Last Updated:
ಕೋಮಲ್ ಕುಮಾರ್ ಅಭಿನಯದ ಹೊಸ ಚಿತ್ರದ ಟೈಟಲ್ ಚೇಂಜ್ ಆಗಿದೆ. ರಿಲೀಸ್ ಹತ್ತಿರಕ್ಕೆ ಇರೋ ಸಮಯದಲ್ಲಿ ಶೀರ್ಷಿಕೆ ಬದಲಾಗಿದೆ. ಯಾಕೆ ಮತ್ತು ಏನು ಟೈಟಲ್ ಅನ್ನೋದು ಇಲ್ಲಿದೆ ಓದಿ.
ಕೋಮಲ್ ಕುಮಾರ್ (Komal Kumar) ಅಭಿನಯ ರೋಲೆಕ್ಸ್ ಚಿತ್ರದ ಟೈಟಲ್ ಜೇಂಜ್ ಆಗಿದೆ. ಇನ್ನೇನು ಸಿನಿಮಾ ರಿಲೀಸ್ ಆಗ್ಬೇಕು. ಅಷ್ಟರಲ್ಲಿಯೇ ಈ ಸಿನಿಮಾದ ಶೀರ್ಷಿಕೆ ಬದಲಿಸಲಾಗಿದೆ. ಕಾರಣ ಏನು ಅನ್ನೋದನ್ನು ಚಿತ್ರ ತಂಡ ಹೇಳಿಕೊಂಡಿದೆ. ಸಿನಿಮಾದಲ್ಲಿ ಕೋಮಲ್ ಕುಮಾರ್ ಇದ್ದಾರೆ. ಸೋನಲ್ ಮೊಂತೆರೋ ನಟಿಸಿದ್ದಾರೆ. ಇವರ ಈ ಸಿನಿಮಾದ ಕಂಟೆಂಟ್ ಮೇಲೆ ಚಿತ್ರ ತಂಡಕ್ಕೆ ಭಾರೀ ನಂಬಿಕೆ ಇದೆ. ಹಾಗಾಗಿಯೇ ರಿಲೀಸ್ ಟೈಮ್ ಅಲ್ಲಿ ಟೈಟಲ್ ಚೇಂಜ್ ಮಾಡುವ ಧೈರ್ಯ ಮಾಡಿದ್ದಾರೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ರೋಲೆಕ್ಸ್ ಟೈಟಲ್ ನಿಂದಲೇ ಚಿತ್ರ ಸೆಟ್ಟೇರಿದೆ. ಈ ಟೈಟಲ್ ಮೂಲಕವೇ ಪ್ರಚಾರವು ಆಗಿದೆ. ಈಗ ಸಿನಿಮಾ ರಿಲೀಸ್ ಹತ್ತಿರಕ್ಕೆ ಬಂದಿದೆ.
ಚಿತ್ರದಲ್ಲಿದೆ ವಿಶೇಷ ರೋಲ್
(ಚಿತ್ರ ಕೃಪೆ: ರಿಲಾಕ್ಸ್ ಸಿನಿಮಾ ತಂಡ)
ಆದರೆ, ಈಗ ಈ ಸಿನಿಮಾ ಟೈಟಲ್ ಚೇಂಜ್ ಮಾಡುವ ಅನಿರ್ವಾಯತೆ ಬಂದಿದೆ. ರೋಲೆಕ್ಸ್ ಹೆಸರನ್ನ ಹಾಗೂ ಅದರ ಸೌಂಡ್ ಬರುವ ರೀತಿ ಪದವನ್ನು ಬಳಕೆ ಮಾಡೋ ಹಾಗಿಲ್ಲ ಅಂತ ಹೆಸರಾಂತ ಸಂಸ್ಥೆ ನೋಟೀಸ್ ನೀಡಿದೆ. ಈ ಕಾರಣಕ್ಕೆ ಟೈಟಲ್ ಚೇಂಜ್ ಆಗಿದೆ.
ಈ ಚಿತ್ರದ ನಿರ್ಮಾಪಕ ಅಂಬಟಿ ಮಧು ಮೋಹನ್ ಅವರಿಗೆ ಚಿತ್ರ ಕಂಟೆಂಟ್ ಮೇಲೆ ನಂಬಿಕೆ ಇದೆ. ನಿರ್ದೇಶಕ ಶ್ರೀನಿವಾಸ ಮಂಡ್ಯ ಅವರಿಗೆ ವಿಶ್ವಾಸ ಇದೆ.
ಈ ಮೂಲಕ ಕೋಮಲ್ ಚಿತ್ರ ಹೊಸ ಟೈಟಲ್ ನೊಂದಿಗೆ ಬರ್ತಿದೆ. ಅಂದ್ಹಾಗೆ ಈ ಚಿತ್ರಕ್ಕೆ ಜೆಸ್ಸಿ ಗಿಫ್ಟ್ ಮ್ಯೂಸಿಕ್ ಕೊಟ್ಟಿದ್ದಾರೆ. ನಾಲ್ಕು ಹಾಡುಗಳು ಇವೆ.
ಕೋಮಲ್-ಸೋನಲ್ ಫೋಟೋಸ್
(ಚಿತ್ರ ಕೃಪೆ: ರಿಲಾಕ್ಸ್ ಸಿನಿಮಾ ತಂಡ)
ಆದರೆ, ಕೆಜಿಎಫ್ ಖ್ಯಾತಿಯ ನಂದು ಈ ಚಿತ್ರಕ್ಕೆ ಹಿನ್ನೆಲೆಯ ಸಂಗೀತ ಮಾಡಿದ್ದಾರೆ. ಈ ಚಿತ್ರಕ್ಕೆ ರಾಕೇಶ್ ಸಿ ತಿಲಕ್ ಛಾಯಾಗ್ರಹಣ ಮಾಡಿದ್ದಾರೆ.
ಈ ಚಿತ್ರದಲ್ಲಿ ಒಂದು ರೋಲ್ ಇದೆ. ಇದು ವಿಶೇಷ ಪಾತ್ರವೆ ಆಗಿದೆ. ಇದನ್ನ ಕನ್ನಡ ನಾಯಕ ನಟರೇ ಮಾಡಿದ್ದಾರೆ. ಹಾಗೆ ಅದು ಯಾರು ಅನ್ನುವ ಕುತೂಹಲಕ್ಕೂ ತೆರೆ ಬಿದ್ದಿದೆ.
ಈ ಚಿತ್ರದ ಕೋಮಲ್ ಹಾಗೂ ಸೋನಲ್ ಮೊಂತೆರೋ ಪಾತ್ರದ ಪೋಸ್ಟರ್ ರಿಲೀಸ್ ಆಗಿವೆ. ಫೋಟೋಸ್ ಕೂಡ ಹೊರ ಬಂದಿವೆ. ಈ ಫೋಟೋಗಳಲ್ಲಿ ಕೋಮಲ್ ಅಷ್ಟೆ ಸಖತ್ ಆಗಿಯೇ ಕಾಣಿಸುತ್ತಿದ್ದಾರೆ. ಈ ಚಿತ್ರದಲ್ಲಿ ಕೋಮಲ್ ಕಲರ್‌ಫುಲ್ ಆಗಿಯೇ ಕಾಣಿಸುತ್ತಿದ್ದಾರೆ. ಪಾತ್ರ ಹೇಗಿದಿಯೋ ಹಾಗೆ ಇಲ್ಲಿ ಹೊಳೆಯುತ್ತಿದ್ದಾರೆ ಅಂತಲೂ ಹೇಳಬಹುದು.














