KKR vs GT: ಸಿರಾಜ್ ಮಾಡಿದ ಈ ತಪ್ಪಿನಿಂದ ಗುಜರಾತ್​​ಗೆ 60 ರನ್ ಪೆನಾಲ್ಟಿ! ಕೆಕೆಆರ್ ಬೃಹತ್ ಗಳಿಸಲು ಇದೇ ಕಾರಣ! | ಕ್ರೀಡಾ ಸುದ್ದಿ | ACTPnews

ಫಿನ್ ಅಲೆನ್- ಮೊಹಮ್ಮದ್ ಸಿರಾಜ್


Last Updated:

ಈಡನ್ ಗಾರ್ಡನ್ಸ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯದಲ್ಲಿ ಕೆಕೆಆರ್ ಫಿನ್ ಅಲೆನ್ ಕೇವಲ 21 ಎಸೆತಗಳಲ್ಲಿ ಅರ್ಧಶತಕದ ಗಡಿ ದಾಟಿದರು. ಅಲೆನ್ ಮೈದಾನದಲ್ಲಿ ಸಿಕ್ಸರ್‌ಗಳ ಸುನಾಮಿ ಸೃಷ್ಟಿಸಿ, ಗುಜರಾತ್ ಬೌಲಿಂಗ್ ಲೈನ್‌ಅಪ್ ಅನ್ನು ಛಿದ್ರಗೊಳಿಸಿದರು. ಇದಕ್ಕೆ ಮುಖ್ಯ ಕಾರಣ ಗುಜರಾತ್ ಬೌಲರ್ ಮೊಹಮ್ಮದ್ ಸಿರಾಜ್.

ಫಿನ್ ಅಲೆನ್- ಮೊಹಮ್ಮದ್ ಸಿರಾಜ್
ಫಿನ್ ಅಲೆನ್- ಮೊಹಮ್ಮದ್ ಸಿರಾಜ್

ಗುಜರಾತ್ ಟೈಟಾನ್ಸ್ (GT) ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದ ಸ್ಟಾರ್ ಓಪನಿಂಗ್ ಬ್ಯಾಟರ್ (Batter) ಫಿನ್ ಅಲೆನ್ (Finn Allen) ಕೇವಲ 35 ಎಸೆತಗಳಲ್ಲಿ 93 ರನ್ ಗಳಿಸಿದರು. ಐಪಿಎಲ್ (IPL) 2026 ರಲ್ಲಿ ಅಲೆನ್ ಎರಡನೇ ಶತಕ (Century) ಗಳಿಸುವ ಅವಕಾಶದಿಂದ ವಂಚಿತರಾದರು. ಪಂದ್ಯದ ಆರಂಭದಿಂದಲೂ ಅಲೆನ್ ಉತ್ತಮ ಫಾರ್ಮ್‌ನಲ್ಲಿ ಕಾಣುತ್ತಿದ್ದರು. ಆದಾಗ್ಯೂ, ಗುಜರಾತ್ ವೇಗಿ ಮೊಹಮ್ಮದ್ ಸಿರಾಜ್ (Mohammed Siraj) ಐವತ್ತು ತಲುಪುವ ಮೊದಲೇ ಫಿನ್ ಅಲೆನ್ ಅವರ ಸುಲಭ ಕ್ಯಾಚ್ (Catch) ಅನ್ನು ಕೈಚೆಲ್ಲಿದರು. ನಂತರ ಅವರು ಬಿರುಸಿನ ಇನ್ನಿಂಗ್ಸ್ ಆಡಿದರು.

ಮೊಹಮ್ಮದ್ ಸಿರಾಜ್ ಮೈದಾನದಲ್ಲಿ ಮಾಡಿದ ಒಂದು ತಪ್ಪು ಗುಜರಾತ್ ಟೈಟಾನ್ಸ್ ತಂಡಕ್ಕೆ ತುಂಬಾ ದುಬಾರಿಯಾಗಿತ್ತು. ಪಂದ್ಯದ ನಿರ್ಣಾಯಕ ಹಂತದಲ್ಲಿ ಫಿನ್ ಅಲೆನ್ ಅವರ ಕ್ಯಾಚ್ ಅನ್ನು ಕೈಬಿಟ್ಟಿದ್ದು ಗುಜರಾತ್ ತಂಡದ ಮೇಲೆ ಪರಿಣಾಮ ಬೀರಿತು. ಇದು ಪಂದ್ಯದ ದಿಕ್ಕನ್ನೇ ಬದಲಾಯಿಸಿತು.

ಗುಜರಾತ್​​ಗೆ 60 ರನ್ ಫೆನಾಲ್ಟಿ!

ಅಲೆನ್ ಕೇವಲ 33 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾಗ ಸಿರಾಜ್ ಸುಲಭ ಕ್ಯಾಚ್ ಅನ್ನು ಕೈಚೆಲ್ಲಿದರು. ಈ ಜೀವ ದಾನದ ಸಂಪೂರ್ಣ ಲಾಭವನ್ನು ಪಡೆದುಕೊಂಡ ಅಲೆನ್ ಮೈದಾನದಲ್ಲಿ ಬಿರುಗಾಳಿಯನ್ನು ಎಬ್ಬಿಸಿದರು. ಅವರು ಶತಕ ಗಳಿಸುವ ಹತ್ತಿರ ಬಂದರು. ಆದರೆ, ಅವರು ತಮ್ಮ ಶತಕವನ್ನು ತಪ್ಪಿಸಿಕೊಂಡರೂ, ಕೇವಲ 35 ಎಸೆತಗಳಲ್ಲಿ 35 ಎಸೆತಗಳಲ್ಲಿ 10 ಸಿಕ್ಸರ್‌ಗಳು ಮತ್ತು 4 ಬೌಂಡರಿ ನೆರವಿನಿಂದ 93 ರನ್ ಗಳಿಸಿ ಸ್ಫೋಟಕ ಇನ್ನಿಂಗ್ಸ್ ಆಡಿದರು. ಕೆಕೆಆರ್ ಬೃಹತ್ ಮೊತ್ತ ಕಲೆ ಹಾಕುವಲ್ಲಿ ಅಲೆನ್ ಕೊಡುಗೆ ಮಹತ್ವದ್ದಾಗಿತ್ತು.

ಮೈದಾನದಲ್ಲಿ ಆಗಿದ್ದೇನು?

ಜೇಸನ್ ಹೋಲ್ಡರ್ ಎಸೆದ ಇನ್ನಿಂಗ್ಸ್‌ನ ಏಳನೇ ಓವರ್‌ನಲ್ಲಿ ಈ ಘಟನೆ ನಡೆಯಿತು. ಹೋಲ್ಡರ್ ಶಾರ್ಟ್ ಬಾಲ್ ಎಸೆದರು. ಫಿನ್ ಅಲೆನ್ ನಿಂತ ಸ್ಥಾನದಿಂದ ಪುಲ್ ಶಾಟ್ ಮಾಡಲು ಪ್ರಯತ್ನಿಸಿದರು. ಬಾಲ್ ಬ್ಯಾಟ್‌ನ ಮೇಲ್ಭಾಗಕ್ಕೆ ತಗುಲಿ ನೇರವಾಗಿ ಲಾಂಗ್-ಆನ್ ಫೀಲ್ಡರ್ ಮೊಹಮ್ಮದ್ ಸಿರಾಜ್ ಅವರ ಕೈಗೆ ಹೋಯಿತು. ಸಿರಾಜ್ ಅತ್ಯಂತ ಕಳಪೆ ಫೀಲ್ಡಿಂಗ್ ಪ್ರದರ್ಶಿಸಿದರು. ಸುಲಭ ಅವಕಾಶವನ್ನು ಕೈಚೆಲ್ಲಿ, ಅಲೆನ್ ಸಿಂಗಲ್ ಗಳಿಸಲು ಅವಕಾಶ ಮಾಡಿಕೊಟ್ಟರು.

ಸಿರಾಜ್ ಮಾಡಿದ ತಪ್ಪಿನಿಂದ ಗುಜರಾತ್ ಟೈಟಾನ್ಸ್ ತಂಡ 60 ರನ್‌ಗಳ ದಂಡವನ್ನು ಪಡೆಯಿತು. ವಿರಾಮ ನೀಡಿದಾಗ ಅಲೆನ್ 33 ರನ್ ಗಳಿಸಿದ್ದರು. ಆದರೆ ಅವರು ಕೆಲವೇ ಎಸೆತಗಳಲ್ಲಿ ಮುಂದಿನ 60 ರನ್‌ಗಳನ್ನು ಗಳಿಸಿದರು. ಮೈದಾನದಾದ್ಯಂತ ಬೌಂಡರಿ ಮತ್ತು ಸಿಕ್ಸರ್‌ಗಳ ಮಳೆ ಸುರಿಸುವ ಮೂಲಕ ಅಲೆನ್ ಗುಜರಾತ್ ಬೌಲರ್‌ಗಳಿಗೆ ಬೆವರಿಳಿಸಿದರು. ಈ ರೋಚಕ ಇನ್ನಿಂಗ್ಸ್‌ನಲ್ಲಿ ಅವರು ಒಟ್ಟು 10 ಅಮೋಘ ಸಿಕ್ಸರ್‌ಗಳು ಮತ್ತು ನಾಲ್ಕು ಗುಡುಗಿನ ಬೌಂಡರಿಗಳನ್ನು ಬಾರಿಸಿದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed