Last Updated:
ಐಪಿಎಲ್ 2026 ರ ಸೀಸನ್‌ನ 60 ನೇ ಲೀಗ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಎದುರು ಗುಜರಾತ್ ಟೈಟಾನ್ಸ್ ಸೋಲನ್ನು ಅನುಭವಿಸಿತು. ಈ ಗೆಲುವಿನೊಂದಿಗೆ ಕೆಕೆಆರ್ ತನ್ನ ಪ್ಲೇಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.
ಐಪಿಎಲ್ (IPL) 2026 ರ ಸೀಸನ್‌ನ 60 ನೇ ಲೀಗ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವನ್ನು ಗುಜರಾತ್ ಟೈಟಾನ್ಸ್ (GT) ಎದುರಿಸಿತು. ಕೋಲ್ಕತ್ತಾದ ಈಡನ್ ಗಾರ್ಡನ್ಸ್ (Eden Gardens) ನಲ್ಲಿ ನಡೆದ ರೋಚಕ ಪಂದ್ಯದಲ್ಲಿ ಗುಜರಾತ್ ತಂಡವನ್ನು ಕೋಲ್ಕತ್ತಾ 29 ರನ್‌ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ ಕೆಕೆಆರ್ ತನ್ನ ಪ್ಲೇಆಫ್ (Playoff) ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಕೆಕೆಆರ್ ಮೊದಲು ಬ್ಯಾಟಿಂಗ್ ಮಾಡಿ 248 ರನ್‌ಗಳ ಗುರಿಯನ್ನು ಗುಜರಾತ್ಗೆ ನೀಡಿತ್ತು. ಗುಜರಾತ್ 4 ವಿಕೆಟ್‌ಗೆ 218 ರನ್‌ಗಳನ್ನು ಮಾತ್ರ ಗಳಿಸಿತು.
ಕೆಕೆಆರ್ ನೀಡಿದ 248 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ ಭರ್ಜರಿ ಆರಂಭವನ್ನು ಪಡೆಯಿತು. ಸಾಯಿ ಸುದರ್ಶನ್ ಮತ್ತು ನಾಯಕ ಶುಭಮನ್ ಗಿಲ್ 42 ರನ್‌ಗಳನ್ನು ಸೇರಿಸಿದರು. ಸುದರ್ಶನ್ 23 ರನ್ ಗಳಿಸಿದ್ದಾಗ ಗಾಯಗೊಂಡು ನಿವೃತ್ತಿ ಹೊಂದಬೇಕಾಯಿತು. ನಂತರ ಕ್ರೀಸ್‌ಗೆ ಬಂದ ನಿಶಾಂತ್ ಸಿಂಧು (1 ರನ್) ಹೆಚ್ಚಿನ ರನ್ ಗಳಿಸಲು ಸಾಧ್ಯವಾಗಲಿಲ್ಲ. ಸುನಿಲ್ ನರೈನ್ ಬೌಲಿಂಗ್‌ನಲ್ಲಿ ಔಟಾದರು.
ಅಲ್ಲಿಂದ ಗುಜರಾತ್ ತಂಡದ ಪರ ನಾಯಕ ಶುಭ್ಮನ್ ಗಿಲ್ ಮತ್ತು ಜೋಸ್ ಬಟ್ಲರ್ ತಾಳ್ಮೆಯುವ ಇನ್ನಿಂಗ್ಸ್ ಆಡಿದರು. ಜೋಸ್ ಬಟ್ಲರ್ ಮತ್ತು ಶುಭಮನ್ ಗಿಲ್ 128 ರನ್‌ಗಳ ಜೊತೆಯಾಟವನ್ನು ನೀಡಿ ಗುಜರಾತ್ ಟೈಟಾನ್ಸ್ ತಂಡವನ್ನು ಮತ್ತೆ ಪಂದ್ಯಕ್ಕೆ ಕರೆತಂದರು. ಶುಭ್ಮನ್ ಗಿಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮಾಡಿ ಶತಕದ ಹೊಸ್ತಿಲಿಲ್ಲಿ ವಿಕೆಟ್ ಕಳೆದುಕೊಂಡರು. ಸುನಿಲ್ ನರೈನ್ ಎಸೆತದಲ್ಲಿ ಸಿಕ್ಸರ್ ಹೊಡೆಯುವ ಪ್ರಯತ್ನದಲ್ಲಿ ಗಿಲ್ ಔಟಾದರು. ಗಿಲ್ 49 ಎಸೆತಗಳಲ್ಲಿ 5 ಬೌಂಡರಿ ಮತ್ತು 7 ಸಿಕ್ಸರ್ ನೆರವಿನಿಂದ 85 ರನ್ ಗಳಿಸಿದ ಔಟಾದರು.
ಗಿಲ್ ವಿಕೆಟ್ ಪತನದ ನಂತರ ಬಂದ ಸಾಯಿ ಸುದರ್ಶನ್ ಬಿರುಸಿನ ಬ್ಯಾಟಿಂಗ್ ಮಾಡಿದರು. ಮತ್ತೊಂದೆಡೆ ತಂಡಕ್ಕೆ ಗೆಲುವು ತಂದು ಕೊಡಲು ಬಟ್ಲರ್ ಮುಂದಾದರು. ಆದರೆ, ಸೌರಭ್ ದುಬೆ ಎಸೆತದಲ್ಲಿ ಬಟ್ಲರ್ ವಿಕೆಟ್ ಕಳೆದುಕೊಂಡರು. ಕೊನೆವರೆಗೂ ಹೋರಾಟ ನಡೆಸಿದ ಬಟ್ಲರ್ 35 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 57 ರನ್ ಗಳಿಸಿ ಔಟಾದರು. ಇನ್ನೊಂದೆಡೆ ಸಾಯಿ ಸುದರ್ಶನ್ 28 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಂದ ಅಜೇಯ 53 ರನ್ ಗಳಿಸಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡದ ಬ್ಯಾಟಿಂಗ್ ಪ್ರದರ್ಶನ ಅದ್ಭುತವಾಗಿತ್ತು. ಕೆಕೆಆರ್ ಕೇವಲ 2 ವಿಕೆಟ್ ನಷ್ಟಕ್ಕೆ 247 ರನ್ ಗಳಿಸಿತು. ಕೋಲ್ಕತ್ತಾ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ನಾಯಕ ಅಜಿಂಕ್ಯ ರಹಾನೆ 14 ರನ್ ಗಳಿಸಿ ವೈಯಕ್ತಿಕ ಸ್ಕೋರ್ ಗಳಿಸಿ ಔಟಾದರು. ರಹಾನೆ ಅವರನ್ನು ವೇಗಿ ಮೊಹಮ್ಮದ್ ಸಿರಾಜ್ ಬೌಲಿಂಗ್ ನಲ್ಲಿ ಔಟ್ ಮಾಡಿದರು.
ಇದಾದ ನಂತರ, ಫಿನ್ ಅಲೆನ್ ಮತ್ತು ಅಂಗ್ಕ್ರಿಶ್ ರಘುವಂಶಿ ಒಟ್ಟಾಗಿ ಎರಡನೇ ವಿಕೆಟ್ ಗೆ 95 ರನ್ ಗಳ ಜೊತೆಯಾಟವಾಡಿದರು. ಈ ಜೊತೆಯಾಟದಲ್ಲಿ ಫಿನ್ ಅಲೆನ್ ಅವರ ಕೊಡುಗೆ ಬಹಳ ದೊಡ್ಡದಾಗಿತ್ತು. ಅಲೆನ್ ಕೇವಲ 35 ಎಸೆತಗಳಲ್ಲಿ 93 ರನ್ ಗಳಿಸಿದರು. ಇದರಲ್ಲಿ 10 ಸಿಕ್ಸರ್ ಗಳು ಮತ್ತು 4 ಬೌಂಡರಿಗಳು ಸೇರಿವೆ. ಸ್ಪಿನ್ನರ್ ಆರ್ ಸಾಯಿ ಕಿಶೋರ್ ಅಲೆನ್ ಅವರನ್ನು ಔಟ್ ಮಾಡಿದರು.
ಅಲ್ಲಿಂದ ಆಂಗ್‌ಕ್ರಿಶ್ ರಘುವಂಶಿ ಮತ್ತು ಕ್ಯಾಮರೂನ್ ಗ್ರೀನ್ ಮೂರನೇ ವಿಕೆಟ್‌ಗೆ ಅಜೇಯ 108 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ಕೋಲ್ಕತ್ತಾ ತಂಡವನ್ನು ಬೃಹತ್ ಮೊತ್ತಕ್ಕೆ ಮುನ್ನಡೆಸಿದರು. ಆಂಗ್‌ಕ್ರಿಶ್ ರಘುವಂಶಿ 44 ಎಸೆತಗಳಲ್ಲಿ 7 ಸಿಕ್ಸರ್‌ಗಳು ಮತ್ತು 4 ಬೌಂಡರಿಗಳನ್ನು ಒಳಗೊಂಡಂತೆ ಅಜೇಯ 82 ರನ್‌ಗಳ ಕೊಡುಗೆ ನೀಡಿದರು. ಕ್ಯಾಮರೂನ್ ಗ್ರೀನ್ ಕೂಡ 28 ಎಸೆತಗಳಲ್ಲಿ 3 ಬೌಂಡರಿಗಳು ಮತ್ತು 4 ಸಿಕ್ಸರ್‌ಗಳನ್ನು ಒಳಗೊಂಡಂತೆ 52* ರನ್ ಗಳಿಸಿದರು.
May 16, 2026 11:30 PM IST













