ನನಗೆ ದುಡ್ಡಿನ ಕಂಫರ್ಟ್ ಸಿಕ್ಕಿದೆ. ಇದನ್ನ ನಾನು ಇಲ್ಲ ಅಂತ ಹೇಳಲ್ಲ. ಆದರೆ, ನನಗೆ ಪ್ರೀತಿ ಮಾತ್ರ ಬೇಕಿತ್ತು. ಎಮೋಷನಲ್ ಕಂಫರ್ಟ್ ಬೇಕಿತ್ತು.
ಮಾನಸಿಕವಾಗಿ ಕುಗ್ಗಿದ್ದೇನೆ
(ಚಿತ್ರ ಕೃಪೆ: ಕೃಷಿ ತಾಪಂಡ ಇನ್‌ಸ್ಟಾಗ್ರಾಮ್)
ನಾನು ನನ್ನ ಪ್ರೀತಿಯನ್ನ 100 ಪರ್ಸೆಂಟ್ ಕೊಟ್ಟಿದ್ದೇನೆ. ಆದರೆ, ಆ ಕಡೆಯಿಂದ ಆ ಪ್ರೀತಿ ಸಿಗಲೇ ಇಲ್ಲ. ಎಮೋಷನಲ್ ಕಂಫರ್ಟ್ ಬೇಕಿತ್ತು. ಅದು ಸಿಗಲಿಲ್ಲ.
ಆ ಒಂದು ದುಬಾರಿ ಕಾರ್ ಅನ್ನ ನಾನು ತೆಗೆದುಕೊಂಡೇ ಇಲ್ಲ. ನನ್ನ ಬಳಿ ಅದನ್ನ ಒಂದೇ ದಿನವೂ ಇಟ್ಟುಕೊಳ್ಳಲಿಲ್ಲ. ನನಗೆ ಈ ರೀತಿಯ ಲೆಕ್ಸ್ಯೂರಿ ಲೈಫ್ ಬೇಕಿದ್ದರೆ ನಾನು ಯಾಕೆ ಈಗ ಈ ರೀತಿ ಇರ್ತಾ ಇದ್ದೆ ಹೇಳಿ?
ನನಗೆ ದುಡ್ಡಿಗಿಂತಲೂ ಮುಖ್ಯವಾಗಿದ್ದು ಪ್ರೀತಿನೇ ಆಗಿತ್ತು. ಎಮೋಷನಲ್ ಕಂಫರ್ಟ್ ಬೇಕಿತ್ತು. ಅದು ಸಿಗಲಿಲ್ಲ. ಆದರೆ, ನಮ್ಮ ರಿಲೇಷನ್ ತುಂಬಾನೆ ಕೆಟ್ಟದಾಗಿಯೇ ಎಂಡ್ ಆಯಿತು ಬಿಡಿ.
ಈ ವಿಚಾರವಾಗಿ ನನಗೆ ಇನ್ನೂ ಕಾಲ್ ಬರ್ತವೆ. ಆದರೆ, ಇದರ ಬಗ್ಗೇನೆ ಎಷ್ಟು ಅಂತ ಮಾತನಾಡೋದು. ಸಾಕಾಗಿ ಹೋಗಿದೆ ಅನ್ನುವ ಅರ್ಥದಲ್ಲೂ ಕೃಷಿ ತಾಪಂಡ ಹೇಳಿಕೊಳ್ತಾರೆ.
ಈ ಘಟನೆ ನಡೆದು ಹೆಚ್ಚು ಕಡಿಮೆ 8 ತಿಂಗಳು ಆಗಿದೆ. ಆದರೆ, ಇನ್ನೂ ಕಾಲ್ ಬರ್ತವೆ. ಇದೇ ವಿಚಾರವಾಗಿಯೇ ಪ್ರಶ್ನೆಗಳು ಇರುತ್ತವೆ. ಇದು ನಿಜಕ್ಕೂ ತುಂಬಾನೆ ನೋವು ಕೊಡುತ್ತದೆ.
ಇನ್ಮುಂದೆ ನಾನು ನಟಿನೇ ಅಲ್ಲ
(ಚಿತ್ರ ಕೃಪೆ: ಕೃಷಿ ತಾಪಂಡ ಇನ್‌ಸ್ಟಾಗ್ರಾಮ್)
ನಾನು ಈ ಎಲ್ಲ ಘಟನೆಯಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದೇನೆ. ಆದರೆ, ನಾನು ಟ್ರೀಟ್‌ಮೆಂಟ್ ತೆಗೆದುಕೊಳ್ಳುತ್ತಿದ್ದೇನೆ. ಆ ರೀತಿಯ ಪರಿಸ್ಥಿತಿಯಲ್ಲಿಯೇ ಇದ್ದೇನೆ.
ಆದರೆ, ನನಗೆ ಯಾರೂ ಬೇಡ ಅನಿಸುತ್ತದೆ. ಮಾನಸಿಕವಾಗಿ ನಾನು ಇನ್ನೂ ಆ ವ್ಯಕ್ತಿಯನ್ನ ಪ್ರೀತಿಸುತ್ತಿದ್ದೇನೆ. ಫಿಜಿಕಲಿ ನಾನು ಯಾರನ್ನು ಬಿಟ್ಟುಕೊಳ್ಳುವುದಿಲ್ಲ. ಎಲ್ಲರಿಂದಲೂ ದೂರ ಇದ್ದೇನೆ.
ನನಗೆ ನನ್ನ ಅಮ್ಮ ಅಂದ್ರೆ ತುಂಬಾನೆ ಇಷ್ಟ ಆಗುತ್ತಾರೆ. ಅವರ ಜೊತೆಗೆ ನನ್ನ ಬಾಂಡಿಂಗ್ ಚೆನ್ನಾಗಿತ್ತು. ಆದರೆ, ಈಗ ಅವರ ಜೊತೆಗೆ ಮಾತನಾಡೋಕೂ ಆಗೋದಿಲ್ಲ. ಆ ರೀತಿಯ ಸ್ಥಿತಿಯಲ್ಲಿಯೇ ಇದ್ದೇನೆ.
ಇನ್ನುಂದೆ ನಾನು ಯಾವುದೇ ಸಂದರ್ಶನ ಕೊಡೋದಿಲ್ಲ. ಮತ್ಯಾವುದೋ ಪಾಡ್‌ಕಾಸ್ಟ್‌ಗೂ ಬರೋದಿಲ್ಲ. ಇನ್ಮುಂದೆ ನಟನೆಯನ್ನು ಬಿಟ್ಟು ಬಿಡುತ್ತೇನೆ. ನನಗೆ ಏನೂ ಬೇಡ ಅನಿಸುತ್ತಿದೆ ಅಂತಲೇ ಕೃಷಿ ತಾಪಂಡ ಹೇಳಿಕೊಂಡಿದ್ದಾರೆ. Rajesh Reveals ಪಾಡ್‌ಕಾಸ್ಟ್ ಅಲ್ಲಿಯೇ ತಮ್ಮ ಮನದ ಈ ಅಷ್ಟು ನೋವನ್ನ ಕೃಷಿ ತಾಪಂಡ ಹೇಳಿಕೊಂಡಿದ್ದಾರೆ ಅಂತ ಹೇಳಬಹುದು.












