Last Updated:
Vaishakh: ವೈಶಾಖ್ ಸ್ನೇಹಿತ ಹೇಳಿದ್ದೇನು? ಎಷ್ಟೋ ವರ್ಷಗಳಿಂದ ಮಾತು ಬಿಟ್ಟಿದ್ದರಾ ಅರ್ಜುನ್ ಹಾಗೂ ವೈಶಾಖ್? ಬಾಲ್ಯದ ಗೆಳೆಯನ ನೋಡೋಕೆ ಬಂದ ಅರ್ಜುನ್ ಹೇಳಿದ್ದೇನು?
ಕೃಷಿ ತಾಪಂಡ (Krishi Thapanda) ಮನೆತಲ್ಲಿ ಉದ್ಯಮಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಈಗ ಭಾರೀ ಸುದ್ದಿಯಾಗಿದೆ. ಕೃಷಿ ತಾಪಂಡ ಅವರ ಆರ್ ಆರ್ ನಗರದ ಮನೆಯಲ್ಲಿ ಕೃಷಿ ತಾಪಂಡ ಗೆಳೆಯ ವೈಶಾಖ್ (Vaishakh) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೆದ ಒಂದು ತಿಂಗಳಿಂದ ವೈಶಾಖ್ ಅವರು ಪತ್ನಿ ಮೇಘಾ, ಮಗ, ತಂದೆಯ ಜೊತೆ ಸಂಪರ್ಕದಲ್ಲಿರಲಿಲ್ಲ ಎನ್ನಲಾಗಿದೆ. ವೈಶಾಖ್ ಅವರು ಪತ್ನಿಗೆ ಕಾಲ್ ಅಥವಾ ಮೆಸೇಜ್ ಕೂಡಾ ಮಾಡಿರಲಿಲ್ಲ. ಅವರಿಬ್ಬರೂ ಮಾತನಾಡುತ್ತಿರಲಿಲ್ಲ, ವೈಶಾಖ್ ಮೇಘಾ ಜೊತೆ ಇರಲು ಒಪ್ಪುತ್ತಿರಲಿಲ್ಲ ಎನ್ನಲಾಗಿದೆ.
ಹೀಗಿದ್ದರೂ ಈಗ ಇನ್ನೊಂದು ವಿಚಾರ ರಿವೀಲ್ ಆಗಿದೆ. ವೈಶಾಖ್ ತನ್ನ ಕುಟುಂಬದ ಜೊತೆಗಷ್ಟೇ ಅಲ್ಲ ಬಾಲ್ಯದ ಸ್ನೇಹಿತನ ಜೊತೆಗೂ ಮಾತು ಬಿಟ್ಟಿದ್ದರು ಎನ್ನುವುದು ರಿವೀಲ್ ಆಗಿದೆ. ಮೃತ ವೈಶಾಕ್ ಸ್ನೇಹಿತ ಅರ್ಜುನ್ ಹೇಳಿಕೆ ಕೊಟ್ಟಿದ್ದಾರೆ.
ಚಿಕ್ಕವಯಸ್ಸಿನಿಂದ ಸ್ನೇಹಿತರಾಗಿದ್ದೀವಿ. ಅವನ ಜೊತೆ ಮಾತು ಬಿಟ್ಟು ಸುಮಾರು ವರ್ಷಗಳಾಗಿದೆ. ಯಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅನ್ನೋದು ಗೊತ್ತಿಲ್ಲ. ಯಾವುದೇ ವಿಚಾರಗಳ ಬಗ್ಗೆ ಕೂಡ ಹೇಳಿಕೊಂಡಿರಲಿಲ್ಲ ಎಂದಿದ್ದಾರೆ.
ನಿನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಬೆಳಿಗ್ಗೆ ಅವರ ತಂದೆ ಕಾಲ್ ಮಾಡಿದ್ದರು. ಹೀಗೆ ಆಗಿದೆ ಅಂದರು. ಅದಕ್ಕಾಗಿ ಬಂದೆ. ಅವರ ತಂದೆ ದೂರು ಕೊಟ್ಟಿದ್ದಾರೆ. ಏನಾಗಿದೆ ಅನ್ನೋದು ತಿಳಿದು ಬರಬೇಕಿದೆ ಎಂದಿದ್ದಾರೆ.
ವೈಶಾಖ್ ಅವರು ತಂದೆ, ಪತ್ನಿ, ಮಗನನ್ನ ಬಿಟ್ಟು ದೂರ ಇದ್ದರು. ಒಂದು ತಿಂಗಳಿಂದಲೂ ಪತ್ನಿಗೆ ಕಾಲ್, ಮೆಸೇಜ್ ಮಾಡಿರಲಿಲ್ಲ. ಅದಕ್ಕೂ ಮುನ್ನ ಕೌಟುಂಬಿಕ ಕಲಹದ ಬಗ್ಗೆ ಮುತುವರ್ಜಿ ವಜಿಸಿದ್ದ ಇಬ್ಬರ ಕುಟುಂಬಸ್ಥರು ಮಾತನಾಡಿದ್ದರು. ಆದರೆ ಪತ್ನಿ ಜೊತೆ ಮತ್ತೆ ಉಳಿದುಕೊಳ್ಳಲು ವೈಶಾಖ್ ನಿರಾಕರಿಸಿದ್ದರು.
ಒಂದು ತಿಂಗಳಿಂದ ಕುಟುಂಬಸ್ಥರ ಸಂಪರ್ಕ ಇಲ್ಲದೇ ಇದ್ದ ವೈಶಾಖ್ ಡಿಪ್ರೆಶನ್ ನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಸಾಯುವುದಕ್ಕೂ ಮೊದಲು ವೈಶಾಖ್ಗೆ ಮಗನ ನೆನಪು ಕಾಡಿತ್ತು ಎನ್ನಲಾಗಿದ್ದು ಒಂದು ತಿಂಗಳಿಂದ ಮೆಸೇಜ್ ಕಾಲ್ ಕೂಡ ಮಾಡದಿದ್ದರೂ ವೈಶಾಕ್ ಸಾಯುವ ಮುನ್ನ ಪತ್ನಿಗೆ ಮೆಸೇಜ್ ಮಾಡಿದ್ದರು ಎನ್ನಲಾಗಿದೆ.
ವರದಿ: ಮಂಜುನಾಥ್ ಎನ್. ನ್ಯೂಸ್18 ಕನ್ನಡ ಪ್ರತಿನಿಧಿ ಬೆಂಗಳೂರು
Bangalore [Bangalore],Bangalore,Karnataka













