Akash Deep: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆಕಾಶ್ ದೀಪ್, ಆದರೆ ಧೋನಿ, ಕೊಹ್ಲಿಗೆ ಮದುವೆಗೆ ಆಹ್ವಾನ ನೀಡಿಲ್ಲ ಏಕೆ? | ಕ್ರೀಡಾ ಸುದ್ದಿ | ACTPnews

ಅಕ್ಷಿತಾ ರಾಜ್​ ಜೊತೆ ಆಕಾಶ್ ದೀಪ್ ಮದುವೆ


Last Updated:

ಟೀಂ ಇಂಡಿಯಾ ವೇಗಿ ಆಕಾಶ್ ದೀಪ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಮದುವೆಗೆ ಸಂಬಂಧಿಸಿದ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ಮದುವೆಗೆ ವಿರಾಟ್ ಕೊಹ್ಲಿ ಮತ್ತು ಧೋನಿ ಅವರಿಗೆ ಆಹ್ವಾನವನ್ನೇ ನೀಡಿಲ್ಲ ಎಂದು ಆಕಾಶ್ ದೀಪ್ ತಿಳಿಸಿದ್ದಾರೆ.

ಅಕ್ಷಿತಾ ರಾಜ್​ ಜೊತೆ ಆಕಾಶ್ ದೀಪ್ ಮದುವೆ
ಅಕ್ಷಿತಾ ರಾಜ್​ ಜೊತೆ ಆಕಾಶ್ ದೀಪ್ ಮದುವೆ

ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ (Team India), ವೇಗದ ಬೌಲರ್ (Fast Bowler) ಆಕಾಶ್ ದೀಪ್ ವಾರಣಾಸಿಯಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಅಕ್ಷಿತಾ ರಾಜ್ (Akashdeep and Akshita Raj) ಎಂಬಾಕೆಯ ಕೈ ಹಿಡಿದಿರುವ ಆಕಾಶ್, ತಮ್ಮ ಮದುವೆ ಸಂಭ್ರಮದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಟೀಂ ಇಂಡಿಯಾ ಅಭಿಮಾನಿಗಳು ನವದಂಪತಿಗೆ ಶುಭಕೋರಿ ಪೋಸ್ಟ್​​ಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಆದರೆ ಈ ವಿವಾಹ ಕಾರ್ಯಕ್ರಮಕ್ಕೆ (Marriage) ಹಾಜರಾಗಿದ್ದ ಅತಿಥಿಯೊಬ್ಬರು ಒಂದು ಆಸಕ್ತಿಯುತ ಪ್ರಶ್ನೆ ಕೇಳಿದ್ದು, ಪ್ರಶ್ನೆಗೆ ಆಕಾಶ್​ ಇಂಟ್ರೆಸ್ಟಿಂಗ್ ಉತ್ತರ ನೀಡಿದ್ದಾರೆ.

ಟೀಂ ಇಂಡಿಯಾ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ಎಂಎಸ್ ಧೋನಿ ಅವರಿಗೆ ಮದುವೆ ಏಕೆ ಆಹ್ವಾನ ನೀಡಿಲ್ಲ ಎಂದು ಅತಿಥಿಯೊಬ್ಬರು ಆಕಾಶ್ ಅವರನ್ನು ಪ್ರಶ್ನಿಸಿದ್ದರು. ಈ ವೇಳೆ ಉತ್ತರಿಸಿದ ಆಕಾಶ್ ದೀಪ್, ಅವರಿಬ್ಬರು ಬಂದರೇ ಇಲ್ಲಿ ವಾರಣಾಸಿಯಲ್ಲಿ ಮದುವೆ ನಡೆಯಲು ಬಿಡ್ತಾರಾ? ಎಂದು ಫನ್ನಿಯಾಗಿ ಉತ್ತರಿಸಿದ್ದಾರೆ.

ಧೋನಿ, ಕೊಹ್ಲಿ, ರೋಹಿತ್ ರಂತಹ ಸ್ಟಾರ್ ಆಟಗಾರರು ಮದುವೆಗೆ ಆಗಮಿಸಿದರೆ ಭಾರೀ ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ಇಲ್ಲಿ ಬರ್ತಾರೆ. ಇದರಿಂದ ಮದುವೆ ಕಾರ್ಯಕ್ರಮ ಶಾಂತಿಯಿಂದ ನಡೆಯೋದಿಲ್ಲ ಎಂಬ ಅರ್ಥದಲ್ಲಿ ಆಕಾಶ್ ದೀಪ್ ಕಾಮೆಂಟ್ ಮಾಡಿದ್ದಾರೆ.

ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿ ಗಮನಸೆಳೆದ ಆಕಾಶ್ ದೀಪ್ ಆ ಬಳಿಕ ದೇಶೀಯ ಕ್ರಿಕೆಟನಲ್ಲೂ ಮಿಂಚಿನ ಪ್ರದರ್ಶನ ನೀಡಿದ್ದರು. ಇದರೊಂದಿಗೆ ಅವರಿಗೆ ಟೀಂ ಇಂಡಿಯಾದಲ್ಲಿ ಆಡುವ ಅವಕಾಶ ಸಿಕ್ತು. ಅದರಲ್ಲೂ ಟೆಸ್ಟ್ ಕ್ರಿಕೆಟ್ ತಂಡದಲ್ಲಿ ಆಕಾಶ್ ದೀಪ್ ಅವರಿಗೆ ಅವಕಾಶ ಸಿಕ್ಕಿ, ಅವರ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದರು. ಇದುವರೆಗೂ 10 ಟೆಸ್ಟ್ ಪಂದ್ಯಗಳನ್ನು ಆಡಿರುವ ಆಕಾಶ್ ದೀಪ್ 28 ವಿಕೆಟ್ ಗಳಿಸಿದ್ದಾರೆ. ಒಂದು ಇನ್ನಿಂಗ್ಸ್ ನಲ್ಲಿ 6/60, ಪಂದ್ಯದಲ್ಲಿ 10/112 ವಿಕೆಟ್ ಪಡೆದುಕೊಂಡಿರುವುದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ಕಳೆದ ವರ್ಷ ಇಂಗ್ಲೆಂಡ್ ನಲ್ಲಿ ನಡೆದ ಟೆಸ್ಟ್ ನಲ್ಲಿ 12 ವಿಕೆಟ್ ಗಳಿಸಿ ಮಿಂಚಿದ್ದರು.

ಇದನ್ನೂ ಓದಿ: Self e-KYC: ಮನೆಯಲ್ಲೇ ಕುಳಿತುಕೊಂಡು ಇ-ಕೆವೈಸಿ ಮಾಡಿ, ಮಾಡೋದು ಹೇಗೆ? ಇಲ್ಲಿದೆ ಹಂತ ಹಂತದ ಮಾಹಿತಿ

ಐಪಿಎಲ್ 2026ರ ಟೂರ್ನಿಯ್ಲಿ ಕೆಕೆಆರ್ ಆಕಾಶ್ ದೀಪ್ ಅವರನ್ನು ಖರೀದಿ ಮಾಡಿತ್ತು. ಆದರೆ ಬೆನ್ನು ನೋವಿನ ಕಾರಣದಿಂದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಆಕಾಶ್ ಚೇತರಿಸಿಕೊಳ್ಳುತ್ತಿದ್ದಾರೆ. ಇದೇ ಕಾರಣದಿಂದಲೇ ಟೀಂ ಇಂಡಿಯಾದಲ್ಲಿ ಸ್ಥಾನವನ್ನು ಕಳೆದುಕೊಂಡಿದ್ದರು. ಸದ್ಯ ಮದುವೆ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿರುವ ಆಕಾಶ್ ದೀಪ್, ಗಾಯದಿಂದ ಚೇತರಿಕೆ ಕಾಣುವ ವಿಶ್ವಾಸದಲ್ಲಿದ್ದಾರೆ, ಮದುವೆ ಬ್ಯುಸಿ ಮುಕ್ತಾಯವಾಗುತ್ತಿದ್ದಂತೆ ಮತ್ತೆ ತರಬೇತಿ ವಾಪಸ್ ಆಗಲಿದ್ದಾರೆ. ಸದ್ಯ ಆಕಾಶ್ ದೀಪ್ ಅವರ ಮದುವೆ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳು ನವ ದಂಪತಿಗೆ ಶುಭ ಕೋರಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed