ಬೇಲ್ ಚಿತ್ರದ ಟೀಸರ್ ಸೂಪರ್ ಆಗಿದೆ. ಉಪ್ಪಿಯ “ಸೂಪರ್ ಸಿಂಬಲ್” ಮಾಡಿಯೇ ಕಿಚ್ಚ ಇಲ್ಲಿ ತೋರಿದ್ದಾರೆ. ಮುಂದುವರೆದು ಇನ್ನು ಒಂದು ಮಾತು ಹೇಳಿದ್ದಾರೆ. ಅದನ್ನ ಕೇಳಿ ಅಲ್ಲಿದೋರು ಖುಷಿಪಟ್ಟಿದ್ದಾರೆ.
ಬೇಲ್ ಸೂಪರ್ ಟೀಸರ್
ಬೇಲ್ ಚಿತ್ರದಲ್ಲಿ ಒಂದು ದೃಶ್ಯ ಇದೆ. ಅದು ಶಿವಣ್ಣ ಕುಳಿತುಕೊಂಡಿರೋ ದೃಶ್ಯವೇ ಆಗಿದೆ. ಇದನ್ನ ನೋಡಿದಾಗ ರಾಜಕುಮಾರ್ ಅವರನ್ನ ನೋಡಿದ ಹಾಗೆ ಆಯಿತು ಅಂತ ಕಿಚ್ಚ ಸುದೀಪ್ ಹೇಳಿದ್ದಾರೆ.
ಕಿಚ್ಚ ಸುದೀಪ್ ಅವರ ಈ ಪ್ರಶಂಸೆಯ ಮಾತು ಕೇಳಿ ಶಿವಣ್ಣ ಮಂದಹಾಸ ಬೀರಿದರು. ಆದರೆ, ಇವರಲ್ಲಿ ಸಂಕೋಚವು ಕಾಣಿಸುತ್ತಿತ್ತು.
ಕಾಂತಾರ ಚಿತ್ರದ ಮ್ಯೂಸಿಕ್ ಡೈರೆಕ್ಟರ್ ಅಜನೀಶ್ ಲೋಕನಾಥ್ ಲೈವ್ ಇನ್ ಕಾನ್ಸರ್ಟ್ ಮಾಡಿದ್ದಾರೆ. ಫಸ್ಟ್ ಟೈಮ್ ಇದನ್ನ ಮಾಡಿದ್ದಾರೆ. ಈ ಒಂದು ಸಂಗೀತ ಕಾರ್ಯಕ್ರಮಕ್ಕೆ ಸ್ಯಾಂಡಲ್ವುಡ್ ತಾರೆಯರು ಬಂದಿದ್ದರು.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕಿಚ್ಚ ಸುದೀಪ್, ರಿಯಲ್ ಸ್ಟಾರ್ ಉಪೇಂದ್ರ ಹೀಗೆ ಇನ್ನೂ ಅನೇಕರು ಇಲ್ಲಿ ಆಗಮಿಸಿದ್ದರು. ಈ ಲೈವ್ ಕಾನ್ಸರ್ಟ್ ಬೊಂಬಾಟ ಆಗಿಯೇ ನಡೆದಿದೆ, ಬಂದವರನ್ನು ರಂಜಿಸಿದೆ.
ಅಜನೀಶ್ ಲೋಕನಾಥ್ ಈ ಕಾನ್ಸರ್ಟ್ ಅಲ್ಲಿ ಡ್ಯಾನ್ಸ್ ಕೂಡ ಮಾಡಿದ್ದಾರೆ. ಈ ಡ್ಯಾನ್ಸ್ ನಿಜಕ್ಕೂ ಸಖತ್ ಆಗಿಯೇ ಇದೆ. ಯಾರೂ ನಿರೀಕ್ಷೆ ಮಾಡಿರಲೇ ಇಲ್ಲ.
ಶಿವಣ್ಣ ಏನಂದ್ರು
ಆದರೆ, ಅಜನೀಶ್ ಲೋಕನಾಥ್ ಡ್ಯಾನ್ಸ್ ಮಾಡಿದ್ದಾರೆ. ಇದು ಈ ಕಾನ್ಸರ್ಟ್ನ ಹೈಲೈಟ್ ಅಂತಲೂ ಹೇಳಬಹುದು. ಈ ಶೋದಲ್ಲಿ ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಸುದೀಪ್ ಹಾಡಿದ್ದಾರೆ.
ಬೆಂಗಳೂರಿನ ಭಾರತೀಯ ಮಾಲ್ ನಲ್ಲಿ ಈ ಕಾನ್ಸರ್ಟ್ ನಡೆಯಲಿದೆ. ಈ ಕಾನ್ಸರ್ಟ್ ಅಲ್ಲಿ ವಿಜಯ್ ಪ್ರಕಾಶ್, ಮಂಗ್ಲಿ, ನಕಾಶ್ ಅಜೀಜ್, ಅನನ್ಯ ಭಟ್, ಸಂಜಿತ್ ಹೆಗ್ಡೆ, ಹರಿಶಂಕರ್, ಅಬ್ಬಿ ವಿ, ವಾಸುಕಿ ವೈಭವ್, ಅನಿರುದ್ಧ್ ಶಾಸ್ತ್ರೀ, ಐಶ್ವರ್ಯ ರಂಗರಾಜನ್, ರಾಮ್ದಾಸ್, ಸಾಯಿ ವಿಘ್ನೇಶ್, ಹರಿಶಿಕಾ, ಬಾಬಿ ಸೇರಿದಂತೆ ಇನ್ನು ಹಲವು ಹಾಡಿದ್ದಾರೆ.
ಕಿಚ್ಚ ಸುದೀಪ್ ಅವರು ಬೇಲ್ ಚಿತ್ರದ ಟೀಸರ್ ಹಾಗೂ ಶಿವಣ್ಣನ ಬಗ್ಗೆ ಸ್ಟೇಜ್ ಮೇಲೆ ಮಾತನಾಡಿರೋ ವಿಡಿಯೋ ಕೂಡ ವೈರಲ್ ಆಗುತ್ತಿದೆ. ಇದು ಸಹ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಶೇರ್ ಆಗುತ್ತಿದೆ ಅಂತ ಹೇಳಬಹುದು.












