Kichcha Sudeep: ದೊಡ್ಮನೆ ಸ್ಪರ್ಧಿಗಳ ಅಟ್ಟಹಾಸ, ಕಿಚ್ಚನ ಖಡಕ್ ಪ್ರಶ್ನೆ! ಈ ವಾರ ಯಾರಿಗೆ ಕ್ಲಾಸ್? | | ACTPnews

Bigg Boss Kichchan Panchayathi Latest Promo Release


ಯಾರಿಗೆ ಕ್ಲಾಸ್

ಇಡೀ ವಾರ ದೊಡ್ಮನೆಯಲ್ಲಿ ಇಬ್ಬರು ಸ್ಪರ್ಧಿಗಳು ಸೌಂಡ್ ಮಾಡಿದ್ದಾರೆ. ಮಾಡರ್ನ್ ಕವಿ ಮಂಜ್ಯಾ ಅಬ್ಬರಿಸಿ ಬೊಬ್ಬಿರಿದ್ದಾರೆ. ಕಿರಣ್ ಶಾಸ್ತ್ರಿ ಅಂತಲೂ ಬಾಯಿಗೆ ಬಂದಂತೆ ಬೈದಾಡಿದ್ದಾರೆ.

ಯಾರಿಗೆ ಕ್ಲಾಸ್

(ಚಿತ್ರ ಕೃಪೆ: ಕಲರ್ಸ್​ ಕನ್ನಡ ಇನ್​ಸ್ಟಾಗ್ರಾಮ್)

ಬಿಗ್ ಬಾಸ್ ಸೀಸನ್-10 ಆದ್ಮೇಲೆ “ಬಳೆ ಹಾಕಿಕೋ” ಅಂತ ಯಾರೂ ಹೇಳಿರಲಿಲ್ಲ. ಆದರೆ, ಕಿರಣ್ ಶಾಸ್ತ್ರಿ ಆ ಕೆಲಸ ಮಾಡಿದ್ದಾರೆ.

ಇದರಿಂದ ಭಾರೀ ಸದ್ದು ಆಗುತ್ತದೆ ಅನ್ನುವ ನಿರೀಕ್ಷೆ ಇತ್ತು. ಆ ರೀತಿ ಏನೂ ಆಗಲಿಲ್ಲ. ಆದರೆ, ಕಿಚ್ಚನ ಪಂಚಾಯ್ತಿಯಲ್ಲಿ ಕ್ಲಾಸ್ ಇರುವಂತೆ ಕಾಣುತ್ತದೆ.

ವೇದಿಕೆಗೆ ಗೌರವ

ಈ ಒಂದು ಪ್ರಶ್ನೆಯನ್ನು ಸುದೀಪ್ ಕೇಳಿದ್ದಾರೆ. ಅವಕಾಶ ಕೊಟ್ಟ ವೇದಿಕೆಗೆ ಕೆಲವು ಸ್ಪರ್ಧಿಗಳು ಗೌರವ ಕೊಡ್ತಾ ಇದ್ದಾರಾ? ಮಾತುಗಳು ಅವಶ್ಯಕತೆಯ ಮಿತಿ ಮೀರ್ತಾ ಇದಿಯಾ?

ಕಿಚ್ಚನ ಪಂಚಾಯ್ತಿ…

ಈ ವಾರದ ಕಿಚ್ಚನ ಪಂಚಾಯ್ತಿ ಜೋರಾಗಿಯೇ ಆಗುವಂತೆ ಇದೆ. ಕಳೆದ ವಾರದ ಪಂಚಾಯ್ತಿಯಲ್ಲಿ ವಿಷಯ ಇತ್ತು. ಅದು ಒಂದು ಹಂತಕ್ಕೆ ಇತ್ತು.

ಆದರೆ, ಈ ವಾರದ ಪಂಚಾಯ್ತಿಯಲ್ಲಿ ಸಾಕಷ್ಟು ವಿಷಯ ಇರುತ್ತವೆ. ಕಾರಣ, ಇಡೀ ವಾರ ಸ್ಪರ್ಧಿಗಳು ಅಬ್ಬರಿಸಿದ್ದಾರೆ. ಸೌಂದರ್ಯ ಶೆಟ್ಟಿ ಇಲ್ಲಿ ಮಾಡರ್ನ್ ಕವಿ ಮಂಜ್ಯಾನಿಗೆ ಹೊಡೆದಿದ್ದಾರೆ. ಮಂಜ್ಯಾ ಕೂಡ ಸೌಂದರ್ಯ ಮೇಲೆ ಅಬ್ಬರಿಸಿ ಹೋಗಿದ್ದಾರೆ.

Bigg Boss Kichchan Panchayathi Latest Promo Release

ವೇದಿಕೆಗೆ ಗೌರವ

(ಚಿತ್ರ ಕೃಪೆ: ಕಲರ್ಸ್​ ಕನ್ನಡ ಇನ್​ಸ್ಟಾಗ್ರಾಮ್)

ಅವಿನಾಶ್ ಸಿಟ್ಟು

ಅವಿನಾಶ್ ಅವರು ಸೈಲೆಂಟ್ ಆಗಿಯೇ ಇದ್ದವರು. ಆದರೆ, ಮಂಜ್ಯಾನ ಕಾಟಕ್ಕೆ ಸಿಟ್ಟಾಗಿದ್ದಾರೆ. ಬಾಯಿಗೆ ಬಂದಂತೆ ಬೈದಾಡಿದ್ದಾರೆ. ಕೈಯಲ್ಲಿದ್ದ ನೀರಿನ ಬಾಟಲ್ ಅನ್ನು ಒಡೆದು ಹಾಕಿದ್ದಾರೆ.

ಇದನ್ನೂ ಓದಿ: Mango Pachcha Movie: ಒಟಿಟಿಗೆ ಬಂತು ಸುದೀಪ್ ಅಳಿಯನ ಮೊದಲ ಸಿನಿಮಾ

ಇನ್ನು ಕಿರಣ್ ಶಾಸ್ತ್ರಿ ಅಂತೂ ಬೈದಾಡಿ ಬಿಟ್ಟಿದ್ದಾರೆ. ಈ ಎಲ್ಲ ವಿಷಯವನ್ನ ಇಟ್ಟುಕೊಂಡು ಕಿಚ್ಚ ಸುದೀಪ್ ಮಾತನಾಡುತ್ತಾರೆ. ಯಾರಿಗೆ ಏನು ಹೇಳ್ಬೇಕೋ ಅದನ್ನ ಹೇಳ್ತಾರೆ. ಯಾರಿಗೆ ಸರಿಯಾಗಿಯೇ ಹೇಳ್ಬೇಕೋ ಹಾಗೇನೆ ಹೇಳ್ತಾರೆ ನೋಡಿ.

ಪ್ರೋಮೋ ರಿಲೀಸ್

ಬಿಗ್ ಬಾಸ್ ಸೀಸನ್-13 ರ ಎರಡನೇ ವಾರದ ಪಂಚಾಯ್ತಿಯ ಪ್ರೋಮೋ ಹೊರ ಬಂದಿದೆ. ಕಲರ್ಸ್ ಕನ್ನಡ ಇದನ್ನ ಇನ್‌ಸ್ಟಾಗ್ರಾಮ್‌ನ ತನ್ನ ಅಧಿಕೃತ ಪೇಜ್ ಅಲ್ಲಿಯೇ ಹಂಚಿಕೊಂಡಿದೆ.

ಈ ಮೂಲಕ ಈ ವಾರದ ಕಿಚ್ಚನ ಪಂಚಾಯ್ತಿಯಲ್ಲಿ ಏನು ಇರುತ್ತದೆ ಅನ್ನೋದರ ಝಲಕ್ ಕೂಡ ಕೊಟ್ಟಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports