Ketan Siya Case: ಸಿಯಾ ಹೆಸರನ್ನು ಟ್ಯಾಟೂ ಹಾಕಿಸಿಕೊಂಡಿದ್ದ ಕೇತನ್! ಚಾರ್ಜ್​ಶೀಟ್​ನಲ್ಲಿ ಶಾಕಿಂಗ್ ರಹಸ್ಯ ಬಯಲು! | Crime News | ACTPnews

ಕೇತನ್​ - ಸಿಯಾ


Last Updated:

ಕೇತನ್​ ಹತ್ಯೆಗೆ ಸಂಚು ರೂಪಿಸಲು ಇಂಟರ್ನೆಟ್ ಮತ್ತು ಸೋಶಿಯಲ್ ಮೀಡಿಯಾದಿಂದ ಮಾಹಿತಿ ಕಲೆಹಾಕಲಾಗಿತ್ತು ಎಂದು ಪೊಲೀಸರು ಜಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಿದ್ದಾರೆ.

ಕೇತನ್​ - ಸಿಯಾ
ಕೇತನ್​ – ಸಿಯಾ

ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣದ (Ketan Agarwal Murder Case) ತನಿಖೆಯಲ್ಲಿ ಹಲವು ಬೆಚ್ಚಿಬೀಳಿಸುವ ಮಾಹಿತಿ ಹೊರ ಬಿದ್ದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 5,053 ಪುಟಗಳ ಚಾರ್ಜ್‌ಶೀಟ್ (Chargesheet) ಸಲ್ಲಿಕೆ ಮಾಡಿದ್ದಾರೆ. ಇದರಲ್ಲಿ ಮೊಬೈಲ್ ಡೇಟಾ, ಚಾಟ್‌ಗಳು, ಕಾಲ್ ರೆಕಾರ್ಡ್‌ಗಳು, ಗೂಗ್‌ಲ್ ಸರ್ಚ್ ಹಿಸ್ಟರಿ (Search history) ಮತ್ತು ಸಾಕ್ಷಿಗಳ ಹೇಳಿಕೆಗಳು ಸೇರಿದಂತೆ ಹಲವು ಡಿಜಿಟಲ್ ಸಾಕ್ಷ್ಯಗಳನ್ನು ಸೇರಿಸಲಾಗಿದೆ.

ಚಾರ್ಜ್‌ಶೀಟ್ ಪ್ರಕಾರ, ಹತ್ಯೆಗೆ ಸಂಚು ರೂಪಿಸಲು ಇಂಟರ್ನೆಟ್ ಮತ್ತು ಸೋಶಿಯಲ್ ಮೀಡಿಯಾದಿಂದ ಮಾಹಿತಿ ಕಲೆಹಾಕಲಾಗಿತ್ತು. ಇದೇ ವೇಳೆ ಕೇತನ್ ತನ್ನ ಬೆನ್ನಿನ ಮೇಲೆ ಸಿಯಾ ಗೋಯಲ್ ಹೆಸರಿನ ಟ್ಯಾಟೂ ಹಾಕಿಸಿಕೊಳ್ಳುತ್ತಿರುವ ವಿಡಿಯೋ ಕೂಡ ಮುನ್ನೆಲೆಗೆ ಬಂದಿದೆ. ಸಿಯಾ ಹುಟ್ಟುಹಬ್ಬದ ದಿನದಂದು ಅವಳಿಗೆ ಸರ್‌ಪ್ರೈಸ್ ನೀಡಲು ಕೇತನ್ ಈ ಟ್ಯಾಟೂ ಹಾಕಿಸಿಕೊಂಡಿದ್ದ ಎಂದು ಹೇಳಲಾಗುತ್ತಿದೆ.

ಪೊಲೀಸರ ಪ್ರಕಾರ, ‘Death Cap Mushroom India’, ‘Who Hit Preeti Singh’, ‘Sonam Case’ ಮತ್ತು ‘Who kill Family by Mushroom’ ಮುಂತಾದ ವಿಷಯಗಳನ್ನು ಸಹ ಸರ್ಚ್ ಮಾಡಲಾಗಿತ್ತು. ಅಣಬೆ ಮೂಲಕ ಹತ್ಯೆ ಮಾಡುವ ಸಾಧ್ಯತೆಯ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗಿದೆ ಎಂದು ಚಾರ್ಜ್‌ಶೀಟ್‌ನಲ್ಲಿ ತಿಳಿಸಲಾಗಿದೆ.

ಕೇತನ್ ಹತ್ಯೆಗಾಗಿ ಲೋಹಗಢ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಮೇ 28 ರಂದು ಲೋಹಗಢದಲ್ಲಿ ರೆಕ್ಕಿ ಹಾಕಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಮರುದಿನ ಅಂದರೆ ಮೇ 29 ರಂದು ಸೋನಮ್ ಮರ್ಡರ್ ಕೇಸ್‌ಗೆ ಸಂಬಂಧಿಸಿದ ಮಾಹಿತಿಯನ್ನು ಅಧ್ಯಯನ ಮಾಡಲಾಗಿದೆ. ಇದರ ನಂತರ ಮೇ 31 ರಂದು ಸಿಯಾ, ಕೇತನ್‌ನನ್ನು ಟ್ರೆಕ್ಕಿಂಗ್ ನೆಪದಲ್ಲಿ ಲೋಹಗಢಕ್ಕೆ ಕರೆದುಕೊಂಡು ಹೋಗಿದ್ದಾಳೆ. ಅಲ್ಲಿ ಘಟನಾ ಸ್ಥಳದ ಫೋಟೋಗಳನ್ನು ತೆಗೆಯಲಾಗಿದೆ. ಈ ಚಿತ್ರಗಳನ್ನು ಚೇತನ್ ಚೌಧರಿಗೆ ತೋರಿಸಿ ಸ್ಥಳವನ್ನು ಅಂತಿಮಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

ಮತ್ತೊಂದು ಸ್ಫೋಟಕ ವಿಚಾರ ಅಂದ್ರೆ, ಸಿಯಾ ಕೇತನ್‌ನನ್ನು ತಳ್ಳುವ ಅಭ್ಯಾಸವನ್ನು ಕೂಡ ಮಾಡಿದ್ದಳು ಎಂದು ಪೊಲೀಸರ ಚಾರ್ಜ್‌ಶೀಟ್‌ನಲ್ಲಿ ದಾಖಲಿಸಿದ್ದಾರೆ. ಹತ್ಯೆಯ ನಂತರ ಪೊಲೀಸರಿಗೆ ಮತ್ತು ಸಾರ್ವಜನಿಕರಿಗೆ ಏನು ಹೇಳಬೇಕು ಹಾಗೂ ಯಾವ ವಿಷಯಗಳನ್ನು ಮುಚ್ಚಿಡಬೇಕು ಎಂಬ ಪ್ಲಾನ್ ಅನ್ನು ಮೊದಲೇ ಸಿದ್ಧಪಡಿಸಲಾಗಿತ್ತು ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಈ ಪ್ರಕರಣದಲ್ಲಿ ಪ್ರತ್ಯಕ್ಷದರ್ಶಿ ಸಾಕ್ಷಿಯೊಬ್ಬರು ಇದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಈ ಪ್ರಕರಣದಲ್ಲಿ ಸಲ್ಲಿಸಲಾದ 5,053 ಪುಟಗಳ ಚಾರ್ಜ್‌ಶೀಟ್‌ನಿಂದ ತನಿಖೆಗೆ ಸಂಬಂಧಿಸಿದ ಹಲವು ರೋಚಕ ಸಂಗತಿಗಳು ಹೊರಬಂದಿವೆ. ಇದರಲ್ಲಿ ಡಿಜಿಟಲ್ ಡೇಟಾದಿಂದ ಹಿಡಿದು ಚಾಟ್‌ಗಳು, ಕಾಲ್ ರೆಕಾರ್ಡ್‌ಗಳು ಮತ್ತು ಸಾಕ್ಷಿಗಳ ಹೇಳಿಕೆಗಳನ್ನು ಸಾಕ್ಷ್ಯಗಳಾಗಿ ಸೇರಿಸಲಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed