Krishi Tapanda: ನನಗೆ ಪ್ರೀತಿ ಬೇಕಿತ್ತು, ಎಮೋಷನಲ್ ಕಂಫರ್ಟ್ ಬೇಕಿತ್ತು; ಅದು ಸಿಗಲೇ ಇಲ್ಲ! ಮನಬಿಚ್ಚಿ ಮಾತನಾಡಿದ ಕೃಷಿ ತಾಪಂಡ | | ACTPnews

kannada actress krishi thapanda got emotional at rajesh podcast over love life


ನನಗೆ ಪ್ರೀತಿ ಬೇಕಿತ್ತು..

ನನಗೆ ದುಡ್ಡಿನ ಕಂಫರ್ಟ್ ಸಿಕ್ಕಿದೆ. ಇದನ್ನ ನಾನು ಇಲ್ಲ ಅಂತ ಹೇಳಲ್ಲ. ಆದರೆ, ನನಗೆ ಪ್ರೀತಿ ಮಾತ್ರ ಬೇಕಿತ್ತು. ಎಮೋಷನಲ್ ಕಂಫರ್ಟ್ ಬೇಕಿತ್ತು.

ಮಾನಸಿಕವಾಗಿ ಕುಗ್ಗಿದ್ದೇನೆ

(ಚಿತ್ರ ಕೃಪೆ: ಕೃಷಿ ತಾಪಂಡ ಇನ್‌ಸ್ಟಾಗ್ರಾಮ್)

ನಾನು ನನ್ನ ಪ್ರೀತಿಯನ್ನ 100 ಪರ್ಸೆಂಟ್ ಕೊಟ್ಟಿದ್ದೇನೆ. ಆದರೆ, ಆ ಕಡೆಯಿಂದ ಆ ಪ್ರೀತಿ ಸಿಗಲೇ ಇಲ್ಲ. ಎಮೋಷನಲ್ ಕಂಫರ್ಟ್ ಬೇಕಿತ್ತು. ಅದು ಸಿಗಲಿಲ್ಲ.

ಕಾರ್‌ ಕೊಟ್ಟಿದ್ದಾರೆ ಅಲ್ವೇ

ಆ ಒಂದು ದುಬಾರಿ ಕಾರ್ ಅನ್ನ ನಾನು ತೆಗೆದುಕೊಂಡೇ ಇಲ್ಲ. ನನ್ನ ಬಳಿ ಅದನ್ನ ಒಂದೇ ದಿನವೂ ಇಟ್ಟುಕೊಳ್ಳಲಿಲ್ಲ. ನನಗೆ ಈ ರೀತಿಯ ಲೆಕ್ಸ್ಯೂರಿ ಲೈಫ್ ಬೇಕಿದ್ದರೆ ನಾನು ಯಾಕೆ ಈಗ ಈ ರೀತಿ ಇರ್ತಾ ಇದ್ದೆ ಹೇಳಿ?

ನನಗೆ ದುಡ್ಡಿಗಿಂತಲೂ ಮುಖ್ಯವಾಗಿದ್ದು ಪ್ರೀತಿನೇ ಆಗಿತ್ತು. ಎಮೋಷನಲ್ ಕಂಫರ್ಟ್ ಬೇಕಿತ್ತು. ಅದು ಸಿಗಲಿಲ್ಲ. ಆದರೆ, ನಮ್ಮ ರಿಲೇಷನ್ ತುಂಬಾನೆ ಕೆಟ್ಟದಾಗಿಯೇ ಎಂಡ್ ಆಯಿತು ಬಿಡಿ.

ಇನ್ನೂ ಕಾಲ್ ಬರ್ತವೆ…

ಈ ವಿಚಾರವಾಗಿ ನನಗೆ ಇನ್ನೂ ಕಾಲ್ ಬರ್ತವೆ. ಆದರೆ, ಇದರ ಬಗ್ಗೇನೆ ಎಷ್ಟು ಅಂತ ಮಾತನಾಡೋದು. ಸಾಕಾಗಿ ಹೋಗಿದೆ ಅನ್ನುವ ಅರ್ಥದಲ್ಲೂ ಕೃಷಿ ತಾಪಂಡ ಹೇಳಿಕೊಳ್ತಾರೆ.

ಈ ಘಟನೆ ನಡೆದು ಹೆಚ್ಚು ಕಡಿಮೆ 8 ತಿಂಗಳು ಆಗಿದೆ. ಆದರೆ, ಇನ್ನೂ ಕಾಲ್‌ ಬರ್ತವೆ. ಇದೇ ವಿಚಾರವಾಗಿಯೇ ಪ್ರಶ್ನೆಗಳು ಇರುತ್ತವೆ. ಇದು ನಿಜಕ್ಕೂ ತುಂಬಾನೆ ನೋವು ಕೊಡುತ್ತದೆ.

kannada actress krishi thapanda got emotional at rajesh podcast over love life

ಇನ್ಮುಂದೆ ನಾನು ನಟಿನೇ ಅಲ್ಲ

(ಚಿತ್ರ ಕೃಪೆ: ಕೃಷಿ ತಾಪಂಡ ಇನ್‌ಸ್ಟಾಗ್ರಾಮ್)

ಮಾನಸಿಕವಾಗಿ ಕುಗ್ಗಿದ್ದೇನೆ

ನಾನು ಈ ಎಲ್ಲ ಘಟನೆಯಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದೇನೆ. ಆದರೆ, ನಾನು ಟ್ರೀಟ್‌ಮೆಂಟ್ ತೆಗೆದುಕೊಳ್ಳುತ್ತಿದ್ದೇನೆ. ಆ ರೀತಿಯ ಪರಿಸ್ಥಿತಿಯಲ್ಲಿಯೇ ಇದ್ದೇನೆ.

ಆದರೆ, ನನಗೆ ಯಾರೂ ಬೇಡ ಅನಿಸುತ್ತದೆ. ಮಾನಸಿಕವಾಗಿ ನಾನು ಇನ್ನೂ ಆ ವ್ಯಕ್ತಿಯನ್ನ ಪ್ರೀತಿಸುತ್ತಿದ್ದೇನೆ. ಫಿಜಿಕಲಿ ನಾನು ಯಾರನ್ನು ಬಿಟ್ಟುಕೊಳ್ಳುವುದಿಲ್ಲ. ಎಲ್ಲರಿಂದಲೂ ದೂರ ಇದ್ದೇನೆ.

ಅಮ್ಮ ಅಂದ್ರೆ ನನಗೆ ಇಷ್ಟ

ನನಗೆ ನನ್ನ ಅಮ್ಮ ಅಂದ್ರೆ ತುಂಬಾನೆ ಇಷ್ಟ ಆಗುತ್ತಾರೆ. ಅವರ ಜೊತೆಗೆ ನನ್ನ ಬಾಂಡಿಂಗ್ ಚೆನ್ನಾಗಿತ್ತು. ಆದರೆ, ಈಗ ಅವರ ಜೊತೆಗೆ ಮಾತನಾಡೋಕೂ ಆಗೋದಿಲ್ಲ. ಆ ರೀತಿಯ ಸ್ಥಿತಿಯಲ್ಲಿಯೇ ಇದ್ದೇನೆ.

ಈ ಘಟನೆಯಿಂದ ನಾನು ‘ತಾಪಂಡ’ ಅನ್ನು ಹೆಸರಿಗೆ ಕಳಂಕ ತಂದಿದ್ದೇನೆ ಅನಿಸುತ್ತಿದೆ. ನನ್ನ ನಾನು ಮುಗಿಸಿಕೊಳ್ಳಬೇಕು ಅನಿಸುತ್ತಿದೆ. ಆ ರೀತಿಯ ಮನಸ್ಥಿತಿಯಲ್ಲಿಯೇ ನಾನು ಇದ್ದೇನೆ. ಸಿನಿಮಾರಂಗದಿಂದಲೂ ದೂರ ಉಳಿಯಬೇಕು ಅಂತ ಅಂದುಕೊಂಡಿದ್ದೇನೆ. ಸಾಕು ಇನ್ನು ಎಲ್ಲವೂ ಸಾಕು ಅಂತ ಕೃತಿ ತಾಪಂಡ ಹೇಳಿಕೊಂಡಿದ್ದಾರೆ.
ಇನ್ಮುಂದೆ ನಾನು ನಟಿನೇ ಅಲ್ಲ

ಇನ್ನುಂದೆ ನಾನು ಯಾವುದೇ ಸಂದರ್ಶನ ಕೊಡೋದಿಲ್ಲ. ಮತ್ಯಾವುದೋ ಪಾಡ್‌ಕಾಸ್ಟ್‌ಗೂ ಬರೋದಿಲ್ಲ. ಇನ್ಮುಂದೆ ನಟನೆಯನ್ನು ಬಿಟ್ಟು ಬಿಡುತ್ತೇನೆ. ನನಗೆ ಏನೂ ಬೇಡ ಅನಿಸುತ್ತಿದೆ ಅಂತಲೇ ಕೃಷಿ ತಾಪಂಡ ಹೇಳಿಕೊಂಡಿದ್ದಾರೆ. Rajesh Reveals ಪಾಡ್‌ಕಾಸ್ಟ್ ಅಲ್ಲಿಯೇ ತಮ್ಮ ಮನದ ಈ ಅಷ್ಟು ನೋವನ್ನ ಕೃಷಿ ತಾಪಂಡ ಹೇಳಿಕೊಂಡಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed