Kichcha Sudeepa: ಕಿಚ್ಚ ಸುದೀಪ್ ತಮಿಳು ಹೊಸ ಸಿನಿಮಾ ಅನೌನ್ಸ್! ಯಾವ ರೋಲ್ ಗೊತ್ತಾ? | | ACTPnews

ಕಿಚ್ಚ ಸುದೀಪ್ ತಮಿಳು ಹೊಸ ಸಿನಿಮಾ ಅನೌನ್ಸ್; ಇಲ್ಲಿ ಯಾವ್ ರೋಲ್ ಗೊತ್ತಾ?


Last Updated:

ಕಿಚ್ಚ ಸುದೀಪ್ ಅವರ ತಮಿಳು ಚಿತ್ರ ಅನೌನ್ಸ್ ಆಗಿದೆ. ಅಂಡರ್ -18 ಅನ್ನೋದು ಈ ಚಿತ್ರದ ಶೀರ್ಷಿಕೆ ಆಗಿದೆ. ಆದರೆ, ಈ ಚಿತ್ರದಲ್ಲಿ ಇವರು ಹೀರೋ ಅಲ್ಲ. ಏನು ಅನ್ನೋದು ಇಲ್ಲಿದೆ ಓದಿ.

ಕಿಚ್ಚ ಸುದೀಪ್ ತಮಿಳು ಹೊಸ ಸಿನಿಮಾ ಅನೌನ್ಸ್; ಇಲ್ಲಿ ಯಾವ್ ರೋಲ್ ಗೊತ್ತಾ?
ಕಿಚ್ಚ ಸುದೀಪ್ ತಮಿಳು ಹೊಸ ಸಿನಿಮಾ ಅನೌನ್ಸ್; ಇಲ್ಲಿ ಯಾವ್ ರೋಲ್ ಗೊತ್ತಾ?

ಕಿಚ್ಚ ಸುದೀಪ್ (Kichcha Sudeepa) ಅವರ ನಾಲ್ಕು ಚಿತ್ರಗಳು ಈ ವರ್ಷ ಅನೌನ್ಸ್ ಆಗುತ್ತವೆ. ಅದರಲ್ಲಿ ಒಂದು ಚಿತ್ರವನ್ನ ಸುದೀಪ್ ಡೈರೆಕ್ಷನ್ (Sudeepa Direction) ಮಾಡುತ್ತಾರೆ. ಇನ್ನೊಂದು ಸುಕುಮಾರ್ (Sukumar) ಶಿಷ್ಯ ಡೈರೆಕ್ಷನ್ ಮಾಡ್ತಿದ್ದಾರೆ. ಈ ಚಿತ್ರದಲ್ಲಿ ರೋಮ್ಯಾನ್ಸ್ ಇರುತ್ತದೆ. ಹಾಸ್ಯವು ಇರುತ್ತದೆ ಅನ್ನುವ ಸುದ್ದಿ ಇದ್ದೇ ಇದೆ. ಆದರೆ, ಇದೀಗ ಮತ್ತೊಂದು ಹೊಸ ಚಿತ್ರ ಅನೌನ್ಸ್ ಆಗಿದೆ. ಇದು ತಮಿಳು ಚಿತ್ರವೇ (Tamil Movie) ಆಗಿದೆ. ಈಗಾಗಲೇ ಸುದ್ದಿ ಇರೋ ನಾಲ್ಕು ಚಿತ್ರಗಳಲ್ಲಿ ಇದು ಒಂದಾ? ಈ ಕುತೂಹಲವು ಇದ್ದೇ ಇದೆ. ಈ ಸಿನಿಮಾದ ಇನ್ನಷ್ಟು ವಿವರ ಇಲ್ಲಿದೆ ಓದಿ.

ತಮಿಳು ಚಿತ್ರದಲ್ಲಿ ಗೆಸ್ಟ್ ರೋಲ್ ಅಲ್ಲೂ

ಕಿಚ್ಚ ಸುದೀಪ್ ಅವರು ಒಪ್ಪಿರೋ ಚಿತ್ರಕ್ಕೆ ಸದ್ಯ ಅಂಡರ್ -18 ಅಂತಲೇ ಹೆಸರಿಟ್ಟಿದ್ದಾರೆ. ಈ ಚಿತ್ರವನ್ನ ಕಾರ್ತಿಕ್ ಪೆರುಮಾಳ್‌ಸ್ವಾಮಿ ಡೈರೆಕ್ಷನ್ ಮಾಡುತ್ತಿದ್ದಾರೆ.
kichcha sudeepa tamil under-18 movie latest updates

ಚಿತ್ರಕ್ಕೆ ಬಂತು ಆನೆ ಬಲ..

ಆದರೆ, ಈ ಚಿತ್ರದಲ್ಲಿ ಸುದೀಪ್ ಲೀಡ್ ರೋಲ್ ಏನು ಮಾಡ್ತಿಲ್ಲ. ಬದಲಾಗಿ ಕಿಚ್ಚ ಸುದೀಪ್ ಕ್ಯಾಮಿಯೋ ರೋಲ್ ಮಾಡಿದ್ದಾರೆ. ಈ ಒಂದು ರೋಲ್ ಹೇಗೆ ಇರುತ್ತದೆ ಅನ್ನುವ ಪ್ರಶ್ನೆಗೆ ಇನ್ನು ಯಾವುದು ಉತ್ತರ ಸಿಕ್ಕಿಲ್ಲ. ಆದರೆ, ಈ ಚಿತ್ರದಲ್ಲಿ ಸುದೀಪ್ ಕ್ಯಾಮಿಯೋ ರೋಲ್ ಮಾಡ್ತಿರೋದು ಪಕ್ಕಾ ಆಗಿದೆ.

ಚಿತ್ರಕ್ಕೆ ಬಂತು ಆನೆ ಬಲ..

ಅಂಡರ್ -18 ಚಿತ್ರಕ್ಕೆ ಆನೆ ಬಲವೇ ಬಂದಂತೆ ಆಗಿದೆ. ಈ ವಿಷಯವನ್ನ ಸಿನಿಮಾ ತಂಡವೇ ಹೇಳಿಕೊಂಡಿದೆ. ಬಿ.ಜಗದೀಶ್ ಅವರು ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ.

ಚಿತ್ರದ ನಾಯಕ ಯಾರು? ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸಿಸಿಎಲ್‌ ಕ್ರಿಕೆಟ್ ಪಂದ್ಯಗಳಲ್ಲಿ ಚೆನ್ನೈ ರೈನೋಸ್ ತಂಡದಲ್ಲಿ ನಟ ವಿಕ್ರಾಂತ್ ಇದ್ದಾರೆ. ಇವರೇ ಈ ಚಿತ್ರದ ನಾಯಕ ಅನ್ನೋದು ಇದೀಗ ಗೊತ್ತಾಗಿದೆ. ಐಶ್ವರ್ಯ ರಾಜೇಶ್ ಈ ಸಿನಿಮಾದ ನಾಯಕಿ ಆಗಿದ್ದಾರೆ.

ಈ ಹಿಂದೆ ಸುದೀಪ್ ಅವರ ಜೊತೆಗೆ ವಿಕ್ರಾಂತ್ ಅಭಿನಯಿಸಿದ್ದಾರೆ. ಮಾರ್ಕ್ ಚಿತ್ರದಲ್ಲಿ ರುದ್ರ ಅನ್ನುವ ಪಾತ್ರವನ್ನೆ ವಿಕ್ರಾಂತ್ ಮಾಡಿದ್ದಾರೆ. ಈಗ ಇದೇ ವಿಕ್ರಾಂತ್ ಚಿತ್ರದಲ್ಲಿ ಸುದೀಪ್ ಕ್ಯಾಮಿಯೋ ರೋಲ್ ಮಾಡುತ್ತಿದ್ದಾರೆ.

kichcha sudeepa tamil under-18 movie latest updates

ಟೈಟಲ್ ರಿವೀಲ್ ಮಾಡಿದ್ಯಾರು
ಅಪರಾಧ ಲೋಕದ ಸ್ಟೋರಿ

ತಮಿಳುನಾಡಿನ ಅಪರಾಧ ಲೋಕದ ಕಥೆಯನ್ನ ಇಲ್ಲಿ ಕಟ್ಟಿಕೊಡಲಾಗುತ್ತಿದೆ. ಆದರೆ, ಡೈರೆಕ್ಟರ್ ಕಾರ್ತಿಕ್ ಪೆರುಮಾಳ್‌ಸ್ವಾಮಿ ಇಲ್ಲಿ ಎಮೋಷನಲ್ ಕಂಟೆಂಟ್ ಇಟ್ಟಿದ್ದಾರೆ. ಕೌಟುಂಬಿಕ ಸ್ಟೋರಿನೂ ಇಲ್ಲಿದೆ.

ಇಷ್ಟೆಲ್ಲ ವಿಷಯದ ಈ ಚಿತ್ರಕ್ಕೆ ಹೊಸಬರನ್ನೆ ಆಯ್ಕೆ ಮಾಡಿಕೊಳ್ಳಲಾಗಿದೆ. ಇದಕ್ಕಾಗಿಯೇ ಲೀಡ್ ರೋಲ್; 14 ರಿಂದ 18 ಹಾಗೂ ಯಂಗ್‌ಸ್ಟರ್ ರೋಲ್; 16 ರಿಂದ 24 ಮತ್ತು ಕ್ಯಾರೆಕ್ಟರ್ ರೋಲ್‌; 30 ರಿಂದ 40 ವರ್ಷದವರ ಆಡಿಷನ್ ಕೂಡ ಮಾಡಲಾಗಿದೆ.

ಟೈಟಲ್ ರಿವೀಲ್ ಮಾಡಿದ್ಯಾರು

ಈ ಚಿತ್ರದ ಟೈಟಲ್ ಅನ್ನ ಡೈರೆಕ್ಟರ್ ವೆಟ್ರಿಮಾರನ್ ರಿಲೀಸ್ ಮಾಡಿದ್ದಾರೆ. ಇವರೇ ರಿಲೀಸ್ ಮಾಡೋಕೆ ಕಾರಣವೂ ಇದೆ. ಹೌದು, ಚಿತ್ರದ ಕಾರ್ತಿಕ್ ಪೆರುಮಾಳ್‌ಸ್ವಾಮಿ ಬೇರೆ ಯಾರೋ ಅಲ್ಲ. ಇದೇ ವೆಟ್ರಿಮಾರನ್ ಶಿಷ್ಯನೇ ಈ ಕಾರ್ತಿಕ್ ಪೆರುಮಾಳ್ ಸ್ವಾಮಿ ಆಗಿದ್ದಾರೆ. ಇನ್ನುಳಿದಂತೆ ಕಿಚ್ಚ ಸುದೀಪ್ ಪಾತ್ರದ ಸುದ್ದಿ ಇದೀಗ ಹೆಚ್ಚು ಗಮನ ಸೆಳೆಯುತ್ತಿದೆ ಅಂತಲೇ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports