Last Updated:
Karuppu Movie: ಸೂರ್ಯ ಅಲ್ಲ, ದಳಪತಿ ವಿಜಯ್ ಮಾಡ್ಬೇಕಾಗಿತ್ತು ಕರುಪ್ಪು ಮೂವಿ! ಆರ್ಜೆ ಬಾಲಾಜಿಯ ಸಿನಿಮಾ ಸ್ಕ್ರಿಪ್ಟ್ ತುಂಬಾ ಇಷ್ಟಪಟ್ಟು ನಾವೇ ಮಾಡೋಣ ಎಂದಿದ್ದ ವಿಜಯ್ ಯಾಕೆ ಈ ಸಿನಿಮಾ ಮಾಡಲಿಲ್ಲ?
ಸತತ ಸೋಲುಗಳನ್ನೇ ಅನುಭವಿಸುತ್ತಿದ್ದ ಕಾಲಿವುಡ್ನ (Kollywood) ಸ್ಟಾರ್ ನಟ ಸೂರ್ಯ (Actor Suriya) ಅವರಿಗೆ 2026 ಭರ್ಜರಿ ಯಶಸ್ಸನನ್ನು (Success) ತಂದುಕೊಟ್ಟಿದೆ. ಈ ವರ್ಷದ ಮೊದಲಾರ್ಧದಲ್ಲಿಯೇ ಸೂರ್ಯ ಅವರು ತಮ್ಮ ಬಿಗ್ ಹಿಟ್ ರೆಕಾರ್ಡ್ ಮಾಡಿಬಿಟ್ಟಿದ್ದಾರೆ. ಇನ್ನು ನಟಿ ತ್ರಿಶಾ (Trisha) ಪಾಲಿಗಂತೂ ಮೇ ತಿಂಗಳು ಅವರೇ ಹೇಳಿದಂತೆ ಮ್ಯಾಜಿಕಲ್ ಆಗಿದೆ. ಒಂದು ಕಡೆ ಬರ್ತ್ಡೇ ಸಂಭ್ರಮ, ಇನ್ನೊಂದು ಕಡೆ ಸ್ನೇಹಿತ ವಿಜಯ್ ಚುನಾವಣಾ ಗೆಲುವು, ಈಗ ಕರುಪ್ಪು (Karuppu) ಬಾಕ್ಸ್ ಆಫೀಸ್ ಹಿಟ್! ಅಂತೂ ಇಂತೂ ತಮಿಳಿನಲ್ಲಿ ಮತ್ತೊಂದು ಸಿನಿಮಾ ಹೊಸ ದಾಖಲೆ ಬರೆಯೋ ಹಾದಿಯಲ್ಲಿದೆ.
ಮೇ 15 ರಂದು ರಿಲೀಸ್ ಆದ ಕರುಪ್ಪು ಸಿನಿಮಾ 200 ಕೋಟಿ ರೂ. ಗಳಿಸಿ ಯಶಸ್ಸನ್ನು ಕಂಡಿದೆ. ಈ ಚಿತ್ರದಲ್ಲಿ ನಟ ಸೂರ್ಯ ಮತ್ತು ನಟಿ ತ್ರಿಶಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇದನ್ನು ಆರ್.ಜೆ. ಬಾಲಾಜಿ ನಿರ್ದೇಶಿಸಿದ್ದಾರೆ. ಇದು ನಟ ಸೂರ್ಯ ಅವರ 45ನೇ ಚಿತ್ರವಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
“ಕರುಪ್ಪು” ಸಿನಿಮಾ ಚಿತ್ರಮಂದಿರಗಳಲ್ಲಿ ಯಶಸ್ಸನ್ನು ಕಂಡು, ಬಾಕ್ಸ್ ಆಫೀಸ್ನಲ್ಲಿ 200 ಕೋಟಿ ರೂಪಾಯಿ ಗಳಿಸಿದೆ. ಹೀಗಿರುವಾಗಲೇ ಅಚ್ಚರಿಯ ಸಂಗತಿಯೊಂದು ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ನಟ ಮತ್ತು ನಿರ್ದೇಶಕ ಆರ್.ಜೆ. ಬಾಲಾಜಿ ಇದರ ಹಿಂದಿರುವ ರಹಸ್ಯವನ್ನು ಈಗ ಎಲ್ಲರ ಮುಂದೆ ಬಿಚ್ಚಿಟ್ಟಿದ್ದಾರೆ.
ಕರುಪ್ಪು ಸಕ್ಸಸ್ ಸಂಭ್ರಮದ ಅಂಗವಾಗಿ ನಿರ್ದೇಶಕ ಆರ್.ಜೆ. ಬಾಲಾಜಿ ಚಿತ್ರಮಂದಿರಗಳಿಗೆ ಭೇಟಿ ನೀಡುತ್ತಿದ್ದಾರೆ. ತಮಿಳುನಾಡಿನ ವಿವಿಧ ಥಿಯೇಟರ್ಗಳಲ್ಲಿ ಅಭಿಮಾನಿಗಳನ್ನು ಭೇಟಿ ಮಾಡುತ್ತಿದ್ದಾರೆ. ಇತ್ತೀಚೆಗೆ ಈರೋಡ್ಗೆ ಭೇಟಿ ಕೊಟ್ಟು ಸಿನೆಮಾ ನೋಡಿ, ಚಿತ್ರಮಂದಿರದ ಆವರಣದಲ್ಲಿಅಭಿಮಾನಿಗಳ ಜೊತೆ ಕೇಕ್ ಕಟ್ ಮಾಡಿ ಸಂಭ್ರಮಿಸಿದರು.
ಆ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ‘ಕರುಪ್ಪು’ ಚಿತ್ರದ ಕಥೆಯನ್ನು ಮೊದಲು ವಿಜಯ್ ಅವರಿಗೆ ಹೇಳಲಾಗಿತ್ತು. ನ್ಯೂಸ್18 ವರದಿಯ ಪ್ರಕಾರ ಆರ್.ಜೆ. ಬಾಲಾಜಿ ಕರುಪ್ಪು ಚಿತ್ರದ ಕಥೆಯನ್ನು 2023ರ ಆಗಸ್ಟ್ನಲ್ಲಿ ಶುರು ಮಾಡಿದ್ದು ಈ ಸಿನಿಮಾ ಸ್ಕ್ರಿಪ್ಟ್ ಕೇಳಿದ ಮೊದಲ ಹೀರೋ ಸೂರ್ಯ ಅಲ್ಲ, ಬದಲಾಗಿ ದಳಪತಿ ವಿಜಯ್!
ವಿಜಯ್ ಅವರ ಬಳಿ ಈ ಸ್ಕ್ರಿಪ್ಟ್ ಅನ್ನು ವಿವರಿಸಿದ್ದ ಬಾಲಾಜಿ. ಆ ಸಂದರ್ಭವನ್ನು ನೆನಪಿಸಿಕೊಂಡು ಮಾತನಾಡಿದ ಬಾಲಾಜಿ “ವಿಜಯ್ ಸರ್ಗೆ ಕಥೆ ಹೇಳಲು ಶುರು ಮಾಡಿದಾಗ, ಅವರು ಇದನ್ನು ತುಂಬಾ ಹೊಗಳಿದರು. ತಕ್ಷಣ, ‘ಈ ಸಿನಿಮಾವನ್ನು ನಾವೇ ಮಾಡೋಣವೇ?” ಎಂದು ಕೇಳಿದರು ಎಂದಿದ್ದಾರೆ.
ವಿಜಯ್ ಅವರ ಮಾತಿಗೆ ಉತ್ತರಿಸಿದ ಬಾಲಾಜಿ ಸ್ಕ್ರೀನ್ ಪ್ಲೇ ಇನ್ನಷ್ಟು ಕರೆಕ್ಷನ್ ಹೊಂದಿದ್ದು ಇದಕ್ಕಾಗಿ ಇನ್ನು ಸ್ವಲ್ಪ ಸಮಯ ಬೇಕು ಎಂದು ಕೇಳಿದ್ದರು. “ಸ್ಕ್ರಿಪ್ಟ್ ಅನ್ನು ಇನ್ನಷ್ಟು ಎಡಿಟ್ ಮಾಡುವುದಿದೆ. ನನಗೆ ಇನ್ನು ಸಮಯ ಬೇಕು ಎಂದು ಅವರಿಗೆ ಹೇಳಿದೆ” ಎಂದು ಬಾಲಾಜಿ ನೆನಪಿಸಿಕೊಂಡಿದ್ದಾರೆ. ಈ ಪ್ರಾಜೆಕ್ಟ್ ಶುರುವಾಗುವ ಮೊದಲೇ ವಿಜಯ್ ರಾಜಕೀಯದಲ್ಲಿ ತೊಡಗಿದ್ದರಿಂದ ನಮಗೆ ಕಾಸ್ಟಿಂಗ್ ಪ್ಲಾನ್ ಬದಲಾಯಿಸಬೇಕಾಯಿತು ಎಂದು ರಿವೀಲ್ ಮಾಡಿದ್ದಾರೆ.
ಅದೇ ಸಂದರ್ಭದಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿರುವ ವಿಜಯ್ ಅವರ ಬಗ್ಗೆಯೂ ಬಾಲಾಜಿ ಮಾತನಾಡಿದರು. “ವಿಜಯ್ ಮುಖ್ಯಮಂತ್ರಿ ಆದ ನಂತರ ಜನರಲ್ಲಿ ಭರವಸೆ ಉಂಟಾಗಿದೆ. ನಾನಗೂ ಆ ಭರವಸೆ ಇದೆ ಎಂದು ಹೇಳಿದರು. ಹಾಗೆ, ವಿಜಯ್ ಆಡಳಿತದಲ್ಲಿ ಎಲ್ಲಾ ಸೆಕ್ಟರ್ ಅಭಿವೃಧ್ಧಿಯಾಗಲಿ ಎಂದು ಹೇಳಿದರು. ವಿಜಯ್ ಮತ್ತು ‘ಕರುಪ್ಪು’ ನಡುವಿನ ಸಂಬಧದ ಕುರಿತು ಬಿಚ್ಚಿಟ್ಟ ರಹಸ್ಯ ಅಭಿಮಾನಿಗಳ ಗಮನವನ್ನು ಸೆಳೆಯಿತು.
ವರದಿ: ಶ್ರೀಕಲಾ ಭಟ್ಟ್, ಬೆಂಗಳೂರು
Bangalore,Karnataka
May 25, 2026 10:12 AM IST













