Kousalya Supraja Rama: ಇದು ಗಂಡಸರು ನೋಡಲೇಬೇಕಾದ ಸಿನಿಮಾ! ಹೇಗಿದ್ದಾನೆ ಕೌಸಲ್ಯಾ ಸುಪ್ರಜಾ ರಾಮ? | | ACTPnews

ಕೌಸಲ್ಯಾ ಸುಪ್ರಜಾ ರಾಮ ಸಿನಿಮಾ ವಿಮರ್ಷೆ


Last Updated:

ಡಾರ್ಲಿಂಗ್ ಕೃಷ್ಣ ಅಭಿನಯದ ಕೌಸಲ್ಯಾ ಸುಪ್ರಜಾ ರಾಮ ರಿಲೀಸ್ ಆಗಿದೆ. ಹಾಗಾದ್ರೆ ಕೌಸಲ್ಯಾ ಸುಪ್ರಜಾರಾಮ ಹೇಗಿದ್ದಾನೆ? ಸಿನಿಮಾ ನೋಡಿದ ಅಭಿಮಾನಿ ದೇವರುಗಳು ಹೇಳಿದ್ದೇನು? ಇಲ್ಲಿದೆ ರಿವ್ಯೂ…

ಕೌಸಲ್ಯಾ ಸುಪ್ರಜಾ ರಾಮ ಸಿನಿಮಾ ವಿಮರ್ಷೆ
ಕೌಸಲ್ಯಾ ಸುಪ್ರಜಾ ರಾಮ ಸಿನಿಮಾ ವಿಮರ್ಷೆ

ಕೌಸಲ್ಯಾ ಸುಪ್ರಜಾ ರಾಮ… ಗಂಡಸರು ನೋಡಲೇಬೇಕಾದ ಸಿನಿಮಾ ! ಈ ರೀತಿಯ ವಿಮರ್ಶೆ ಪಡೀತ ರಾಜ್ಯಾದ್ಯಂತ ಭರ್ಜರಿ ಓಪನಿಂಗ್ ಪಡೆದಿದೆ ಕೌಸಲ್ಯಾ ಸುಪ್ರಜಾ ರಾಮ (Kousalya Supraja Rama) ಸಿನಿಮಾ. ಕೃಷ್ಣನಾಗಿ ಹೆಸರು ಮಾಡಿರೋ ಡಾರ್ಲಿಂಗ್ ಕೃಷ್ಣ (Darling Krishna) ಇಲ್ಲಿ ರಾಮನಾಗಿ (Rama) ಎಲ್ಲರಿಗೂ ಇಷ್ಟವಾಗ್ತಾರೆ. ಎರಡು ಶೇಡ್‌ನಲ್ಲಿ ಕಾಣಿಸಿಕೊಂಡಿರೋ ಕೃಷ್ಣ ಮತ್ತೊಮ್ಮೆ ಫ್ಯಾಮಿಲಿ ಆಡಿಯನ್ಸ್ ಮನಸ್ಸಿಗೆ (family audience) ಹತ್ತಿರವಾಗ್ತಾರೆ. ಹಾಗಾದ್ರೆ ಒಟ್ಟಾರೆಯಾಗಿ ಕೌಸಲ್ಯಾ ಸುಪ್ರಜಾರಾಮ ಹೇಗಿದ್ದಾನೆ? ಸಿನಿಮಾ ನೋಡಿದ ಅಭಿಮಾನಿ (Fans) ದೇವರುಗಳು ಹೇಳಿದ್ದೇನು? ಇಲ್ಲಿದೆ ರಿವ್ಯೂ…

ಫ್ಯಾಮಿಲಿಗೆ ಸಂದೇಶ ನೀಡುವ ಸಿನಿಮಾ

ಕೌಸಲ್ಯಾ ಸುಪ್ರಜಾ ರಾಮ ಚಿತ್ರದ ನಿರ್ದೇಶಕ ಶಶಾಂಕ್ ಸೆನ್ಸಿಟಿವ್ ವಿಚಾರವನ್ನ ಸಮಾಜಕ್ಕೆ ಕಾಮಿಡಿಯ ಜೊತೆ ಜೊತೆಗೆ ಹೇಳುವಲ್ಲಿ ಗೆದ್ದಿದ್ದಾರೆ. ಒಂದು ಫ್ಯಾಮಿಲಿಯಲ್ಲಿ ಗಂಡ ಹೆಂಡತಿ  ಪಾತ್ರ ಬಹಳ ಮುಖ್ಯವಾಗಿರುತ್ತೆ, ಗಂಡ ತಾನೇ ಮೇಲು ಎಂಬ ಗರ್ವ ಅಹಂ ತೋರಿಸಿದ್ರೆ ಆ ಸಂಬಂಧ ಉಳಿಯೋದಿಲ್ಲ ಅನ್ನೋ  ಸಂದೇಶ ನೀಡಿದ್ಧಾರೆ.

ರಾಮನ ಗರ್ವಭಂಗವಾಗುತ್ತಾ?

ರಾಮೇಗೌಡ ಅಲಿಯಾಸ್ ರಾಮನ ಪಾತ್ರವೇ ಚಿತ್ರದ ಹೈಲೈಟ್, ಅಪ್ಪನ ಮಾತನ್ನ ಚಿಕ್ಕಂದಿನಿಂದಲೂ ಅಳವಡಿಸಿಕೊಂಡ  ರಾಮ್, ಹೆಂಗಸರ ಮುಂದೆ ತಲೆ ಬಾಗಬಾರದು, ತಾನು ಗಂಡಸು ಅನ್ನುವ ಪೊಗರಿನಲ್ಲಿ ಇರ್ತಾನೆ. ಇದು ಅವನ ಲವ್ ಲೈಫ್ ಮೇಲೆ ಪರಿಣಾಮ ಬೀರುತ್ತೆ. ಪ್ರೀತಿಸಿದ ಹುಡುಗಿ ಶಿವಾನಿ ಇವನಿಂದ ದೂರವಾಗ್ತಾಳೆ, ಆಗ  ರಾಮ್ ಜೀವನದಲ್ಲಿ ಬಿರುಗಾಳಿಯಂತೆ ಎಂಟ್ರಿ ಕೊಡೋ ಮುತ್ತುಲಕ್ಷ್ಮಿ ಹೇಗೆ ಇವನ ಗರ್ವವನ್ನ ಭಂಗ ಮಾಡ್ತಾಳೆ ಅನ್ನೋದು ಚಿತ್ರದ ಸ್ಟೋರಿ

ಬಿರುಗಾಳಿಯಾಗಿ ಬರುತ್ತಾಳೆ ಮುತ್ತುಲಕ್ಷ್ಮಿ!

ಮುದ್ದು ಹುಡುಗಿ ಶಿವಾನಿಯಾಗಿ ಬೃಂದಾ ಆಚಾರ್ಯ ಗಮನ ಸೆಳೀತಾರೆ. ಕೃಷ್ಣ ಮಿಲನಾ ಕಾಂಬೀನೆಷನ್‌ನ ಲವ್ ಮಾಕ್ಟೇಲ್, ಲವ್ ಮಾಕ್ಟೇಲ್ 2 ನೋಡಿದ ಮಂದಿ ಆ ಚಿತ್ರದ ನಿಧಿ ಮಾ ಇವರೇನಾ ಅನ್ನುವಷ್ಟು ಬೋಲ್ಡಾಗಿ ಕಾಣಿಸಿಕೊಂಡಿದ್ದಾರೆ ಮಿಲನಾ ನಾಗರಾಜ್. ಇಲ್ಲಿ ಮುತ್ತುಲಕ್ಷ್ಮಿಯಾಗಿ  ಕಾಣಿಸಿ ಕೊಂಡಿದ್ದು 90 ಹಾಕು ಕಿಟ್ಟಪ್ಪ ಹಾಡಿಗೆ ಬಿಂದಾಸ್ ಆಗಿ ಹೆಜ್ಜೆ ಹಾಕಿದ್ದಾರೆ.

ಈಗಾಗಲೇ ಸದ್ದು ಮಾಡಿದ ಮ್ಯೂಸಿಕ್

ಶಶಾಂಕ್ ಸಿನಿಮಾ ಅಂದ್ರೆ ಅಲ್ಲಿ ಮ್ಯೂಸಿಕ್ ಗೆ ಪ್ರಾಮುಕ್ಯತೆ ಇದ್ಧೇ ಇರುತ್ತೆ. ಅರ್ಜುನ್ ಜನ್ಯ ಸಂಗೀತಾ ಎಲ್ಲರಿಗು ಇಷ್ಟವಾಗಿರೋದರ ಜೊತೆಗೆ ಈಗಾಗಲೇ ಸೋಷಿಯಲ್ ಮಿಡೀಯಾದಲ್ಲಿಯು ಟ್ರೆಂಡ್ ಹುಟ್ಟು ಹಾಕಿವೆ.

ರಂಗಾಯಣ ರಘು, ಸುಧಾ ಬೆಳವಾಡಿ ಪಾತ್ರ ಹೇಗಿವೆ?

ಇನ್ನುಳಿದಂತೆ  ತಂದೆಯ ಪಾತ್ರದ ರಂಗಾಯಣ ರಘು ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಇದ್ದು, ಸುದಾ ಬೆಳವಾಡಿ ತನ್ನ ಮಗನಿಗೆ ಸೂಕ್ಷ್ಮತನವನ್ನ ಬೋಧಿಸೋದು ನಿಜ ಜೀವನಕ್ಕೂ ಹತ್ತಿರವಾಗುತ್ತದೆ. ಒಟ್ಟಿನಲ್ಲಿ  ಕೇವಲ ಎರಡೂವರೆ ಗಂಟೆಗೆ ಮಾತ್ರ ಚಿತ್ರ ಮೀಸಲಾಗದೆ , ಸಮಾಜದಲ್ಲಿ ನಡೆಯೋ ಪ್ರತಿ ಕುಟುಂಬದಲ್ಲಿ ಕಾಣಿಸೋ ಗಂಡಸು , ಗಂಡಸುತನ ಎಂಬ ಕಲ್ಪನೆಯನ್ನ ತೊಡೆದುಹಾಕುವಲ್ಲಿ ಚಿತ್ರ ಯಶಸ್ವಿಯಾಗಿದೆ ಅನ್ನೋದ್ರಲ್ಲಿ ಸಂಶಯವಿಲ್ಲ.

(ವರದಿ:  ಗೀತಾ ಹಾಸನ್, ನ್ಯೂಸ್  18 ಕನ್ನಡ)



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports