ ಮಾಡಿದ್ದರು. ಅದೃಷ್ಟಕ್ಕೆ ಸೆಲೆಕ್ಟೂ ಆದರು. ವಿನ್ ಕೂಡ ಆದರು. ಆದರೆ, ಅದೆಲ್ಲ ಒಳ್ಳೆ ಅನುಭವ ಅಂತ ಹೇಳಿಕೊಂಡು, ಎಂದಿನಂತೆ ತಮ್ಮ ಕೆಲಸದಲ್ಲಿಯೇ ಬ್ಯುಸಿ ಆದರು. ಆದರೆ, ಇವರಿಗೆ ಫೇಸ್ ಬುಕ್ (Face Book) ಅಲ್ಲಿ ಮೆಸೇಜ್ ಬರ್ತಾನೇ ಹೋದವು. ಅದರಲ್ಲಿ ನಟ ಅನೀಷ್ ತೇಜೇಶ್ವರ್ (Anish Tejeshwar) ಮೆಸೇಜ್ ಮಾಡಿದರು. ಅವರ ಒಂದು ಒತ್ತಾಯಕ್ಕೆ ಸ್ಟಾರ್ ಬಗ್ಸ್ ಅಲ್ಲಿ ಮೀಟಿಂಗ್ ಅರೇಂಜ್ ಆಗಿತ್ತು. ಮುಂದೆ ಏನಾಯಿತು ಅನ್ನೋದನ್ನ ಸ್ವತಃ ಕೃಷಿ ತಾಪಂಡ ಹೇಳಿಕೊಂಡಿದ್ದಾರೆ. ಇವರ ಮಾತುಗಳ ಸಂಪೂರ್ಣ ವಿವರ ಇಲ್ಲಿದೆ ಓದಿ.
ಕೋರಮಂಗಲದ ನಮ್ಮ ಆಫೀಸ್ ಹತ್ತಿರವೇ ಅಕಿರಾ ಚಿತ್ರದ ಆಫೀಸ್ ಇತ್ತು. ನಮ್ಮ ಆಫೀಸ್‌ನಿಂದ 100 ಮೀಟರ್ ದೂರದಲ್ಲಿಯೇ ಇತ್ತು. ಆದರೂ, ಸ್ಟಾರ್ ಬಗ್ಸ್ ಅಲ್ಲಿ ನಮ್ಮ ಮೀಟಿಂಗ್ ಇತ್ತು.
ಕಂಪನಿ ಕೆಲಸ ಬಿಟ್ಟೆ
(ಚಿತ್ರ ಕೃಪೆ: ಕೃಷಿ ತಾಪಂಡ ಇನ್‌ಸ್ಟಾಗ್ರಾಮ್)
ಒಂದು ಕಡೆಗೆ ಡೈರೆಕ್ಟರ್ ನವೀನ್ ರೆಡ್ಡಿ ಇದ್ದರು. ಮತ್ತೊಂದು ಕಡೆಗೆ ನಾಯಕ ಅನೀಷ್ ತೇಜ್ವರ್ ಇದ್ದರು. ಡೈರೆಕ್ಟರ್ ನವೀನ್ ರೆಡ್ಡಿ ಕಥೆ ಮತ್ತು ಕ್ಯಾರೆಕ್ಟರ್ ಹೀಗೆ ಸುಮಾರು ವಿಚಾರಗಳೆಲ್ಲವನ್ನು ಹೇಳಿದರು. ಆದರೆ, ನನಗೋ ಏನು ಅರ್ಥ ಆಗ್ತಾನೇ ಇಲ್ಲ. ಸಿನಿಮಾ ಬಗ್ಗೆ ನನಗೆ ಏನೂ ಗೊತ್ತು ಇರಲಿಲ್ಲ.
ನವೀನ್ ರೆಡ್ಡಿ ನನ್ನ ಜೊತೆಗೆ 2 ಗಂಟೆ ಮಾತನಾಡಿದರು. ಕೊನೆಗೆ ನಾನು ನಮ್ಮ ಕಚೇರಿಗೆ ಬಂದೆ. ಆಗಲೇ ನವೀನ್ ರೆಡ್ಡಿ ಕಾಲ್ ಮಾಡಿದರು. ನೀವು ನಮ್ಮ ಚಿತ್ರದಲ್ಲಿ ನಟಿಸಬೇಕು. ಹಾಗಾಗಿಯೇ ಅಗ್ರೀಮೆಂಟ್ ಸೈನ್ ಮಾಡಿ ಅಂತಲೇ ಹೇಳಿದರು.
ಈ ರೀತಿ ನನ್ನ ಸಿನಿಮಾ ಜರ್ನಿ ಶುರು ಆಯಿತು. ಅಕಿರಾ ನನ್ನ ಮೊದಲ ಚಿತ್ರವೇ ಆಗಿದೆ. ಈ ಚಿತ್ರದ ಶೂಟಿಂಗ್ ನಾರ್ವೆ ದೇಶದಲ್ಲೂ ಆಗಿದೆ. ಇದರಲ್ಲಿ ಟಾಮ್ ಬಾಯ್ ರೋಲ್ ಮಾಡಿದ್ದೇನೆ.
ಅಕಿರಾ ಸಿನಿಮಾದ ಶೂಟಿಂಗ್ ಸಮಯದಲ್ಲಿಯೇ ಕಹಿ ಚಿತ್ರದ ಆಫರ್ ಬಂತು. ಇದು ಲೋ ಬಜೆಟ್ ಸಿನಿಮಾ ಆಗಿತ್ತು. ಇದರಲ್ಲಿ ಟೀಚರ್ ಪಾತ್ರ ಮಾಡಿದ್ದೆ. ಈ ಪಾತ್ರಕ್ಕೆ ಮಾತುಗಳು ಕಡಿಮೆ ಇದ್ದವು.
ಆ ದಿನ ಹೀಗೆ ಆಯಿತು…
(ಚಿತ್ರ ಕೃಪೆ: ಕೃಷಿ ತಾಪಂಡ ಇನ್‌ಸ್ಟಾಗ್ರಾಮ್)
ಆದರೆ, ಅಕಿರಾ ಚಿತ್ರದಲ್ಲಿ ಲಾವಣ್ಯ ಅನ್ನುವ ರೋಲ್ ಮಾಡಿದ್ದೆ. ಇದು ತುಂಬಾನೆ ಮಾತನಾಡೋ ರೋಲ್ ಆಗಿದೆ. ಹೀಗೆ ಒಂದೇ ಸಮಯದಲ್ಲಿಯೇ ಎರಡು ರೀತಿಯ ಚಿತ್ರ ಮಾಡಿರೋ ಅನುಭವ ನನಗೆ ಇದೆ.
ಆದರೆ, ಸಿನಿಮಾ ಮಾಡ್ತಾನೇ ಇರೋವಾಗ ಏನು ಮಾಡೋದು ಅಂತ ಯೋಚನೆ ಮಾಡ್ತನೇ ಇದ್ದೆ. 19 ನೇ ವಯಸ್ಸಿಗೇನೆ ಕೆಲಸ ಕೊಟ್ಟ ಕಂಪನಿ ಅದಾಗಿತ್ತು. ಟೀಮ್ ಲೀಡರ್ ಕೂಡ ಆಗಿದ್ದೆ.
Bangalore [Bangalore],Bangalore,Karnataka













