Achievement: ಒಂದೇ ಎಸೆತದಲ್ಲಿ 23 ವರ್ಷದ ದಾಖಲೆ ಉಡೀಸ್!‌ ಚಿಕ್ಕಮಗಳೂರಿನ ಯುವಕ ಸಾಲೀಂ ಮಾಡಿದ ಕಮಾಲ್‌ ಏನು? | ಕ್ರೀಡಾ ಸುದ್ದಿ | ACTPnews

ಇಲ್ಲಿ


Last Updated:

ಚಿಕ್ಕಮಗಳೂರಿನ ಪ್ರತಿಭೆ ಸಾಲೀಂ ಅವರು ಪಾಂಡಿಚೇರಿಯಲ್ಲಿ ನಡೆದ ಅಂಡರ್-20 ಹ್ಯಾಮರ್ ಥ್ರೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು, 64.09 ಮೀಟರ್ ದೂರ ಹ್ಯಾಮರ್ ಎಸೆಯುವ ಮೂಲಕ ದಕ್ಷಿಣ ವಲಯದಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಸಾಧನೆಯು 2003ರ 62.44 ಮೀಟರ್ ದಾಖಲೆಯನ್ನು ಮುರಿದಿದೆ.

+

ಇಲ್ಲಿ ವಿಡಿಯೋ ನೋಡಿ

ಚಿಕ್ಕಮಗಳೂರು: ಮಲೆನಾಡಿನ ಚಿಕ್ಕಮಗಳೂರಿನಿಂದ (Chikkamagaluru) ಮತ್ತೊಂದು ಕ್ರೀಡಾ ಪ್ರತಿಭೆ ರಾಷ್ಟ್ರಮಟ್ಟದ ಗಮನ ಸೆಳೆಯುವ ಸಾಧನೆ ಮಾಡಿದ್ದಾರೆ. ಬಾಳೆಹೊನ್ನೂರು ವಿದ್ಯಾಸಂಸ್ಥೆಯ ಎಸ್.ಜೆ.ಆರ್ ಪದವಿ ಪೂರ್ವ ಕಾಲೇಜಿನ ಕ್ರೀಡಾಪಟು ಸಾಲೀಂ, ಪುದುಚೇರಿಯಲ್ಲಿ ನಡೆದ 37ನೇ ಸೌತ್ ಝೋನ್ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಅಂಡರ್-20 ಪುರುಷರ ಹ್ಯಾಮರ್ ಥ್ರೋ ವಿಭಾಗದಲ್ಲಿ ಚಿನ್ನದ ಪದಕ (Gold Medal)  ಗೆದ್ದಿದ್ದಾರೆ. 64.09 ಮೀಟರ್ ದೂರ ಹ್ಯಾಮರ್ ಎಸೆದು ಪ್ರಥಮ ಸ್ಥಾನ ಪಡೆದಿರುವ ಸಾಲೀಂ, ಈ ಎಸೆತದ ಮೂಲಕ ಸೌತ್ ಝೋನ್ ದಾಖಲೆ ನಿರ್ಮಿಸಿದ್ದಾರೆ ಎಂದು ಅವರ ಸಂಸ್ಥೆ ತಿಳಿಸಿದೆ. 37ನೇ ಚಾಂಪಿಯನ್‌ಶಿಪ್‌ ಪುದುಚೇರಿಯಲ್ಲಿ ಸೆಪ್ಟೆಂಬರ್ 16ರಿಂದ 18ರವರೆಗೆ ನಡೆದಿತ್ತು.

64.09 ಮೀಟರ್ ಎಸೆತದೊಂದಿಗೆ ಮೊದಲ ಸ್ಥಾನ

ಕರ್ನಾಟಕವನ್ನು ಪ್ರತಿನಿಧಿಸಿ ಕಣಕ್ಕಿಳಿದ ಸಾಲೀಂ, ಅಂಡರ್-20 ಪುರುಷರ ಹ್ಯಾಮರ್ ಥ್ರೋ ಸ್ಪರ್ಧೆಯಲ್ಲಿ 64.09 ಮೀಟರ್ ದೂರ ಎಸೆದು ಎದುರಾಳಿಗಳನ್ನು ಹಿಂದಿಕ್ಕಿದ್ದಾರೆ.ಅದರೊಂದಿಗೆ ಚಿನ್ನದ ಪದಕ ತಮ್ಮದಾಗಿಸಿಕೊಂಡಿರುವ ಅವರು, ಇದೇ ಎಸೆತದ ಮೂಲಕ ಸೌತ್ ಝೋನ್ ಮಟ್ಟದಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ. ಸಂಸ್ಥೆ ನೀಡಿರುವ ಮಾಹಿತಿಯ ಪ್ರಕಾರ, ಈ ವಿಭಾಗದಲ್ಲಿ 2003ರಿಂದ 62.44 ಮೀಟರ್ ದಾಖಲೆ ಇತ್ತು. ಸಾಲೀಂ ಅವರ 64.09 ಮೀಟರ್ ಎಸೆತ ಆ ದಾಖಲೆಯನ್ನು ಮೀರಿಸಿದೆ ಎಂದು ಹೇಳಲಾಗಿದೆ.

ಬಾಳೆಹೊನ್ನೂರು ವಿದ್ಯಾಸಂಸ್ಥೆಗೆ ಹೆಮ್ಮೆಯ ಕ್ಷಣ

ಸಾಲೀಂ ಅವರ ಸಾಧನೆಯಿಂದ ಬಾಳೆಹೊನ್ನೂರು ವಿದ್ಯಾಸಂಸ್ಥೆ ಮತ್ತು ಎಸ್.ಜೆ.ಆರ್ ಪದವಿ ಪೂರ್ವ ಕಾಲೇಜಿನಲ್ಲಿ ಸಂಭ್ರಮ ಮನೆ ಮಾಡಿದೆ. ಕ್ರೀಡಾಪಟುವಿನ ಸಾಧನೆಗೆ ತರಬೇತುದಾರರಾದ ಅಮೃತೇಶ್ ಹಾಗೂ ಅರವಿಂದ್ ಸೇರಿದಂತೆ ಸಂಸ್ಥೆಯವರು ಅಭಿನಂದನೆ ಸಲ್ಲಿಸಿದ್ದಾರೆ. ಒಂದೆಡೆ ಚಿನ್ನದ ಪದಕ, ಮತ್ತೊಂದೆಡೆ ದಾಖಲೆ ಎಸೆತದ ಸಾಧನೆ ಸಾಲೀಂ ಅವರ ಪ್ರದರ್ಶನ ಗಮನ ಸೆಳೆದಿದೆ.

ಮಲೆನಾಡಿನಿಂದ ದಕ್ಷಿಣ ವಲಯದ ಕ್ರೀಡಾಂಗಣಕ್ಕೆ

ಇದನ್ನೂ ಓದಿ: Ganeshotsava: ಗಣಪತಿಗೆ ಪೂಜೆ, ದೆಹಲಿಗೆ ಪತ್ರ! ಚಿಕ್ಕಮಗಳೂರಿನಲ್ಲಿ ಗಣೇಶನ ದರ್ಶನಕ್ಕೆ ಬಂದವರೆಲ್ಲಾ ಲೆಟರ್‌ ಬರೀತಿರೋದು ಯಾಕೆ ಗೊತ್ತಾ?

ಚಿಕ್ಕಮಗಳೂರಿನ ಬಾಳೆಹೊನ್ನೂರಿನಲ್ಲಿ ತರಬೇತಿ ಪಡೆಯುತ್ತಿರುವ ಸಾಲೀಂ, ಇದೀಗ ದಕ್ಷಿಣ ವಲಯದ ಪ್ರಮುಖ ಜೂನಿಯರ್ ಅಥ್ಲೆಟಿಕ್ಸ್ ವೇದಿಕೆಯಲ್ಲಿ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. 37ನೇ ಸೌತ್ ಝೋನ್ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಅಂಡರ್-20 ಸೇರಿದಂತೆ ವಿವಿಧ ವಯೋಮಾನದ ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆಗಳು ನಡೆದಿದ್ದವು. ಪುರುಷರ ಅಂಡರ್-20 ಹ್ಯಾಮರ್ ಥ್ರೋ ಕೂಡ ಅಧಿಕೃತ ಸ್ಪರ್ಧಾ ವೇಳಾಪಟ್ಟಿಯಲ್ಲಿತ್ತು. 64.09 ಮೀಟರ್‌ನ ಈ ಎಸೆತದ ಬಳಿಕ ಸಾಲೀಂ ಅವರ ಮುಂದಿನ ಗುರಿ ಇನ್ನಷ್ಟು ದೂರ ಎಸೆಯುವುದು. ಮಲೆನಾಡಿನ ಯುವ ಕ್ರೀಡಾಪಟುವೊಬ್ಬ ದಕ್ಷಿಣ ವಲಯದ ವೇದಿಕೆಯಲ್ಲಿ ಚಿನ್ನದ ಪದಕದೊಂದಿಗೆ ಗಮನ ಸೆಳೆದಿರುವುದು ಬಾಳೆಹೊನ್ನೂರಿನ ಕ್ರೀಡಾಭಿಮಾನಿಗಳಿಗೆ ಸಂತಸ ತಂದಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed